ಶಿವಮೊಗ್ಗದ ಮೊಬೈಲ್‌ ಅಂಗಡಿಯಿಂದ ಹೊರ ಬಂದ ಮೆಕಾನಿಕ್‌ಗೆ ಕಾದಿತ್ತು ಶಾಕ್

Crime-News-General-Image

ಶಿವಮೊಗ್ಗ: ಮೊಬೈಲ್‌ ರಿಪೇರಿ ಮಾಡಿಸಿಕೊಂಡು ಅಂಗಡಿಯಿಂದ ಹೊರಗೆ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike Stolen) ಕಳ್ಳತನವಾಗಿದೆ ಎಂದು ಆರೋಪಿಸಿ ಮೆಕಾನಿಕ್‌ ಒಬ್ಬರು ದೂರು ನೀಡಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ರೈಲ್ವೆ ಹಳಿ ಮೇಲೆ ಯುವಕನ ಮೃತದೇಹ ಪತ್ತೆ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ತಾಜ್‌ ಹೊಟೇಲ್‌ ಸಮೀಪದ ಮೊಬೈಲ್‌ ಅಂಗಡಿಗೆ ಮೆಕಾನಿಕ್‌ ಸಯ್ಯದ್‌ ಅಫಾನ್‌ ತೆರಳಿದ್ದರು. ತಮ್ಮ ಬೈಕ್‌ ಅನ್ನು ಬಿ.ಹೆಚ್‌.ರಸ್ತೆಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದರು. ಮೊಬೈಲ್‌ ರಿಪೇರಿ ಮಾಡಿಸಿಕೊಂಡು ಹಿಂತಿರುಗುಷ್ಟರಲ್ಲಿ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ … Read more

ಭಾರಿ ಮಳೆಗೆ ಈಜು ಕೊಳದಂತಾದ ಶಿವಮೊಗ್ಗದ ಬಿ.ಹೆಚ್‌.ರಸ್ತೆ

Heavy-Rain-at-BH-Road-in-Shimoga-city

ಶಿವಮೊಗ್ಗ : ಭಾರಿ ಮಳೆಗೆ ನಗರದ ಬಿ.ಹೆಚ್.ರಸ್ತೆ ಈಜುಕೊಳದಂತಾಗಿದೆ (Pool). ಮಳೆ ನೀರು ಹರಿದು ಹೋಗಲು ಸಾದ್ಯವಾಗದೆ ರಸ್ತೆ ಮೇಲೆ ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಶಂಕರಮಠ ಸರ್ಕಲ್‌ನಿಂದ ಸೈನ್ಸ್‌ ಮೈದಾನ ಸಮೀಪ ಇರುವ ಏಥರ್‌ ಬೈಕ್‌ ಶೋ ರೂಂವರೆಗೆ ರಸ್ತೆಯಲ್ಲಿ ಎರಡು ಬದಿಯಲ್ಲು ಮಳೆ ನೀರು ನಿಂತಿದೆ. ರಸ್ತೆಯ ಎರಡು ಬದಿ ಮತ್ತು ಡಿವೈಡರ್‌ ಕೆಳಗೆ ನೀರು ಹರಿದು ಹೋಗಲು ವ್ಯವಸ್ಥೆ ಇದೆ. ಆದರೆ ಕಸ ಸೇರಿದ್ದರಿಂದ ನೀರು ಹರಿದು ಹೋಗಲಾಗದೆ ರಸ್ತೆ … Read more

BREAKING NEWS – ಹೆದ್ದಾರಿಯಲ್ಲಿ ಬಸ್‌ ಮೇಲೆ ಬಿದ್ದ ಮರ, ಚಾಲಕನ ಸಮಯಪ್ರಜ್ಞೆಗೆ ತಪ್ಪಿತು ಅನಾಹುತ

Tree Falls on bus near kaspadi in Sagara

SAGARA, 26 JULY 2024 : ಚಲಿಸುತ್ತಿದ್ದ KSRTC ಬಸ್‌ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್‌ ಪ್ರಯಾಣಿಕರು ಪರಾಗಿದ್ದಾರೆ. ಸಾಗರ ಸಮೀಪ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಕಾಸ್ಪಾಡಿ – ಸಾಗರ ಮಧ್ಯೆ ಹೆದ್ದಾರಿಯಲ್ಲಿ ದಿಢೀರನೆ ಮರ ಧರೆಗುರುಳಿದೆ. ಇದನ್ನು ಗಮನಿಸಿದ ಬಸ್‌ ಚಾಲಕ ಕೂಡಲೆ ಬಸ್ಸನ್ನು ರಸ್ತೆಯ ಎಡಬದಿಗೆ ತಿರುಗಿಸಿದ್ದಾರೆ. ಹಾಗಾಗಿ ದೊಡ್ಡ ಅನಾಹುತ ತಪ್ಪಿದೆ. ಬಸ್ಸು ರಸ್ತೆ ಪಕ್ಕದ ಚರಂಡಿಗೆ ಇಳಿದಿದೆ. ಬಸ್ಸು ಯಲ್ಲಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಮರ ಧರೆಗುರುಳಿದ್ದರಿಂದ ಸಾಗರ ಸಮೀಪ … Read more

ವರ್ಷಗಳಿಂದ ಇದ್ದ ಗುಂಡಿಗಳೆಲ್ಲ ದಿಢೀರ್‌ ಮಾಯ, ಜನರ ಮನವಿಗೆ ಕ್ಯಾರೆ ಅನ್ನಲಿಲ್ಲ, ಪಿಎಂಗಾಗಿ ರಸ್ತೆ ಜಗಮಗ

Potholes-closed-in-Shimoga-BH-Road-ahead-of-PM-Visit

SHIVAMOGGA LIVE NEWS | 17 MARCH 2024 SHIMOGA : ವರ್ಷಗಳಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಗುಂಡಿಗಳೆಲ್ಲ ಪ್ರಧಾನಿ ಭೇಟಿ ಹಿನ್ನೆಲೆ ಬಂದ್‌ ಆಗಿವೆ. ಜನರು ಹಲವು ಬಾರಿ ಬೇಡಿಕೊಂಡರೂ ಗುಂಡಿ ಮುಚ್ಚಿಸದ ಅಧಿಕಾರಿಗಳು ಈಗ ತರಾತುರಿಯಲ್ಲಿ ಡಾಂಬಾರು ಸುರಿಸುತ್ತಿದ್ದಾರೆ. ಮಾ.18ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ (ಫ್ರೀಡಂ ಪಾರ್ಕ್‌) ಕಾರಿನಲ್ಲಿ ತೆರಳಲಿದ್ದಾರೆ. ಅವರು ತೆರಳುವ ಮಾರ್ಗದುದ್ದಕ್ಕು ಇದ್ದ ಗುಂಡಿಗಳ ದಿಢೀರ್‌ ಕಾಣೆಯಾಗಿವೆ. … Read more

ವಿದ್ಯಾನಗರ ಮೇಲ್ಸೇತುವೆಗೆ ಬಿ.ಹೆಚ್‌.ರಸ್ತೆಯಲ್ಲಿ ಡಿವೈಡರ್‌ ರೆಡಿ, ಸವಳಂಗ ರಸ್ತೆ ಫ್ಲೈ ಓವರ್‌ ಪರಿಶೀಲಿಸಿದ ಎಂಪಿ

Vidyanagara-Railway-bridge-final-stage

SHIVAMOGGA LIVE NEWS | 25 JANUARY 2024 SHIMOGA : ವಿದ್ಯಾನಗರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ವಾಹನಗಳ ಸರಾಗ ಸಂಚಾರಕ್ಕೆ ಬಿ.ಹೆಚ್‌.ರಸ್ತೆಗೆ ಸಂಪರ್ಕ ಕಲ್ಪಿಸುವೆಡೆ ಡಿವೈಡರ್‌ ನಿರ್ಮಿಸಲಾಗುತ್ತಿದೆ. ಹೊಳೆಹೊನ್ನೂರು ರಸ್ತೆಗೆ ನೇರವಾಗಿ ಸಂಪರ್ಕ ಕಲ್ಪಿಸಲು ವೃತ್ತಾಕಾರದ ಮೇಲ್ಸೇತುವೆ ನಿರ್ಮಿಸಲಾಗಿದೆ. ಕಾಮಗಾರಿ ಕೊನೆ ಹಂತಕ್ಕೆ ತಲುಪಿದೆ. ಸೇತುವೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಡಿವೈಡರ್‌ಗಳನ್ನು ನಿರ್ಮಿಸಲಾಗುತ್ತಿದೆ. ಸೇತುವೆಯಿಂದ ಕೆಳಗಿಳಿದು ಬರುವ ವಾಹನಗಳು ಬಿ.ಹೆಚ್‌.ರಸ್ತೆಯ ಎಡ ಭಾಗಕ್ಕೆ ಸಂಚರಿಸಲು ಪ್ರತ್ಯೇಕ ಡಿವೈಡರ್‌ … Read more

ಹೊಳೆ ಬಸ್‌ ಸ್ಟಾಪ್‌ನಿಂದ ಅಮೀರ್‌ ಅಹಮದ್‌ ಸರ್ಕಲ್‌ವರೆಗೆ ಪಾರ್ಕಿಂಗ್‌ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಆದೇಶ

Shimoga-BH-Road-Near-Karnataka-Sanga

SHIVAMOGGA LIVE NEWS | 18 DECEMBER 2023 SHIMOGA : ನಗರದ ಬಿ.ಹೆಚ್.ರಸ್ತೆಯ ಹೊಳೆಬಸ್ ಸ್ಟಾಪ್‍ನಿಂದ ಅಮೀರ್ ಅಹಮದ್ ಸರ್ಕಲ್‍ವರೆಗೆ ಸುಗಮ ಸಂಚಾರ ದೃಷ್ಟಿಯಿಂದ ವಿವಿಧೆಡೆ ದ್ವಿಚಕ್ರ ಮತ್ತು ಕಾರ್‌ಗಳ ನಿಲುಗಡೆ ಮತ್ತು ನಿಷೇಧ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಆದೇಶಿಸಿದ್ದಾರೆ. ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ? ಅಮೀರ್ ಅಹಮದ್ ಸರ್ಕಲ್‍ನಿಂದ ಮಹಾನಗರಪಾಲಿಕೆ ಕಾಂಪ್ಲೆಕ್ಸ್‍ವರೆಗೆ (ಕುಚಲಕ್ಕಿ ಕೇರಿ ಕ್ರಾಸ್ ಎದುರು) ಎಡಬದಿಯಲ್ಲಿ ಎಲ್ಲಾ ವಿಧದ ವಾಹನಗಳ ನಿಲುಗಡೆ ನಿಷೇಧ. ಅಮೀರ್ ಅಹಮದ್ ಸರ್ಕಲ್‍ನಿಂದ ಶಿವಪ್ಪನಾಯಕ ಸರ್ಕಲ್ … Read more

ಡೇಂಜರ್‌ ರೋಡ್‌ ಆಗುತ್ತಿದೆ ಶಿವಮೊಗ್ಗದ ಕಾಂಕ್ರಿಟ್‌ ರಸ್ತೆ, ಯಾಕೆ? ಇಲ್ಲಿದೆ 4 ಪ್ರಮುಖ ಪಾಯಿಂಟ್‌

Pot-Holes-in-BH-Road-Concrete-Road

SHIVAMOGGA LIVE | 18 JULY 2023 SHIMOGA : ನಗರದ ಪ್ರಮುಖ ಕಾಂಕ್ರಿಟ್‌ ರಸ್ತೆಯಲ್ಲಿ ಗಜಗಾತ್ರದ ಗುಂಡಿಗಳು (Pot Holes) ಸೃಷ್ಟಿಯಾಗಿವೆ. ಅಲ್ಲಲ್ಲಿ ಕಂಬಿಗಳು ಮೇಲೆದ್ದು ಕಾಣಿಸುತ್ತಿವೆ. ತುರ್ತಾಗಿ ರಿಪೇರಿ ಮಾಡದೆ ಇದ್ದರೆ ಇನ್ನು ಕೆಲವೆ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನ ಸವಾರರ ಜೀವಕ್ಕೆ ಕುತ್ತು ಉಂಟಾಗಲಿದೆ. ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶಿವಮೊಗ್ಗದ ಬಿ.ಹೆಚ್‌.ರಸ್ತೆಯ ಅಗಲೀಕರಣ ಮಾಡಿ, ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಯಿತು. ಶಂಕರಮಠ ಸರ್ಕಲ್‌ನಿಂದ ಶಿವಮೊಗ್ಗದ ಬಸ್‌ ನಿಲ್ದಾಣದವರೆಗೆ ಗಟ್ಟಿಮುಟ್ಟು ಕಾಂಕ್ರಿಟ್‌ ರಸ್ತೆ … Read more

ಶಿವಮೊಗ್ಗದ ಮೊದಲ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ರೆಡಿ, ಹೇಗಿದೆ? ಎಷ್ಟು ಕಾರ್‌, ಬೈಕ್‌ ನಿಲ್ಲಿಸಬಹುದು?

240623 Multilevel Car parking in Shimoga city

SHIVAMOGGA LIVE| 24 JUNE 2023 SHIMOGA : ಜಿಲ್ಲೆಯ ಮೊದಲ ಮಲ್ಟಿ ಲೆವೆಲ್‌ ಪಾರ್ಕಿಂಗ್‌ (Multi Level Parking) ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರಿಂದ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿನ ವಾಹನ ದಟ್ಟಣೆ ಮತ್ತು ಪಾರ್ಕಿಂಗ್‌ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಶಿವಮೊಗ್ಗ ನಗರದ ಶಿವಪ್ಪ ನಾಯಕ ಪ್ರತಿಮೆ ಮುಂಭಾಗ ಬಿ.ಹೆಚ್‌.ರಸ್ತೆಗೆ ಹೊಂದಿಕೊಂಡಂತೆ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 10 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ. … Read more

ಶಿವಮೊಗ್ಗದ ಈ ಹೆದ್ದಾರಿಗೆ ಇನ್ನೆಷ್ಟು ಬಲಿ ಬೇಕು? ಇನ್ನಾದರೂ ಎಚ್ಚೆತ್ತುಕೊಳ್ತಾರಾ ಅಧಿಕಾರಿಗಳು?

Shimoga-Sagara-BH-Road-Highway-near-Srirampura

SHIVAMOGGA LIVE | 7 JUNE 2023 ಘಟನೆ 1 : ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ ವಿನೋಬನಗರದ ಜೈ ಪ್ರಕಾಶ್‌ ಮಲ್ನಾಡ್‌ ಎಂಬುವವರು ರಸ್ತೆಯ (Highway) ಎಡಬದಿಯಲ್ಲಿ ನಡೆದು ಹೋಗುತ್ತಿದ್ದರು. ಹಿಂದಿನಿಂದ ಬಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಜೈ ಪ್ರಕಾಶ ಮಲ್ನಾಡ್‌ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಸ್‌ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಜೂ.8ರಂದು ಶ್ರೀರಾಂಪುರ ಬಳಿ ರಾತ್ರಿ ಈ ಘಟನೆ ಸಂಭವಿಸಿದೆ. ಘಟನೆ 2 : ರಾಂಗ್‌ … Read more

ಇಲ್ಲಿ ರಸ್ತೆ ಮಧ್ಯೆ ಗುಂಡಿಗಳಿವೆಯೋ, ಗುಂಡಿಗಳ ಅಕ್ಕಪಕ್ಕ ಅಲ್ಲಲ್ಲಿ ಡಾಂಬಾರ್ ಹಾಕಿದ್ದಾರೋ?

Pot-holes-in-Shimoga-Vidyanagara-BH-Road-New

SHIMOGA | ಇಲ್ಲಿ ಹೆಜ್ಜೆ ಹೆಜ್ಜೆಗು ಭಯಾನಕ (DANGEROUS POT HOLES) ಗುಂಡಿಗಳಿವೆ. ಕೆಲವಂತು ಪ್ರಾಣ ತೆಗೆಯಲು ಹೊಂಚು ಹಾಕಿ ಕುಳಿತಿವೆ. ಇನ್ನು ಕೆಲವು ಹಂಪುಗಳ ನಡುವೆ ಕದ್ದು ಮಲಗಿವೆ. ಇದು ನಗರದ ವಿದ್ಯಾನಗರದ ಮುಂದೆ ಹಾದು ಹೋಗಿರುವ ಬಿ.ಹೆಚ್.ರಸ್ತೆಯ ದುಸ್ಥಿತಿ. ಎಂ.ಆರ್.ಎಸ್ ಸರ್ಕಲ್ ನಿಂದ ತುಂಗಾ ನದಿ ಸೇತುವೆ ತನಕ ಈ ರಸ್ತೆಯಲ್ಲಿ ನೂರಾರು ಗುಂಡಿಗಳು ವಾಹನ ಸವಾರರ ರಕ್ತ ಹೀರಲು ಕೈ ಬೀಸಿ ಕರೆಯುತ್ತಿರುತ್ತವೆ. (DANGEROUS POT HOLES) ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಭದ್ರಾವತಿ … Read more