ಹೊಂಬುಜದಲ್ಲಿ ದೇವಿಗೆ ಭತ್ತದ ಫಸಲು ಸಮರ್ಪಣೆ, ವಿಶೇಷ ಪೂಜೆ
ರಿಪ್ಪನ್‌ಪೇಟೆ: ಹೊಂಬುಜ (Hombuja) ಜೈನಮಠದಲ್ಲಿ ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಪ್ರಯುಕ್ತ ಕ್ಷೇತ್ರದ ಕೃಷಿ ಭೂಮಿಯಲ್ಲಿ ಶಾಸ್ತೋಕ್ತವಾಗಿ ಪೂರ್ವಪರಂಪರೆಯಂತೆ ಹೊಸ ಭತ್ತದ ಪೈರು ಕಟಾವು ನೆರವೇರಿಸಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಸಮರ್ಪಿಸಲಾಯಿತು. ಇದೆ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂತಾಯಿಯ ವರಪ್ರಸಾದ. ಭತ್ತ ಆಹಾರದ್ರವ್ಯವಾಗಿ ಬಳಸುವುದರಿಂದ ಅನ್ನಪ್ರಸಾದ ರೂಪವಾಗಿ ಶರೀರ ಪೋಷಣೆ ಆಗುತ್ತದೆ. ಭಕ್ತರಿಗೆ ನಿರಂತರ ಅನ್ನಪ್ರಸಾದ ಲಭಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮಹಾಮಾತೆ … Read more