ಗಾರೆ ಕೆಲಸ ಮಾಡುವಾಗ ಕಾರ್ಮಿಕನ ಕಾಲಿನ ಮೂಳೆ ಕಟ್‌

Vinobanagara-Police-Station.

ಶಿವಮೊಗ್ಗ: ಕಟ್ಟಡದ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದು ಕೆಳಗೆ ಬಿದ್ದು ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ (Laborer) ಕಾಲಿನ ಮೂಳೆ ಮುರಿದಿದೆ. ಸಂತೆ ಕಡೂರಿನ ಭಂಡಾರಿ ಕ್ಯಾಂಪ್‌ನ ನಿರ್ಮಾಣ ಹಂತದ ಮನೆಯಲ್ಲಿ ಘಟನೆ ಸಂಭವಿಸಿದೆ. ಶಿವಕುಮಾರ್‌ ಎಂಬ ಕಾರ್ಮಿಕ ಮನೆಯ ಗಾರೆ ಕೆಲಸದಲ್ಲಿ ತೊಡಗಿದ್ದಾಗ ಘಟನೆ ಸಂಭವಿಸಿದೆ. ಬೆಡ್‌ ರೂಂನಲ್ಲಿ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದಿದೆ. ಕೆಳಗೆ ಬಿದ್ದ ಶಿವಕುಮಾರ್‌ ಬಲಗಾಲಿನ ಪಾದದ ಬಳಿ ಮೂಳೆ ಮುರಿದಿದೆ. ಸುರಕ್ಷಿತ ಕ್ರಮಗಳನ್ನ ಕೈಗೊಳ್ಳದ್ದರಿಂದ ಘಟನೆ ಸಂಭವಿಸಿದೆ … Read more

BREAKING NEWS – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ, ಅಧಿಕಾರಿ ಮನೆಯಲ್ಲಿ ಪರಿಶೀಲನೆ

Lokayukta-Raid-in-shimoga-near-krushi-nagara

ಶಿವಮೊಗ್ಗ: ರಾಜ್ಯದ‌ ವಿವಿಧೆಡೆ 12 ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ (lokayukta raid) ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರ ಶಿವಮೊಗ್ಗದ ಮನೆ ಮೇಲು ದಾಳಿಯಾಗಿದೆ. ದಾವಣಗೆರೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಎಇಇ ಜಗದೀಶ್‌ ನಾಯ್ಕ್‌ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯ ಶಿವಬಸವ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿರುವ ಅವರ ಮನೆ ಮೇಲು ದಾಳಿಯಾಗಿದೆ. ದಾವಣಗೆರೆಯಿಂದ … Read more

ಶಾರ್ಟ್‌ ಸರ್ಕಿಟ್‌, ಧಗಧಗ ಹೊತ್ತು ಉರಿದ ಲಕ್ಷಾಂತರ ಮೌಲ್ಯದ ವಸ್ತುಗಳು

Short-circuit-at-Hosanagara

ಹೊಸನಗರ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ (Short Circuit) ಮನೆಯೊಂದು ಹೊತ್ತಿ ಉರಿದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಹೊಸನಗರ ತಾಲ್ಲೂಕು ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದ ಮನೆಯಲ್ಲಿ ಘಟನೆ ಸಂಭವಿಸಿದೆ. ಲಕ್ಷ್ಮಣ್ ಗೌಡ ಅವರ ಒಡೆತನದ ಮನೆಯಲ್ಲಿ ಶೇಷ ಪವನ್ ಮತ್ತು ಪ್ರತಿಭಾ ದಂಪತಿ ಬಾಡಿಗೆಗೆ ವಾಸವಾಗಿದ್ದರು. ದಂಪತಿ ಹೊರಗೆ ಹೋಗಿದ್ದಾಗ ಶಾರ್ಟ್ ಸರ್ಕಿಟ್ ಉಂಟಾಗಿ ಮನೆಗೆ ಬೆಂಕಿ ತಗುಲಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಜೀವ ವಿಮೆ ಬಗ್ಗೆ … Read more

ಶಿವಮೊಗ್ಗ ಪೊಲೀಸರ ದಿಢೀರ್‌ ಕಾರ್ಯಾಚರಣೆ, ರೌಡಿಗಳ ಮನೆಗಳ ಮೇಲೆ ದಾಳಿ

Police-raid-on-rowdy-houses-in-Shimoga-district

ಶಿವಮೊಗ್ಗ: ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವ ಪೊಲೀಸರು ರೌಡಿಗಳ ಮನೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್‌ ಕಾರ್ಯಾಚರಣೆ (raid) ನಡೆಸಿದ ಪೊಲೀಸರು, ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ರೌಡಿಗಳ ಮನೆಗಳಲ್ಲಿ ಮಾದಕ ವಸ್ತುಗಳು, ಮಾರಕಾಸ್ತ್ರಗಳಿಗಾಗಿ ಶೋಧ ನಡೆಸಲಾಯಿತು. ಅಲ್ಲದೆ ರೌಡಿಗಳು ಮಾಡುತ್ತಿರುವ ಕೆಲಸ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹಿಸಲಾಯಿತು. ಕಾನೂನು ಬಾಹಿರ ಚುಟವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಎಎಸ್‌ಪಿಗಳಾದ ಅನಿಲ್‌ … Read more

ಆಲ್ಕೊಳ ಬಳಿ ನಿರ್ಮಾಣ ಹಂತದ ಮನೆಯಲ್ಲಿ ಲಕ್ಷ ಲಕ್ಷದ ಪ್ಲಂಬಿಂಗ್‌ ವಸ್ತುಗಳು ನಾಪತ್ತೆ, ಹೇಗಾಯ್ತು ಘಟನೆ?

Crime-News-General-Image

ಶಿವಮೊಗ್ಗ : ನಿರ್ಮಾಣ ಹಂತದ ಮನೆಯಲ್ಲಿಟ್ಟಿದ್ದ ಪ್ಲಂಬಿಂಗ್‌ (Plumbing) ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಆಲ್ಕೊಳದ ಐಶ್ವರ್ಯ ಎನ್‌ಕ್ಲೇವ್‌ ಬಡಾವಣೆಯಲ್ಲಿ ಶ್ರೀಹರ್ಷ ಎಂಬುವವರು ನಿರ್ಮಿಸುತ್ತಿರುವ ಮನೆಯಲ್ಲಿ ಸುಮಾರು 2.50 ಲಕ್ಷ ಮೌಲ್ಯದ ಪ್ಲಂಬಿಂಗ್‌ ವಸ್ತುಗಳು ಕಳ್ಳತನವಾಗಿವೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ ಪ್ಲಂಬಿಂಗ್‌ (Plumbing) ಸಾಮಗ್ರಿಗಳನ್ನು ನಿರ್ಮಾಣ ಹಂತದ ಮನೆಯ ಬೆಡ್‌ ರೂಮ್‌ ಮತ್ತು ಹೆಡ್‌ ರೂಮ್‌ಗಳಲ್ಲಿ ಇರಿಸಿ ಬಾಗಿಲು ಹಾಕಲಾಗಿತ್ತು. ಮಾ.27ರಂದು ಬೆಳಗ್ಗೆ ಶ್ರೀಹರ್ಷ ಮನೆಗೆ ಬಂದಾಗ … Read more

ಗೋಪಿ ಸರ್ಕಲ್‌ನಲ್ಲಿ ದಿನಸಿ ಖರೀದಿಸಿ ಮನೆಗೆ ಮರಳಿದ ದಂಪತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Police-Jeep-at-Shimoga-General-Image

ಶಿವಮೊಗ್ಗ : ದಿನಸಿ ಖರೀದಿಸಿ ಹಿಂತಿರುಗುವಷ್ಟರಲ್ಲಿ ಮನೆಯಲ್ಲಿ (House) ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಸವಳಂಗ ರಸ್ತೆಯ ಜ್ಯೋತಿನಗರದ ಪ್ರಕಾಶ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಪ್ರಕಾಶ್‌ ಅವರು ತಮ್ಮ ಪತ್ನಿಯೊಂದಿಗೆ ಗೋಪಿ ಸರ್ಕಲ್‌ನಲ್ಲಿ ದಿನಸಿ ಖರೀದಿಗೆ ತೆರಳಿದ್ದರು. ಮನೆಗೆ (House) ಹಿಂತಿರುಗಿ ಬೆಡ್‌ ರೂಂಗೆ ಹೋದಾಗ ಚಿನ್ನಾಭರಣದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬೀರುವಿನಲ್ಲಿಟ್ಟಿದ್ದ 9 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 51 ಸಾವಿರ ರೂ. ನಗದು ನಾಪತ್ತೆಯಾಗಿವೆ ಎಂದು … Read more

ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ ಖದೀಮರು

Crime-News-General-Image

ಶಿಕಾರಿಪುರ : ಸಿಟಿಯ ಚನ್ನಕೇಶವ ನಗರದಲ್ಲಿ ಸರಣಿ ಮನೆಗಳ್ಳತನವಾಗಿದೆ (theft). ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ನಗದು ಕಳವುವಾಗಿದೆ ಎಂದು ಆರೋಸಪಿಸಲಾಗಿದೆ. ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಚನ್ನಕೇಶವ ನಗರದ 15ನೇ ಅಡ್ಡರಸ್ತೆ ನಿವಾಸಿ ನಂದ ಬಣಕಾರ್ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಕಳ್ಳರು ಅವರ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಸೇರಿದಂತೆ ಅಂದಾಜು 14 ಲಕ್ಷ ರೂ. ಮೌಲ್ಯದ ಒಡವೆ ಹಾಗೂ 50 ಸಾವಿರ ರೂ. ನಗದು ಕಳವು ಮಾಡಿದ್ದಾರೆ.  ಇದೇ ಕೇರಿಯಲ್ಲಿರುವ ಮೆಸ್ಕಾಂ … Read more

ದುಬೈನಿಂದ ಶಿವಮೊಗ್ಗಕ್ಕೆ ಮರಳಿದ ಕುಟುಂಬಕ್ಕೆ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

ಶಿವಮೊಗ್ಗ : ಕುಟುಂಬದವರು ದುಬೈ (Dubai) ಪ್ರವಾಸಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ. ದುಬೈ ಪ್ರವಾಸದಿಂದ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಟ್ಯಾಂಕ್‌ ಮೊಹಲ್ಲಾದ ಯುಸುಫ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಬೀರುವಿನಲ್ಲಿದ್ದ 1.10 ಲಕ್ಷ ರು. ಮೌಲ್ಯದ ಚಿನ್ನಾಭರಣ, 28 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳು, ಆರು ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ದುಬೈ ಪ್ರವಾಸ ಮುಗಿಸಿ ಯುಸುಫ್‌ ಅವರ ಕುಟುಂಬ ಶಿವಮೊಗ್ಗಕ್ಕೆ ಹಿಂತಿರುಗುತ್ತಿತ್ತು. ಆದ್ದರಿಂದ … Read more

ಎಲ್ಲರು ಊರಿಗೆ ಹೋದಾಗ ತೆರೆದಿತ್ತು ಮನೆ ಬಾಗಿಲು, ಪರಿಶೀಲಿಸಲು ಹೋದ ಚಿಕ್ಕಪ್ಪನಿಗೆ ಕಾದಿತ್ತು ಶಾಕ್

Crime-News-General-Image

SHIVAMOGGA LIVE NEWS, 16 JANUARY 2025 ಶಿವಮೊಗ್ಗ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ (Door) ಬೀಗ ಮುರಿದು ಬೀರುವಿನಲ್ಲಿಟ್ಟಿದ್ದ ನಗದು ಮತ್ತು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ನಗರದ ಪಂಚವಟಿ ಕಾಲೋನಿಯ ಅರುಣ್‌ ಕುಮಾರ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಅರುಣ್‌ ಕುಮಾರ್‌ ಪತ್ನಿ ಜೊತೆಗೆ ಊರಿಗೆ ತೆರಳಿದ್ದಾಗ ಕಳ್ಳತನವಾಗಿದೆ. ಅರುಣ್‌ ಕುಮಾರ್‌ ಅವರ ಚಿಕ್ಕಪ್ಪ ಕೆಲಸ ಮುಗಿಸಿ ತಮ್ಮ ಮನೆಗೆ ತರಳುವಾಗ ಅರುಣ್‌ ಕುಮಾರ್‌ ಅವರ ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ … Read more

ಮನೆ ಬಾಗಿಲು ತೆಗೆದಿತ್ತು, ಪತ್ನಿ ಇರಬೇಕೆಂದು ಒಳ ಬಂದ ವ್ಯಕ್ತಿಗೆ ಆಘಾತ ಕಾದಿತ್ತು, ಆಗಿದ್ದೇನು?

crime name image

SHIVAMOGGA LIVE NEWS | 8 JANUARY 2024 ತೀರ್ಥಹಳ್ಳಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ (Gold) ದೋಚಿ ಪರಾರಿಯಾಗಿದ್ದಾರೆ. ತೀರ್ಥಹಳ್ಳಿಯ ನೆಲ್ಲಿಕಟ್ಟೆಯ ರಾಮ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ರಾಮ ಅವರು ದೇವರ ಪೂಜೆಗೆ ಬೇರೆ ಊರಿಗೆ ತೆರಳಿದ್ದರು. ಮನೆ ಮರಳಿದಾಗ ಬಾಗಿಲು ತೆರೆದಿತ್ತು. ತಮ್ಮ ಪತ್ನಿ ಒಳಗಿರಬೇಕು ಎಂದು ಭಾವಿಸಿ ಒಳಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬೀರುವಿನಲ್ಲಿದ್ದ ಚಿನ್ನ, ಬೆಳ್ಳಿ, ನಗದು ಸೇರಿ ಒಟ್ಟು 1.40 ಲಕ್ಷ … Read more