ಶಿವಮೊಗ್ಗ ಲೈವ್.ಕಾಂ | SHIMOGA | 26 ಅಕ್ಟೋಬರ್ 2019
ದೀಪಾವಳಿ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಸೈನ್ಸ್ ಮೈದಾನ ಮತ್ತು ನೆಹರು ಸ್ಟೇಡಿಯಂನಲ್ಲಿ ಮಳಿಗೆಗಳನ್ನು ನಿರ್ಮಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇವತ್ತು ಬೆಳಗ್ಗೆಯಿಂದಲೆ ಪಟಾಕಿ ಮಾರಾಟ ಆರಂಭವಾಗಿದೆ. ಸೈನ್ಸ್ ಮೈದಾನದಲ್ಲಿ 30ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಲಾಗಿದೆ. ಆದರೆ ನಿರಂತರ ಮಳೆಯಿಂದಾಗಿ ಮಾರಾಟ ಕುಸಿತ ಕಂಡಿದೆ. ‘ಮಳೆ ಜೋರಾಗಿರುವುದರಿಂದ ಪಟಾಕಿ ಖರೀದಿಗೆ ಜನ ಬರುತ್ತಿಲ್ಲ’ ಅನ್ನುತ್ತಾರೆ ವ್ಯಾಪಾರಿಗಳು.
ಭಾರಿ ಮಳೆಯಿಂದಾಗಿ ಸೈನ್ಸ್ ಮೈದಾನ ಕೆಸರು ಗದ್ದೆಯಂತಾಗಿದೆ. ಆದ್ದರಿಂದ ಕೆಲವು ಮಳಿಗೆಗಳಿಗೆ ತೆರಳುವುದಕ್ಕೆ ಆಗದಂತಾಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ನೆಹರು ಕ್ರೀಡಾಂಗಣದಲ್ಲು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿಯು ಮಳೆ ಕಾರಣಕ್ಕೆ ವ್ಯಾಪಾರ ಕುಸಿದೆ. ‘ಸಂಜೆ ವೇಳೆಗೆ ವ್ಯಾಪಾರ ಜಿಗಿತುಕೊಳ್ಳಬಹುದು’ ಅನ್ನುತ್ತಾರೆ ವ್ಯಾಪಾರಿಗಳು.
ಈ ಬಾರಿ ಸೇಫ್ಟಿಗಿಲ್ಲ ಆದ್ಯತೆ
ಪ್ರತಿ ವರ್ಷ ಪಟಾಕಿ ಮಾರಾಟ ಮಳಿಗೆಗಳ ಬಳಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಈ ಬಾರಿ ಸೇಫ್ಟಿಯನ್ನೆ ಕಡೆಗಾಣಿಸಲಾಗಿದೆ. ಅಗ್ನಿ ಅವಘಡ ತಡೆಯಲು ಅಗತ್ಯವಿರುವ ನೀರು, ಮರಳಿನ ವ್ಯವಸ್ಥೆ ಮಾಡಿಲ್ಲ. ಬಕೆಟ್ ಮತ್ತು ಡ್ರಮ್’ಗಳನ್ನು ಇರಿಸಲಾಗಿದೆಯೆ ಹೊರತು ಬೇರೆ ವ್ಯವಸ್ಥೆ ಮಾಡಿಲ್ಲ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]