ಕಾರ್ಮಿಕರಿಗೆ ಹಣ ವರ್ಗಾಯಿಸಲು ಬ್ಯಾಂಕ್‌ ಅಕೌಂಟ್‌ ಪರಿಶೀಲಿಸಿದ ಉದ್ಯಮಿಗೆ ಕಾದಿತ್ತು ಶಾಕ್

Online-Fraud-Case-image

ಶಿವಮೊಗ್ಗ: ಬ್ಯಾಂಕ್‌ ಖಾತೆ (Bank Account) ಹ್ಯಾಕ್‌ ಮಾಡಿ ₹1.95 ಲಕ್ಷ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಶಿವಮೊಗ್ಗದ ಉದ್ಯಮಿಯೊಬ್ಬರು ಸಿ.ಇ.ಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮಾಚೇನಹಳ್ಳಿಯ ಕಾರ್ಖಾನೆಯೊಂದರ ಕಾರ್ಮಿಕರಿಗೆ ಹಣ ವರ್ಗಾಯಿಸಲು, ಉದ್ಯಮಿ ತಮ್ಮ  ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿದಾಗ, ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಅ.10ರ ರಾತ್ರಿ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಹಿನ್ನಲೆ ಉದ್ಯಮಿ ದೂರು ನೀಡಿದ್ದು ತನಿಖೆ … Read more

ಸೇತುವೆ ಬಳಿ ದಾಳಿ, ಕಾರು, ಬೈಕು ಸಹಿತ ನಾಲ್ವರು ಅರೆಸ್ಟ್‌, ಏನಿದು ಕೇಸ್‌?

Four-arrest-with-car-and-bike-NDPS-Case-at-shikaripura

ಶಿಕಾರಿಪುರ : ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ (RAID) ನಡೆಸಿದ ಸಿ.ಇ.ಎನ್‌ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 70 ಸಾವಿರ ರೂ. ಮೌಲ್ಯದ 2 ಕೆ.ಜಿ 52 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಬೈಕ್‌ ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆಸರಗಟ್ಟೆ ಮೀಸಲು ಅರಣ್ಯ ಪ್ರದೇಶದ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು ಎಂದು ಪ್ರಕಟಣೆಯಲ್ಲಿ … Read more

15 ದಿನದಲ್ಲಿ 54 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ, ಮುಂದಿನ ಟಾರ್ಗೆಟ್‌ ನೀವೆ

SMS-Fraud-Shimoga-CEN-Police-Station.

SHIMOGA, 21 AUGUST 2024 : ರಿವೀವ್‌, ವರ್ಕ್‌ ಫ್ರಮ್‌ ಹೋಮ್‌ ಮತ್ತು ಟಾಸ್ಕ್‌ಗಳನ್ನು (task) ಪೂರೈಸಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ನಂಬಸಿ ಸರ್ಕಾರಿ ನೌಕರರೊಬ್ಬರಿಗೆ 54 ಲಕ್ಷ ರೂ. ವಂಚಿಸಲಾಗಿದೆ. ಟೆಲಿಗ್ರಾಂನಲ್ಲಿ ಫುಡ್‌ ರಿವೀವ್‌ ಸರ್ಕಾರಿ ನೌಕರ (ಹೆಸರು ಗೌಪ್ಯ) ಟೆಲಿಗ್ರಾಂ ಖಾತೆ ನೋಡುತ್ತಿದ್ದಾಗ ವರ್ಕ್‌ ಫ್ರಮ್‌ ಹೋಮ್‌ ಎಂದು ಮೆಸೇಜ್‌ ಬಂದಿತ್ತು. ಪರಿಶೀಲಿಸಿದಾಗ ವೆಬ್‌ಸೈಟ್‌ ಒಂದರಲ್ಲಿ ರಿಜಿಸ್ಟರ್‌ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ನೋಂದಣಿ ಮಾಡುತ್ತಿದ್ದಂತೆ ಆಹಾರ ಸಾಮಗ್ರಿಯೊಂದನ್ನು ಖರೀದಿಸಿ ಅದರ ಕುರಿತು ವಿಮರ್ಶೆ ಬರೆಯುವಂತೆ … Read more

ಕ್ರೆಡಿಟ್‌ ಕಾರ್ಡ್‌ ಇದ್ದವರಿಗೆ ಬರಲಿದೆ ಇವನ ಫೋನ್‌, ಶಿವಮೊಗ್ಗದ ಮಹಿಳೆಗೆ ಆ ಕರೆ ಬಳಿಕ ಕಾದಿತ್ತು ಶಾಕ್

Online-Fraud-In-Shimoga

SHIMOGA, 10 AUGUST 2024 : ಮಹಿಳೆಯೊಬ್ಬರ ಕ್ರೆಡಿಟ್‌ ಕಾರ್ಡ್‌ನಿಂದ (Credit Card) 2.10 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ ⇒ ನಾಗರ ಪಂಚಮಿಯಂದೆ ಹಾವು ಕಡಿದು ಬಾಣಂತಿ ಸಾವು ಕ್ರೆಡಿಟ್‌ ಕಾರ್ಡ್‌ನಿಂದ ಹಣ ಕಟ್‌ ಆಗಲಿದೆ ಶಿವಮೊಗ್ಗದ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ) ಕರೆ ಮಾಡಿದ್ದ ವ್ಯಕ್ತಿಯೊಬ್ಬ ಬ್ಯಾಂಕ್‌ನಿಂದ ಕರೆ ಮಾಡುತ್ತಿರುವವನಂತೆ ನಂಬಿಸಿ, ‘ನಿಮ್ಮ ಕ್ರೆಡಿಟ್‌ ಕಾರ್ಡ್‌ನಿಂದ ಅಂತಾರಾಷ್ಟ್ರೀಯ ಟೂರ್‌ಗೆ ಹಣ ಕಡಿತವಾಗಲಿದೆ. … Read more

ಈ ಮೇಲ್‌ ಚೆಕ್‌ ಮಾಡಿದ ಇಂಜಿನಿಯರ್‌ಗೆ ಕಾದಿತ್ತು ಆಘಾತ, ನೀವೂ ಆಗಬಹುದು ಇವರ ಮುಂದಿನ ಟಾರ್ಗೆಟ್‌

SMS-Fraud-Shimoga-CEN-Police-Station.

SHIVAMOGGA LIVE NEWS | 8 JUNE 2024 SHIMOGA : ಫೆಡೆಕ್ಸ್‌ ಆಫೀಸರ್‌ ಮತ್ತು ನಾರ್ಕೊಟಿಕ್‌ ಕಂಟ್ರೋಲ್‌ ಬ್ಯೂರೊ ಅಧಿಕಾರಿ (Officer) ಅಂತೆ ನಟಿಸಿ ಭದ್ರಾವತಿ ಮೂಲದ 28 ವರ್ಷದ ಇಂಜಿನಿಯರ್‌ಗೆ 9 ಲಕ್ಷ ರೂ. ವಂಚಿಸಲಾಗಿದೆ. ಇಂಜಿನಿಯರ್‌ಗೆ ಗೊತ್ತಾಗದ ಹಾಗೆ ಆಕೆಯ ಹೆಸರಿನಲ್ಲಿ ಪರ್ಸನಲ್‌ ಲೋನ್‌ ಪಡೆದು, ಆಕೆಯ ಸಂಬಳದ ಹಣವನ್ನೂ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಪಾರ್ಸಲ್‌ನಲ್ಲಿ ಡ್ರಗ್ಸ್‌, ಲ್ಯಾಪ್‌ಟಾಪ್‌, ಪಾಸ್‌ಪೋರ್ಟ್‌ ಅಪರಿಚಿತ ನಂಬರ್‌ನಿಂದ ಯುವತಿಗೆ (ಇಂಜಿನಿಯರ್)‌ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಮ್ಮ ಹೆಸರಿನಲ್ಲಿ ಅಂತಾರಾಷ್ಟ್ರೀಯ … Read more

ಮುಖೇಶ್‌ ಅಂಬಾನಿ ವಿಡಿಯೋ ನೋಡಿ 20 ಲಕ್ಷ ಕಳೆದುಕೊಂಡ ಶಿವಮೊಗ್ಗ ಜಿಲ್ಲೆಯ ಉದ್ಯಮಿ, ಆಗಿದ್ದೇನು?

SMS-Fraud-Shimoga-CEN-Police-Station.

SHIVAMOGGA LIVE NEWS | 23 MAY 2024 SHIMOGA : ಫೇಸ್‌ಬುಕ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ (Share Market) ಲಾಭ ಪಡೆಯುವುದು ಹೇಗೆ ಎಂದು ಉದ್ಯಮಿ ಮುಖೇಶ್‌ ಅಂಬಾನಿ ವಿವರಣೆಯ ವಿಡಿಯೋ ನೋಡಿ, ಕೆಳಗಿರುವ ವಾಟ್ಸಪ್‌ ಗ್ರೂಪ್‌ ಸೇರಿದ ಸೊರಬದ ವ್ಯಕ್ತಿ 20 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊರಬದ ಉದ್ಯಮಿಯೊಬ್ಬರು ಫೇಸ್‌ಬುಕ್‌ನಲ್ಲಿ ಮುಖೇಶ್‌ ಅಂಬಾನಿಯ ವಿಡಿಯೋ ವೀಕ್ಷಿಸಿ, ಕೆಳಗೆ ಸೂಚಿಸಿದ್ದ ವಾಟ್ಸಪ್‌ ಗ್ರೂಪ್‌ ಸೇರಿದ್ದರು. ಷೇರು ಮಾರುಕಟ್ಟೆಯಲ್ಲಿ … Read more

ಮೊಬೈಲ್‌ಗೆ ಬಂತು 12 SMS, ಓಪನ್‌ ಮಾಡಿದಾಗ ಬಿಗ್ ಶಾಕ್‌, ಬ್ಯಾಂಕಿಗೆ ಹೋದಾಗ ಮತ್ತೊಂದು ಆಘಾತ

SMS-Fraud-Shimoga-CEN-Police-Station.

SHIVAMOGGA LIVE NEWS | 12 MAY 2024 SHIMOGA : ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಏಕಾಏಕಿ 11.24 ಲಕ್ಷ ರೂ. ಹಣ ಕಡಿತವಾಗಿದೆ. ಬ್ಯಾಂಕ್‌ಗೆ ತೆರಳಿ ಮ್ಯಾನೇಜರ್‌ ಬಳಿ ವಿಚಾರಿಸಿದಾಗ ಆ್ಯಪ್ ಬಳಸಿ ಹಣ ಕಬಳಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಶಿವಮೊಗ್ಗದ ನಿವಾಸಿ ನಿವೃತ್ತ ನೌಕರರೊಬ್ಬರ ಮೊಬೈಲ್‌ಗೆ ಕೆನರಾ ಬ್ಯಾಂಕ್‌ನಿಂದ 12 ಮೆಸೇಜ್‌ ಬಂದಿತ್ತು. ಹಂತ ಹಂತವಾಗಿ ಅವರ ಖಾತೆಯಿಂದ 11.24 ಲಕ್ಷ ರೂ. ಹಣ ಕಡಿತವಾಗಿರುವ ಮಾಹಿತಿ ಎಸ್‌ಎಂಎಸ್‌ನಲ್ಲಿತ್ತು. ಕೂಡಲೆ ಬ್ಯಾಂಕ್‌ಗೆ ತೆರಳಿ ವಿಚಾರಣೆ … Read more

ಪದೇ ಪದೆ ಒಂದೊಂದು ನಂಬರ್‌ನಿಂದ ವಾಟ್ಸಪ್‌ಗೆ ಮೆಸೇಜ್‌, ಯುವಕನಿಗೆ ಕಾದಿತ್ತು ಶಾಕ್‌

SMS-Fraud-Shimoga-CEN-Police-Station.

SHIVAMOGGA LIVE NEWS | 13 APRIL 2024 SHIMOGA : ಜಿ ಮೇಲ್‌ ಹ್ಯಾಕ್‌ ಮಾಡಿದ್ದು ಗೂಗಲ್‌ ಡ್ರೈವ್‌ನಲ್ಲಿರುವ ಪ್ರಿಯತಮೆಯ ಫೋಟೊಗಳನ್ನು ಎಡಿಟ್‌ ಮಾಡಿ ಸ್ನೇಹಿತರು, ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ ಯುವಕನಿಂದ 4 ಲಕ್ಷ ರೂ. ಹಣ ವಸೂಲಿ ಮಾಡಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಯುವಕನ (ಹೆಸರು, ಊರು ಗೌಪ್ಯ) ವಾಟ್ಸಪ್‌ಗೆ ಅಪರಿಚಿತ ನಂಬರ್‌ನಿಂದ ಮೆಸೇಜ್‌ ಬಂದಿತ್ತು. ಜಿ ಮೇಲ್‌ ಹ್ಯಾಕ್‌ ಮಾಡಿದ್ದು, ಗೂಗಲ್‌ … Read more

ಜ್ಯೋತಿಷ್ಯ ಕೇಳಲು ಕರೆ ಮಾಡಿದ ಶಿವಮೊಗ್ಗದ ಮಹಿಳೆಗೆ ಎದುರಾಯ್ತು ದೊಡ್ಡ ಸಂಕಷ್ಟ, ಆಗಿದ್ದೇನು?

SMS-Fraud-Shimoga-CEN-Police-Station.

SHIVAMOGGA LIVE NEWS | 27 MARCH 2024 SHIMOGA : ಯು ಟ್ಯೂಬ್‌ನಲ್ಲಿ ಪ್ರಸಾರವಾದ ಜ್ಯೋತಿಷ್ಯದ ಜಾಹೀರಾತು ನಂಬಿ ಶಿವಮೊಗ್ಗದ ಮಹಿಳೆಯೊಬ್ಬರು 9.44 ಲಕ್ಷ ರೂ. ಮೋಸ ಹೋಗಿದ್ದಾರೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯು ಟ್ಯೂಬ್‌ ಜಾಹೀರಾತಿನಲ್ಲಿ ಕಾಣಿಸಿದ ಮೊಬೈಲ್‌ ನಂಬರ್‌ಗೆ ಕರೆ ಮಾಡಿ ಹಣ ಕಳೆದುಕೊಂಡಿದ್ದಾರೆ. ವಂಚನೆ ಆಗಿದ್ದು ಹೇಗೆ? ಶಿವಮೊಗ್ಗದ ಮಹಿಳೆಯೊಬ್ಬರು (ಹೆಸರು, ಸ್ಥಳ ಗೌಪ್ಯ) ಯು ಟ್ಯೂಬ್‌ನಲ್ಲಿ ಜ್ಯೋತಿಷ್ಯದ ಜಾಹೀರಾತು ಗಮನಿಸಿ, ಅದರಲ್ಲಿರುವ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದರು. ಜ್ಯೋತಿಷಿ ಬಳಿ … Read more

ಶಿವಮೊಗ್ಗದ ವ್ಯಾಪಾರಿಗೆ ಶಾಕ್‌ ನೀಡಿತು ಟೆಲಿಗ್ರಾಂನ ಅಲೀನಾ ಮೆಸೇಜ್‌, ಆಗಿದ್ದೇನು? ಕಳೆದುಕೊಂಡ ಹಣವೆಷ್ಟು?

SMS-Fraud-Shimoga-CEN-Police-Station.

SHIVAMOGGA LIVE NEWS | 22 MARCH 2024 SHIMOGA : ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ ಎಂದು ಆಸೆ ಹುಟ್ಟಿಸಿ ವ್ಯಕ್ತಿಯೊಬ್ಬರಿಗೆ 2 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ಆಗಿದ್ದು ಹೇಗೆ? ಶಿವಮೊಗ್ಗದ ವ್ಯಾಪಾರಿಯೊಬ್ಬರ (ಹೆಸರು ಗೌಪ್ಯ) ಮೊಬೈಲ್‌ಗೆ ಚಿನ್ನಾಭರಣ ಸಂಸ್ಥೆಯೊಂದರ ಹೆಸರಿನಲ್ಲಿ ಟೆಲಿಗ್ರಾಂ ಆಪ್ಲಿಕೇಷನ್‌ಗೆ ಮೆಸೇಜ್‌ ಬಂದಿತ್ತು. ಅದರಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಲಾಭ … Read more