ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 07 JANUARY 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೈಸೂರು ಪೇಪರ್ ಮಿಲ್ಸ್‍ಗೆ (ಎಂಪಿಎಂ) ನೀಡಿದ್ದ ಅರಣ್ಯದ ಲೀಸ್ ಅವಧಿಯನ್ನು ವಿಸ್ತರಿಸಿರುವುದನ್ನು ವಿರೋಧಿಸಿ ಶಿವಮೊಗ್ಗದ ಶ್ರೀಗಂಧ ಕೋಠಿಗೆ ಇವತ್ತು ಮುತ್ತಿಗೆ ಹಾಕಲಾಯಿತು. ನಮ್ಮೂರಿಗೆ ಅಕೇಶಿಯ ಮರ ಬೇಡ ಹೋರಾಟ ಸಮಿತಿ ವತಿಯಿಂದ ಮತ್ತಿಗೆ ಹಾಕಲಾಯ್ತು.
ಮೆರವಣಿಗೆ, ಮುತ್ತಿಗೆ, ಮಾತಿನ ಚಕಮಕಿ
ಒಕ್ಕೂಟದ ವತಿಯಿಂದ ಬೆಕ್ಕಿನ ಕಲ್ಮಠದಿಂದ ಶ್ರೀಗಂಧ ಕೋಠಿಯಲ್ಲಿರುವ ಸಿಸಿಎಫ್ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಹೋರಾಟಗಾರರನ್ನು ತಡೆದರು. ಈ ವೇಳೆ, ನೂಕಾಟ, ತಳ್ಳಾಟ ಸಂಭವಿಸಿತು.
ಗೇಟ್ ಮುಂದೆ ಧರಣಿ
ಸಿಸಿಎಫ್ ಕಚೇರಿಯ ಗೇಟ್ ಮುಂದೆಯೇ ಧರಣಿ ಆರಂಭಿಸಿದರು. ಈ ವೇಳೆ ಎಂಪಿಎಂಗೆ ನೀಡಿರುವ ಅರಣ್ಯದ ಭೂಮಿಯ ಗುತ್ತಿಗೆ ಅವಧಿಯನ್ನು ವಿಸ್ತರಣೆ ಮಾಡಿರುವುದನ್ನು ಖಂಡಿಸಿದರು.
ಧರಣಿಯ ವಿಡಿಯೋ ರಿಪೋರ್ಟ್ ಇಲ್ಲಿದೆ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]