ಜೋಗದಲ್ಲಿ ಕಳ್ಳರ ಹಾವಳಿ, ಶೀಘ್ರ ಬಂಧನಕ್ಕೆ ಒತ್ತಾಯ

JOG SAGARA NEWS 1

ಜೋಗ್‌ಫಾಲ್ಸ್: ಕೆಪಿಸಿ ಕಾಲೊನಿ, ಬಜಾರ್, ಜಲಪಾತ (Jog Falls) ಪ್ರದೇಶಗಳಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು ಈಗಾಗಲೇ ಮೂರು ಮನೆ ಹಾಗೂ ಗೂಡಂಗಡಿಗಳಿಗೆ ನುಗ್ಗಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಬೀಗ ಹಾಕಿದ ಮನೆಗಳನ್ನೇ ಗುರುತಿಸಿ ಕಳವು ಮಾಡಲಾಗಿದೆ. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಆನಂದಪುರ ಠಾಣೆ ಪೊಲೀಸರ ಕಾರ್ಯಾಚರಣೆ, ಗೋವು ಸಾಗಣೆ ಮಾಡುತ್ತಿದ್ದ ಶಿಕಾರಿಪುರದ ಇಬ್ಬರ ಬಂಧನ

ಲಿಂಗನಮಕ್ಕಿ ಡ್ಯಾಮ್‌ ಎಲ್ಲ ಗೇಟ್‌ ಓಪನ್‌, ಬದಲಾಯ್ತು ಜೋಗದ ಲುಕ್‌, ಎಷ್ಟು ನೀರು ಹೊರ ಬಿಡಲಾಗ್ತಿದೆ?

linganamakki-dam-gates-opened-and-Jog-falls.

ಸಾಗರ: ಲಿಂಗನಮಕ್ಕಿ ಜಲಾಶಯದ (Linganamakki Dam) ಎಲ್ಲ ಗೇಟುಗಳನ್ನು ಪುನಃ ಮೇಲೆತ್ತಲಾಗಿದೆ. ಇದರಿಂದ ಶರಾವತಿ ನದಿಯಲ್ಲಿ ಪುನಃ ನೀರಿನ ಹರಿವು ಹೆಚ್ಚಳವಾಗಿದೆ. ಜೋಗ ಜಲಪಾತವು (Jog Falls) ಮೈ ದುಂಬಿ ಹರಿಯುತ್ತಿದೆ. ಇವತ್ತು ಒಳ, ಹೊರ ಹರಿವು ಎಷ್ಟಿದೆ? ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ನಿರಂತರ ಮಳೆಯಾಗುತ್ತಿದೆ. ಅದ್ದರಿಂದ ಒಳ ಹರಿವು ಹೆಚ್ಚಳವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು 47,232 ಕ್ಯೂಸೆಕ್‌ ಒಳ ಹರಿವು ಇದೆ. ಈಗಾಗಲೆ ಜಲಾಶಯ ಭರ್ತಿ ಆಗಿರುವುದರಿಂದ ಎಲ್ಲ ರೇಡಿಯಲ್‌ ಗೇಟುಗಳನ್ನು ಮೇಲೆತ್ತಿ … Read more

ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಜಲಪಾತದ ಮುಂದೆ ಸೆಲ್ಫಿ, ಫೋಟೊಗೆ ಪೋಸ್‌

Tourist-at-Jog-falls-in-shimoga

ಸಾಗರ: ವೀಕೆಂಡ್‌ ಹಿನ್ನೆಲೆ ಜೋಗ ಜಲಪಾತಕ್ಕೆ ಇವತ್ತು ದೊಡ್ಡ ಸಂಖ್ಯೆ ಪ್ರವಾಸಿಗರು (Tourist) ಆಗಮಿಸಿದ್ದರು. ಜಲಪಾತದ ವೈಭವ ಕಣ್ತುಂಬಿಕೊಂಡು ಖುಷಿ ಪಟ್ಟರು. ಲಿಂಗನಮಕ್ಕಿ ಜಲಾಶಯದಿಂದ ಕಳೆದ ವಾರ ನೀರು ಹರಿಸಲಾಗಿತ್ತು. ಹಾಗಾಗಿ ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಭೋರ್ಗರೆಯುತ್ತಿದ್ದವು. ಇದರ ವಿಡಿಯೋಗಳು ವೈರಲ್‌ ಆಗಿದ್ದವು. ಇದರ ಬೆನ್ನಿಗೆ ಪ್ರವಾಸಿಗರು ಹೆಚ್ಚಳವಾಗಿದ್ದಾರೆ. ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌ ಜೋಗ ಜಲಪಾತಕ್ಕೆ ಇಂದು ಭಾರಿ ಸಂಖ್ಯೆಯ … Read more

ಮೈದುಂಬಿದ ಜೋಗ ಜಲಪಾತ, ವೈಭವ ಕಣ್ತುಂಬಿಕೊಳ್ಳಲು ವಾರದ ದಿನವು ಪ್ರವಾಸಿಗರ ದಂಡು

tourists-visit-jog-falls.

ಸಾಗರ: ಮಲೆನಾಡು ಭಾಗದಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಜೋಗ ಜಲಪಾತ (Jog Falls) ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಎರಡು ದಿನ ರಜೆ ಇದ್ದಿದ್ದರಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸಿದ್ದರು. ಸೋಮವಾರವು ಟೂರಿಸ್ಟ್‌ಗಳ ಜಲಪಾತದ ವೈಭವ ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಮಳೆ ಶುರುವಾಗುತ್ತಿದ್ದಂತೆ ಜೋಗ ಜಲಪಾತಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಜಲಪಾತ ವೀಕ್ಷಿಸಲು ಬರುತ್ತಿದ್ದಾರೆ. ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಮೈದುಂಬಿಕೊಂಡಿವೆ. … Read more

ಜೋಗ ಜಲಪಾತಕ್ಕೆ ಇವತ್ತು ಮಿನಿಸ್ಟರ್‌ ಭೇಟಿ, ಅಧಿಕಾರಿಗಳ ಜೊತೆಗೆ ಮಹತ್ವದ ಮೀಟಿಂಗ್‌

Minister-Madhu-Bangarappa-Press-meet-about-budget

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವತ್ತು ಜೋಗ ಜಲಪಾತಕ್ಕೆ (Jog Falls) ಭೇಟಿ ನೀಡುತ್ತಿದ್ದಾರೆ. ಕಾಮಗಾರಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಇವತ್ತು ಬೆಳಗ್ಗೆ 11 ಗಂಟೆಗೆ ಸಚಿವ ಮಧು ಬಂಗಾರಪ್ಪ ಸಾಗರಕ್ಕೆ ಭೇಟಿ ನೀಡಲಿದ್ದಾರೆ. ತಾಲೂಕು ಆಡಳಿತ ಸೌಧ ಕಟ್ಟಡದ ಮೂರನೇ ಮಹಡಿಯಲ್ಲಿ ಶೀಟ್‌ ಛಾವಣಿ, ಮೂಲ ಸೌಕರ್ಯಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಜೋಗ ಜಲಪಾತಕ್ಕೆ ಭೇಟಿ ನೀಡಲಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ … Read more

ಜೋಗ ಜಲಪಾತ, ಮೊದಲ ದಿನವೇ ಜಲಾಧಾರೆ ಕಣ್ತುಂಬಿಕೊಂಡ ನೂರಾರು ಜನ

jog-falls-reopened

ಸಾಗರ: ಜೋಗ ನಿರ್ವಹಣೆ ಪ್ರಾಧಿಕಾರವು ಜೋಗ ಜಲಪಾತ (Jog Falls) ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಮೊದಲ ದಿನವೇ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಲಪಾತ ಕಣ್ತುಂಬಿಕೊಂಡರು. ಇದನ್ನೂ ಓದಿ » ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್ ಜೋಗ ಜಲಪಾತದ ಮುಖ್ಯ ದ್ವಾರ ನಿರ್ಮಾಣ ಕಾಮಗಾರಿ ಹಿನ್ನೆಲೆ ಜಲಪಾತ (Jog Falls) ವೀಕ್ಷಣೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಾಲ್ಕು ತಿಂಗಳ ಬಳಿಕ ಜಲಪಾತ ವೀಕ್ಷಣೆಗೆ ನಿರ್ಬಂಧ ತೆರವುಗೊಳಿಸಲಾಗಿದೆ. ಮೇ 1ರಿಂದ ಜೋಗ … Read more

ಜೋಗ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಸಾರ್ವಜನಿಕ ಪ್ರವೇಶಕ್ಕೆ ಅವಕಾಶ, ಯಾವಾಗ ಶುರು?

JOG FALLS GENERAL IMAGE

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತದ (Jog Falls) ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಕಾರಣ ಏ.30ರವರೆಗೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಮೇ 1 ರಿಂದ ಸಾರ್ವಜನಿಕರ ಹಾಗೂ ಪ್ರವಾಸಿಗರಿಗೆ ಜೋಗ ಜಲಪಾತದ ವೀಕ್ಷಣೆಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗ ಸಿಟಿಯಲ್ಲಿ ಮಂಜುನಾಥ ರಾವ್‌ ಅಂತಿಮ … Read more

ಜೋಗ ಜಲಪಾತ, ಪ್ರವಾಸಿಗರಿಗೆ ಮತ್ತೆ ನಿಷೇಧ, ಎಷ್ಟು ದಿನ? ಕಾರಣವೇನು?

JOG FALLS GENERAL IMAGE

ಶಿವಮೊಗ್ಗ : ಕಾಲಮಿತಿಯೊಳಗೆ ಮುಖ್ಯ ದ್ವಾರದ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಜೋಗ ಜಲಪಾತ (Jog Falls) ವೀಕ್ಷಣೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ನಿರ್ಬಂಧವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಜೋಗ ಜಲಪಾತದಲ್ಲಿ (Jog Falls) ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಮುಖ್ಯದ್ವಾರದ ಕಾಮಗಾರಿ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಜ.1 ರಿಂದ ಮಾ.15ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಕಾಲಮಿತಿಯೊಳಗೆ ಮುಖ್ಯದ್ವಾರದ … Read more

ಮೂರು ತಿಂಗಳು ಜೋಗ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ, ಕಾರಣವೇನು?

JOG FALLS GENERAL IMAGE

SHIVAMOGGA LIVE NEWS, 16 DECEMBER 2024 ಶಿವಮೊಗ್ಗ : ಜೋಗ ಜಲಪಾತದಲ್ಲಿ (Jog Falls) ವಿವಿಧ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೂರು ತಿಂಗಳು ಜಲಪಾತಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದೇಶಿಸಿದ್ದಾರೆ. ಸಾಗರ ತಾಲ್ಲೂಕಿನ ಜೋಗ ಜಲಪಾತದ ಮುಖ್ಯದ್ವಾರ ಮತ್ತು ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಜನವರಿ 1 ರಿಂದ ಮಾರ್ಚ್ 15ರ ವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ನಿರ್ಭಂದಿಸಲಾಗಿದೆ. … Read more

BREAKING NEWS – ಖಾಸಗಿ ಬಸ್‌ ಪಲ್ಟಿ, ಮಂಗಳೂರಿನಿಂದ ಬಂದಿದ್ದವರಿಗೆ ಗಂಭೀರ ಗಾಯ

Private-Bus-incident-at-Muppane-near-Kargal.

SHIVAMOGGA LIVE NEWS, 15 DECEMBER 2024 ಸಾಗರ : ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್‌ (Private Bus) ಅಪಘಾತಕ್ಕೀಡಾಗಿ ಹಲವರಿಗೆ ಗಂಭೀರ ಗಾಯವಾಗಿದೆ. ಸಾಗರ ತಾಲೂಕು ಅರಳಗೋಡಿನ ಮುಪ್ಪಾನೆ ಸಮೀಪ ಘಟನೆ ಸಂಭವಿಸಿದೆ. ಮಂಗಳೂರಿನಿಂದ ಜೋಗಕ್ಕೆ ಪ್ರವಾಸ ಬಂದಾಗ ಅಪಘಾತ ಸಂಭವಿಸಿದೆ. ಮುಪ್ಪಾನೆ ಸಮೀಪದ ಭಟ್ಕಳ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್‌, ಪಲ್ಟಿಯಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರ್ಗಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚಿನ ಮಾಹಿತಿ ಇನ್ನಷ್ಟೆ … Read more