ಶಿವಮೊಗ್ಗ ಲೈವ್.ಕಾಂ | SHIMOGA NEWS | 7 MARCH 2021
ಶಿವಮೊಗ್ಗದ ಖಾಸಗಿ ಹೊಟೇಲ್ ಒಂದರಲ್ಲಿ ಡಿಆರ್ ಡಿಒ ಲ್ಯಾಬ್ಗೆ ಬೇಕಾದ ಬುದ್ಧಿಮತ್ತೆ ಅಧಿವೇಶನ ಆಯೋಜಿಸಲಾಗಿತ್ತು. ಕುವೆಂಪು ವಿಶ್ವವಿದ್ಯಾಲಯ, ಕೃಷಿ, ತೋಟಗಾರಿಕೆ ವಿವಿ, ಪಶುವೈದ್ಯಕೀಯ ವಿವಿಯ ಕುಲಪತಿಗಳು, ಅಧ್ಯಾಪಕರು, ವೈದ್ಯರು, ತಂತ್ರಜ್ಞರು ಸೇರಿದಂತೆ ವಿವಿಧ ವಿಭಾಗದ ಪ್ರಮುಖರು ಅಧಿವೇಶನದಲ್ಲಿ ಭಾಗವಹಿಸಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನೆಲ್ಲ ಚರ್ಚೆಯಾಯ್ತು?
ಕುವೆಂಪು ವಿವಿಯಲ್ಲಿ ಡಿಆರ್ ಡಿಒ ಲ್ಯಾಬ್ ಸ್ಥಾಪನೆಗೆ ಯೋಜಿಸಲಾಗಿದೆ. ಲ್ಯಾಬ್ ಸ್ಥಾಪನೆ, ಸಂಶೋಧನೆಗಳು, ಸೇನೆಗೆ ಅಗತ್ಯ ಸೌಕರ್ಯ ಒದಗಿಸುವ ಸಂಶೋಧನೆಗಳು, ಲ್ಯಾಬ್ ಸ್ಥಾಪನೆಯಾದ ಬಳಿಕ ಇಲ್ಲಿಯ ಸಂಶೋಧಕರು, ಉಪನ್ಯಾಸಕರು, ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಕುರಿತು ಅಧಿವೇಶನದಲ್ಲಿ ಚರ್ಚೆಯಾಯ್ತು.
ರಾಷ್ಟ್ರ ನಿರ್ಮಾಣಕ್ಕೆ ತಜ್ಞರ ಸಂಶೋಧನೆ ಸದ್ಬಳಕೆ
ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಚವಾಗಿ ಲಭ್ಯವಿರುವ ಸಸ್ಯ ಪ್ರಭೇದಗಳು, ನೈಸರ್ಗಿಕ ಸಂಪನ್ಮೂಲಗಳನ್ನು ದೇಶದ ರಕ್ಷಣಾಪಡೆಯ ಒಳಿತಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಪರಿಣತ ಮಾನವ ಸಂಪನ್ಮೂಲ ಮಲೆನಾಡು ಭಾಗದಲ್ಲಿದೆ. ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಈ ಭಾಗದ ತಜ್ಞರ ಸಂಶೋಧನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಲ್ಯಾಬ್ಗೆ ತಾತ್ವಿಕ ಒಪ್ಪಿಗೆ
ಕುವೆಂಪು ವಿವಿಯಲ್ಲಿ ಡಿಆರ್ ಡಿಒ ಪ್ರಯೋಗಾಲಯ ಪ್ರಾರಂಭಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ರಕ್ಷಣಾಪಡೆಗಳಿಗೆ ಪ್ರಾಯೋಗಿಕವಾಗಿ ಸಹಾಯಕವಾಗುವಂತಹ ಸಂಶೋಧನೆಯನ್ನು ಈ ಭಾಗದ ತಜ್ಞರು ಕೈಗೊಳ್ಳಬೇಕಾದ ಅಗತ್ಯತೆ ಇದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಇಂಜಿನಿಯರಿಂಗ್ ಮತ್ತಿತರ ವಿಷಯಗಳ ಶ್ರೇಷ್ಠ ಸಂಶೋಧಕರು, ವಿಜ್ಞಾನಿಗಳು ಹೊರದೇಶಗಳಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಸ್ಥಳೀಯ ಮಾನವ ಸಂಪನ್ಮೂಲವನ್ನು, ಅವರ ಬುದ್ಧಿಮತ್ತೆಯನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ಡಿಆರ್ ಡಿಒ ಪ್ರಯೋಗಾಲಯದ ಸ್ಥಾಪನೆ ಮಹತ್ವದ ಹೆಜ್ಜೆಯಾಗಲಿದೆ ಎಂದು ರಾಘವೇಂದ್ರ ತಿಳಿಸಿದರು.
VIDEO REPORT
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಎಚ್.ಎಸ್.ವಾಗ್ದೇವಿ, ಡಿಆರ್ಡಿಒ ಲ್ಯಾಬ್ಗೆ ಯಾವ ರೀತಿಯಲ್ಲಿ ಸಂಶೋಧನಾ ಪ್ರಸ್ತಾವನೆ ಸಲ್ಲಿಸಬಹುದು ಎಂಬುದನ್ನು ವಿಡಿಯೋ ತುಣುಕಿನ ಮೂಲಕ ಮಾಹಿತಿ ನೀಡಿದರು. ಜೈವಿಕ ಚಿಕಿತ್ಸೆ, ಫೈಟೋಕೆಮಿಕಲ್ಸ್, ನೈಸರ್ಗಿಕ ವಿಧಾನದಲ್ಲಿ ಜೈವಿಕ ಸಂಯೋಜನೆ, ಪ್ರಾಕೃತಿಕ ಮಾದರಿಯಲ್ಲಿ ರಕ್ತಸ್ರಾವ ನಿಲ್ಲಿಸುವಿಕೆ, ಯುದ್ಧದಲ್ಲಿ ಜೈವಿಕ ರಕ್ಷಣಾ ಕವಚಗಳು, ಬಯೋಮಿಮಿಟಿಕ್ಸ್ ಸಲಕರಣೆಗಳು, ಏರೋಮೆಡಿಕಲ್ ಜೀವರಕ್ಷಕ ಉಪಕರಣಗಳು, ಸೈನಿಕರಿಗೆ ಅತ್ಯುತ್ತಮ ಉಡುಪುಗಳು, ಸೆನ್ಸಾರ್ ಅಭಿವೃದ್ಧಿ, ಜೈವಿಕ ನ್ಯಾನೋಟೆಕ್ನಾಲಜಿ, ಸೌರ ಶಕ್ತಿ ಕುರಿತು ಸಂಶೋಧನೆ ಕೈಗೊಳ್ಳಬಹುದು ಎಂದು ವಿವರಿಸಿದರು.
ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಎಂ.ಕೆ.ನಾಯಕ್, ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವ ಎಸ್.ಎಸ್.ಪಾಟೀಲ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಂಎಲ್ಸಿ ಎಸ್.ರುದ್ರೇಗೌಡ ಇತರರಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]