ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020
ಫಲವತ್ತಾದ ಭೂಮಿ ಇಲ್ಲದಿದ್ದರೆ ಎಷ್ಟೇ ಮಳೆ ಬಂದರೂ ಪ್ರಯೋಜನ ಆಗುವುದಿಲ್ಲ. ಹಾಗೆಯೇ ಪ್ರಜ್ಞಾವಂತ ಜನರು ಇಲ್ಲದಿದ್ದರೆ ಸರ್ಕಾರ ಯಾವುದೇ ಯೋಜನೆ ತಂದರು ಉಪಯೋಗ ಆಗುವುದಿಲ್ಲ ಅಂತಾ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ವಿದ್ಯಾನಗರ ಕಂಟ್ರಿ ಕ್ಲಬ್ ರಸ್ತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ಕೇಂದ್ರ ಕಚೇರಿ ಚೈತನ್ಯ ಸೌಧದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ ಅವರು, 50 ವರ್ಷದ ಹಿಂದೆ ಶಿವಮೊಗ್ಗ, ಭದ್ರಾವತಿ ಭಾಗದಲ್ಲಿ ಬಹಳ ಬಡತನವಿತ್ತು. ಇವತ್ತು ಎಲ್ಲವು ಪರಿವರ್ತನೆ ಆಗಿದೆ. ಜನರು ಪ್ರಜ್ಞಾವಂತರಾಗಿದ್ದಾರೆ ಎಂದರು.
ಬಾಂಗ್ಲಾದೇಶದದಲ್ಲಿ ಮೊಹಮ್ಮದ್ ಯೂನಿಸ್ ಅವರು ಸ್ವಸಹಾಯ ಸಂಘಗಳನ್ನು ಮಹಿಳೆಯರಿಗೆ ಮಾತ್ರ ಎಂದು ಸ್ಥಾಪಿಸಿದರು. ಯಾರೊಬ್ಬರು ಪುರುಷರ ಸ್ವಸಹಾಯ ಸಂಘ ಸ್ಥಾಪಿಸಿಲ್ಲ. ಪುರುಷರಿಗೆ ಸಾಲ ಕೊಟ್ಟರೆ ವಸೂಲಿ ಮಾಡುವುದು ಕಷ್ಟ, ಬೈಗುಳ ಕೇಳಬೇಕು ಎಂದು ಎಲ್ಲರು ಹಿಂದೇಟು ಹಾಕುತ್ತಾರೆ. ಆದರೆ ಧರ್ಮಸ್ಥಳ ಸಂಘದ ವತಿಯಿಂದ ಪುರುಷರಿಗು ಸಂಘ ಸ್ಥಾಪಿಸಲಾಗಿದೆ. ಉಳಿತಾಯವು ಚೆನ್ನಾಗಿ ಆಗುತ್ತಿದೆ ಎಂದು ಅವರು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ನಡುವೆಯೂ ನಮ್ಮ ಸಂಸ್ಕೃತಿ ಉಳಿಯಲು ಶ್ರೀಗಳೇ ಕಾರಣ. ಮಹಿಳೆಯರ ಸಶಕ್ತಿಕರಣಕ್ಕೆ ಧರ್ಮಸ್ಥಳದ ಕಾರ್ಯ ಮೆಚ್ಚುವಂತದ್ದು. ನಮ್ಮ ಸರ್ಕಾರ ಕೂಡ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸ್ವಸಹಾಯ ಸಂಘದ ವ್ಯವಸ್ಥೆ ಈ ಮೊದಲು ಕ್ರೈಸ್ತ ಮೆಷಿನರಿಗಳ ಕೈಯಲ್ಲಿತ್ತು. ಆವರೊಂದಷ್ಟು ಸಾಲ ಕೊಡುತ್ತಿದ್ದರಷ್ಟೇ. ಧರ್ಮಸ್ಥಳ ಸಂಘದವರು ಸ್ವ ಸಹಾಯ ಗುಂಪುಗಳನ್ನು ಪ್ರಾರಂಭಿಸಿದ ನಂತರ ಇದಕ್ಕೆ ದೈವತ್ವದ ಗುಣ ಬಂದಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಗೀತಾ ಜಯಶೇಖರ್, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮಂಜುನಾಥ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]