ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಇವತ್ತು ಸಿನಿಮಾ ದಸರಾಗೆ (Cinema) ಚಾಲನೆ ನೀಡಲಾಯಿತು. ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಟ ಶರಣ್, ನಟಿ ಕಾರುಣ್ಯ ರಾಮ್ ಸಿನಿಮಾ ದಸರಾದ ಆಕರ್ಷಣೆಯಾಗಿದ್ದರು. ಡಾ. ಅಂಬೇಡ್ಕರ್ ಭವನದಲ್ಲಿ ಸಿನಿಮಾ ದಸರಾಗೆ ಚಾಲನೆ ನೀಡಲಾಯಿತು.
ಯಾರೆಲ್ಲ ಏನೆಲ್ಲ ಹೇಳಿದರು?
ಡಾ. ರಾಜಕುಮಾರ್ ಅವರಂತಹ ಕಲಾವಿದರು ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಹೆಚ್ಚು ಜನಪ್ರಿಯಗೊಳಿಸಿದರು. ನಾಯಕ ನಟರು ಮನರಂಜನೆ ಜೊತೆಗೆ ಸಂದೇಶವನ್ನು ನೀಡಬೇಕು. ಆದರೆ ಚಿತ್ರರಂಗ ಹಾದಿ ತಪ್ಪಿದ್ದು, ಸರಿ ಹೋಗಬೇಕು.
- ಮಧು ಬಂಗಾರಪ್ಪ, ಸಚಿವ
![]()

ಶಿವಮೊಗ್ಗದಲ್ಲಿ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ದಸರಾ ಕಾರ್ಯಕ್ರಮ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ₹50 ಲಕ್ಷ ಒದಗಿಸಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. 65ಕ್ಕೂ ಹೆಚ್ಚು ಚಟುವಟಿಕೆ ನಡೆಸಲಾಗುತ್ತಿದೆ.
- ಎಸ್.ಎನ್.ಚನ್ನಬಸಪ್ಪ, ಶಾಸಕ
![]()
ನಮ್ಮ ಸಿನಿಮಾಗಳನ್ನು ಗೆಲ್ಲಿಸಿದ ಪ್ರೇಕ್ಷಕರೆ ನಿಜ ಅಧ್ಯಕ್ಷರು. ನಿರ್ಮಾಪಕ ಪ್ರಧಾನ ಅಧ್ಯಕ್ಷ. ಶಿವಮೊಗ್ಗ ದಸರಾದಲ್ಲಿ ಸಿನಿಮಾಗೆ ಅವಕಾಶ ನೀಡಿರುವುದು ಶ್ಲಾಘನೀಯ.
- ಶರಣ್, ನಟ
![]()

ಶಿವಮೊಗ್ಗ ಸುಂದರ ಜಿಲ್ಲೆ. ತಿಂಗಳಲ್ಲಿ ಒಮ್ಮೆಯಾದರೂ ಬಂದು ಹೋಗುತ್ತೇನೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಅಳಿಸಲಾಗದ ನೆನಪು. ಅತಿ ಹೆಚ್ವು ಸಂಖ್ಯೆಯ ಸಿಎಂ ಗಳನ್ನು ನೀಡಿದೆ. ಜಿಲ್ಲೆ ಸಾಹಿತ್ಯ, ರಂಗಭೂಮಿ, ಎಲ್ಲ ಕ್ಷೇತ್ರಗಳಲ್ಲೂ ಮುಂದಿದೆ. ಈ ದಸರಾ ಮುಂದೆಯೂ ವಿಜೃಂಭಣೆಯಿಂದ ನಡೆಯಲಿ.
- ಕಾರುಣ್ಯ ರಾಮ್, ನಟಿ
![]()
ಕಾರ್ಯಕ್ರಮದಲ್ಲಿ ಡಾ. ರಾಜ್‌ಕುಮಾರ್ ಅವರು ಹಾಡಿದ್ದ ಗೀತೆಯನ್ನು ನಟ ಶರಣ್ ಹಾಡಿದರು. ನಟಿ ಕಾರುಣ್ಯ ರಾಮ್ ಡಾನ್ಸ್ ಪ್ರೇಕ್ಷಕರ ಚಪ್ಪಾಳೆ ಪಡೆಯಿತು.


ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಜೆಪಿಯಿಂದ ಒಂದು ಗಂಟೆಗು ಹೆಚ್ಚು ಹೊತ್ತು ರಸ್ತೆ ತಡೆ

Cinema Dasara in Shimoga
LATEST NEWS
- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

About The Editor
ನಿತಿನ್ ಆರ್.ಕೈದೊಟ್ಲು
















