ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 6 MAY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಒಂದೆಡೆ ಕೋವಿಡ್ ಚಿಕಿತ್ಸೆಗೆ ಬೆಡ್, ಆಕ್ಸಿಜನ್ ಸಿಗದೆ ಜನ ಪರದಾಡುತ್ತಿದ್ದಾರೆ. ಇತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೋವಿಡ್ ವಾರ್ ರೂಂ ಧೂಳು ಹಿಡಿದು ಕುಳಿತಿದೆ. ಇವತ್ತು ಎಚ್ಚೆತ್ತುಕೊಂಡ ಅಧಿಕಾರಿಗಳು ಧೂಳು ಕ್ಲೀನ್ ಮಾಡಿ, ಕೆಲಸ ಆರಂಭಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿ ಕಟ್ಟಡದಲ್ಲಿ ಕೋವಿಡ್ ವಾರ್ ರೂಂ ಆರಂಭಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ವೈಶಾಲಿ ಅವರು ಕೋವಿಡ್ ವಾರ್ ರೂಂ ಪರಿಶೀಲನೆಗೆ ಬರುವುದಾಗಿ ತಿಳಿಸಿದರು. ಆಗ ಅಧಿಕಾರಿಗಳು ತರಾತುರಿಯಲ್ಲಿ ಕ್ಲೀನಿಂಗ್ ಶುರು ಮಾಡಿದರು.
ಧೂಳು ಹೊಡೆದು, ನೆಲ ಒರೆಸಿದರು
ಮೊದಲ ಅಲೆ ಮುಗಿಯುತ್ತಿದ್ದಂತೆ ಕೋವಿಡ್ ವಾರ್ ರೂಂ ಧೂಳಿನ ಕೊಂಪೆಯಾಯ್ತು. ಹಳೆ ಪೀಠೋಪಕರಣಗಳ ಗೋಡಾನ್ ಆಗಿ ಬದಲಾಯಿತು. ಎರಡನೆ ಅಲೆ ವಿಕೋಪಕ್ಕೆ ಹೋಗಿದ್ದರೂ, ವಾರ್ ರೂಂ ಶುರುವಾಗಿರಲಿಲ್ಲ. ಇವತ್ತು ದಿಢೀರನೆ ವಾರ್ ರೂಂ ಕ್ಲೀನ್ ಮಾಡಿ, ಅನಗತ್ಯ ಪೀಠೋಪಕರಣಗಳನ್ನು ತೆರವು ಮಾಡಲಾಯಿತು. ಕಂಪ್ಯೂಟರ್ಗಳು ಸಿಬ್ಬಂದಿಗಳು ಬಂದು ಕೆಲಸ ಆರಂಭಿಸಿದ್ದಾರೆ.
ಸೋಂಕಿತರ ಪ್ರೈಮರಿ ಕಾಂಟ್ಯಾಕ್ಟ್ಗಳನ್ನು ಪತ್ತೆ ಹಚ್ಚುವುದಷ್ಟೆ ನಮ್ಮ ಕೆಲಸ ಎಂದು ಇಲ್ಲಿಯ ಸಿಬ್ಬಂದಿ ಹೇಳುತ್ತಾರೆ. ಆದರೆ ಈತನಕ ಯಾರೊಬ್ಬರ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹೆಚ್ಚಲಾಗಿಲ್ಲ. ಟ್ರಾವಲ್ ಹಿಸ್ಟರಿಯನ್ನು ತಿಳಿಯೋ ಪ್ರಯತ್ನವಾಗಿಲ್ಲ. ಈಗ ಏಕಾಏಕಿ ವಾರ್ ರೂಂ ಶುರ ಮಾಡಿ, ಜನರ ಕಣ್ಣೊರೆಸುವ ಪ್ರಯತ್ನ ನಡೆಸುತ್ತಿರುವಂತಿದೆ. ವಾರ್ ರೂಂ ಕ್ಲೀನಿಂಗ್ ವಿಡಿಯೋ ಇಲ್ಲಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]