ಶಿವಮೊಗ್ಗ – ಬೆಂಗಳೂರು ವಿಮಾನ, ಗುಡ್ ನ್ಯೂಸ್ ಕೊಟ್ಟರು ಸಂಸದ ರಾಘವೇಂದ್ರ
ಶಿವಮೊಗ್ಗ: ದಸರಾ ಹಬ್ಬದ ಸಂದರ್ಭ ಶಿವಮೊಗ್ಗದ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ (FLIGHT) ಸಂಸ್ಥೆ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ವಾರದ ಎಲ್ಲ ದಿನವು ಶಿವಮೊಗ್ಗಕ್ಕೆ ವಿಮಾನ ಹಾರಲಿದೆ ಎಂದು ತಿಳಿಸಿದೆ. ಈ ಸಂಬಂಧ ಸಂಸದ ರಾಘವೇಂದ್ರ ಮಾಹಿತಿ ನೀಡಿದ್ದು, ಈವರೆಗು ಬೆಂಗಳೂರು – ಶಿವಮೊಗ್ಗ ಮಧ್ಯೆ ಇಂಡಿಗೋ ಸಂಸ್ಥೆ ದಿನ ಬಿಟ್ಟು ದಿನ ಸೇವೆ ಒದಗಿಸುತ್ತಿತ್ತು. ಸೆ.21ರಿಂದ ಇಂಡಿಗೋ ವಿಮಾನ ಪ್ರತಿದಿನ ಹಾರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ. ಇಂಡಿಗೋ ವಿಮಾನ ಪ್ರತಿದಿನ ಬೆಳಗ್ಗೆ 9.35ಕ್ಕೆ ಬೆಂಗಳೂರಿನಿಂದ ಹೊರಡಲಿದೆ. … Read more