ಪುನಿತ್ ರಾಜ್’ಕುಮಾರ್ ಸಿನಿಮಾದಲ್ಲಿ ಮಾಡಿದ್ದನ್ನು, ಭದ್ರಾವತಿಯ ಯುವಕ ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019 ಪವರ್ ಸ್ಟಾರ್ ಸಿನಿಮಾದಲ್ಲಿ ಮಾಡಿದ್ದನ್ನ, ಭದ್ರಾವತಿ ಯುವಕ, ರಿಯಲ್ ಲೈಫ್’ನಲ್ಲಿ ಮಾಡಿದ್ದಾನೆ. ಈತನ ಕೆಲಸಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಈ ಹುಡುಗನ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ಓದುವ ಮೊದಲು ಪುನಿತ್ ರಾಜ್’ಕುಮಾರ್ ಅವರ ಈ ಹಾಡನ್ನು ಒಮ್ಮೆ ನೋಡಿಬಿಡಿ. ಯಾರೇ ಕೂಗಾಡಲಿ ಸಿನಿಮಾದ ಈ ಹಾಡಿನಲ್ಲಿ, ಪುನಿತ್ ರಾಜ್’ಕುಮಾರ್ ಅವರು ಭಿಕ್ಷುಕನೊಬ್ಬನಿಗೆ ಹೊಸ ರೂಪ ನೀಡ, ನೂತನ ಬದುಕು ಕಲ್ಪಿಸುತ್ತಾರೆ. ಇದು ರೀಲ್ ಸ್ಟೋರಿ. ಆದರೆ … Read more

ಭದ್ರಾವತಿಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ನಾಲ್ವರು ಅರೆಸ್ಟ್, ಹಣ ವಶಕ್ಕೆ

prison hand cuff image

ಶಿವಮೊಗ್ಗ ಲೈವ್.ಕಾಂ | 5 ಜನವರಿ 2019    ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನದ ಸಂದರ್ಭ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೂಡ್ಲಿಗೆರೆಯ ಚಿನ್ನಪ್ಪಯ್ಯ, ಅಶೋಕ್, ತಿಲಕ್’ನಗರದ ಶಿವಣ್ಣ, ಕಾಗದ ನಗರದ ಪ್ರಸನ್ನ ಬಂಧಿತರು. ಇವರಿಂದ 2915 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸಿಪಿಐ ಯೋಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ನಟರಾಜ್, ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.   ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ … Read more

ಭಗವಾನ್ ಗಡಿಪಾರಿಗೆ ಭದ್ರಾವತಿಯಲ್ಲಿ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | 4 ಜನವರಿ 2019    ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಎಸ್.ಕೆ.ಭಗವಾನ್ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ, ವಿಶ್ವಹಿಂದೂ ಪರಿಷತ್, ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಭಗವಾನ್ ಎಂದು ಹೆಸರಿಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ಹಿಂದೂ ಧರ್ಮದ  ದೇವರುಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ವಿರೋಧಿಸಿದರು. ಇದಕ್ಕೂ ಮೊದಲು, ರಂಗಪ್ಪ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಹಶೀಲ್ದಾರ್ ಅವರಿಗೆ ಮನವಿಸಲ್ಲಿಸಿದರು. ಪ್ರಮುಖರಾದ ಓಂಕಾರಪ್ಪ, ಧರ್ಮಪ್ರಸಾದ್, ಬಿ.ಕೆ.ಶ್ರೀನಾಥ್, ರಾಮಚಂದ್ರ, ಆರ್.ಎಸ್.ಶೋಭ, ಹೇಮಾವತಿ … Read more

ನೀರಿಗಾಗಿ ಭದ್ರಾವತಿ ಮಿಲ್ಟ್ರಿಕ್ಯಾಂಪ್ ಬಳಿ ರೈತರ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಅನ್ನದಾತರು ಗರಂ

ಶಿವಮೊಗ್ಗ ಲೈವ್.ಕಾಂ | 1 ಜನವರಿ 2019 ಭದ್ರಾ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭದ್ರಾವತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಮಿಲ್ಟ್ರಿಕ್ಯಾಂಪ್’ನ ನೀರಾವರಿ ಇಲಾಖೆ ಕಚೇರಿ ಮುಂದೆ ಪ್ರತಿಭಟಿಸಲಾಯಿತು. ನೀರು ಹರಿಸುವುದನ್ನು ನಿಲ್ಲಿಸಿ 46 ದಿನ ಕಳೆದಿದೆ. ನೀರು ಹರಿಸಲು ಇದು ಸಕಾಲವಾಗಿದೆ. ಆದ್ದರಿಂದ ಸರ್ಕಾರ ಮತ್ತು ನೀರಾವರಿ ಇಲಾಖೆ ತಡ ಮಾಡದೆ ನಾಲೆಗಳಲ್ಲಿ ನೀರು ಹರಿಸಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರೈತ ಮುಖಂಡರಾದ … Read more

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಗರಂ ಆಗಿದ್ದ ಭದ್ರಾವತಿ ಎಂಎಲ್ಎ ಈಗ ಕೂಲ್ ಕೂಲ್, ಮುಂದಿನ ನಡೆ ಏನು ಗೊತ್ತಾ?

BK Sangameshwara Bhadravathi BDVT 1

ಶಿವಮೊಗ್ಗ ಲೈವ್.ಕಾಂ | 26 ಡಿಸೆಂಬರ್ 2018 ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ, ಬೇಸರಗೊಂಡಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ, ತಾಳ್ಮೆಯ ಹಾದಿ ತುಳಿಯಲು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಿಲ್ಲ ಅಂತಾ ಖಡಕ್ ಆಗಿ ಹೇಳಿದ್ದ ಅವರೀಗ, ಭೂ ಸೇನಾ ನಿಗಮದ ಅಧ್ಯಕ್ಷರಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕುತೂಹಲ ಮೂಡಿಸಿತ್ತು ಬೆಂಬಲಿಗರ ಸಭೆ ಮಿನಿಸ್ಟರ್ ಪಟ್ಟ ಸಿಗದೆ ಬೇಸರಗೊಂಡಿದ್ದ ಸಂಗಮೇಶ್ವರ್, ಬೆಂಬಲಿಗರ ಸಭೆ ನಡೆಸಿ, ಮುಂದಿನ ನಡೆಯ ಕುರಿತು ಪ್ರಕಟಿಸುವುದಾಗಿ ಹೇಳಿದ್ದರು. ಈಗ … Read more

ಭದ್ರಾವತಿ ಉದ್ಧಾಮ ದೇಗುಲ ಬಳಿ ಚಿರತೆ ಕಾಣಿಸಿದ್ದು ನಿಜವಾ? ವಾಟ್ಸಪ್’ನಲ್ಲಿ ಹರಿದಾಡುತ್ತಿರುವ ಮೆಸೇಜ್ ಸತ್ಯಾನಾ?

ಶಿವಮೊಗ್ಗ ಲೈವ್.ಕಾಂ | 17 ಡಿಸೆಂಬರ್ 2018 ಭದ್ರಾವತಿ ಉದ್ಧಾಮ ಕ್ಷೇತ್ರದ ಬಳಿ ಚಿರತೆ ಕಾಣಿಸಿಕೊಂಡಿದೆ..! ಗಂಗೂರು ರಸ್ತೆಯಲ್ಲಿ ಚಿರತೆ ನೋಡಿ ಬೆಚ್ಚಿಬಿದ್ದ ಜನ..! ಬೈಕ್’ನಲ್ಲಿ ಓಡಾಡುತ್ತಿದ್ದವರು, ಜೀವ ರಕ್ಷಣೆಗಾಗಿ ಮರ ಹತ್ತಿ ತಪ್ಪಿಸಿಕೊಂಡರು..! ಹೀಗಂತಾ ಎರಡು ದಿನದಿಂದ ವಾಟ್ಸಪ್, ಫೇಸ್’ಬುಕ್’ನಲ್ಲಿ ಮೆಸೇಜ್’ಗಳು ಹರಿದಾಡುತ್ತಿವೆ. ಭದ್ರಾವತಿಯ ಗಂಗೂರು ಗ್ರಾಮದ ಉದ್ಧಾಮ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತೀ ದಿನ ಭಕ್ತರು ತಂಡೋಪ ತಂಡವಾಗಿ ಹೋಗಿ ಬರುತ್ತಾರೆ. ದಟ್ಟ ಅರಣ್ಯದ ನಡುವೆ, ಪ್ರಶಾಂತ ವಾತಾವರಣದಲ್ಲಿರುವ ದೇಗುಲದಲ್ಲಿ, ಹುಣ್ಣಿಮೆ ದಿನ ವಿಶೇಷ … Read more

ಭದ್ರಾವತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಫುಲ್ ಗರಂ, ಕಾರಣವೇನು? ಬಿಇಓಗೆ ಚಳಿಬಿಡಿಸಿದ ಜಿ.ಪಂ ಸದಸ್ಯರು

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಪ್ರಗತಿ ಪರಿಶೀಲನೆ ವೇಳೆ, ವಿಳಂಬ ಧೋರಣೆ ಅನುಸರಿಸಿದ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ಗರಂ ಆದರು. ಇನ್ನು, ಶಾಲಾ ಮಕ್ಕಳ ಬಳಿ ಜಿಎಸ್’ಟಿ ಇದೆಯೇ? ಲೈಸೆನ್ಸ್ ಇದೆಯೇ? ಎಂದು ಬೆದರಿಸಿದ್ದ ಬಿಇಓ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಶಾಸಕರಿಗೆ ಹೆದರಿ ಕೆಲಸ ಮಾಡಬೇಡಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಜ್ಯೋತಿ.ಎಸ್.ಕುಮಾರ್, ಪ್ರೋಟೊಕಾಲ್ … Read more

BRP ಪೊಲೀಸ್ ಉಪಠಾಣೆ ಎದುರಿಗೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ಧರಣಿ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಪೊಲೀಸರ ದೌರ್ಜನ್ಯ ಖಂಡಿಸಿ, BRP ಉಪಠಾಣೆ ಎದುರು, ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ, ಬೆಂಬಲಿಗರೊಂದಿಗೆ ಧರಣಿ ನಡೆಸಿದರು. ಹಾಗಾಗಿ ಪೊಲೀಸರು ಠಾಣೆಗೆ ಬೀಗ ಹಾಕಿ ಹೊರಗೆ ನಿಲ್ಲುವಂತಾಯಿತು. BRPಯ ಪ್ರವಾಸಿ ಖಾಸಗಿ ಬಸ್ ಮಾಲೀಕರೊಬ್ಬರು, ತಮ್ಮ ಟಾಟಾ ಏಸ್ ವಾಹನದಲ್ಲಿ ಭದ್ರಾವತಿಯಿಂದ ಕ್ಯಾನ್’ಗಳಲ್ಲಿ ಡೀಸೆಲ್ ತರುತ್ತಿದ್ದರು. BRPಯಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರು, ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. BRPಯ ಪೆಟ್ರೋಲ್ ಬಂಕ್’ನಲ್ಲಿ ಮೋಸವಾಗುತ್ತಿದೆ ಎಂದು ಬೇರೆಡೆಯಿಂದ … Read more

ಸಾವಿರ ಸಾವಿರ ಜನರ ಮುಂದೆ ಸನ್ಯಾಸ ದೀಕ್ಷೆ ಪಡೆದರು ಭದ್ರಾವತಿಯ ಇಂಜಿನಿಯರಿಂಗ್ ಪದವೀಧರ

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಇಂಜಿನಿಯರಿಂಗ್ ಪದವೀಧರೊಬ್ಬರು ಭದ್ರಾವತಿಯಲ್ಲಿ ಜೈನ ದೀಕ್ಷೆ ಪಡೆದು, ಸನ್ಯಾಸಿಯಾಗಿದ್ದಾರೆ. ಮೂರು ದಿನ ನಡೆದ ಕಾರ್ಯಕ್ರಮದ ಕೊನೆಯ ದಿನ, ದೀಕ್ಷೆ ಸ್ವೀಕರಿಸಿದ್ದಾರೆ. ಭದ್ರಾವತಿಯ ಭೂತನಗುಡಿಯ ದಿನೇಶ್ ಜೈನ್, ರಾಜುಲ್ ದೇವಿ ದಂಪತಿಯ ಮಗ ಜಿನೇಶ್ ಕುಮಾರ್ ಜೈನ್ ಜೈನ ಸನ್ಯಾಸಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದ ಜಿನೇಶ್ ಕುಮಾರ್ ಅವರು, ದೀಕ್ಷೆ ಪಡೆದು ಖೀಮಾ ವಿಜಯ್ ಜೀ ಮಹಾರಾಜ್ ಸಾಹೇಬ್ ಆಗಿದ್ದಾರೆ. ಜಿನೇಶ್ ಕುಮಾರ್ ಜೈನ್ ಆವರೊಂದಿಗೆ ಆಂಧ್ರದ ಭರತ್ ಕುಮಾರ್, … Read more

ನೂರು ಕ್ವಿಂಟಾಲ್ ಜೋಳ ಧಗಧಗ, ಶಾರ್ಟ್ ಸರ್ಕಿಟ್’ಗೆ ಎರಡೂವರೆ ಎಕರೆ ಕಬ್ಬು ಭಸ್ಮ

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಪ್ರತ್ಯೇಕ ಪ್ರಕರಣದಲ್ಲಿ ಕಬ್ಬು ಮತ್ತು ನೂರು ಕ್ವಿಂಟಾಲ್ ಜೋಳ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತರಿಗೆ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ನೂರು ಕ್ವಿಂಟಾಲ್ ಜೋಳಕ್ಕೆ ಬೆಂಕಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ನೂರು ಕ್ವಿಂಟಾಲ್’ನಷ್ಟು, ಕಟಾವು ಮಾಡಿದ್ದ ಮೆಕ್ಕೆ ಜೋಳ ಸುಟ್ಟು ಹೋಗಿದೆ. ತಾಲೂಕಿನ ಹೆಗ್ಗೋಡು ಗ್ರಾಮದ ಮಲ್ಲಿಕಾರ್ಜುನಗೌಡ ಎಂಬುವವರಿಗೆ ಸೇರಿದ ಮೆಕ್ಕೆ ಜೋಳಕ್ಕೆ ಬೆಂಕಿ ತುಗಿಲಿದೆ. ನಾಲ್ಕು ಎಕರೆಯಲ್ಲಿ ಬೆಳೆದ ಮೆಕ್ಕೆ ಜೋಳವನ್ನು ಕಟಾವು ಮಾಡಿ, ರಾಶಿ … Read more