ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ಚಾಲಕನನ್ನು ಕೆಳಗೆ ಎಳೆದು ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 20 ಮಾರ್ಚ್ 2022

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಬೈಕ್ ಸವಾರನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಬಸ್ ಚಾಲಕ ಫಯಾಜ್ ಪಾಷಾ ಗಾಯಗೊಂಡಿದ್ದಾರೆ. ಅವರಿಗೆ ಮಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಏನಿದು ಪ್ರಕರಣ?

ಕುಣಿಗಲ್’ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಪಾಸ್ ರಸ್ತೆಯ ತುಂಗಾ ಸೇತುವೆ ಬಳಿ ತೆರಳುತಿತ್ತು. ದಿಢೀರನೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಚಾಲಕ ಫಯಾಜ್ ಪಾಷಾ ಬೈಕ್ ಸವಾರನಿಗೆ ಅಡ್ಡದಿಡ್ಡ ಬೈಕ್ ಓಡಿಸಿದ್ದಕ್ಕೆ ಬೈದಿದ್ದಾರೆ. ಆಕ್ರೋಶಗೊಂಡ ಬೈಕ್ ಸವಾರ ಬಸ್ಸನ್ನು ಅಡ್ಡಗಟ್ಟಿದ್ದಾನೆ.

ಡೋರ್ ತೆಗೆದು ಫಯಾಜ್ ಪಾಷಾ ಅವರನ್ನು ಬಸ್ಸಿನಿಂದ ಕೆಳಗೆ ಎಳೆದು ಹಲ್ಲೆ ನಡೆಸಿದ್ದಾನೆ. ಈ ಸಂದರ್ಭ ಫಯಾಜ್ ಪಾಷಾ ಅವರ ಕಾಲು ಡೋರ್’ಗೆ ಸಿಕ್ಕಿಬಿದ್ದು ಗಾಯವಾಗಿದೆ. ಬಸ್ಸಿನ ಕಂಡಕ್ಟರ್ ಚಾಲಕ ಫಯಾಜ್ ಪಾಷಾ ಅವರನ್ನು ರಕ್ಷಿಸಿದ್ದಾರೆ.

ಫಯಾಜ್ ಪಾಷಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಲಿಗೆ ನಾಲ್ಕು ಹೊಲಿಗೆ ಹಾಕಲಾಗಿದೆ. ಸರ್ಕಾರಿ ಕರ್ತವ್ಯಕ್ಕ ಅಡ್ಡಿಪಡಿಸಿದ ಆರೋಪ ಸಂಬಂಧ ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

JNNCE College VTU Ranking

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment