ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ 9ನೇ ಭಾರಿ ಹೆಚ್ಚಳ, ಇವತ್ತೆಷ್ಟು ಏರಿಕೆಯಾಗಿದೆ?

petrol pump

SHIVAMOGGA LIVE NEWS | 31 ಮಾರ್ಚ್ 2022 ಮಾರ್ಚ್ ತಿಂಗಳಲ್ಲಿ 9ನೇ ಭಾರಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ವಾಹನ ಸವಾರರು, ಸಾರ್ವಜನಿಕರಲ್ಲಿ ಕಳವಳ ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಇವತ್ತು 84 ಪೈಸೆ ಏರಿಕೆ ಆಗಿದೆ. ಹಾಗಾಗಿ ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್’ಗೆ 108.75 ರೂ.ಗೆ ತಲುಪಿದೆ. ಪೆಟ್ರೋಲ್ : ಈವರೆಗು ಎಷ್ಟು ಏರಿಕೆಯಾಗಿದೆ? ದಿನಾಂಕ ಹೆಚ್ಚಾಗಿದ್ದೆಷ್ಟು? ಮಾರ್ಚ್ 22 84 ಪೈಸೆ ಮಾರ್ಚ್ … Read more

ಶಿವಮೊಗ್ಗದಲ್ಲಿ ಹಾಡು, ಪದ್ಯಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಗೆ ಪರಿಚಯಿಸಿದ ಪ್ರೊ.ಕೃಷ್ಣೇಗೌಡ

Prof-Krishnegowda-in-Shimoga-sahitya-sammelana

SHIVAMOGGA LIVE NEWS | 30 ಮಾರ್ಚ್ 2022 ಕನ್ನಡ ಭಾಷೆಗೆ ಶಿವಮೊಗ್ಗದಲ್ಲಿ ಅಪಾಯ ಎದುರಾದರೆ ರಾಜ್ಯದಲ್ಲಿಯು ಅಪಾಯ ಉಂಟಾಗಿದೆ ಎಂದರ್ಥ ಎಂದು ಸಾಹಿತಿ, ದೂರದರ್ಶನ ಕಲಾವಿದ ಪ್ರೊ. ಕೃಷ್ಣೇಗೌಡ ಹೇಳಿದರು. ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಕೃಷ್ಣೇಗೌಡ ಅವರು, ಮೈಸೂರು ಜಿಲ್ಲೆ ಸಾಂಸ್ಕೃತಿಕ ರಾಜಧಾನಿ. ಅಂತೆಯೆ ಶಿವಮೊಗ್ಗ ಜಿಲ್ಲೆ ಸಾಹಿತ್ಯದ ರಾಜಧಾನಿ. ಇಲ್ಲಿ ಕನ್ನಡದ ಭಾಷೆಗೆ ಅಪಾಯ ಉಂಟಾದರೆ, ರಾಜ್ಯದಲ್ಲಿ ಅಪಾಯ ಎದುರಾಗಿದೆ ಎಂದರ್ಥ ಎಂದು ತಿಳಿಸಿದರು. 30 … Read more

BREAKING NEWS | ಶಿವಮೊಗ್ಗ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

police cap

SHIVAMOGGA LIVE NEWS | 30 ಮಾರ್ಚ್ 2022 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 135 ಪೊಲೀಸರಿಗೆ ಈ ಭಾರಿ ಸಿಎಂ ಪದಕ ಲಭಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂವರಿಗೆ ಪದಕ ಲಭಿಸಿದೆ. ಯಾರೆಗೆಲ್ಲ ಪದಕ ಲಭಿಸಿದೆ? ಜಿ.ಲೋಕೇಶ್ – ಡಿವೈಎಸ್’ಪಿ – ಎಸಿಬಿ ಶಿವಮೊಗ್ಗ ಕೆ.ಹೆಚ್.ಮಂಜುನಾಥ್ – ಎಎಸ್ಐ – ಡಿಪಿಓ – ಶಿವಮೊಗ್ಗ ಸುಧಾಕರ್ – ಹೆಡ್ ಕಾನ್ಸ್ ಟೇಬಲ್ – ತೀರ್ಥಹಳ್ಳಿ ಪೊಲೀಸ್ ಠಾಣೆ … Read more

ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿದ್ಯಾರ್ಥಿಗಳ ಆಕ್ರೋಶ, ಡಿಸಿ ಕಚೇರಿ ಮುಂದೆ ಪ್ರತಿಭಟನೆ

BVP-Protest-in-Shimoga-DC-Office.

  SHIVAMOGGA LIVE NEWS | 30 ಮಾರ್ಚ್ 2022 ಕುವೆಂಪು ವಿಶ್ವವಿದ್ಯಾಲಯದ ಮೊದಲನೇ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕುವೆಂಪು ವಿವಿ ಮೊದಲನೇ ವರ್ಷದ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಬಿಎ, ಬಿ.ಎಸ್.ಸಿ. ವಿದ್ಯಾರ್ಥಿಗಳಿಗೆ ಸುಮಾರು 300ರೂ. ಮತ್ತು ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಸುಮಾರು 800 ರೂ. ಶುಲ್ಕ ಹೆಚ್ಚಳ ಮಾಡಿರುವುದನ್ನು ವಿದ್ಯಾರ್ಥಿಗಳು ಖಂಡಿಸಿದರು. … Read more

ಚಟ್ಟದ ಮೇಲೆ ಬೈಕ್ ಇರಿಸಿಕೊಂಡು ಅಣಕು ಶವಯಾತ್ರೆ ಮಾಡಿ ಆಕ್ರೋಶ

NSUI-Protest-against-Petrol-Price-Hike.

SHIVAMOGGA LIVE NEWS | 30 ಮಾರ್ಚ್ 2022 ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು  ಮಹಾವೀರ ವೃತ್ತದಲ್ಲಿ ಸ್ಕೂಟರ್ ಅಣಕು ಶವಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು. ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ … Read more

ದಿನಕ್ಕೆ ಕೇವಲ 60 ರೂ. ಗೌರವಧನ, ಶಿವಮೊಗ್ಗದಲ್ಲಿ ಸಂಪನ್ಮೂಲ ವ್ಯಕ್ತಿಗಳ ಆಕ್ರೋಶ

sampanmula-vyakthi-protest-in-Shimoga

SHIVAMOGGA LIVE NEWS | 30 ಮಾರ್ಚ್ 2022 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಕನಿಷ್ಠ ವೇತ ನೀಡಬೇಕು. ಸಮವಸ್ತ್ರ ಒದಗಿಸಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಅವರನ್ನು ಭೇಟಿಯಾಗಿ, ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಸಂಪನ್ಮೂಲ ವ್ಯಕ್ತಿಗಳು ಬೇಡಿಕೆ ಏನು? ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರತಿದಿನ 60 … Read more

BREAKING NEWS | ಹೊಸನಗರದಲ್ಲಿ ಎಸಿಬಿ ದಾಳಿ, ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

SHIVAMOGGA LIVE NEWS | 30 ಮಾರ್ಚ್ 2022 ಲಂಚದ ಹಣ ಸ್ವೀಕರಿಸುತ್ತಿದ್ದ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು  ದಾಳಿ ನಡಸಿ, ಬಂಧಿಸಿದ್ದಾರೆ. ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮುರುಗೇಶ್ ಎಸಿಬಿ ಬಲಿಗೆ ಬಿದ್ದ ಅಧಿಕಾರಿ. ಒಂದು ಲಕ್ಷ ಲಂಚಕ್ಕೆ ಬೇಡಿಕೆ ಸ್ಥಳೀಯರೊಬ್ಬರಿಗೆ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗದ ನಿವೇಶನಗಳಿಗೆ ಪ್ಲಾನಿಂಗ್ ಅಪ್ರೂವಲ್ ಮತ್ತು ಮ್ಯೂಟೇಶನ್ … Read more

ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಗೋಪಾಳದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ

Kannada-Sahitya-Sammelana.

SHIVAMOGGA LIVE NEWS | 30 ಮಾರ್ಚ್ 2022 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವತ್ತು ಚಾಲನೆ ಸಿಕ್ಕಿದೆ. ಇಂದಿನಿಂದ ಎರಡು ದಿನ ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಇವತ್ತು ಬೆಳಗ್ಗೆ ಸಾಹಿತ್ಯ ಗ್ರಾಮದಲ್ಲಿ ಧ್ವಜಾರೋಹಣ ನೆರವೇರಿಸಿ, ಸಾಹಿತ್ಯ ಸಮ್ಮೇಳನ್ನಕ್ಕೆ ಚಾಲನೆ ನೀಡಲಾಯಿತು. ನಂತರ ಗೋಪಾಳದಿಂದ ಸಮ್ಮೇಳನ ಅಧ್ಯಕ್ಷರಾದ ಡಾ. ಕೆಳದಿ ಗುಂಡಾಜೋಯ್ಸ್ ಅವರನ್ನು ಮೆರವಣಿಗೆ ಮೂಲಕ ಸಮ್ಮೇಳನದ ಸಭಾಂಗಣಕ್ಕೆ ಕರೆತರಲಾಯಿತು. ಸಾಹಿತ್ಯ ಆಸಕ್ತರು, ಪರಿಷತ್ತಿನ ಪದಾಧಿಕಾರಿಗಳು ಮೆರವಣಿಗೆಯಲ್ಲಿ … Read more

ಗುರುಪುರದ ಟೀ ಸ್ಟಾಲ್ ಮುಂದೆ ಡಿವೈಎಸ್’ಪಿ ನೇತೃತ್ವದಲ್ಲಿ ದಾಳಿ, ಮೂವರು ಯುವಕರು ಅರೆಸ್ಟ್

DYSP-police-Car-in-Shimoga

SHIVAMOGGA LIVE NEWS | 30 ಮಾರ್ಚ್ 2022 ಶಿವಮೊಗ್ಗದ ಗುರುಪುರದಲ್ಲಿ ಡಿವೈಎಸ್’ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ. ಗುರುಪುರದ ಟೀ ಸ್ಟಾಲ್ ಒಂದರ ಮುಂದೆ ದಾಳಿ ನಡೆಸಲಾಗಿದೆ. ಗುರುಪುರದ ಕುಮಾರ್, ಪವನ್, ಪುರಲೆಯ ರಾಕೇಶ್ ಎಂಬುವವರನ್ನು ಬಂಧಿಸಲಾಗಿದೆ. ಹೊಸಮನೆ ಬಡಾವಣೆಯ ಸಂದೀಪ್ ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ದಾಳಿಗೆ ಕಾರಣವೇನು? ಗುರುಪುರದಲ್ಲಿ ಕೆಲವರು ಓ.ಸಿ. ಜೂಜಾಟ ಆಡಿಸುತ್ತಿರುವ ಕುರಿತು ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಈ … Read more