ಹರ್ಷ ಹತ್ಯೆ ಕೇಸ್, ಭದ್ರಾವತಿಯ ಒಬ್ಬ ಸೇರಿ ಇಬ್ಬರು ಅರೆಸ್ಟ್

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಹತ್ಯೆ ಪ್ರಕರಣ ಸಂಬಂಧ ಇನ್ನು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಭದ್ರಾವತಿ ಹೊಸಮನೆ ಬಡಾವಣೆಯ ಅಬ್ದುಲ್ ರೋಶನ್ (24), ಶಿವಮೊಗ್ಗದ ವಾದಿ-ಎ-ಹುದಾ ನಿವಾಸಿ ಜಾಫರ್ ಸಾದಿಕ್ ಅಲಿಯಾಸ್ ಬದ್ರುದಿನ್ (55) ಎಂಬುವವರನ್ನು ಬಂಧಿಸಲಾಗಿದೆ. ಇನ್ನು, ಪ್ರಕರಣ ಸಂಬಂಧ ಎರಡು ಕಾರು, 1 ದ್ವಿಚಕ್ರ ವಾಹನ ವಾಹನವನ್ನು ವಶಕ್ಕೆ ಪಡೆಯಲಾಗಿದೆ. … Read more

ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜು ಪುನಾರಂಭಕ್ಕೆ ದಿನಾಂಕ ನಿಗದಿ

Shimoga Dc Dr.selvamani

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜುಗಳ ಪುನಾರಂಭ ಮಾಡಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದ್ದಾರೆ. ಫೆ.26ರ ಶನಿವಾರದಿಂದ ಶಾಲೆ, ಕಾಲೇಜುಗಳನ್ನು ಪುನಾರಂಭ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹರ್ಷ ಹತ್ಯೆ ಬಳಿಕ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇದನ್ನೂ ಓದಿ | ಗಾಂಧಿ ಬಜಾರ್ ವಹಿವಾಟು ಸ್ಥಗಿತ, ಇದರ ಪರಿಣಾಮವೇನು? ಇಲ್ಲಿದೆ ಟಾಪ್ 5 ಪಾಯಿಂಟ್

ಉಕ್ರೇನ್ ದೇಶದಲ್ಲಿ ಶಿವಮೊಗ್ಗದ ಮೂವರು, ಗೃಹ ಸಚಿವರ ಭೇಟಿಯಾದ ಕುಟುಂಬ

Home-Minister-Meets-Tejas-Parents-in-Shmoga.

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ಯುದ್ಧ ಶುರುವಾಗಿದೆ. ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪೋಷಕರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ತಮ್ಮ ಮಕ್ಕಳ ಸುರಕ್ಷತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಮನವಿ ಮಾಡಿದ್ದಾರೆ. ಶಿವಮೊಗ್ಗದ ಸಂತೆ ಕಡೂರು ಗ್ರಾಮದ ತೇಜಸ್, ಉಕ್ರೇನ್ ದೇಶದಲ್ಲಿ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ.  ಯುದ್ದ ಆರಂಭದ ಬೆನ್ನಿಗೆ ತೇಜಸ್, ಶಿವಮೊಗ್ಗದಲ್ಲಿರುವ ತಂದೆ ಜಗದೀಶ್, … Read more

ಗಾಂಧಿ ಬಜಾರ್ ವಹಿವಾಟು ಸ್ಥಗಿತ, ಇದರ ಪರಿಣಾಮವೇನು? ಇಲ್ಲಿದೆ ಟಾಪ್ 5 ಪಾಯಿಂಟ್

Police Van Entering Gandhi Bazaar

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ, ನಂತರದ ಉದ್ವಿಗ್ನ ಪರಿಸ್ಥಿತಿ ಶಿವಮೊಗ್ಗ ನಗರವನ್ನು ಸ್ಥಬ್ಧಗೊಳಿಸಿದೆ. ಗಾಂಧಿ ಬಜಾರ್ ವರ್ತಕರ ಪಾಲಿಗಂತೂ ಈ ಘಟನೆ ಗಾಯದ ಮೇಲೆ ಬರೆ ಎಳದಿದೆ. ವ್ಯಾಪಾರ, ವ್ಯವಹಾರ ಕುದುರುವ ಹೊತ್ತಿಗೆ ವಾರಗಟ್ಟಲೆ ಅಂಗಡಿ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ವಹಿವಾಟು ಪುನಃ ಹಳಿಗೆ ಬರಲು ಇನ್ನು ಒಂದು ವರ್ಷ ಕಾಯಬೇಕಾದ ದುಸ್ಥಿತಿ ವ್ಯಾಪಾರಿಗಳಿಗೆ ಎದುರಾಗಿದೆ. ವಾರಗಟ್ಟಲೆ ಗಾಂಧಿ ಬಜಾರ್ ಬಂದ್ ಆಗುವುದರಿಂದ … Read more

ವೈರಲ್ ಹಿಂದಿನ ಸತ್ಯ, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ವರ್ಗಾವಣೆ ನಿಜಾನಾ?

IPS Police Cap

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ಹರ್ಷ ಹತ್ಯೆ ಮತ್ತು ಉದ್ವಿಗ್ನ ಪರಿಸ್ಥಿತಿ ಬೆನ್ನಿಗೆ, ಜಿಲ್ಲಾ ರಕ್ಷಣಾಧಿಕಾರಿ ಅವರ ವರ್ಗಾವಣೆಯಾಗಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರು ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ ನೇಮಕವಾಗಿದ್ದಾರೆ ಎಂದು ಹಬ್ಬಿದೆ. ಹರ್ಷ ಹತ್ಯೆ ನಂತರದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಹರಸಾಹಸ ಪಟ್ಟಿತು. ಹತ್ಯೆ ಸಂಬಂಧ ಈವರೆಗೂ 8 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಗಲಭೆ ನಡೆಸಿದವರಿಗೆ ಶೋಧ … Read more

ಮುಗಿಯದ ಸ್ಮಾರ್ಟ್ ಸಿಟಿ ಅವಾಂತರ, ಗುಂಡಿಗೆ ಬಿದ್ದು ಬಾಲಕನ ಕಣ್ಣಿಗೆ ಪೆಟ್ಟು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Boy-Falls-to-Smart-City-Chamber

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022 ಟೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನೊಬ್ಬ ಸ್ಮಾರ್ಟ್ ಸಿಟಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಚರಂಡಿಗೆ ಸ್ಲಾಬ್ ಅಳವಡಿಸದೆ ಇರುವುದರಿಂದ ಘಟನೆ ಸಂಭವಿಸಿದೆ. ಸ್ಥಳೀಯರು ಮತ್ತು ಕೆಲಸಗಾರರು ಬಾಲಕನ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಜೈಲ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮೂರನೆ ತರಗತಿಯ ಓದುತ್ತಿರುವ ರಾಘವೇಂದ್ರ ಗಾಯಗೊಂಡಿರುವ ಬಾಲಕ. ಜೈಲ್ ರಸ್ತೆಯಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗಿದೆ. ಅಲ್ಲಲ್ಲಿ ಸ್ಲಾಬ್ ಅಳವಡಿಸದೆ ಹಾಗೆ ಬಿಡಲಾಗಿದೆ. ಟೂಷನ್ … Read more

‘ಪೊಲೀಸ್ ಇಲಾಖೆ ಮೆರವಣಿಗೆ ಬೇಡ ಅಂದಿದ್ದರು, ಕಲ್ಲು ತೂರಾಟದಿಂದ ಜಿಲ್ಲೆಗೆ ಕೆಟ್ಟ ಹೆಸರು’

b y raghavendra about press meet

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಮೃತದೇಹದ ಮೆರವಣಿಗೆ ವೇಳೆ ಗಲಾಟೆಗೆ ನಾವು ಕಾರಣರಲ್ಲ. ಅಂದು ಸೆಕ್ಷನ್ 144 ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ ಅವರು, ಯಾರೂ ಸಹ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುವುದಕ್ಕೆ ಬರಲ್ಲ. ತುಂಬಾ ಸೂಕ್ಷ್ಮವಾಗಿ ಎಲ್ಲ ಅಂಶವನ್ನು ತೆಗೆದುಕೊಂಡು ಹೋಗಬೇಕಿತ್ತು. ಈ ಸಂದರ್ಭದಲ್ಲಿ ಜನರ ಆಕ್ರೋಶ ತಡೆಯಲು ಆಗಲಿಲ್ಲ ಎಂದರು. ಹರ್ಷನ … Read more

‘ಹತ್ಯೆಗೂ ಮೊದಲು ಹರ್ಷಾಗೆ ವಿಡಿಯೋ ಕಾಲ್’, ಕೊನೆ ಕ್ಷಣವನ್ನು ವಿವರಿಸಿದ ಸ್ನೇಹಿತ

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೂ ಮುನ್ನ ನಡೆದ ಕೆಲವು ಬೆಳವಣಿಗೆ ಕುರಿತು ಆತನ ಸ್ನೇಹಿತ ನವೀನ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ನವೀನ್ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ. ನವೀನ ಹೇಳಿದ ಸಂಗತಿಗಳೇನು? “ಭಾನುವಾರ ಸಂಜೆ ಹರ್ಷನಿಗೆ ವಿಡಿಯೋ ಕಾಲ್ ಬಂದಿತ್ತು. ಇಬ್ಬರು ಯುವತಿಯವರು ವಿಡಿಯೋ ಕಾಲ್ ಮಾಡಿದ್ದರು. ಆ ಯುವತಿಯರು ‘ನಾವು ನಿಮ್ಮ ಸ್ನೇಹಿತೆಯರು’ ಎಂದು ಹೇಳಿದ್ದಾರೆ. ‘ನನಗೆ ನಿಮ್ಮ ಪರಿಚಯವಿಲ್ಲ’ ಎಂದು ಹರ್ಷ … Read more

BREAKING NEWS | ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, ಮತ್ತಿಬ್ಬರು ಅರೆಸ್ಟ್

Bajarangadal Worker Harsha Murdered

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಸಂಬಂಧ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಈತನಕ ಎಂಟು ಆರೋಪಿಗಳನ್ನು ಬಂಧಿತರಾಗಿದ್ದಾರೆ. ಇವತ್ತು ಇಲಿಯಾಸ್ ನಗರದ ಫರಾಜ್ ಪಾಷಾ (24) ಮತ್ತು ವಾದಿ-ಎ-ಹುದಾ ಬಡಾವಣೆಯ ನಿವಾಸಿಗಳು ಅಬ್ದುಲ್ ಖಾದರ್ ಜಿಲಾನ್ (25) ಎಂಬುವವರನ್ನು ಬಂಧಿಸಲಾಗಿದೆ. ಕಳೆದ ಭಾನುವಾರ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾಗಿತ್ತು. ಇದನ್ನೂ ಓದಿ | ಹರ್ಷ ಹತ್ಯೆ ಕೇಸ್, ಬಂಧಿತರ … Read more

ಪೊಲೀಸರ ಎದುರಲ್ಲೇ ಮಾರಕಾಸ್ತ್ರ ಪ್ರದರ್ಶನ, ವಿಡಿಯೋಗಳು ವೈರಲ್

Lethal-Weapons-during-Clash-in-Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ, ನಂತರದ ಗಲಭೆ ಸಂದರ್ಭ ಕೆಲವು ಯುವಕರು ಪೊಲೀಸರ ಎದುರಲ್ಲೆ ಮಾರಕಾಸ್ತ್ರ ಪ್ರದರ್ಶಿಸಿದ್ದಾರೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಹರ್ಷ ಹತ್ಯೆ ಪ್ರಕರಣದ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸೋಮವಾರ ಬೆಳಗ್ಗೆ ಹರ್ಷ ಅಂತಿಮ ಯಾತ್ರೆ ನಡೆಯಿತು. ಈ ಸಂದರ್ಭ ಹಲವು ಕಡೆ ಕಲ್ಲು ತೂರಟವಾಗಿತ್ತು. ಇದೆ ವೇಳೆ ವಿವಿಧೆಡೆ ದುಷ್ಕರ್ಮಿಗಳು ಲಾಂಗು, ಮಚ್ಚು, ದೊಣ್ಣೆಗಳನ್ನು … Read more