ಶಿವಮೊಗ್ಗ ಜಂಬೂ ಸವಾರಿಗೆ ಚಾಲನೆ, ಅಂಬಾರಿ ಮೆರವಣಿಗೆ ಆರಂಭ

021025-Shimoga-Dasara-Jamboo-savari-begins.webp

ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ (Jamboo Savari) ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯನ್ನ ಹೊತ್ತು ಸಾಗರ ಆನೆ ಮೆರವಣಿಗೆಯಲ್ಲಿ ಸಾಗಿತು. ಇದಕ್ಕೂ ಮೊದಲು ಶಿವಪ್ಪನಾಯಕ ಅರಮನೆ ಮುಂಭಾಗ ನಂದಿ ಕೋಲಿಗೆ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಪೂಜೆ ಸಲ್ಲಿಸಿದರು. ಬಳಿಕ ದೇವಿಗೆ ಪುಷ್ಪ ನಮನ ಸಲ್ಲಿಸಿದರು. ಉಸ್ತುವಾರಿ ಸಚಿವನಾಗಿ ಇದು ಮೂರನೆ ವರ್ಷದ ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಕಳೆದ ವರ್ಷಕ್ಕಿಂತಲು ಈ ಬಾರಿ … Read more

ಶಿವಮೊಗ್ಗ ಜಂಬೂ ಸವಾರಿ, ಅಂಬಾರಿಯ ತೂಕವೆಷ್ಟು? ಸಾಗರ ಆನೆ ಮೇಲೆ ಎಷ್ಟು ಭಾರ ಇರುತ್ತೆ?

021025 Sagara Elephant Ambari

ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಅಂಬಾರಿ (Ambari) ಹೊರಲು ಸಾಗರ ಆನೆ ಸಜ್ಜಾಗಿದೆ. ನಾಡ ದೇವಿಯ ಬೆಳ್ಳಿ ಮಂಟಪ ಹೊತ್ತು ಸಾಗರ ಆನೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದ್ದಾನೆ. ನಾಡ ದೇವಿ ಚಾಮುಂಡೇಶ್ವರಿಯ ಬೆಳ್ಳಿ ಮೂರ್ತಿ ಮತ್ತು ಮಂಟಪ 450 ಕೆ.ಜಿ ಇದೆ. ಇನ್ನು ಆನೆಗೆ ಹಾನಿ ಆಗದಂತೆ ಮತ್ತು ಅಂಬಾರಿ ಜಾರದಂತೆ ಇರಿಸಲು ವಿಶೇಷವಾದ ಬೆಡ್‌ ಹಾಕಲಾಗುತ್ತದೆ. ಅದರ ಒಟ್ಟು ತೂಕ ಸುಮಾರು 200 ಕೆ.ಜಿ. ಶಿವಮೊಗ್ಗದ ಜಂಬೂ ಸವಾರಿಯಲ್ಲಿ ಸಾಗರ ಆನೆ ಸುಮಾರು 650 … Read more

ಶಿವಮೊಗ್ಗ ಸಿಟಿ ಜಗಮಗ, ಎಲ್ಲ ರಸ್ತೆಗಳಲ್ಲು ದೀಪಾಲಂಕಾರ, ಎಲ್ಲೆಲ್ಲಿ ಹೇಗಿದೆ? ಇಲ್ಲಿವೆ ಫೋಟೊಗಳು

021025-Light-decoration-in-shimoga-city.webp

ದಸರಾ ಸುದ್ದಿ: ನವರಾತ್ರಿ ಅಂಗವಾಗಿ ಶಿವಮೊಗ್ಗ ನಗರದಲ್ಲಿ ವಿದ್ಯುತ್‌ ದೀಪಾಲಂಕಾರ (Light Decoration) ಮಾಡಲಾಗಿದೆ. ಎಲ್ಲ ಪ್ರಮುಖ ರಸ್ತೆಗಳು ಜಗಮಗಿಸುತ್ತಿವೆ. ಶಿವಮೊಗ್ಗ ನಗರದಲ್ಲಿ ಅಂಬಾರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕು ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇದರ ಹೊರತಾಗಿ ಬಿ.ಹೆಚ್‌.ರಸ್ತೆ, ಬಾಲರಾಜ ಅರಸ್‌ ರಸ್ತೆ, ಸವಳಂಗ ರೋಡ್‌, ತುಂಗಾ ನದಿ ಸೇತುವೆಗಳು ಸೇರಿದಂತೆ ಹಲವೆಡೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇಲ್ಲಿವೆ ಫೋಟೊಗಳು. ಇದನ್ನೂ ಓದಿ » ಇವತ್ತಿನ ಪಂಚಾಂಗ | 2 ಅಕ್ಟೋಬರ್‌ 2025 | ಇವತ್ತಿನ ಶುಭ ಮುಹೂರ್ತ ಎಷ್ಟೊತ್ತಿಗೆ? … Read more

ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಅಬ್ಬರ, ಗಾಂಧಿ ಬಜಾರ್‌, ಹೂವಿನ ಮಾರುಕಟ್ಟೆಯಲ್ಲಿ ಜನಸಾಗರ

011025-Dasara-Ayaudh-Pooja.webp

ಶಿವಮೊಗ್ಗ: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ (Festival) ಸಂಭ್ರಮ ಜಿಲ್ಲೆಯಾದ್ಯಂತ ಗರಿಗೆದರಿದೆ. ಹೀಗಾಗಿ ಪೂಜೆಗೆ ಅಗತ್ಯ ಹೂವು-ಹಣ್ಣು, ಬೂದುಗುಂಬಳ ಖರೀದಿಯ ಭರಾಟೆ ಮಾರುಕಟ್ಟೆಯಲ್ಲಿ ಮಂಗಳವಾರ ಜೋರಾಗಿತ್ತು.  ಎಲ್ಲೆಲ್ಲಿ ಖರೀದಿ ಇತ್ತು? ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್‌, ಪಾಲಿಕೆ ಪಕ್ಕದ ಹೂವಿನ ಮಾರುಕಟ್ಟೆ ರಸ್ತೆ, ಕಮಲಾ ನೆಹರು ಕಾಲೇಜು ರಸ್ತೆ, ದುರ್ಗಿಗುಡಿ, ಗೋಪಿ ಸರ್ಕಲ್‌, ಜೈಲ್ ರಸ್ತೆ, ಎಪಿಎಂಸಿ ಮಾರುಕಟ್ಟೆ ಹತ್ತಿರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ರೈತರು ಹೂವು, ಬಾಳೆಕಂದು, ಬಾಳೆ ಎಲೆ, ಮಾವಿನ … Read more

ದಸರಾ ದೀಪಾಲಂಕಾರಕ್ಕೆ ಬಾಲಕ ಸಾವು, ಏನಿದು ಕೇಸ್‌? ಹೇಗಾಯ್ತು ಘಟನೆ?

270925-hadonahalli-village-Samarth.webp

ಶಿವಮೊಗ್ಗ: ನವರಾತ್ರಿ ಹಬ್ಬಕ್ಕೆ ದೇವಸ್ಥಾನಕ್ಕೆ ಹಾಕಿದ್ದ ವಿದ್ಯುತ್‌ ದೀಪಾಲಂಕಾರದಲ್ಲಿ (Electric Lighting) ವಿದ್ಯುತ್‌ ಪ್ರವಹಿಸಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ಸಂಭವಿಸಿದೆ. ಹಾಡೋನಹಳ್ಳಿ ಗ್ರಾಮದ ಮಹೇಶ್‌ ರಾವ್‌, ಆಶಾ ದಂಪತಿ ಪುತ್ರ ಸಮರ್ಥ (14) ಮೃತ ದುರ್ದೈವಿ. ಇಲ್ಲಿನ ಅಂಬಾ ಭವಾನಿ ದೇವಸ್ಥಾನಕ್ಕೆ ದಸರಾ ಅಂಗವಾಗಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ದೇವಸ್ಥಾನದ ಬಳಿ ತೆರಳಿದ್ದ ಸಮರ್ಥ ಗೇಟ್‌ ಮುಟ್ಟಿದ್ದಾಗ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಸೀರಿಯಲ್‌ ಸೆಟ್‌ನ … Read more

ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಂದ ಬೀದಿ ನಾಟಕ, ಹೇಗಿತ್ತು ನಾಟಕ?

270925-street-drama-in-Shimog-dasara.webp

ಶಿವಮೊಗ್ಗ: ರಂಗ ದಸರಾದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಹಲವು ಲಾವಣಿ ಮತ್ತು ಜನಪದ ಕಥೆ ಆಧಾರಿತ ಸ್ವಾತಂತ್ರ್ಯ ಹೋರಾಟದ ‘ಹಲಗಲಿ’ ಬೀದಿ ನಾಟಕ (Street Drama) ಪ್ರದರ್ಶಿಸಿದರು. ಬೀದಿ ನಾಟಕ ಪ್ರದರ್ಶನವನ್ನು ಆ‌ರ್ ಟಿಒ ಕಚೇರಿ ರಸ್ತೆಯಲ್ಲಿ ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಉದ್ಘಾಟಿಸಿದರು. ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್‌, ನಾಟಕದ ನಿರ್ದೇಶಕ ಚಂದನ್‌ ನೀನಾಸಂ ಸೇರಿ ಹಲವರು ಇದ್ದರು. ವಿನೋಬನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಎಟಿಎನ್‌ಸಿ ಕಾಲೇಜು, ಆರ್‌ಟಿಒ … Read more

ಶಿವಮೊಗ್ಗ ದಸರಾ, ಈ ದಿನ ಏನೇನು ಕಾರ್ಯಕ್ರಮ, ಎಲ್ಲೆಲ್ಲಿ ನಡೆಯಲಿದೆ?

dasara-Programme-today

ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ (Dasara) ಇವತ್ತೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ ಎಂಬುದರ ವಿವರ ಇಲ್ಲಿದೆ. ಪೌರ ಕಾರ್ಮಿಕರ ದಸರಾ, ಉದ್ಘಾಟನೆ- ಪತ್ರಕರ್ತ ಎನ್.ರವಿಕುಮಾರ್, ಸ್ಥಳ-ಅಂಬೇಡ್ಕರ್ ಭವನ, ಬೆಳಗ್ಗೆ 10. ಪೌರ ಕಾರ್ಮಿಕರ ದಸರಾದಲ್ಲಿ ಪೌರ ಕಾರ್ಮಿಕರಿಂದ ಜಲಗಾರ ನಾಟಕ ಪ್ರದರ್ಶನ, ಪೌರ ಕಾರ್ಮಿಕರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ, ಪೌರ ಕಾರ್ಮಿಕರಿಗೆ ಸೂಪರ್ ಮಿನಿಟ್, ಸ್ಥಳ- ಅಂಬೇಡ್ಕರ್ ಭವನ, ಬೆಳಗ್ಗೆ 10.30. ರಂಗದಸರಾದಲ್ಲಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಗರದ ವಿವಿಧೆಡೆ … Read more

ಶಿವಮೊಗ್ಗ ದಸರಾ ಆನೆ ತಂಗಿರುವ ಜಾಗದ ಸುತ್ತಲು ಶೀಟ್‌, ನಾಗರಿಕರಿಗೆ ನಿರಾಸೆ

Dasara-Elephant-Sheets-around-in-shimoga-city

ದಸರಾ ಸುದ್ದಿ: ವಾಸವಿ ಶಾಲೆ ಆವರಣದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು (Elephants) ವೀಕ್ಷಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆನೆಗಳು ತಂಗುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಕಳೆದ ವರ್ಷ ಆನೆಗಳನ್ನು ವೀಕ್ಷಿಸಲು ಬಂದ ಕೆಲವರು ಅವುಗಳತ್ತ ಕಲ್ಲು, ಮಣ್ಣು ತೂರಿದ್ದರು. ಕಬ್ಬು ಎಸೆದಿದ್ದಿರು. ಇದರಿಂದ ಆನೆಗಳು ರೊಚ್ಚಿಗೇಳುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಆನೆಗಳು ಉಳಿದಿರುವ ಜಾಗದ ಸುತ್ತಲು ಶೀಟ್‌ ಅಳವಡಿಸಲಾಗಿದೆ. ಇನ್ನು, ಆನೆ ನೋಡಲು ನಗರದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಮಕ್ಕಳನ್ನು ಆನೆ ತೋರಿಸಿ ಖುಷಿ … Read more

ಶಿವಮೊಗ್ಗ ದಸರಾ, ಇವತ್ತು ಏನೇನೆಲ್ಲ ಕಾರ್ಯಕ್ರಮಗಳಿವೆ? ಎಲ್ಲೆಲ್ಲಿ ನಡೆಯುತ್ತೆ?

dasara-Programme-today

ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಇವತ್ತೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ ಎಂಬುದರ ವಿವರ ಇಲ್ಲಿದೆ. – ಸೂಡಾ ಆಯುಕ್ತ ವಿಶ್ವನಾಥ ಪಿ.ಮುದ್ದಜಿ ಅವರಿಂದ ಉದ್ಘಾಟನೆ. ಸ್ಥಳ: ಸಿಟಿ ಸೆಂಟರ್‌ ಮಾಲ್‌, ಸಂಜೆ 5ಕ್ಕೆ – ಉದ್ಘಾಟನೆ: ನಟ ಮುಖ್ಯಮಂತ್ರಿ ಚಂದ್ರು – ಸ್ಥಳ: ಶಿವಪ್ಪನಾಯಕ ಅರಮನೆ ಸಂಜೆ 5ಕ್ಕೆ – ಉದ್ಘಾಟನೆ: ಡಿಎಆರ್‌ ಡಿವೈಎಸ್‌ಪಿ ಎಸ್‌.ವಿ.ದಿಲೀಪ್‌ – ಸ್ಥಳ: ಡಾ.ಅಂಬೇಡ್ಕರ್‌ ಭವನ ಸಂಜೆ 5ಕ್ಕೆ ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ … Read more

ಶಿವಮೊಗ್ಗ ಸಿಟಿಯಲ್ಲಿ ಸಕ್ರೆಬೈಲು ಆನೆಗಳ ತಾಲೀಮು ಶುರು

Sakrebyle-Elephant-practise-in-Shimoga-city.

ದಸರಾ ಸುದ್ದಿ: ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಆಗಮಿಸಿರುವ ಮೂರು ಆನೆಗಳಿಗೆ (Elephants) ನಗರದಲ್ಲಿ ತಾಲೀಮು ಆರಂಭವಾಗಿದೆ. ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಇವತ್ತು ಆನೆಗಳಿಗೆ ತಾಲೀಮು ನಡೆಸಲಾಯಿತು. ಅಂಬಾರಿ ಹೊರಲಿರುವ ಸಾಗರ, ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ನಗರದಲ್ಲಿ ತಾಲೀಮು ನಡೆಸಿದವು. ವಾಸವಿ ಶಾಲೆ ಆವರಣದಿಂದ ಹೊರಟ ಆನೆಗಳು ಕೋಟೆ ರಸ್ತೆ, ಗಾಂಧಿ ಬಜಾರ್‌, ಶಿವಪ್ಪ ನಾಯಕ ಪ್ರತಿಮೆ, ನೆಹರು ರಸ್ತೆ, ದುರ್ಗಿಗುಡಿ, ಜೈಲ್‌ ರಸ್ತೆ ಮೂಲಕ ಸಾಗಿದವು. ಇದನ್ನೂ ಓದಿ » ವಿಡಿಯೋ ಕರೆಯಲ್ಲೆ ಶಿವಮೊಗ್ಗದ … Read more