SHIVAMOGGA LIVE NEWS | 20 FEBRURARY 2023
SHIMOGA : ಹಳೆಯ ಯೋಜನೆಗಳನ್ನು ಬಜೆಟ್ ನಲ್ಲಿ (Budget) ಪುನರುಚ್ಚರಿಸಿ, 3 ಲಕ್ಷ ಕೋಟಿಯ ದಾಖಲೆ ಆಯವ್ಯಯ ಮಂಡಿಸಿರುವುದಾಗಿ ರಾಜ್ಯ ಸರ್ಕಾರ ಜನರ ಕಿವಿ ಮೇಲೆ ಹೂವಿಟ್ಟಿದೆ (Flower on Ears) ಎಂದು ಕಿವಿ ಮೇಲೆ ಹೂವು ಇಟ್ಟುಕೊಂಡೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ ನಡೆಸಿದರು.
ಕಾಂಗ್ರೆಸ್ ಮುಖಂಡರು ಮೊದಲಿಗೆ ಕಿವಿ ಮೇಲೆ ಚಂಡು ಹೂವು ಇಟ್ಟುಕೊಂಡು ಪತ್ರಿಕಾಗೋಷ್ಠಿ ಆರಂಭಿಸಿದರು. ಬಜೆಟ್ ನಲ್ಲಿ (Budget) ಸರ್ಕಾರ ಜನರ ಕಿವಿ ಮೇಲೆ ಹೂವು ಇಟ್ಟಿದೆ (Flower on Ears) ಎಂಬುದರ ಸಂಕೇತವಾಗಿ ತಾವು ವಿಭಿನ್ನವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿರುವುದಾಗಿ ಸಮಜಾಯಿಷಿ ನೀಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಲೆನಾಡಿಗೆ ಏನೇನೂ ಕೊಟ್ಟಿಲ್ಲ
ಕ್ಯಾನ್ಸರ್ ಆಸ್ಪತ್ರೆ, ಅಡಕೆ ಸಂಶೋಧನೆ ಕೇಂದ್ರಗಳು ಸೇರಿದಂತೆ ಹಲವು ಯೋಜನೆಗಳು ಹಿಂದಿನ ಬಜೆಟ್ ನಲ್ಲಿ ಘೋಷಣೆಯಾಗಿದ್ದವು. ಅದನ್ನೆ ಈ ಬಜೆಟ್ ನಲ್ಲಿಯು ಪುನರುಚ್ಚರಿಸಿದ್ದಾರೆ. ಕಳೆದ ಬಜೆಟ್ ನಲ್ಲಿ ಘೋಷಿಸಿದ ಶೇ.50ರಷ್ಟು ಹಣ ಮಾತ್ರ ಖರ್ಚಾಗಿದೆ. ಉಳಿದಂತೆ ಮಲೆನಾಡು ಭಾಗಕ್ಕೆ ಯಾವುದೆ ಹೊಸ ಯೋಜನೆಗಳಿಲ್ಲ. ವಿಐಎಸ್ಎಲ್, ಎಂಪಿಎಂ ಪುನಶ್ಚೇತನದ ಬಗ್ಗೆ ಪ್ರಸ್ತಾಪವಿಲ್ಲ ಎಂದು ಹೆಚ್.ಎಸ್.ಸುಂದರೇಶ್ ಆರೋಪಿಸಿದರು.
ಸುಮೋಟೊ ಕೇಸ್ ದಾಖಲಾಗಬೇಕಿತ್ತು
ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿವಾದಿತ ಹೇಳಿಕೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎಸ್.ಅಶ್ವಥನಾರಾಯಣ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕೆ ಸರ್ಕಾರ, ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕಿತ್ತು. ಆದರೆ ಈತನಕ ಆ ಕೆಲಸವಾಗಿಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳ ಅಧಃಪತನವಾಗಿರುವುದಕ್ಕೆ ಸಾಕ್ಷಿ ಎಂದು ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಕಾರ್ಮಿಕರಿಂದ ವಿಐಎಸ್ಎಲ್ ಕಾರ್ಖಾನೆ ಅಪ್ಪಿಕೋ ಚಳವಳಿ
ಇಕ್ಕೇರಿ ರಮೇಶ್, ಚಂದ್ರಶೇಖರ್, ಚೇತನ್, ಚಂದನ್, ಕೃಷ್ಣಪ್ಪ, ಖಲೀಂ ಪಾಷಾ, ಎನ್.ಡಿ.ಪ್ರವೀಣ್, ಗಂಗಾಧರ್ ಸೇರಿದಂತೆ ಹಲವರು ಇದ್ದರು.