ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಆಗಸ್ಟ್ 2020
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ವಾರ್ಡ್‍ನಲ್ಲಿನ ನೂತನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು. ಇತ್ತೀಚೆಗೆ ಸ್ಥಾಪನೆ ಮಾಡಿರುವ ಆಕ್ಸಿಜನ್ ಪ್ಲಾಂಟ್ ಕುರಿತು ಪರಿಶೀಲನೆ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನೆಲ್ಲ ಹೊಸ ವ್ಯವಸ್ಥೆಯಾಗಿದೆ?
ಸಿಸಿಟಿವಿ ವ್ಯವಸ್ಥೆ | ಕೋವಿಡ್ ವಾರ್ಡ್ನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಸೋಂಕಿತರ ಸಂಬಂಧಿಗಳು ತಮ್ಮ ಕಡೆಯವರು ಕೋವಿಡ್ ವಾರ್ಡ್‍ನಲ್ಲಿ ಹೇಗಿದ್ದಾರೆ, ಅವರಿಗೆ ಏನೆಲ್ಲ ಚಿಕಿತ್ಸೆ ನೀಡಲಾಗುತ್ತಿದೆ ಅನ್ನುವುದನ್ನು ಸಿಸಿಟಿವಿ ಮೂಲಕ ಪರಿಶೀಲಿಸಬಹುದಾಗಿದೆ.
ಮೈಕ್ ವ್ಯವಸ್ಥೆ | ಕರೋನ ಪಾಸಿಟಿವ್ ವಾರ್ಡ್‍ನಲ್ಲಿ ಮೈಕ್ ವ್ಯವಸ್ಥೆ ಅಳವಡಿಸಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ಕಂಟ್ರೋಲ್ ರೂಂನಿಂದ ನೇರವಾಗಿ ವೈದ್ಯರೊಂದಿಗೆ ಅಥವಾ ಕರ್ತವ್ಯದಲ್ಲಿರುವ ದಾದಿಯರೊಂದಿಗೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಕೂಡ ಈ ಸೌಲಭ್ಯ ಬಳಸಿಕೊಳ್ಳಬಹುದು.
ಟೆಲಿಫೋನ್ ವ್ಯವಸ್ಥೆ | ವಾರ್ಡ್‍ನಲ್ಲಿ ಟೆಲಿಫೋನ್ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳ ಸಂಬಂಧಿಗಳ ಜೊತೆ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ರೋಗಿಗಳ ಸಹ ಇದರ ಸೌಲಭ್ಯ ಪಡೆದುಕೊಳ್ಳಬಹುದು.
ತಪಾಸಣಾ ವರದಿ | ಕರೋನಾ ಪರೀಕ್ಷೆ ಫಲಿತಾಂಶವನ್ನು ಸಂಬಂಧಪಟ್ಟವ ಮೊಬೈಲ್‍ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ರಾಪಿಡ್ ಆಂಟಿಜೆನ್ ಪರೀಕ್ಷೆಯ ವರದಿಯನ್ನು ಮೊಬೈಲ್‍ಗೆ ಕಳುಹಿಸಲಾಗುತ್ತದೆ. ಆರೋಗ್ಯ ಇಲಾಖೆಯ ವೆಬ್‍ಸೈಟ್‍ನಲ್ಲೂ 32 ಗಂಟೆಯ ಒಳಗಾಗಿ ವರದಿ ಲಭ್ಯವಾಗಲಿದೆ. ಇವತ್ತು ಸಚಿವ ಈಶ್ವರಪ್ಪ ಇವುಗಳ ಪರಿಶೀಲನೆ ನಡೆಸಿದರು.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]