ಪ್ರಿಯಕರನ ಮದುವೆ ದಿನ ಪ್ರಿಯತಮೆ ಆತ್ಮಹತ್ಯೆ ಕೇಸ್, ಮೂವರ ವಿರುದ್ಧ ದಾಖಲಾಯ್ತು ಎಫ್ಐಆರ್

Sahyadri-College-Guest-lecturer-Commits-Suicide.

SHIVAMOGGA LIVE NEWS | 20 ಮಾರ್ಚ್ 2022 ಪ್ರಿಯಕರನ ಮದುವೆ ದಿನ ಯುವತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ವಿರುದ್ಧ ಕೇಸ್ ದಾಖಲಾಗಿದೆ. ರೂಪಶ್ರೀ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀರೆಯಿಂದ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಸಹ್ಯಾದ್ರಿ ಕಾಲೇಜಿನಲ್ಲಿ ಎಂ.ಎ ವಿದ್ಯಭ್ಯಾಸ ಮಾಡುತ್ತಿದ್ದಾಗ ಮಾರ್ನಮಿ ಬೈಲ್ ನಿವಾಸಿ ಮುರುಳಿ ಎಂಬಾತನ ಪರಿಚಯವಾಗಿ, ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಆಗುವುದಾಗಿ ನಂಬಿಸಿದ ಮುರುಳಿ, ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಚೆಗೆ ಮುರುಳಿಯು ರೂಪಶ್ರೀಯನ್ನು ಮದುವೆ ಆಗುವುದಿಲ್ಲ … Read more

BREAKING NEWS | ಶಿವಮೊಗ್ಗದ ತುಂಗಾ ನದಿಯಲ್ಲಿ ಪುರುಷ, ಮಹಿಳೆಯ ಮೃತದೇಹಗಳು ಪತ್ತೆ

breaking news graphics

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗದ ತುಂಗಾ ನದಿಯಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದೆ. ವಿಚಾರ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಲ್ಲೇಶ್ವರ ನಗರದ ಶ್ರೀ ಮಾಸ್ತಾಂಬಿಕ ದೇವಿ ದೇವಸ್ಥಾನದ ಹಿಂಭಾಗ ತುಂಗಾ ನದಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಹಿಳೆ ಮತ್ತು ಪುರುಷನ ಮೃತದೇಹಗಳು ಅಕ್ಕಪಕ್ಕದಲ್ಲಿವೆ. ಮಹಿಳೆಯ ಮೃತದೇಹದ ಮೇಲೆ ಹಸಿರು ಸೀರೆ ಇದೆ. ಪುರುಷನ ಮೃತದೇಹದ ಮೇಲೆ ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಇದೆ ಎಂದು ತಿಳಿದು ಬಂದಿದೆ. ಮೃತರ … Read more

ಪ್ರಿಯಕರನ ಮದುವೆ ದಿನವೇ ಪ್ರಿಯತಮೆ ಆತ್ಮಹತ್ಯೆ, ಕಲ್ಯಾಣ ಮಂಟಪದಿಂದ ಮದುಮಗ ನಾಪತ್ತೆ

Sahyadri-College-Guest-lecturer-Commits-Suicide.

SHIVAMOGGA LIVE NEWS | 20 ಮಾರ್ಚ್ 2022 ಬೇರೆ ಯುವತಿ ಜೊತೆಗೆ ಪ್ರಿಯಕರ ಮದುವೆ ಆಗುತ್ತಿರುವುದರಿಂದ ಮನನೊಂದು ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಪ್ರಿಯಕರ ಮದುವೆ ಮಂಟಪದಿಂದಲೇ ಪರಾರಿಯಾಗಿದ್ದಾನೆ.. ಶಿವಮೊಗ್ಗದ ಓ.ಟಿ.ರಸ್ತೆಯ ರೂಪಶ್ರೀ, ಮನೆಯಲ್ಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ಪುಟದ ಡೆತ್ ನೋಟ್ ಬರೆದಿದ್ದು, ಪ್ರಿಯಕರನ ವಿರುದ್ಧ ಆರೋಪ ಮಾಡಿದ್ದಾಳೆ. ಪ್ರಿಯಕರನ ಮದುವೆ ದಿನವೇ ನೇಣಿಗೆ ಮುರಳಿ ಎಂಬಾತನನ್ನು ರೂಪಶ್ರೀ ಬಹು ವರ್ಷದಿಂದ ಪ್ರೀತಿಸುತ್ತಿದ್ದಳು. ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮುರಳಿಯ ಮದುವೆ … Read more

ಕೋಟೆ ಮಾರಿಕಾಂಬ ಜಾತ್ರೆ ಮಳಿಗೆ ಹಂಚಿಕೆ ವಿವಾದ, ಟೆಂಡರ್ ಪಡೆದಿದ್ದವನಿಗೆ ಜೀವ ಬೆದರಿಕೆಯ ಆರೋಪ

Kote-Marikamba-Jathre-Preparation-

SHIVAMOGGA LIVE NEWS | 20 ಮಾರ್ಚ್ 2022 ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮಳಿಗೆ ಹಂಚಿಕೆ ಸಂಬಂಧ ವಿವಾದ ಸೃಷ್ಟಿಯಾಗಿದೆ. ಮಳಿಗೆಗಳ ಟೆಂಡರ್ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಒಡ್ಡಿರುವ ಆರೋಪವು ಕೇಳಿ ಬಂದಿದೆ. ಅನ್ಯ ಧರ್ಮಿಯರಿಗೆ ಮಳಿಗೆ ಕೊಡಬಾರದು ಎಂದು ಹಿಂದೂ ಸಂಘಟನೆಗಳ ಮುಖಂಡರು ಪಟ್ಟು ಹಿಡಿದಿದ್ದಾರೆ. ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಯು ಶಿವಮೊಗ್ಗ ನಗರದ ಊರ ಹಬ್ಬ ಎಂದು ಖ್ಯಾತಿ ಪಡೆದಿದೆ. ಎರಡು … Read more

ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

murder graphical image

SHIVAMOGGA LIVE NEWS | 20 ಮಾರ್ಚ್ 2022 ಹಳೆ ದ್ವೇಷದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ. ಟಿಪ್ಪುನಗರ ನಿವಾಸಿ ಜಿಕೃಲ್ಲಾ ಖಾನ್ (28) ಮೃತ ವ್ಯಕ್ತಿ. ಎನ್.ಟಿ.ರಸ್ತೆಯ ಫಲಕ್ ಶಾದಿ ಮಹಲ್ ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಫಲಕ್ ಶಾದಿ ಮಹಲ್ ಬಳಿ ಜಿಕೃಲ್ಲಾ ಖಾನ್ ಮೇಲೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು … Read more

ವಿದ್ಯಾರ್ಥಿ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ, ಸರ್ಕಾರದ ವಿರುದ್ಧ ಘೋಷಣೆ

NSUI-Protest-in-Shimoga

SHIVAMOGGA LIVE NEWS | 20 ಮಾರ್ಚ್ 2022 ಬಿ.ಇಡಿ ಪದವಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಮಸ್ಯೆ ಸರಿಪಡಿಸುವುದು, ಸರ್ಕಾರಿ ವಸತಿ ನಿಲಯಗಳಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ NSUI ಕಾಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಸರ್ಕಾರದಿಂದ ಶುಲ್ಕ ಸಂದಾಯವಾಗಿಲ್ಲ ಸರ್ಕಾರಿ ಕೋಟಾದಲ್ಲಿ ಬಿ.ಎಡ್ ಪದವಿ ವ್ಯಾಸಂಗ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಶುಲ್ಕ ವಿನಾಯಿತಿ ನೀಡಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ … Read more

ಮೇಯಲು ಹೋಗಿದ್ದ ಹಸುವಿನ ಕಾಲು ಕತ್ತರಿಸಿದ ದುಷ್ಕರ್ಮಿಗಳು

Assault-on-Cow-in-Shimoga-Horabailu-Choradi

SHIVAMOGGA LIVE NEWS | 20 ಮಾರ್ಚ್ 2022 ಮೇಯಲು ಹೋಗಿದ್ದ ಹಸುವಿನ ಕಾಲನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಮಚ್ಚಿನಿಂದ ಹಲ್ಲೆ ನಡೆಸಿ ಹಸುವಿನ ಕಾಲು ಕತ್ತರಿಸಲಾಗಿದೆ. ಶಿವಮೊಗ್ಗ ತಾಲೂಕು ಚೋರಡಿ ಸಮೀಪದ ಹೊರಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನಾಗರಾಜ ಎಂಬುವವರಿಗೆ ಸೇರಿದ ಹಸುವಿನ ಕಾಲು ಕತ್ತರಿಸಲಾಗಿದೆ. ಎಲ್ಲಾ ಹಸುಗಳನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಸಂಜೆ ಹೊತ್ತಿಗೆ ಎಲ್ಲಾ ಹಸುಗಳು ಮನೆಗೆ ಹಿಂತಿರುಗಿವೆ. ಒಂದು ಹಸು ಮಾತ್ರ ಮರಳಿರಲಿಲ್ಲ. ಮರುದಿನ ಬೆಳಗ್ಗೆ ಖಾಲಿ ಹೊಲದಲ್ಲಿ ಹಸು ಇರುವುದು ಗೊತ್ತಾಗಿದೆ. ಸಮೀಪಕ್ಕೆ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ಚಾಲಕನನ್ನು ಕೆಳಗೆ ಎಳೆದು ಹಲ್ಲೆ

crime name image

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಬೈಕ್ ಸವಾರನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಫಯಾಜ್ ಪಾಷಾ ಗಾಯಗೊಂಡಿದ್ದಾರೆ. ಅವರಿಗೆ ಮಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಏನಿದು ಪ್ರಕರಣ? ಕುಣಿಗಲ್’ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಪಾಸ್ ರಸ್ತೆಯ ತುಂಗಾ ಸೇತುವೆ ಬಳಿ ತೆರಳುತಿತ್ತು. ದಿಢೀರನೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಚಾಲಕ ಫಯಾಜ್ ಪಾಷಾ ಬೈಕ್ … Read more

ಲ್ಯಾಪ್ ಟಾಪ್ ಇಟ್ಟುಕೊಂಡು ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಬಂದರೆ ಕಾದಿರುತ್ತೆ ಶಾಕ್

KSRTC-Bus-After-Curfew-In-Shimoga-city

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ಸಿನಲ್ಲಿ ಇರಿಸಿದ್ದ ಲ್ಯಾಪ್ ಟಾಪ್ ಬ್ಯಾಗ್ ಕಳ್ಳತನ ಮಾಡಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವಿದ್ಯಾರ್ಥಿ ಗಗನ ಎಂಬುವವರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ಕಳ್ಳತನ? ಗಗನ ಅವರು ಶಿರಸಿಯಿಂದ ಚನ್ನರಾಯಪಟ್ಟಣ ತೆರಳುವ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಾಗ ಗಗನ ಅವರು … Read more

ಸಾವಿರಾರು ಭಕ್ತರನ್ನು ಹೊಂದಿದ್ದ ಸಿಹಿ ಬೇವಿನ ಮರ ಬುಡಮೇಲು, ಈ ಮರದ ಹಿನ್ನೆಲೆ ಏನು? ಇಲ್ಲಿದೆ ಟಾಪ್ 5 ಪಾಯಿಂಟ್

Uraganahalli-Neem-Tree-Falls-in-Soraba

SHIVAMOGGA LIVE NEWS | 18 ಮಾರ್ಚ್ 2022 ಅಸಂಖ್ಯ ಭಕ್ತರಿಂದ ಪೂಜಿಸಲ್ಪಿಟ್ಟಿದ್ದ ಸಿಹಿ ಬೇವಿನ ಮರ ಬುಡಮೇಲಾಗಿದೆ. ಶುಕ್ರವಾರ ಸುರಿದ ಭಾರಿ ಮಳೆ, ಗಾಳಿಗೆ ಮರ ಉರುಳಿ ಬಿದ್ದಿದೆ. ಇದು ಭಕ್ತರಲ್ಲಿ ದುಗುಡ, ಆತಂಕ ಹುಟ್ಟಿಸಿದೆ. ಸೊರಬ ತಾಲೂಕು ಉರಗನಹಳ್ಳಿಯಲ್ಲಿ ಸಿಹಿ ಬೇವಿನ ಮರ ಇದೆ. ಇದರ ಎಲೆಗಳು ಕಹಿ ಅನಿಸುವುದಿಲ್ಲ. ದೂರದೂರುಗಳಿಂದ ಹಲವು ಭಕ್ತರು ಉರಗನಹಳ್ಳಿಗೆ ಬಂದು ಸಿಹಿ ಬೇವಿನ ಮರಕ್ಕೆ ಪೂಜೆ ಸಲ್ಲಿಸಿ, ಹರಕೆ ಹೊತ್ತು ಹೋಗುತ್ತಿದ್ದರು. ಸಿಹಿ ಬೇವಿನ ಮರದ ವಿಶೇಷತೆಗಳೇನು? ಪಾಯಿಂಟ್ … Read more