ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು
SAGARA, 20 AUGUST 2024 : ಶರಾವತಿ ಹಿನ್ನೀರಿನಲ್ಲಿ (BACK WATER) ಮುಳುಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಸಾಗರ ತಾಲೂಕು ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ದುರ್ದೈವಿ. ಜಡ್ಡಿನಬೈಲು ಶರಾವತಿ ಹಿನ್ನೀರು ಭಾಗದಲ್ಲಿ ಮೀನುಗಾರ ರವಿ ಅವರು ಬಲೆ ಹಾಕಿದ್ದರು. ಇವತ್ತು ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ ⇒ ನಮ್ಮೂರಲ್ಲೇ … Read more