SHIVAMOGGA LIVE NEWS | YOUTH | 30 ಮೇ 2022
ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದೆ ಹಲವರು ಮುನಿಸಿಕೊಳ್ಳುತ್ತಾರೆ, ಪಕ್ಷವನ್ನೇ ತೊರೆಯುತ್ತಾರೆ. ಆದರೆ ಭದ್ರಾವತಿ ಮೂಲದ ಯುವ ನಾಯಕನೊಬ್ಬ ಎರಡು ಭಾರಿ ಟಿಕೆಟ್ ನಿರಾಕರಿಸಿದ್ದಾರೆ.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಎರಡು ಭಾರಿ ಟಿಕೆಟ್ ನಿರಾಕರಿಸಿದ್ದಾರೆ. ಇವರ ನಡೆ ಕಾಂಗ್ರೆಸ್ ಪಕ್ಷದಲ್ಲಿ ಹಲವರ ಹುಬ್ಬೇರುವಂತೆ ಮಾಡಿದೆ.
‘ಈಗ ಕೆಲಸ ಮಾಡುವುದಿದೆ’
ಬಿ.ವಿ.ಶ್ರೀನಿವಾಸ್ ಅವರಿಗೆ ಕರ್ನಾಟಕದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಸೂಚಿಸಿತ್ತು. ಇದನ್ನು ಅವರು ನಿರಾಕರಿಸಿದ್ದರು. ಈಗ ರಾಜ್ಯಸಭೆಗೆ ಸ್ಪರ್ಧೆ ಮಾಡುವಂತೆಯು ಪಕ್ಷ ತಿಳಿಸಿತು. ಆದರೆ ಬಿ.ವಿ.ಶ್ರೀನಿವಾಸ್ ಅವರು ನಿರಾಕರಿಸಿದ್ದಾರೆ.
ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ರಾಹುಲ್ ಗಾಂಧಿ ಅವರು ಪಕ್ಷ ಸಂಘಟನೆಗೆ ಈಗಾಗಲೆ ಒಂದು ಜವಾಬ್ದಾರಿ ನೀಡಿದ್ದಾರೆ. ಕರ್ನಾಟಕದಿಂದ ಯುವ ಕಾಂಗ್ರೆಸ್’ನ ಮೊದಲ ಅಧ್ಯಕ್ಷನಾಗಿದ್ದೇನೆ. ಸಾಕಷ್ಟು ಜವಾಬ್ದಾರಿ ಇದೆ. ಎರಡು ಜವಾಬ್ದಾರಿಗಳನ್ನು ನಿಭಾಯಿಸಲು ಸಮಯದ ಅಭಾವ ಉಂಟಾಗಲಿದೆ. ಪಕ್ಷದಲ್ಲಿ ಇನ್ನೂ ಹಲವು ನಾಯಕರಿದ್ದಾರೆ. ಅವರಿಗೆ ಅವಕಾಶ ಕೊಡಲಿ’ ಎಂದರು.
ಅಧಿಕಾರಕ್ಕಾಗಿ ಪಕ್ಷ ಸೇರಿದ್ದಲ್ಲ
‘ಸಂಸದ, ಶಾಸಕನಾಗಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಬಂದವನಲ್ಲ. ಈ ಪಕ್ಷದ ಸಿದ್ಧಾಂತ ಮೆಚ್ಚಿಕೊಂಡು ಬಂದಿದ್ದೇವೆ. ಈಗಾಗಲೆ ರಾಹುಲ್ ಗಾಂಧಿಯವರು ಒಂದು ಹುದ್ದೆ ನೀಡಿದ್ದಾರೆ. ಅದನ್ನು ನಿರ್ವಹಿಸುತ್ತಿದ್ದೇನೆ. ಈಗ ಹೆಚ್ಚು ಕೆಲಸವಿದೆ. ಸಮಯ ಕಡಿಮೆ ಇದೆ. ಬೇರೆಯವರಿಗೆ ಅವಕಾಶವಾಗಲಿ ಎಂದು ನಾನು ವಿಧಾನ ಪರಿಷತ್ ಮತ್ತು ರಾಜ್ಯಸಭೆ ಟಿಕೆಟ್ ನಿರಾಕರಿಸಿದೆ’ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರ ನಡೆ ಪಕ್ಷದೊಳಗೆ ಹಲವರನ್ನು ಆಶ್ಚರ್ಯಗೊಳಿಸಿದೆ. ಹೈಕಮಾಂಡ್ ಬೆಂಬಲವಿತ್ತು, ರಾಜ್ಯದಲ್ಲಿಯು ಶ್ರೀನಿವಾಸ್ ಅವರ ಸ್ಪರ್ಧೆಗೆ ವಿರೋಧವಿರಲಿಲ್ಲ. ಹೀಗಿದ್ದೂ ಪಕ್ಷದ ಸಂಘಟನೆಗಾಗಿ ಅವರು ಟಿಕೆಟ್ ನಿರಾಕರಿಸಿದ್ದಾರೆ.
ಇದನ್ನೂ ಓದಿ – ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸಾದ ಶಿವಮೊಗ್ಗದ ವೈದ್ಯ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು