ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 JANUARY 2023
SHIMOGA| ಸೊರಬ ತಾಲೂಕಿನಲ್ಲಿ 14 ತಹಶೀಲ್ದಾರ್ ಗಳನ್ನು ವರ್ಗಾವಣೆ (transfer list) ಮಾಡಲಾಗಿದೆ ಎಂದು ಕಂದಾಯ ಇಲಾಖೆ ನೌಕರರು ಆರೋಪಿಸಿದ್ದಾರೆ. ವರ್ಗಾವಣೆಯಾದ ತಹಶೀಲ್ದಾರ್ ಗಳ ಪಟ್ಟಿ ಕೊಡುವಂತೆ ಶಾಸಕ ಕುಮಾರ್ ಬಂಗಾರಪ್ಪ ಅವರು ಜಿಲ್ಲಾಧಿಕಾರಿ ಅವರಿಗೆ ಪಟ್ಟು ಹಿಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ವಿಚಾರ ಪ್ರಸ್ತಾಪಿಸಿದ ಶಾಸಕ ಕುಮಾರ್ ಬಂಗಾರಪ್ಪ , ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ಕಂದಾಯ ಇಲಾಖೆ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅದರಲ್ಲೂ ಸೊರಬದ ಕಂದಾಯ ಇಲಾಖೆ ವರ್ಗಾವಣೆ ಬಗ್ಗೆ ಪ್ರತಿಭಟನೆ ಮಾಡಿದ್ದಾರೆ. 14 ತಹಶೀಲ್ದಾರ್ ವರ್ಗಾವಣೆ (transfer list)ಆಗಿದೆ ಎಂದು ಆರೋಪ ಮಾಡಿದ್ದಾರೆ. ಈವರೆಗೆ ನಾನು ಒಬ್ಬ ತಹಶೀಲ್ದಾರ್ ಅನ್ನು ವರ್ಗಾವಣೆ ಮಾಡಿ ಎಂದು ಪತ್ರ ಕೊಟ್ಟಿಲ್ಲ. ವರ್ಗಾವಣೆ ಮಾಡಿದ್ದರೆ ಪಟ್ಟಿ ಕೊಡಿ ಎಂದು ಸಭೆಯಲ್ಲಿ ಪಟ್ಟುಹಿಡಿದರು.
ಸಿ.ಎಸ್ ಷಡಕ್ಷರಿಯವರಿಗೆ ಮಾಹಿತಿ ಇಲ್ಲದೇ ಆರೋಪ ಮಾಡುತ್ತಿದ್ದಾರೆ. ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ನೇತೃತ್ವದಲ್ಲಿ ಡಿಸಿ ಕಛೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಅರುಣ್ ಕುಮಾರ್ ಕಂದಾಯ ಇಲಾಖೆಯಲ್ಲಿ ಆರ್ ಐ ಹುದ್ದೆಯಲ್ಲಿ ಕೆಲಸ ಮಾಡಬೇಕು. ಖಾಲಿ ಇದೆ ಎಂದು ಪ್ರಭಾವ ಬಳಸಿ, ಶಿರಸ್ತೇದಾರ್ ಹುದ್ದೆಯಲ್ಲಿ ಕೆಲಸ ಮಾಡ್ತಿದ್ದಾರೆ. ಶಿರೆಸ್ತೇದಾರ್ ಹುದ್ದೆಗೆ ಕಾಯುತ್ತಿರುವವರಿಗೆ ಬಿಟ್ಟು ಕೊಡದೇ ಪ್ರಭಾವ ಬಳಸಿದ್ದಾರೆ. ಸರ್ಕಾರ ಮೊದಲು ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರುಗಳು ರಾಜಕೀಯ ಪಕ್ಷಗಳ ನಾಯಕರ ರೀತಿ ಯಾಕೆ ಹೇಳಿಕೆ ನೀಡಬೇಕು. ತಹಶೀಲ್ದಾರ್ ವರ್ಗಾವಣೆ ಕುರಿತು ಕಂದಾಯ ಸಚಿವರು, ಸಿಎಂ ಅವರನ್ನು ಕೂಡ ನಾನು ಭೇಟಿ ಮಾಡಿಲ್ಲ. ವರ್ಗಾವಣೆ ಸಂಬಂಧ ನನ್ನ ಪತ್ರಗಳಿದ್ದರೆ ಅವರು ಸಾಬೀತು ಮಾಡಲಿ. ಇಲ್ಲವಾದರೆ ಎಲ್ಲರೂ ರಾಜೀನಾಮೆ ಕೊಡಲಿ. ಸೂಕ್ತ ಮಾಹಿತಿ ನೀಡಬೇಕು. ರಾಜ್ಯದ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಗೌಡ ಮಾತನಾಡಿ,ಸೂಕ್ತ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ – 4 ವರ್ಷದಲ್ಲಿ 14 ತಹಶೀಲ್ದಾರ್ ವರ್ಗಾವಣೆ ಕಾರಣ ಬಿಚ್ಚಿಟ್ಟ ಎಂಎಲ್ಎ, ಏನದು?