ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 DECEMBER 2022
ಶಿವಮೊಗ್ಗ : ಬೆಂಗಳೂರು ವಿಭಾಗದ ವಿವಿಧ ನಿಲ್ದಾಣಗಳಿಗೆ ರೈಲುಗಳು ತಲುಪುವ ಮತ್ತು ಹೊರಡುವ ಸಮಯವನ್ನು ಬದಲಾವಣೆ (Timing Change) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗದ ಕೆಲವು ರೈಲುಗಳು ಕೂಡ ಈ ಪಟ್ಟಿಯಲ್ಲಿದೆ.
(Timing Change)
ಯಾವ್ಯಾವ ರೈಲುಗಳ ಸಮಯ ಬದಲಾಗಿದೆ?
ರೈಲು ಸಂಖ್ಯೆ 06513 : ತುಮಕೂರು – ಶಿವಮೊಗ್ಗ ಟೌನ್ ಡೆಮು ಎಕ್ಸ್ ಪ್ರೆಸ್ : ಈವರೆಗೂ ಗುಬ್ಬಿ ನಿಲ್ದಾಣಕ್ಕೆ ಬೆಳಗ್ಗೆ 8.26ಕ್ಕೆ ತಲುಪಿ 8.27ಕ್ಕೆ ಹೊರಡುತ್ತಿತ್ತು. ಇನ್ಮುಂದೆ 8.24ಕ್ಕೆ ತಲುಪಲಿದೆ. 8.25ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)
ರೈಲು ಸಂಖ್ಯೆ 16227 : ಮೈಸೂರು – ತಾಳಗುಪ್ಪ ಎಕ್ಸ್ ಪ್ರೆಸ್ : ಮಂಡ್ಯ, ಬೆಂಗಳೂರು, ಯಶವಂತಪುರ ಮತ್ತು ತುಮಕೂರು ನಿಲ್ದಾಣಗಳಲ್ಲಿ ಸಮಯ ಬದಲಾವಣೆಯಾಗಿದೆ. (2023ರ ಜನವರಿ 1ರಿಂದ ಹೊಸ ಸಮಯ ಜಾರಿಯಾಗಲಿದೆ)
ನಿಲ್ದಾಣ | ಹಿಂದಿನ ಸಮಯ | ಬದಲಾದ ಸಮಯ |
ಮಂಡ್ಯ | ರಾತ್ರಿ 8.16ಕ್ಕೆ ತಲುಪುತ್ತಿತ್ತು
ರಾತ್ರಿ 8.18ಕ್ಕೆ ಹೊರಡುತ್ತಿತ್ತು |
ರಾತ್ರಿ 8.17ಕ್ಕೆ ತಲುಪಲಿದೆ
ರಾತ್ರಿ 8.18ಕ್ಕೆ ಹೊರಡಲಿದೆ |
ಬೆಂಗಳೂರು | ರಾತ್ರಿ 10.55ಕ್ಕೆ ತಲುಪುತ್ತಿತ್ತು
ರಾತ್ರಿ 11.15ಕ್ಕೆ ಹೊರಡುತ್ತಿತ್ತು |
ರಾತ್ರಿ 10.30ಕ್ಕೆ ತಲುಪಲಿದೆ
ರಾತ್ರಿ 11ಕ್ಕೆ ಹೊರಡಲಿದೆ |
ಯಶವಂತಪುರ | ರಾತ್ರಿ 11.28ಕ್ಕೆ ತಲುಪುತ್ತಿತ್ತು
ರಾತ್ರಿ 11.30ಕ್ಕೆ ಹೊರಡುತ್ತಿತ್ತು |
ರಾತ್ರಿ 11.23ಕ್ಕೆ ತಲುಪಲಿದೆ
ರಾತ್ರಿ 11.25ಕ್ಕೆ ಹೊರಡಲಿದೆ |
ತುಮಕೂರು | ರಾತ್ರಿ 12.13ಕ್ಕೆ ತಲುಪುತ್ತಿತ್ತು
ರಾತ್ರಿ 12.15ಕ್ಕೆ ಹೊರಡುತ್ತಿತ್ತು |
ರಾತ್ರಿ 12.18ಕ್ಕೆ ತಲುಪಲಿದೆ
ರಾತ್ರಿ 12.20ಕ್ಕೆ ಹೊರಡಲಿದೆ |
ರೈಲು ಸಂಖ್ಯೆ 16581 : ಯಶವಂತಪುರ – ಶಿವಮೊಗ್ಗ ಟೌನ್ : ಈವರೆಗೂ ಯಶವಂತಪುರದಿಂದ ರಾತ್ರಿ 11.58ಕ್ಕೆ ಹೊರಡುತ್ತಿತ್ತು. ಇನ್ಮುಂದೆ 11.50ಕ್ಕೆ ಹೊರಡಲಿದೆ. ತುಮಕೂರಿಗೆ ರಾತ್ರಿ 12.55 ತಲುಪಿ, 12.57ಕ್ಕೆ ಹೊರಡುತ್ತಿತ್ತು. ಇನ್ಮುಂದೆ 12.38ಕ್ಕೆ ತಲುಪಿ, 12.40ಕ್ಕೆ ಹೊರಡಲಿದೆ. (2023ರ ಜನವರಿ 2ರಿಂದ ಹೊಸ ಸಮಯ ಜಾರಿಯಾಗಲಿದೆ)
ಇದನ್ನೂ ಓದಿ – ಶಿವಮೊಗ್ಗ – ಮೈಸೂರು ನಡುವೆ ಎಷ್ಟು ರೈಲುಗಳಿವೆ, ಎಲ್ಲೆಲ್ಲಿ ಸ್ಟಾಪ್ ಇದೆ, ಟೈಮಿಂಗ್ ಏನು?
ರೈಲು ಸಂಖ್ಯೆ 16582 : ಶಿವಮೊಗ್ಗ ಟೌನ್ – ಯಶವಂತಪುರ : ಈವರೆಗೂ ಯಶವಂತಪುರಕ್ಕೆ ಬೆಳಗ್ಗೆ 5.10ಕ್ಕೆ ತಲುಪುತ್ತಿತ್ತು. ಇನ್ಮುಂದೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ತುಮಕೂರಿಗೆ ಬೆಳಗ್ಗೆ 3.38ಕ್ಕೆ ತಲುಪುತ್ತಿತ್ತು. ಇನ್ಮುಂದೆ 3.10ಕ್ಕೆ ತಲುಪಲಿದೆ. 3.12ಕ್ಕೆ ಹೊರಡಲಿದೆ. (2023ರ ಜನವರಿ 3ರಿಂದ ಹೊಸ ಸಮಯ ಜಾರಿಯಾಗಲಿದೆ)
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422