ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 1 ಮೇ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕರೋನ ಸೋಂಕು ಪತ್ತೆಗೆ ಶಿವಮೊಗ್ಗದಲ್ಲಿ ರಾಪಿಡ್ ಟೆಸ್ಟ್‌ಗಳನ್ನು ಕೈಗೊಳ್ಳಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಿರಂತರ ತಪಾಸಣೆ ನಡೆಸಲಾಗುತ್ತಿದೆ. ಅಷ್ಟಕ್ಕೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಯಾರಿಗೆಲ್ಲ ಟೆಸ್ಟ್ ನಡೆಸಲಾಗುತ್ತಿದೆ? ಟೆಸ್ಟಿಂಗ್ ಹೇಗೆ ನಡೆಯುತ್ತಿದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
ಯಾರಿಗೆಲ್ಲ ಟೆಸ್ಟ್ ಮಾಡಲಾಗುತ್ತಿದೆ?
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ದೇಶಿತ ಕಟ್ಟಡದಲ್ಲಿ ಕರೋನ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದೆ. ಇಲ್ಲಿಗೆ ಬರುವವರು ಮೊದಲು ತಮ್ಮ ಮಾಹಿತಿ ನೀಡಬೇಕು, ಪ್ರವಾಸದ ವಿವರ ಇದ್ದರೆ ತಿಳಿಸಬೇಕು, ಆರೋಗ್ಯ ವಿವರವನ್ನು ಒದಗಿಸಬೇಕು.
ಆಫ್ಲೈನ್, ಆನ್‍ಲೈನ್ ಮಾಹಿತಿ
ಮಾಹಿತಿಯನ್ನು ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಅಪ್‍ಡೇಟ್ ಮಾಡಿಕೊಳ್ಳಲಾಗುತ್ತದೆ. ಶಂಕಿತ ಅಥವಾ ಸೋಂಕಿತ ವ್ಯಕ್ತಿ ನೀಡುವ ಮಾಹಿತಿ ಆಧಾರದ ಮೇಲೆ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿಯೇ ಮಾಹಿತಿಗಳನ್ನುಆಫ್‍ಲೈನ್ ಮತ್ತು ಆನ್‍ಲೈನ್ ಅಪ್‍ಲೋಡ್ ಮಾಡಿಕೊಳ್ಳುತ್ತಾರೆ.
ಆಫ್ಲೈನ್ ಅಂದರೆ ವೈದ್ಯಕೀಯ ಸಿಬ್ಬಂದಿಯೇ ನಿರ್ದಿಷ್ಟ ಅರ್ಜಿಯನ್ನು ಭರ್ತಿ ಮಾಡಕೊಳ್ಳುತ್ತಾರೆ. ಆನ್‍ಲೈನ್ ಎಂದರೆ ಮೊಬೈಲ್ ಮೂಲಕ ಮಾಹಿತಿ ಅಪ್‍ಡೇಟ್ ಮಾಡಿಕೊಳ್ಳಲಾಗುತ್ತದೆ.
ಟೆಸ್ಟಿಂಗ್ ಹೇಗೆ ನಡೆಯಲಿದೆ?
ಪಿಪಿಇ ಧರಿಸಿಕೊಂಡು ಸಂಪೂರ್ಣವಾಗಿ ದೇಹವನ್ನು ಕವರ್ ಮಾಡಿಕೊಂಡಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಮಾತ್ರ ಪರೀಕ್ಷಾ ಕೇಂದ್ರದಲ್ಲಿ ಇರಲಿದ್ದಾರೆ. ಇವರು ನಿಯಮಿತವಾಗಿ ಒಬ್ಬೊಬ್ಬರನ್ನೇ ಪರೀಕ್ಷೆಗೆ ಒಳಪಡಿಸುತ್ತಾರೆ. ವ್ಯಕ್ತಿಯ ಮೂಗಿನ ಮೂಲಕ ಸ್ವ್ಯಾಬ್ ಒಳಗೆ ಹಾಕಲಾಗುತ್ತದೆ. ಇಲ್ಲಿಂದ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗಿತ್ತದೆ.
ರಿಪೋರ್ಟ್ ಯಾವಾಗ ಸಿಗಲಿದೆ?
ಗಂಟಲು ದ್ರವ ಸಂಗ್ರಹಿಸಿದ ಸ್ವ್ಯಾಬನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಶಿವಮೊಗ್ಗ ವೈರಾಣು ಸಂಶೋಧನೆ ಮತ್ತು ರೋಗ ಪರೀಕ್ಷೆ ಪ್ರಯೋಗಾಲಯ (VRDL) ಲ್ಯಾಬ್‍ಗೆ ಸ್ವ್ಯಾಬ್ ಕಳುಹಿಸಿಕೊಡಲಾಗುತ್ತದೆ. ಇಲ್ಲಿ ಪರೀಕ್ಷೆ ಬಳಿಕ ವರದಿ ಪ್ರಕಟಗೊಳ್ಳಲಿದೆ.
ವರದಿ ತಲುಪುವುದು ಹೇಗೆ?
ಪರೀಕ್ಷೆಗೆ ಒಳಪಡುವಾಗ ವ್ಯಕ್ತಿಯ ಮೊಬೈಲ್ ನಂಬರ್ ಪಡೆಯಲಾಗುತ್ತದೆ. ಆನ್‍ಲೈನ್ ಮೂಲಕ ಈ ನಂಬರ್‌ಗೆ ಕರೋನ ಪರೀಕ್ಷೆಯ ರಿಪೋರ್ಟ್ ಬರಲಿದೆ. ನೆಗಟಿವ್ ವರದಿ ಬಂದರೆ ಎಂದಿನಂತೆ ಇರಬಹುದು. ಒಂದು ವೇಳೆ ಪಾಸಿಟಿವ್ ವರದಿ ಬಂದರೆ, ವೈದ್ಯರ ಸೂಚನೆಯಂತೆ ಕ್ವಾರಂಟೈನ್‍ಗೆ ಒಳಗಾಗಬೇಕಾಗುತ್ತದೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಏಪ್ರಿಲ್ 30ರವರೆಗೆ 1418 ಮಂದಿಯನ್ನು ಕರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 1302 ಮಂದಿಯ ವರದಿ ಪ್ರಕಟವಾಗಿದ್ದು, ನೆಗೆಟಿವ್ ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]