ಅರ್ಧಕ್ಕರ್ಧ ಶಿವಮೊಗ್ಗ ನಗರದಲ್ಲಿ ಮಾರ್ಚ್ 19ರಂದು ಕರೆಂಟ್ ಇರಲ್ಲ, ಯಾವ್ಯಾವ ಏರಿಯಾದಲ್ಲಿ ವ್ಯತ್ಯಯ ಆಗಲಿದೆ?

POWER-CUT-UPDATE-NEWs ELECTRICITY

SHIVAMOGGA LIVE NEWS | 18 ಮಾರ್ಚ್ 2022 ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ 20 ಎಂವಿಎ ಶಕ್ತಿ ಪರಿವರ್ತಕದ ನಿರ್ವಹಣೆ  ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಮಾರ್ಚ್ 19ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಪಿಯರ್ ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕ ಪ್ರದೇಶ, ಕೆ.ಅರ್.ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಇಲಿಯಾಜ್ ನಗರ 1 ರಿಂ 10ನೇ ತಿರುವು, ಚಾಲುಕ್ಯನಗರ, … Read more

ಕೋಟೆ ಮಾರಿಕಾಂಬಾ ದೇವಿ ಜಾತ್ರೆ ಸಿದ್ಧತೆ, ಹೇಗಿದೆ ಈ ಭಾರಿ ಉತ್ಸವ? ಇಲ್ಲಿದೆ ಟಾಪ್ 10 ಪಾಯಿಂಟ್

Kote-Marikamba-Jathre-Preparation

SHIVAMOGGA LIVE NEWS | 18 ಮಾರ್ಚ್ 2022 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸರಳವಾದರೂ ಧಾರ್ಮಿಕ ವಿಧಿವಿಧಾನಗಳನ್ನು ಎಂದಿನಂತೆ ಪಾಲಿಸಿಕೊಂಡು ಬರಲಾಗುತ್ತದೆ. ಈ ಬಾರಿ ಜಾತ್ರೆಯ ವಿಶೇಷತೆಗಳೇನು? ಹೇಗಿರುತ್ತೆ ಜಾತ್ರೆ ಅನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ. ಶ್ರೀ ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿಎನ್. ಮಂಜುನಾಥ್ ಮತ್ತು ಪ್ರಮುಖರು ಜಾತ್ರೆಯ ಕುರಿತು ಪೂರ್ಣ ಮಾಹಿತಿ ನೀಡಿದ್ದಾರೆ. ಅದರ ವಿವರ ಇಲ್ಲಿದೆ. ಹೇಗಿರುತ್ತೆ ಈ ಭಾರಿ … Read more

ಶಿವಮೊಗ್ಗಕ್ಕೆ ಆರ್ಟ್ ಆಫ್ ಲಿವಿಂಗ್’ನ ಶ್ರೀ ರವಿಶಂಕರ್ ಗುರೂಜಿ

Sri-Ravishankar-Guruji-Art-Of-Living-Visit-Shivamogga

SHIVAMOGGA LIVE NEWS | 18 ಮಾರ್ಚ್ 2022 ಆರ್ಟ್ ಆಫ್ ಲಿವಿಂಗ್’ನ ಜ್ಞಾನ ಕ್ಷೇತ್ರ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲು ಶ್ರೀ ರವಿಶಂಕರ ಗುರೂಜಿ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 20ರಂದು ಸಂಜೆ 5.30ಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಮಾತನಾಡಿದ ಆರ್ಟ್ ಆಪ್ ಲಿವಿಂಗ್’ನ ಶಿವಮೊಗ್ಗ ಘಟಕದ ಸಂಯೋಜಕ ಬಿ.ಮೂರ್ತಿ ಅವರು, ಶಿವಮೊಗ್ಗದಲ್ಲಿ ಜ್ಞಾನ ಕ್ಷೇತ್ರವನ್ನು ಸ್ಥಾಪಿಸಲಾಗುತ್ತಿದೆ. ಇದರ ಕಟ್ಟಡ ಪೂಜೆಗೆ ಮಾರ್ಚ್ 20ರಂದು ಶ್ರೀ ರವಿಶಂಕರ್ ಗುರೂಜಿಯವರೇ ಆಗಮಿಸುತ್ತಿದ್ದಾರೆ. ಸವಳಂಗ ರಸ್ತೆಯ ಸರ್ಜಿ ಕನ್‌ವೆನ್ಷನ್ ಹಾಲ್ ಎದುರಿನ … Read more

ಸಾಗರದ MDF ಸಂಸ್ಥೆ ಸಭೆಯಲ್ಲಿ ಗದ್ದಲ, ಶಾಸಕರ ಎದುರಲ್ಲೇ ಕೈ ಕೈ ಮಿಲಾಯಿಸಿದ ಗುಂಪುಗಳು

Attack-on-Shripad-Hegde-Nisrani-at-LB-College

SHIVAMOGGA LIVE NEWS | 13 ಮಾರ್ಚ್ 2022 ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (MDF) ಸಂಸ್ಥೆಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಸರ್ವ ಸದಸ್ಯರ ಸಭೆಯಲ್ಲಿ ಎರಡು ಗುಂಪುಗಳು ಕೈ ಕೈ ಮಿಲಾಯಿಸಿವೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿ ಕಲಹಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, MDF ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಸಾಗರದ ದೇವರಾಜ ಅರಸು ಕಲಾಭವನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ 56ನೇ ಸರ್ವ ಸದಸ್ಯರ … Read more

ಶಿವಮೊಗ್ಗದಲ್ಲಿ ಕಸಾಯಿ ಖಾನೆಗಳ ಮೇಲೆ ಪೊಲೀಸರ ದಾಳಿ

Cows-rescued-from-slaughter-house-in-Shimoga

SHIVAMOGGA LIVE NEWS | 17 ಮಾರ್ಚ್ 2022 ಲಷ್ಕರ್ ಮೊಹಲ್ಲಾದ ಎರಡು ಕಸಾಯಿ ಖಾನೆಗಳ ಮೇಲೆ ಇವತ್ತು ಪೊಲೀಸರು ದಾಳಿ ನಡೆಸಿದ್ದಾರೆ. 35 ಗೋವುಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ರವಾನಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಎರಡು ಕಸಾಯಿ ಖಾನೆಗಳ ಮೇಲೆ ಕೋಟೆ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ರೈತರಿಂದ ಖರೀದಿಸಿ ತಂದ 35 ಗೋವುಗಳನ್ನು ಕಸಾಯಿ ಖಾನೆಗಳಲ್ಲಿ ಕೂಡಿ ಹಾಕಲಾಗಿತ್ತು. ಗೋವುಗಳನ್ನು ರಕ್ಷಣೆ ಮಾಡಿ ಮಹಾವೀರ ಜೈನ್ ಗೋಶಾಲೆಗೆ ರವಾನಿಸಲಾಗಿದೆ. ಕೋಟೆ ಠಾಣೆಯಲ್ಲಿ ಕಸಾಯಿ ಖಾನೆ ಮಾಲೀಕರ … Read more

ಒಕ್ಕೂಟಗಳ ಬಂದ್ ಕರೆಗೆ ಶಿವಮೊಗ್ಗದಲ್ಲಿ ಮುಸ್ಲಿಂ ಸಮುದಾಯದ ಬೆಂಬಲ, ಅಂಗಡಿ, ಮುಂಗಟ್ಟು ಕ್ಲೋಸ್

Muslim-Shops-Closed-in-Shimoga-City-MKK-Road

SHIVAMOGGA LIVE NEWS | 17 ಮಾರ್ಚ್ 2022 ಮುಸ್ಲಿಂ ಒಕ್ಕೂಟಗಳು ರಾಜ್ಯಾದ್ಯಂತ ಬಂದ್’ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಮುಸ್ಲಿಂ ಸಮುದಾಯ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದೆ. ಶಿವಮೊಗ್ಗ ನಗರದಾದ್ಯಂತ ಮುಸ್ಲಿಂ ಸಮುದಾಯದವರ ಒಡೆತನದ ಅಂಗಡಿಗಳು, ಉದ್ಯಮಗಳನ್ನು ಬಂದ್ ಮಾಡಲಾಗಿದೆ. ಎಲ್ಲೆಲ್ಲಿ ಹೇಗಿದೆ ಬಂದ್? ಶಿವಮೊಗ್ಗದ ಕೆ.ಆರ್.ಪುರಂ, ಎಂಕೆಕೆ ರಸ್ತೆ, ಕಸ್ತೂರ ಬಾ ರಸ್ತೆ, ಗಾಂಧಿ ಬಜಾರ್, ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ಬೈಪಾಸ್ ರಸ್ತೆ, ಮಂಡ್ಲಿಯಿಂದ ಆಲ್ಕೊಳ ಸಂಪರ್ಕಿಸುವ ಬೈಪಾಸ್ ಸೇರಿದಂತೆ ನಗರಾದ್ಯಂತ ಅಂಗಡಿಗಳು ಬಂದ್ … Read more

ಶಿವಮೊಗ್ಗದಲ್ಲಿ ಜೇಮ್ಸ್ ಅಬ್ಬರ, ಅಪ್ಪುಅಭಿಮಾನಿಗಳ ಸಂಭ್ರಮ, ಹೇಗಿತ್ತು ಸಡಗರ?

James-Movie-Released-in-Shimoga.

SHIVAMOGGA LIVE NEWS | 17 ಮಾರ್ಚ್ 2022 ಶಿವಮೊಗ್ಗದಲ್ಲಿ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಚಿತ್ರ ನೋಡಲು ಮುಗಿಬಿದ್ದರು. ಶಿವಮೊಗ್ಗ ನಗರದ ಹೆಚ್.ಪಿ.ಸಿ ಟಾಕೀಸ್, ಲಕ್ಷ್ಮಿ ಚಿತ್ರಮಂದಿರ, ಭಾರತ್ ಸಿನಿಮಾಸ್’ನಲ್ಲಿ ಜೇಮ್ಸ್ ಸಿನಿಮಾದ ಪ್ರದರ್ಶನವಾಗುತ್ತಿದೆ. ಬೆಳಗ್ಗೆಯಿಂದಲೇ ಅಭಿಮಾನಿಗಳು ಸಿನಿಮಾ ವೀಕ್ಷಿಸುತ್ತಿದ್ದಾರೆ. ಚಿತ್ರಮಂದಿರ ಸಂಪೂರ್ಣ ಭರ್ತಿ ಶಿವಮೊಗ್ಗದ ಹೆಚ್.ಪಿ.ಸಿ ಚಿತ್ರಮಂದಿರದಲ್ಲಿ ಮೊದಲ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ಜೇಮ್ಸ್ ಚಿತ್ರ … Read more

ಬಸ್, ಬೈಕ್ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಸಾವು

Sagara-Kugve-Bus-and-Bike-collision

SHIVAMOGGA LIVE NEWS | 17 ಮಾರ್ಚ್ 2022 ಬೈಕ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾರೆ. ಸಾಗರ ಸಮೀಪದ ಅಂಬಾಪುರ ಕುಗ್ವೆ ತಿರುವಿನಲ್ಲಿ ಘಟನೆ ಸಂಭವಿಸಿದೆ. ತಲವಾಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡುವಾಣಿಯ ಅನಿಲ್ (30) ಮೃತಪಟ್ಟಿದ್ದಾರೆ. ಅನಿಲ್ ಅವರು ತೆರಳುತ್ತಿದ್ದ ಬೈಕ್ ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಗಂಭೀರ ಗಾಯಗೊಂಡಿದ್ದ ಅನಿಲ್ ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆತರಲಾಗಿತ್ತು. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ … Read more