ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜೂನ್ 2020
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಆಸ್ಪತ್ರೆ ವೈದ್ಯರಿಗೂ ಕರೋನ ಸೋಂಕು ತಗುಲಿದೆ. ವೈದ್ಯರ ಮನೆಗಳಿರುವ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಮತ್ತೊಂದೆಡೆ ಇಬ್ಬರು ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕರೋನಾಗೆ ಚಿಕಿತ್ಸೆ ಶುರುವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿದು ವೈದ್ಯರು? ಸೋಂಕು ತಗುಲಿದ್ದು ಹೇಗೆ?
38 ವರ್ಷದ ಡಾಕ್ಟರ್ ಪಿ10828 ಮತ್ತು 30 ವರ್ಷದ ಡಾಕ್ಟರ್ ಪಿ10830 ಅವರಿಗೆ ಸೋಂಕು ತಗುಲಿದೆ. ಇವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನೋದು ಖಚಿತವಾಗಿಲ್ಲ. ಕುಂಬಾರ ಬೀದಿಯ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಇನ್ನೂ ಪರಿಶೀಲನೆ ನಡೆಯುತ್ತಿದೆ.
ಏರಿಯಾಗಳು ಸೀಲ್ ಡೌನ್
ವೈದ್ಯರ ಮನೆಗಳಿದ್ದ ಎರಡು ಏರಿಯಾಗಳನ್ನು ಶಿವಮೊಗ್ಗದಲ್ಲಿ ಸೀಲ್ ಡೌನ್ ಮಾಡಲಾಗಿದೆ. ಚನ್ನಪ್ಪ ಲೇಔಟ್‌ನ ಒಂದು ಅಡ್ಡ ರಸ್ತೆ ಮತ್ತು ವಿವೇಕಾನಂದ ಬಡಾವಣೆಯ ಎ ಬ್ಲಾಕ್ ಸೀಲ್ ಡೌನ್ ಮಾಡಲಾಗಿದೆ.
ವೈದ್ಯರಿಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕರೋನಾಗೆ ಚಿಕಿತ್ಸೆ ಆರಂಭವಾಗಿದೆ. ಇವೆರಡು ಮೊದಲು ಪ್ರಕರಣಗಳಾಗಿವೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]