ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 JANUARY 2024
ಶಿವಮೊಗ್ಗ : ಕಳೆದ ಒಂದು ವರ್ಷದಿಂದ ಎಂಆರ್‌ಎಸ್ ಸರ್ಕಲ್‌ನಲ್ಲಿ ಧೂಳು ಹಿಡಿಯುತ್ತ ನಿಂತಿರುವ ಯುದ್ಧ ಟ್ಯಾಂಕರ್‌ಗೆ ಕೊನೆಗು ಸೂಕ್ತ ಜಾಗ ಸಿಕ್ಕಿದೆ. ಇದು ಶಿವಮೊಗ್ಗ ಲೈವ್.ಕಾಂ ವರದಿ ಇಂಪ್ಯಾಕ್ಟ್.
ಶಿವಮೊಗ್ಗದ ಅಲ್ಲಮಪ್ರಭು ಮೈದಾನಕ್ಕೆ (ಫ್ರೀಡಂ ಪಾರ್ಕ್) ಯುದ್ಧ ಟ್ಯಾಂಕರ್ ಅನ್ನು ವರ್ಗಾಯಿಸಲಾಗುತ್ತಿದೆ. ಅಲ್ಲಿ ಯುದ್ದ ಟ್ಯಾಂಕರ್ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಜನವರಿ 26ರಂದು ಗಣರಾಜ್ಯೋತ್ಸವದಂದು ಉದ್ಘಾಟನಿಸಲಾಗುತ್ತದೆ.
ಪಂಜರದಿಂದ ಬಿಡುಗಡೆ, ಇಲ್ಲಿದೆ ಪ್ರಮುಖಾಂಶ
2023ರ ಆಗಸ್ಟ್ 12ರಂದು ಮಹಾರಾಷ್ಟ್ರದ ಪುಣೆಯ ಕಿರ್ಕಿ ಸೇನಾ ಕಂಟೋನ್ಮೆಂಟ್ ಬೋರ್ಡ್‌ನಿಂದ ಟಿ-55 ಮಾದರಿಯ ಯುದ್ಧ ಟ್ಯಾಂಕರ್ ಅನ್ನು ಶಿವಮೊಗ್ಗಕ್ಕೆ ತರಲಾಯಿತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ವತಿಯಿಂದ ಟ್ಯಾಂಕರ್‌ಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು.
ಎಂಆರ್‌ಎಸ್ ಸರ್ಕಲ್‌ನಲ್ಲಿ ಅದನ್ನು ಸ್ಥಾಪಿಸುವ ಉದ್ದೇಶವಿತ್ತು. ಹಾಗಾಗಿ ಅಲ್ಲೆ ಪಕ್ಕದಲ್ಲಿರುವ ಮೆಸ್ಕಾಂ ವಸತಿ ಗೃಹಗಳ ಆವರಣದಲ್ಲಿ ಟ್ಯಾಂಕರನ್ನು ತಾತ್ಕಲಿಕವಾಗಿ ನಿಲ್ಲಿಸಲಾಯಿತು. ಅದರ ಸುತ್ತಲು ಪಂಜರ ಸ್ಥಾಪಿಸಲಾಗಿತ್ತು. ಆದರೆ ಎಂಆರ್‌ಎಸ್ ಸರ್ಕಲ್‌ನಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿದೆ. ಅಲ್ಲದೆ ಹೆದ್ದಾರಿ ಹಾದು ಹೋಗಲಿದೆ. ಹಾಗಾಗಿ ಅಲ್ಲಿ ಟ್ಯಾಂಕರ್ ಸ್ಥಾಪನೆಯ ಅನುಮತಿ ನಿರಾಕರಿಸಲಾಗಿತ್ತು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಯುದ್ಧ ಟ್ಯಾಂಕರ್, 9 ತಿಂಗಳಿಂದ ಪಂಜರದಲ್ಲಿ ಬಂಧಿ, ಕಾರಣವೇನು?
ಟ್ಯಾಂಕರ್ ನಿರ್ವಹಣೆ ಮಾಡದಿರುವುದು ಮತ್ತು ಸ್ಥಾಪನೆಗೆ ಸೂಕ್ತ ಜಾಗ ನಿಗದಿ ಮಾಡದಿರುವ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿತ್ತು. ಅಲಂಕಾರಕ್ಕೆ ಹಾಕಿದ್ದ ಹೂವು ಕೊಳೆತು, ಒಣಗಿದ್ದರು ತೆಗೆದಿರಲಿಲ್ಲ. ಟ್ಯಾಂಕರ್ ಸಂಪೂರ್ಣ ಧೂಳಿನಲ್ಲಿ ಮುಳುಗಿದೆ. ಅಕ್ಕಪಕ್ಕ ಸಂಪೂರ್ಣ ಕೆಸರುಮಯವಾಗಿತ್ತು.
ಫ್ರೀಡಂ ಪಾರ್ಕ್‌ಗೆ ಯುದ್ಧ ಟ್ಯಾಂಕರ್
ರಷ್ಯಾ ನಿರ್ಮಿತ ಟಿ55 ಮಾದರಿಯ ಯುದ್ಧ ಟ್ಯಾಂಕರ್ ಅನ್ನು ಶಿವಮೊಗ್ಗದ ಅಲ್ಲಮಪ್ರಭು ಮೈದಾನಕ್ಕೆ ಶಿಫ್ಟ್ ಮಾಡಲಾಗುತ್ತಿದೆ. 16 ತಿಂಗಳಿಂದನಿಂದ ನಿಂತಲ್ಲೆ ನಿಂತಿದ್ದ ಟ್ಯಾಂಕರ್‌ಗೆ ಕೊನೆಗೂ ‘ಫ್ರೀಡಂʼ ಸಿಕ್ಕಿದೆ. ಸುತ್ತಲು ಹಾಕಿದ್ದ ಪಂಜರವನ್ನು ತೆರವುಗೊಳಿಸಲಾಗಿದೆ. ಇತ್ತ ಫ್ರೀಡಂ ಪಾರ್ಕ್‌ನಲ್ಲಿ ಯುದ್ದ ಟ್ಯಾಂಕರ್ ನಿಲ್ಲಿಸಲು ಕಟ್ಟೆ ಕಟ್ಟಲಾಗಿದೆ. ಅದರ ಮೇಲೆ ಟ್ಯಾಂಕರ್ ತಂದು ನಿಲ್ಲಿಸಲಾಗುತ್ತಿದೆ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎಸ್.ಹಿರೇಮಠ ಅವರು ಆಸಕ್ತಿ ವಹಿಸಿ ಯುದ್ದ ಟ್ಯಾಂಕರ್‌ಗೆ ಮುತುವರ್ಜಿಯಿಂದಾಗಿ ಟ್ಯಾಂಕರ್‌ಗೆ ಸೂಕ್ತ ಗೌರವ ದೊರೆಯುವಂತಾಗಿದೆ. ಈ ಯುದ್ಧ ಟ್ಯಾಂಕರ್‌ನ ವಿಶೇಷತೆ ಏನು? ಇಲ್ಲಿದೆ ಅದರ ಡಿಟೇಲ್ಸ್, ಶಿವಮೊಗ್ಗಕ್ಕೆ ಭಾರತ – ಪಾಕ್ ಯುದ್ದದಲ್ಲಿ ಭಾಗಿಯಾದ ಟ್ಯಾಂಕರ್, ಸದ್ಯದಲ್ಲೇ ಬರುತ್ತೆ ಫೈಟರ್ ವಿಮಾನ, ಯಾಕೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422