SHIVAMOGGA LIVE NEWS | 9 JANUARY 2023
ಶಿವಮೊಗ್ಗ : ಉದ್ಯಮಿ ಶರತ್ ಭೂಪಾಳಂ ಅವರು ತಮ್ಮ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದಾರೆ. ಅವರ ಮಗ ಸಂಚಿತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಶಾರ್ಟ್ ಸರ್ಕಿಟ್ ನಿಂದಾಗಿ ಅವಘಡ ಸಂಭವಿಸಿದೆ. (business man death)
ಘಟನೆ ಸಂಭವಿಸಿದ್ದು ಹೇಗೆ?
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಶಾರ್ಟ್ ಸರ್ಕಿಟ್ ಸಂಭವಿಸಿದೆ. ಕೂಡಲೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿದ್ದವರು ಎಚ್ಚರಗೊಳ್ಳುವ ಹೊತ್ತಿಗಾಗಲೆ ಮನೆಯೊಳಗೆ ಕತ್ತಲು ಆವರಿಸಿತ್ತು.
ಮಗನನ್ನು ರಕ್ಷಿಸಲು ತೆರಳಿದ್ದರು
ಶರತ್ ಅವರು ಮನೆಯಲ್ಲಿದ್ದ ಎಲ್ಲರನ್ನು ಹೊರಗೆ ಕರೆ ತಂದಿದ್ದಾರೆ. ನಾಲ್ವರು ಮನೆಯಿಂದ ಹೊರಗೆ ಬಂದಿರುವುದನ್ನು ಗಮನಿಸಿ ಅವರು, ಪುನಃ ಮನೆಯೊಳಗೆ ಹೋಗಿದ್ದಾರೆ. ಮೊದಲ ಮಹಡಿಯಲ್ಲಿ ಮಲಗಿದ್ದ ಮಗ ಸಂಚಿತ್ ನನ್ನು ರಕ್ಷಿಸಲು ತೆರಳಿದ್ದರು. ಸಂಚಿತ್ ನನ್ನು ರಕ್ಷಿಸಿ ಹೊರೆಗೆ ಕಳುಹಿಸಿದ್ದರು. (business man death)
ಮನೆ ಒಳಗೆ ಪ್ರಜ್ಞೆ ಕಳೆದುಕೊಂಡರು
ಮನೆಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಕಿಟಕಿಗಳನ್ನು ತೆಗೆಯಲು ಶರತ್ ಭೂಪಾಳಂ ಅವರು ಪ್ರಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಅಷ್ಟು ಹೊತ್ತಿಗಾಗಲೆ ಶಾರ್ಟ್ ಸರ್ಕಿಟ್ ಮತ್ತು ಉಪಕರಣ ಸುಟ್ಟಿದ್ದರಿಂದ ಕೊಠಡಿಯಲ್ಲಿ ವಿಷ ಅನಿಲ ಆವರಿಸಿಕೊಂಡಿತ್ತು. ಇದರ ಸೇವನೆಯಿಂದ ಶರತ್ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ.
ಆಸ್ಪತ್ರೆಗೆ ದಖಲಿಸಿದರು ವಿಧಿ ಬಿಡಲಿಲ್ಲ
ಕೆಲವೇ ನಿಮಿಷದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶರತ್ ಅವರನ್ನು ರಕ್ಷಣೆ ಮಾಡಿ, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಶರತ್ ಭೂಪಾಳಂ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮಗ ಸಂಚಿತ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. (business man death)
ಕಂಬನಿ ಮಿಡಿದ ಜನ
ಶರತ್ ಭೂಪಾಳಂ ಅವರ ನಿಧನದ ವಿಚಾರ ತಿಳಿಯುತ್ತಿದ್ದಂತೆ ಅವರ ಸಂಬಂಧಿಗಳು, ಸ್ನೇಹಿತರು, ಅವರ ಕಂಪನಿಯಲ್ಲಿ ಕೆಲಸ ಮಾಡುವ ನೌಕರರು ಮನೆ ಬಳಿ ಧಾವಿಸಿ ಅಂತಿಮ ನಮನ ಸಲ್ಲಿಸಿದರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಗಣ್ಯರು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ಮನೆಯಲ್ಲಿ ಅಗ್ನಿ ಅವಘಡ, ಖ್ಯಾತ ಉದ್ಯಮಿ ನಿಧನ
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ
ಶರತ್ ಭೂಪಾಳಂ ಅವರು ಸ್ವಾತಂತ್ರ್ಯ ಹೋರಾಟಗಾರ, ವೈಚಾರಿಕ ಸಾಹಿತಿ ಭೂಪಾಳಂ ಚಂದ್ರಶೇಖರಯ್ಯ ಅವರ ಕುಟುಂಬದವರು. ಮಾಚೇನಹಳ್ಳಿಯಲ್ಲಿ ಕೈಗಾರಿಕೆ ನಡೆಸುತ್ತಿದ್ದರು. ಶಿವಮೊಗ್ಗದ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದರು.
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು
- ಶಿವಮೊಗ್ಗದಲ್ಲಿ ಮಲ್ನಾಡ್ ಸ್ಟಾರ್ಟ್ಅಪ್ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?
- ಭದ್ರಾವತಿಯಲ್ಲಿ ಭೀಕರ ಅಪಘಾತ, ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು
- ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಿನಿಸ್ಟರ್ ವಾರ್ನಿಂಗ್, ಕಾರಣವೇನು?
- ಶಿವಮೊಗ್ಗ ಸಿಟಿ ಬಸ್ಸುಗಳ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್ ಪೊಲೀಸ್
- ಶಿವಮೊಗ್ಗದಲ್ಲಿ ಬಸ್ ಡಿಕ್ಕಿ, ಗುಂಡಿಗೆ ಬಿದ್ದ ಸ್ಕೂಟಿ, ಬಾಲಕಿ ಬಲಗಾಲಿಗೆ ಗಂಭೀರ ಗಾಯ