ಜೋರು ಮಳೆ ನಡುವೆ ಶಿವಮೊಗ್ಗ ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ

NSUI-workers-night-dharna-in-fornt-of-Shimoga-DC-Office

SHIVAMOGGA LIVE NEWS | SHIMOGA | 13 ಏಪ್ರಿಲ್ 2022 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಎಸ್.ಈಶ್ವರಪ್ಪ ಬಂಧಿಸಬೇಕು ಎಂದು ಆಗ್ರಹಿಸಿ NSUI ಸಂಘಟನೆ ವತಿಯಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ NSUI ಕಾರ್ಯಕರ್ತರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ NSUI ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. … Read more

ಶಿವಮೊಗ್ಗ ನಗರ, ಸುತ್ತಮುತ್ತ ಗುಡುಗು ಸಹಿತ ಜೋರು ಮಳೆ

Rain-At-Shimoga

ಶಿವಮೊಗ್ಗ ಲೈವ್.ಕಾಂ | RAIN NEWS | 13 APRIL 2022 ಶಿವಮೊಗ್ಗ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. ನಗರದ ಕೆಲವು ಕಡೆ ವಿದ್ಯುತ್ ವ್ಯತ್ಯಯವಾಗಿದೆ. ಮೋಡ ಕವಿದ ವಾತಾವರಣವಿತ್ತು. 9.15ರ ಹೊತ್ತಿಗೆ ಮಿಂಚು, ಗುಡುಗು ಸಹಿತ ಮಳೆ ಆರಂಭವಾಗಿದೆ. ಜೋರು ಗಾಳಿಯು ಇದೆ. ಹಾಗಾಗಿ ನಗರದ ಕೆಲವು ಕಡೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಿದೆ. ಇನ್ನು ಬಿಸಿಲ ಧಗೆಯಿಂದ ಕಂಗೆಟ್ಟದ್ದ ನಗರದ ಜನರಿಗೆ ಈ ಮಳೆ ತುಸು ನೆಮ್ಮದಿ ಮೂಡಿಸಿದೆ. ಇದನ್ನೂ ಓದಿ | ಇವತ್ತಿನ … Read more

ಮಾರಿಜಾತ್ರೆ ಮುಗಿಸಿ ಬರುವಾಗ ಭೀಕರ ಅಪಘಾತ, ಮೂವರು ಸಾವು, 11 ಮಂದಿ ಆಸ್ಪತ್ರೆಗೆ

Soraba-Tata-Ace-Case-Kumar-Bangarappa-Visit

SHIVAMOGGA LIVE NEWS | ACCIDENT NEWS| 13 ಏಪ್ರಿಲ್ 2022 ಮಾರಿ ಜಾತ್ರೆಗೆ ಹೋಗಿ ಊರಿಗೆ ಮರಳುತ್ತಿದ್ದಾಗ ಟಾಟಾ ಏಸ್ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವತ್ತು ಅವರ ಅಂತ್ಯಕ್ರಿಯೆ ನೆರವೇರಿದ್ದು ಶಾಸಕ ಕುಮಾರ್ ಬಂಗಾರಪ್ಪ ಅವರು ಭಾಗವಹಿಸಿದ್ದರು. ತವನಂದಿ ಗ್ರಾಮದ ತಿಮ್ಮಪ್ಪ (45), ಯೋಗರಾಜ (55), ಆಕಾಶ್ (15) ಮೃತರು. ತವನಂದಿಯಿಂದ ಟಾಟಾ ಏಸ್ ವಾಹನದಲ್ಲಿ ಸಾಗರ ತಾಲೂಕು ಗುತ್ನಳ್ಳಿ ಗ್ರಾಮದ ಮಾರಿಜಾತ್ರೆಗೆ ತೆರಳಿದ್ದರು. ಜಾತ್ರೆಯಿಂದ ರಾತ್ರಿ ಹಿಂತಿರುಗುತ್ತಿದ್ದಾಗ ಬಸವಾಸಿ ಮುಖ್ಯರಸ್ತೆಯ … Read more

‘ಈಶ್ವರಪ್ಪ ಮಾತ್ರವಲ್ಲ ಗೃಹ ಸಚಿವರೂ ರಾಜೀನಾಮೆ ಕೊಡಬೇಕು’

Beluru-Gopalakrishna-Press-Meet-in-Shimoga

SHIVAMOGGA LIVE NEWS | SHIMOGA | 13 ಏಪ್ರಿಲ್ 2022 ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ದೇಣಿಗೆ ಸಂಗ್ರಹಿಸಿದ ಮಾದರಿಯಲ್ಲೇ ಸಂತೋಷ್ ಪಾಟೀಲ್ ಕುಟುಂಬಕ್ಕೂ ನೆರವಾಗಬೇಕು. ಕನಿಷ್ಠ ಐದು ಕೋಟಿ ರೂ. ದೇವಣಿಗೆ ಸಂಗ್ರಹಿಸಿ ಕೊಡಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಹರ್ಷ ಹತ್ಯೆ ಪ್ರಕರಣವನ್ನು ರಾಜ್ಯಾದ್ಯಂತ ಬಿಂಬಿಸಿದರು. ಈಗ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್ ಪ್ರಕರಣ ನಡೆದಿದೆ. ಅದಕ್ಕೆ ನೇರ ಹೊಣೆ ಸಚಿವ … Read more

ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ ಆರೋಪ, ಶಿವಮೊಗ್ಗದಲ್ಲಿ ಬೆಂಬಲಿಗರ ಆಕ್ರೋಶ

Protest-in-favour-of-KS-Eshwarappa

SHIVAMOGGA LIVE NEWS | SHIMOGA | 13 ಏಪ್ರಿಲ್ 2022 ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರು ಯಾವುದೆ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿ ಶಿವಮೊಗ್ಗದಲ್ಲಿ ರಾಷ್ಟ್ರ ಭಕ್ತರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ರಾಷ್ಟ್ರ ಭಕ್ತರ ಸಂಘಟನೆ ಕಾರ್ಯಕರ್ತರು, ಸಚಿವ ಈಶ್ವರಪ್ಪ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಸಂತೋಷ್ ಪಾಟೀಲ್ ಸಾವಿನ ಪ್ರಕರಣದಲ್ಲಿ ಬೇಕಂತಲೆ ಅವರ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು … Read more

ಈಶ್ವರಪ್ಪಗೆ ಮುತ್ತಿಗೆ ಯತ್ನ, ಬಿಜೆಪಿ ಕಚೇರಿ ಮುಂದೆ ನೂಕಾಟ, ತಳ್ಳಾಟ, ಕೆಲಕಾಲ ಬಿಗುವಿನ ವಾತಾವರಣ

youth-congress-protest-in-Shimoga-Near-BJP-Office

SHIVAMOGGA LIVE NEWS | SHIMOGA PROTEST | 13 ಏಪ್ರಿಲ್ 2022 ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಕೆ.ಎಸ್.ಈಶ್ವರಪ್ಪ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಮುಗಿಸಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೊರಬಂದು ಕಾರು ಹತ್ತಿದ್ದರು. ಈ ಸಂದರ್ಭ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಕಾರಿಗೆ ಮುತ್ತಿಗೆ … Read more

‘ರಾಜೀನಾಮೆ ಕೊಡಲ್ಲ, ವಾಟ್ಸಪ್ ಡೆತ್ ನೋಟ್ ಮೇಲೆ ಅನುಮಾನ’ ಹೀಗಂತ ಸಚಿವ ಈಶ್ವರಪ್ಪ ಹೇಳಲು ಕಾರಣವೇನು?

KS-Eshwarappa-Press-meet

SHIVAMOGGA LIVE NEWS | SHIMOGA POLITICS | 13 ಏಪ್ರಿಲ್ 2022 ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಅಮೂಲಾಗ್ರ ತನಿಖೆ ನಡೆಸಬೇಕು. ಆದರೆ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ತಾವು ನೂರಕ್ಕೆ ನೂರು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದರು. ‘ಅದನ್ನ ಡೆತ್ ನೋಟ್ ಅಂತಾರಾ?’ ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ಹಿಡಿದುಕೊಂಡು ಬಿಜೆಪಿಯವರು ಪ್ರತಿಭಟನೆ … Read more

‘ತಕ್ಷಣ ಸಚಿವ ಈಶ್ವರಪ್ಪ ಅರೆಸ್ಟ್ ಆಗಬೇಕು, ಕಮಿಷನ್ ದಂಧೆಯ ಸಮಗ್ರ ತನಿಖೆಯಾಗಬೇಕು’

KB-Prasanna-Kumar-about-Shimoga-Clash

SHIVAMOGGA LIVE NEWS | SHIMOGA | 13 ಏಪ್ರಿಲ್ 2022 ಸಚಿವ ಕೆ.ಎಸ್. ಈಶ್ವರಪ್ಪ ಅವರ ಶೇ. 40 ಕಮೀಷನ್ ದಂಧೆಗೆ ಗುತ್ತಿಗೆದಾರರೊಬ್ಬರು ಬಲಿಯಾಗಿದ್ದಾರೆ. ಕೂಡಲೆ ಈಶ್ವರಪ್ಪ ಅವರನ್ನು ಬಂಧಿಸಬೇಕು. ಅಲ್ಲದೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಚಿವ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ದರಿಂದ ಈಶ್ವರಪ್ಪ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಗುತ್ತಿಗೆದಾರರಿಂದ ಶೇ. 40 ಕಮಿಷನ್ ಆರೋಪ … Read more

ಸಚಿವ ಈಶ್ವರಪ್ಪ ವಿರುದ್ಧ ಶಿವಮೊಗ್ಗದಲ್ಲಿ ಶ್ರೀಕಾಂತ್ ಆಕ್ರೋಶ

M-Srikanth-JDS-Leader-Shrikanth.webp

SHIVAMOGGA LIVE NEWS | SHIMOGA | 13 ಏಪ್ರಿಲ್ 2022 ಕೆ.ಎಸ್. ಈಶ್ವರಪ್ಪ ಕೂಡಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‌ ಒತ್ತಾಯಿಸಿದ್ದಾರೆ. ಸಚಿವ ಈಶ್ವರಪ್ಪ ಅವರು ಗುತ್ತಿಗೆದಾರರಿಗೆ ಶೇ. 40 ಕಮೀಷನ್ ಕೇಳಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಆದ್ದರಿಂದ ಇವತ್ತು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಇದರ ಹೊಣೆಯನ್ನು ಸರ್ಕಾರ ಹೊತ್ತು ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ಸಚಿವ ಈಶ್ವರಪ್ಪ ವಿರುದ್ಧ … Read more