ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆಯಲ್ಲಿ ನಡುರಾತ್ರಿ ದಿಢೀರ್ ಬೆಂಕಿ, ತಪ್ಪಿತು ಭಾರಿ ಅನಾಹುತ

fire at roadside in sultan market

ಶಿವಮೊಗ್ಗದ ಲೈವ್.ಕಾಂ | SHIMOGA NEWS | 3 ಫೆಬ್ರವರಿ 2022 ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆಯಲ್ಲಿರುವ ಸುಲ್ತಾನ್ ಮಾರ್ಕೆಟ್’ನಲ್ಲಿ ನಡುರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸುಲ್ತಾನ್ ಮಾರ್ಕೆಟ್’ನ ಗುಜರಿ ಅಂಗಡಿಗಳ ಮುಂದೆ ಇಡಲಾಗಿದ್ದ ಟಯರ್ ಮತ್ತು ಇತರೆ ಗುಜರಿಗೆ ವಸ್ತುಗಳು ಧಗಧಗ ಹೊತ್ತಿ ಉರಿದಿವೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೆ … Read more

BREAKING NEWS | ಶಿವಮೊಗ್ಗ ಗಾರ್ಡನ್ ಏರಿಯಾದ ಬ್ಯಾಂಕ್’ನಲ್ಲಿ ಬೆಂಕಿ

280122 Fire at Bank in Garden Area Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022 ಬ್ಯಾಂಕ್ ಒಂದರಲ್ಲಿಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಗಾರ್ಡನ್ ಏರಿಯಾದ ಮೂರನೇ ಕ್ರಾಸ್’ನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿಟಕಿಗಳಿಂದ ದಟ್ಟ ಹೊಗೆ ಹೊರಗೆ ಬರುತ್ತಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ದಾಖಲೆಗಳಿದ್ದ ಕೊಠಡಿಗೆ ಬೆಂಕಿ ತಗುಲಿದೆ. ಹಾಗಾಗಿ ದಾಖಲೆಗಳು … Read more

ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್’ನಲ್ಲಿ ಬೆಂಕಿ, ಧಗಧಗ ಉರಿದು ಹೋದವು ಮೂರು ಕಾರು, ಬಸ್ಸಿಗೂ ಹಾನಿ

240122 Fire At Shimoga Auto Complex

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಜನವರಿ 2022 ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಸಿದೆ. ಘಟನೆಯಲ್ಲಿ ಮೂರು ಕಾರು ಸುಟ್ಟು ಕರಕಲಾಗಿವೆ. ಬಸ್ ಒಂದಕ್ಕೆ ಭಾಗಶಃ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೊಡ್ಡ ಅವಘಡ ತಪ್ಪಿಸಿದ್ದಾರೆ. ಆಟೋ ಕಾಂಪ್ಲೆಕ್ಸ್ ಮೊದಲ ತಿರುವಿನಲ್ಲಿ ನಿಲ್ಲಿಸಿದ್ದ ಕಾರುಗಳು, ಬಸ್ಸಿಗೆ ಬೆಂಕಿ ಹೊತ್ತುಕೊಂಡು ಉರಿದಿದೆ. ಮೂರು ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ. ರಸ್ತೆ ಪಕ್ಕ ನಿಂತಿದ್ದ ಕಾರುಗಳು ರಾತ್ರಿ ಆಟೋ ಕಾಂಪ್ಲೆಕ್ಸ್’ನಲ್ಲಿ ನಿಂತಿದ್ದ … Read more

ಸಕ್ರೆಬೈಲು ಬಳಿ ಮರಕ್ಕೆ ಡಿಕ್ಕಿಯಾಗಿ ಧಗಧಗ ಉರಿದ ಕಾರು, ಯುವಕ ಸಾವು

180122 Car Caught Fire Near Sakrebyle in Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022 ಸಕ್ರೆಬೈಲು ಸಮೀಪ ಮರಕ್ಕೆ ಕಾರು ಡಿಕ್ಕಿಯಾಗಿ, ಬೆಂಕಿ ಹೊತ್ತುಕೊಂಡ ಪ್ರಕರಣದಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗದ ವೆಂಕಟೇಶನಗರದ ಸನತ್ (22) ಮೃತ ದುರ್ದೈವಿ. ಭದ್ರಾವತಿಯ ರುದ್ವಿಕ್ ಮತ್ತು ಅನೋಕ್ ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡಗದ್ದೆಯಿಂದ ಮರಳುತ್ತಿದ್ದರು ಮೂವರು ಯುವಕರು ಮಂಡಗದ್ದೆಗೆ ತೆರಳಿದ್ದರು. ಊಟ ಮುಗಿಸಿ ಮರಳುತ್ತಿದ್ದಾಗ ಸಕ್ರೆಬೈಲು ಬಳಿ ಕಾರು ಮರಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮೂವರಿಗೂ ಗಾಯವಾಗಿದೆ. ಗಂಭೀರ ಗಾಯಗೊಂಡಿದ್ದ … Read more

ತೀರ್ಥಹಳ್ಳಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ, ಅಪಾರ ಹಾನಿ

180122 Fire at Kottige in Thirthahalli

ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 18 ಜನವರಿ 2022 ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ತೀರ್ಥಹಳ್ಳಿ ತಾಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಕ್ಲಾಪುರ ಗ್ರಾಮದ ಹಿತ್ತಲಸರದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ರಾಮಸ್ವಾಮಿ ಅವರ ಮನೆಯ ದನದ ಕೊಟ್ಟಿಗೆ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ ಒಣಹುಲ್ಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ … Read more

ಭದ್ರಾವತಿಯಲ್ಲಿ ಭಾರಿ ಅಗ್ನಿ ಅವಘಡ, ಬೆಂಕಿ ಆರಿಸಲು ಎಂಟು ಗಂಟೆ ಕಾರ್ಯಾಚರಣೆ, ಹೇಗಾಯ್ತು ಘಟನೆ? ಹೇಗಿತ್ತು ಕಾರ್ಯಾಚರಣೆ?

060121 fire at Bhadravathi Manjunatha Saw Mill

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 6 ಜನವರಿ 2022 ಭದ್ರಾವತಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸಾ ಮಿಲ್ ಒಂದರಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಸತತ ಅಗ್ನಿಶಾಮಕ ಸಿಬ್ಬಂದಿ ಸತತ ಎಂಟು ಗಂಟೆ ಕಾರ್ಯಾಚರಣೆ ನಡೆಸಿದ್ದಾರೆ. ಇನ್ನು, ಬೆಂಕಿಯ ಪರಿಣಾಮ ಅಕ್ಕಪಕ್ಕದ ಕಟ್ಟಡಗಳು ಹಾನಿಗೊಳಗಾಗಿವೆ. ಭದ್ರಾವತಿ ಬಸ್ ನಿಲ್ದಾಣ ಸಮೀಪದ ಮಂಜುನಾಥ ಸಾಮಿಲ್’ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿದೆ. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ … Read more

ಬೆನ್ನೂರು ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

soraba map graphics

ಶಿವಮೊಗ್ಗದ ಲೈವ್.ಕಾಂ | SORABA NEWS |  24 ಡಿಸೆಂಬರ್ 2021 ಕಾಲು ಜಾರಿ ಕೆರೆಗೆ ಬಿದ್ದು ಕಾರ್ಮಿಕರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ತಾಲೂಕಿನ ಬೆನ್ನೂರು ರಸ್ತೆ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಕೆರೆಯಲ್ಲಿ ಕಾಲು ಜಾರಿ ಮುಳುಗಿ ಮೃತಪಟ್ಟಿದ್ದಾನೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಮಾಸೂರು ಗ್ರಾಮದ ಲಕ್ಷ್ಮಣಪ್ಪ (50) ಮೃತರು. ರಸ್ತೆ ಕೆಲಸಕ್ಕೆ ಬಂದಿದ್ದ ಲಕ್ಷಣಪ್ಪ 2 ದಿನಗಳ ಹಿಂದೆ ಕಾಣೆಯಾಗಿದ್ದು ಗುರುವಾರ ಬೆನ್ನೂರು ಕೆರೆಯಲ್ಲಿ … Read more

VIDEO NEWS | ಶಿವಮೊಗ್ಗ ವಿದ್ಯಾನಗರದ ಎಸ್’ಬಿಐ ಬ್ಯಾಂಕ್’ನಲ್ಲಿ ಬೆಂಕಿ, ಕ್ಯಾಷ್ ಕೌಂಟರ್ ಭಸ್ಮ

281121 Fire at Shimoga vidyanagara SBI Bank

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ನವೆಂಬರ್ 2021 ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಬ್ಯಾಂಕಿನ ಪೀಠೋಪಕರಣ, ದಾಖಲೆಗಳು ಸುಟ್ಟು ಭಸ್ಮವಾಗಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿದ್ಯಾನಗರ ಶಾಖೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಿಟಕಿಯಿಂದ ಬರುತಿತ್ತು ದಟ್ಟ ಹೊಗೆ ಭಾನುವಾರ ಅದ್ದರಿಂದ ಬ್ಯಾಂಕ್‌ಗೆ ರಜೆ ಇತ್ತು. ಆದರೆ ಕಿಟಕಿಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ಸ್ಥಳೀಯರು ಮತ್ತು ಅಕ್ಕಪಕ್ಕದ ಮನೆಯವರು ಗಮನಿಸಿದ್ದಾರೆ. ಕೂಡಲೆ ಬ್ಯಾಂಕ್ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. … Read more

BREAKING NEWS | ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್’ನಲ್ಲಿ ಬೆಂಕಿ

071121 mc GANN hospital fire in Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ನವೆಂಬರ್ 2021 ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ಹೆರಿಗೆ ಮತ್ತು ಮಕ್ಕಳ ವಾರ್ಡ್’ನಲ್ಲಿ ಪುನಃ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಹೆರಿಗ ಮತ್ತು ಸ್ತ್ರೀರೋಗ ತುರ್ತು ಚಿಕಿತ್ಸಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್ ಬೆಂಕಿಯಿಂದಾಗಿ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಕಟ್ಟಡದಲ್ಲಿ ವಿದ್ಯುತ್ ಇಲ್ಲದೆ ಕತ್ತಲು ಆವರಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದವರನ್ನು ಹೊರಗೆ ಕರೆತರಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಆಸ್ಪತ್ರೆಯಲ್ಲಿದ್ದವರನ್ನು ಹೊರಗೆ ಕರೆತರುತ್ತಿದ್ದಾರೆ. ಹೆಚ್ಚಿನ ಮಾಹಿತಿ … Read more

ಶಿವಮೊಗ್ಗದಲ್ಲಿ ಸೇತುವೆ ಮೇಲಿಂದ ತುಂಗಾ ನದಿಗೆ ಧುಮುಕಿದ ಯುವಕ, ರಕ್ಷಣಾ ಕಾರ್ಯ ನೋಡಲು ಜನವೋ ಜನ

101021 Shimoga Youth Rescued in Tunga River

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಅಕ್ಟೋಬರ್ 2021 ಸೇತುವೆ ಮೇಲಿನಿಂದ ತುಂಗಾ ಹೊಳೆಗೆ ಜಿಗಿದು, ನಡು ನೀರಲ್ಲಿ ಸಿಲುಕಿದ್ದ ಯುವಕನೊಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು, ಕಾರ್ಯಾಚರಣೆ ವೀಕ್ಷಿಸಲು ಭಾರಿ ಜನ ಸೇರಿದ್ದರಿಂದ ಸೇತುವೆ ಮೇಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಬೆಕ್ಕಿನಕಲ್ಮಠ ಬಳಿ ಸೇತುವೆ ಮೇಲಿನಿಂದ ಯುವಕನೊಬ್ಬ ತುಂಗಾ ಹೊಳೆಗೆ ಹಾರಿದ್ದಾನೆ. ಆತನನ್ನು ತನ್ವೀರ್ ಎಂದು ಗುರುತಿಸಲಾಗಿದೆ. ಸೇತುವೆಯಿಂದ ಹಾರಿದನಂತೆ..! ತನ್ವೀರ್, ಹೊಸ ಸೇತುವೆ ಮೇಲಿಂದ ತುಂಗಾ ಹೊಳೆಗೆ ಹಾರಿದ್ದಾನೆ … Read more