ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: UPI ಬಳಸುತ್ತಿರುವ ಬೆಂಗಳೂರಿನ ಸಾವಿರಾರು ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿದೆ. ಇದರ ಬೆನ್ನಿಗೆ ಶಿವಮೊಗ್ಗದಲ್ಲಿಯು ವ್ಯಾಪಾರಿಗಳಲ್ಲಿ ಗೊಂದಲ, ಆತಂಕ ಮೂಡಿದೆ.
ಶಿವಮೊಗ್ಗದಲ್ಲಿ ವ್ಯಾಪಾರಿಗಳು ಗೂಗಲ್ ಪೇ, ಫೋನ್ ಪೇ, ಪೇಟಿಯಂ ಬಳಕೆಗೆ ಮಿತಿ ವಿಧಿಸಿಕೊಳ್ಳುತ್ತಿದ್ದಾರೆ. ನಗದು ಮೂಲಕ ವ್ಯಪಾರ ಆರಂಭಿಸುತ್ತಿದ್ದಾರೆ.
ಇದನ್ನೂ ಓದಿ » ಸಿಗಂದೂರು ಲಾಂಚ್‌ನತ್ತ ಜನರೆ ಬರುತ್ತಿಲ್ಲ, 56 ವರ್ಷದ ಸೇವೆ ನಿಂತೇ ಹೋಗುತ್ತಾ? ಇಲ್ಲಿದೆ ಲಾಂಚ್ ಇತಿಹಾಸ
ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ?
» ಪರಿಸ್ಥಿತಿ 1: ಕೆಲವು ವ್ಯಾಪಾರಿಗಳು ಯು.ಪಿ.ಐ ಬಳಕೆಗೆ ಮಿತಿ ವಿಧಿಸುತ್ತಿದ್ದಾರೆ. ನಗದು ಮೂಲಕವೆ ವ್ಯಾಪಾರ ಮಾಡುತ್ತಿದ್ದಾರೆ. ತೀರಾ ಹಣವೇ ಇಲ್ಲ ಎಂದವರಿಂದ ಅನಿವಾರ್ಯವಾಗಿ ಯು.ಪಿ.ಐ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.
» ಪರಿಸ್ಥಿತಿ 2: ಒಂದಷ್ಟು ವ್ಯಾಪಾರಿಗಳು ನಗದು ಮೂಲಕವೇ ವ್ಯಾಪಾರ ನಡೆಸುತ್ತೇವೆ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದಾರೆ. ಗೂಗಲ್ ಪೇ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿದ್ದಾರೆ.
» ಪರಿಸ್ಥಿತಿ 3: ಗೂಗಲ್ ಪೇಯನ್ನು ಒಬ್ಬರ ಹೆಸರಿನ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು, ಫೋನ್ ಪೇಯನ್ನು ಮತ್ತೊಬ್ಬರ ಹೆಸರಿನ ಖಾತೆಗೆ ಲಿಂಕ್ ಮಾಡುವುದು. ಒಂದೇ ಬ್ಯಾಂಕ್ ಖಾತೆಗೆ ಹೆಚ್ಚಿನ ಮೊತ್ತ ಸೇರದಂತೆ ತಡೆಯಬಹುದು.

[su_quote cite=”ತರಕಾರಿ ವ್ಯಾಪಾರಿ (ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಾಪಾರಿ)“]ನಾವು ಮೂರು ಸ್ಕ್ಯಾನರ್ ಬಳಕೆ ಮಾಡುತ್ತಿದ್ದೇವೆ. ಒಂದೇ ಬ್ಯಾಂಕ್ ಖಾತೆಗೆ ಹೆಚ್ಚಿನ ಆದಾಯ ಸೇರುವುದನ್ನು ತಡೆಯತ್ತಿದ್ದೇವೆ. ನಮ್ಮಲ್ಲಿ ಒಂದು ಲಕ್ಷ ವ್ಯಾಪಾರವಾದರೆ ಐದಾರು ಸಾವಿರದ ಲಾಭ ಇರುತ್ತದೆ. ಆದರೆ ತೆರಿಗೆ ಅಧಿಕಾರಿಗಳು ಒಂದು ಲಕ್ಷ ಲಾಭವಾಗಿದೆ ಎಂದು ಭಾವಿಸುತ್ತಾರೆ. ಇಲ್ಲಿನ ಖರ್ಚು, ವೆಚ್ಚಗಳು ಅವರಿಗೆ ಲೆಕ್ಕಕ್ಕೆ ಬರುವುದಿಲ್ಲ.[/su_quote]
65 ಸಾವಿರ ವರ್ತಕರ ಮಾಹಿತಿ
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ 65 ಸಾವಿರ ವರ್ತಕರ ಮಾಹಿತಿಯನ್ನು ಯು.ಪಿ.ಐ ಪ್ಲಾಟ್‌ಫಾರಂಗಳಿಂದ ಪಡೆದುಕೊಂಡಿದ್ದಾರೆ. ಈ ಪೈಕಿ 15 ಸಾವಿರ ವರ್ತಕರಿಗೆ ನೊಟೀಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೆ ಸುಮಾರು 6 ಸಾವಿರ ವರ್ತಕರಿಗೆ ನೊಟೀಸ್ ನೀಡಲಾಗಿದೆ. ಕೆಲವರಿಗೆ ದಂಡ ಕಟ್ಟುವಂತೆ ಸೂಚಿಸಲಾಗಿದೆ.

ಇನ್ನು, ಈ ವ್ಯಾಪಾರಿಗಳಿಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಸದ್ಯ ಗೊಂದಲದಲ್ಲಿರುವ ವರ್ತಕರು ಮುಂದಿನ ಬೆಳವಣಿಗೆ ಬಗ್ಗೆ ಗಮನ ನೆಟ್ಟಿದ್ದಾರೆ. ನೊಟೀಸ್, ದಂಡದ ಅಸ್ತ್ರದಿಂದ ಪಾರಾಗುವ ಮಾರ್ಗದತ್ತ ಯೋಚಿಸುತ್ತಿದ್ದಾರೆ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















