ಪ್ರೀತ್ಸೆ, ಪ್ರೀತ್ಸೆ ಅಂತಾ ಕಾಡಿದ ಯುವಕ, ಮನನೊಂದು ವಿಷ ಸೇವಿಸಿದ್ದ ಯುವತಿ ಸಾವು

farmer suicide poison

SHIVAMOGGA LIVE NEWS | SUICIDE | 10 ಮೇ 2022 ತನ್ನನ್ನು ಪ್ರೀತಿಸು ಎಂದು ಬಲವಂತ ಮಾಡುತ್ತಿದ್ದ ಯುವಕನೋರ್ವನ ಕಿರುಕುಳಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಸವೆ ಗ್ರಾಮದ ಕುಂಟಿಗೆ ನಿವಾಸಿ ವಿದ್ಯಾಶ್ರೀ (21) ಮೃತ ಯುವತಿ. ಏ.19ರಂದು ವಿದ್ಯಾಶ್ರೀ ಮನೆಯಲ್ಲಿ ಕೀಟನಾಶಕ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಗೊಂಡಿದ್ದ ಆಕೆಯನ್ನು ಕುಟುಂಬದವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯನ್ನು ವಿಚಾರಿಸಿದಾಗ ಅದೇ ಊರಿನ ಶಶಾಂಕ ಎಂಬಾತ ತನ್ನನ್ನು ಪ್ರೀತಿ … Read more

ಎರಡು ತಿಂಗಳ ಮಗು ಸಾವು, ಪೋಷಕರ ಆಕ್ರೋಶ

Mc Gann Hospital Building

SHIVAMOGGA LIVE NEWS | BABY DEATH| 08 ಮೇ 2022 ಮೆಗ್ಗಾನ್ ಆಸ್ಪತ್ರೆಯಲ್ಲಿ ಎರಡೂವರೆ ತಿಂಗಳ ಮಗು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಹೊಸನಗರ ತಾಲೂಕಿನ ಹಿಂಡ್ಲುಮನೆಯ ಅರುಣ್ ಮತ್ತು ರೂಪಾ ದಂಪತಿ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಮಗುವನ್ನುಗುರುವಾರ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯಾಧಿಕಾರಿ ಸೂಚನೆ ಮೇರೆಗೆ ಅದೇ ದಿನ ಸಂಜೆ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಸಂಜೆಯಿಂದ ಆರೋಗ್ಯವಾಗಿದ್ದ ಮಗುವಿನ ಸ್ಥಿತಿ … Read more

ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರ್ ಟಯರ್ ಸ್ಪೋಟ

Tanker-Tyre-Blast-in-Hosanagara

SHIVAMOGGA LIVE NEWS | SHIMOGA DIESEL | 26 ಏಪ್ರಿಲ್ 2022 ಟಯರ್ ಸ್ಪೋಟಗೊಂಡು ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೊಪ್ಪ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಡಿಸೇಲ್ ತುಂಬಿಕೊಂಡು ಬಳ್ಳಾರಿ ಟ್ಯಾಂಕರ್ ಲಾರಿ ತೆರಳುತ್ತಿತ್ತು. ಅಂಗಡಿಗೆ ಅಪ್ಪಳಿಸಿದ ಚಕ್ರ ಮಾವಿನಕೊಪ್ಪ ಸರ್ಕಲ್ ಬಳಿ ಇಂದು ಬೆಳಗಿನ ಜಾವ ಟ್ಯಾಂಕರ್’ನ ಮುಂದಿನ ಟಯರ್ … Read more

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

Bus-in-Hosangara.

SHIVAMOGGA LIVE NEWS | HOSANAGARA | 23 ಏಪ್ರಿಲ್ 2022 ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದ 31 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊಸನಗರ ತಾಲೂಕು ಕರಕೆ ಹಕ್ಲು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬಸ್ಸು ಬೆಂಗಳೂರಿನಿಂದ ತೀರ್ಥಹಳ್ಳಿ ಮೂಲಕ ಭಟ್ಕಳಕ್ಕೆ ತೆರಳುತ್ತಿತ್ತು. ಬೆಳಗಿನ ಜಾವ 5 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಹೊಸನಗರ ಮತ್ತು ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಎಲ್ಲರು ಮನೆಗೆ … Read more

ಕುಮದ್ವತಿ ನದಿ ನೀರಿಗೆ ವಿಷ, ಮೀನುಗಳು ಸಾವು

Hosanagara taluk name Graphics

SHIVAMOGGA LIVE NEWS | 5 ಏಪ್ರಿಲ್ 2022 ರಿಪ್ಪನ್ ಪೇಟೆ ಸಮೀಪ ಕುಮದ್ವತಿ ನದಿ ನಿರಿಗೆ ವಿಷ ಬೆರೆಸಲಾಗಿದೆ. ಇದರಿಂದ ನದಿಯಲ್ಲಿನ ಮೀನುಗಳು ಸಾವನ್ನಪ್ಪಿದ್ದು, ನೀರಿನ ಮೇಲೆ ತೇಲುತ್ತಿವೆ. ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ದುಷ್ಕರ್ಮಿಗಳು ಕುಮದ್ವತಿ ನದಿಗೆ ವಿಷ ಬೆರೆಸಿದ್ದಾರೆ. ಮೀನುಗಳು ಸಾವನ್ನಪ್ಪಿವೆ. ಬೇಸಿಗೆ ಆಗಿರುವುದರಿಂದ ನದಿ ನೀರು ಹರಿಯದೆ ತಗ್ಗು, ಗುಂಡಿಗಳಲ್ಲಿ ನಿಂತಿದೆ. ಜಲಚರ ಪ್ರಾಣಿಗಳು ಹೊಂಡಗಳ ನೀರನ್ನು ಆಶ್ರಯಿಸಿ ಜೀವಿಸುತ್ತಿವೆ. ಆದರೆ ಕೆಲವು ಕಿಡಿಗೇಡಿಗಳು ನೀರಿಗೆ ವಿಷ ಬೆರೆಸಿರುವುದರಿಂದ ಮೀನುಗಳ … Read more

ಜಿಲ್ಲೆಯಾದ್ಯಂತ ಚಂದ್ರ ದರ್ಶನ, ಶಿವಮೊಗ್ಗ ಸಿಟಿ ಜನಕ್ಕೆ ಇವತ್ತೂ ನಿರಾಸೆ

yugadi-chandra-darshana

SHIVAMOGGA LIVE NEWS | 3 ಏಪ್ರಿಲ್ 2022 ಯುಗಾದಿ ಹಬ್ಬದ ಮರುದಿನ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚಂದ್ರ ದರ್ಶನವಾಗಿದೆ. ಜನ ಚಂದ್ರನನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಿದ್ದಾರೆ. ಇತ್ತ ಶಿವಮೊಗ್ಗ ನಗರದಲ್ಲಿ ಜನರ ಪಾಲಿಗೆ ಇವತ್ತೂ ನಿರಾಸೆಯಾಗಿದೆ. ಯುಗಾದಿ ಹಬ್ಬದ ಸಂಜೆ ಚಂದ್ರ ದರ್ಶನ ಮಾಡಿ, ಹಿರಿಯರ ಆಶೀರ್ವಾದ ಪಡೆಯಬೇಕು ಎಂಬ ಸಂಪ್ರದಾಯವಿದೆ. ಶುಭಕೃತ್ ಸಂವತ್ಸರದ ಮೊದಲ ದಿನ ಮಲೆನಾಡಿನಾದ್ಯಂತ ವರ್ಷಧಾರೆ ಆರಂಭವಾಗಿತ್ತು. ಹಾಗಾಗಿ ಚಂದ್ರ ದರ್ಶನವಾಗಿರಲಿಲ್ಲ. ಎರಡನೆ ದಿನ ಕಂಡ ಚಂದಿರ ಇವತ್ತು ಜಿಲ್ಲೆಯಾದ್ಯಂತ ಚಂದ್ರ … Read more

ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ವಿದ್ಯಾರ್ಥಿಯ ಕೈ ಕಚ್ಚಿದ ಉಪನ್ಯಾಸಕ

Lecturer-Bites-Student-Hand-in-Kodachadri

SHIVAMOGGA LIVE NEWS | 1 ಏಪ್ರಿಲ್ 2022 ಪರೀಕ್ಷೆಯಲ್ಲಿ ಕಾಪಿ ಹೊಡೆಯುತ್ತಿದ್ದ ಆರೋಪ ಸಂಬಂಧ ವಿದ್ಯಾರ್ಥಿ ಮತ್ತು ಕೊಠಡಿ ಮೇಲ್ವಿಚಾರಣೆ ನಡೆಸುತ್ತಿದ್ದ ಉಪನ್ಯಾಸಕನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ಉಪನ್ಯಾಸಕ ವಿದ್ಯಾರ್ಥಿಯ ಕೈ ಕಚ್ಚಿದ್ದು, ಪ್ರಕರಣ ಪೊಲೀಸ್ ಠಾಣೆವರೆಗೂ ತಲುಪಿ ರಾಜಿಯಾಗಿದೆ ಎಂದು ತಿಳಿದು ಬಂದಿದೆ. ಹೊಸನಗರ ತಾಲೂಕಿನ ಪ್ರಥಮ ದರ್ಜೆ ಕಾಲೇಜೊಂದರಲ್ಲಿ ಘಟನೆ ಸಂಭವಿಸಿದೆ. ಬಿ.ಎ ಪದವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಕಾಪಿ ಹೊಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಘಟನೆ ಸಂಭವಿಸಿದೆ. ಘಟನೆ … Read more

BREAKING NEWS | ಹೊಸನಗರದಲ್ಲಿ ಎಸಿಬಿ ದಾಳಿ, ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

SHIVAMOGGA LIVE NEWS | 30 ಮಾರ್ಚ್ 2022 ಲಂಚದ ಹಣ ಸ್ವೀಕರಿಸುತ್ತಿದ್ದ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು  ದಾಳಿ ನಡಸಿ, ಬಂಧಿಸಿದ್ದಾರೆ. ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮುರುಗೇಶ್ ಎಸಿಬಿ ಬಲಿಗೆ ಬಿದ್ದ ಅಧಿಕಾರಿ. ಒಂದು ಲಕ್ಷ ಲಂಚಕ್ಕೆ ಬೇಡಿಕೆ ಸ್ಥಳೀಯರೊಬ್ಬರಿಗೆ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗದ ನಿವೇಶನಗಳಿಗೆ ಪ್ಲಾನಿಂಗ್ ಅಪ್ರೂವಲ್ ಮತ್ತು ಮ್ಯೂಟೇಶನ್ … Read more

ನೀರಿನ ಬಾಟಲಿ ಕೇಳಿ ಬಂದವನು ಅಂಗಡಿ ಮಾಲಕಿಯ ಮಾಂಗಲ್ಯ ಸರ ಕದ್ದೊಯ್ದ

crime name image

SHIVAMOGGA LIVE NEWS | 28 ಮಾರ್ಚ್ 2022 ನೀರಿನ ಬಾಟಲಿ ಖರೀದಿಗೆ ಬಂದವರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. KTM ಬೈಕಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕೃತ್ಯ ಎಸಗಿದ್ದಾರೆ. ಅಂಗಡಿ ಮಾಲಕಿ ಜಯಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಘಟನೆ ಸಂಭವಿಸಿದೆ. ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜಯಮ್ಮ ಅವರ ಕಿರಾಣಿ ಅಂಗಡಿ ಇದೆ. ಭಾನುವಾರ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ನೀರಿನ ಬಾಟಲಿ ಕೇಳಿದ್ದಾನೆ. ಬಾಟಲಿ ಕೊಟ್ಟು ಜಯಮ್ಮ … Read more

ಅಡುಗೆ ಮನೆಯಲ್ಲಿ ಕಾಲಿಗೆ ಕುಟುಕಿದ ವಿಷ ಜಂತು, ಗೃಹಿಣಿ ಸಾವು

Woman-dies-of-Snake-Bite-in-Hosanagara-Ramachandra-pura

SHIVAMOGGA LIVE NEWS | 25 ಮಾರ್ಚ್ 2022 ಅಡುಗೆ ಮಾಡುವಾಗ ವಿಷ ಜಂತು ಕಡಿದು ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮುಂಡೇಶ್ವರಿ ಬೆಟ್ಟದ ಬಳಿ ಘಟನೆ ಸಂಭವಿಸಿದೆ. ಸೌಮ್ಯ (24) ಮೃತ ಮಹಿಳೆ. ಮಧ್ಯಾಹ್ನ ಅಡುಗೆ ಮಾಡುವಾಗ ವಿಷ ಜಂತುವೊಂದು ಕಾಲಿಗೆ ಕುಟುಕಿದೆ. ಕೆಲ ಹೊತ್ತಿನ ಬಳಿಕ ನೋವು ಕಾಣಿಸಿಕೊಂಡು, ಕಾಲು ಊದಿಕೊಂಡಿದೆ. ಕೂಡಲೆ ಸೌಮ್ಯ  ಅವರನ್ನು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ … Read more