ಶಿವಮೊಗ್ಗದ ಈ ಹೆದ್ದಾರಿಯಲ್ಲಿ ಕಣ್ಣು ಮುಚ್ಚಿಕೊಂಡೆ ಬೈಕ್‌ ಓಡಿಸಬೇಕು, ಎಲ್ಲಿ? ಏನು ಕಾರಣ?

Pot-holes-filled-with-cement-and-jelly-stones-at-vidyanagara-in-shimoga

ಶಿವಮೊಗ್ಗ: ಸಿಮೆಂಟ್‌ ಮತ್ತು ಜೆಲ್ಲಿ ಮಿಕ್ಸ್‌ ಮಾಡಿ ರಸ್ತೆ ಗುಂಡಿ (Pot Holes) ಮುಚ್ಚಿದ್ದು ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ತಲೆನೋವು ತಂದಿದೆ. ಗುಂಡಿ ಇದ್ದಾಗಲೇ ರಸ್ತೆಯಲ್ಲಿ ಸಂಚಾರ ಚೆನ್ನಾಗಿತ್ತು ಎಂಬಂತಾಗಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಎದುರು ಬಿ.ಹೆಚ್‌.ರಸ್ತೆಯಲ್ಲಿನ ದುಸ್ಥಿತಿ. ಈ ರಸ್ತೆಯ ಉದ್ದಕ್ಕು ನಾನಾ ಗಾತ್ರದ ಆಳವಾದ ಗುಂಡಿಗಳಾಗಿದ್ದವು. ಇವುಗಳನ್ನು ಶಾಶ್ವತವಾಗಿ ಬಂದ್‌ ಮಾಡುವ ಬದಲು ಸಿಮೆಂಟ್‌ ಮತ್ತು ಜೆಲ್ಲಿ ಮಿಕ್ಸ್‌ ಮಾಡಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದು ವಾಹನ ಸವಾರರ ಪಾಲಿಗೆ ಸಮಸ್ಯೆ ಹೆಚ್ಚಳ ಮಾಡಿದೆ. ಕಣ್‌ … Read more

ಆಗುಂಬೆ ಘಾಟಿ, ಕಾರ್ಯಾಚರಣೆ ಪೂರ್ಣ, ಈಗ ವಾಹನಗಳು ಓಡಾಡಬಹುದಾ?

Agumbe-ghat-general-image

ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ (Agumbe Ghat) ವಾಹನ ಸಂಚಾರ ಪುನಾರಂಭವಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಮತ್ತು ಧರೆ ಕುಸಿತದಿಂದ ಬಿದ್ದಿದ್ದ ಮಣ್ಣನ್ನು ತೆರವು ಮಾಡಲಾಗಿದೆ. ಶುಕ್ರವಾರ ಸಂಜೆ ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ಧರೆ ಕುಸಿತ ಮತ್ತು ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಇದರಿಂದಾಗಿ ವಾಹನ ಸಂಚಾರ ಸಂಪೂರ್‌ ಬಂದ್‌ ಆಗಿತ್ತು. ಕತ್ತಲಾದ್ದರಿಂದ ತೆರವು ಕಾರ್ಯಾಚರಣೆಗೆ ಅಡಚಣೆಯಾಗತ್ತು. ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ ಮರ ಮತ್ತು ಮಣ್ಣು ತೆರವು ಮಾಡಲಾಗಿದೆ. ಮತ್ತೊಂದು ಮರ ಜಾರಿ ಬಂದಿತ್ತು … Read more

ಜಾತಿ ಸಮೀಕ್ಷೆ, ಹಿಂದೂ ಧರ್ಮಿಯರಿಗೆ ಶಾಸಕ ಚನ್ನಬಸಪ್ಪ ಸಲಹೆ, ಏನದು? ಇಲ್ಲಿದೆ ಸುದ್ದಿಗೋಷ್ಠಿಯ ಹೈಲೈಟ್ಸ್‌

SN-Channabasappa-Press-meet-in-Shimoga

ಶಿವಮೊಗ್ಗ: ಜಾತಿ ಸಮೀಕ್ಷೆಯಲ್ಲಿ (Caste Survey) ಹಿಂದೂ ಧರ್ಮಿಯರು ಪ್ರತ್ಯಕ್ಷವಾಗಿ ಪಾಲ್ಗೊಳ್ಳಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ. ಜಾತಿ ಕಾಲಂನಲ್ಲಿ ಆಯಾಯ ಜಾತಿಯ, ಉಪ ಜಾತಿ ಕಾಲಂನಲ್ಲಿ ಉಪ ಜಾತಿಯ ಹೆಸರನ್ನು ಬರೆಯಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ವೀರಶೈವ, ಲಿಂಗಾಯತ ಸೇರಿ ಎಲ್ಲ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಯಿಸಬೇಕು. ಇದರಲ್ಲಿ ನಿಜವಾದ ಭಾರತೀಯತೆ ಇದೆ. ಇದು ನಂಬಿಕೆಯ ಪ್ರಶ್ನೆಯಾಗಿದೆ ಎಂದರು. ಎಂಎಲ್‌ಎ ಸುದ್ದಿಗೋಷ್ಠಿಯ … Read more

ಶಿವಮೊಗ್ಗ ದಸರಾ, ಯಾವೆಲ್ಲ ಕಾರ್ಯಕ್ರಮ ಯಾವಾಗ ಉದ್ಘಾಟನೆ ಆಗಲಿದೆ? ಇಲ್ಲಿದೆ ಲಿಸ್ಟ್‌

021024 shimoga dasara news general image

ಶಿವಮೊಗ್ಗ ದಸರಾ: ನಾಡಹಬ್ಬ ದಸರಾದಲ್ಲಿ (DASARA) ಈ ಬಾರಿ ವಿವಿಧ ವೈದ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮ ಉದ್ಘಾಟನೆ ಆಗಲಿದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌. » 22 ಸೆಪ್ಟೆಂಬರ್‌ 2025 ಬೆಳಗ್ಗೆ 9ಕ್ಕೆ – ಕುವೆಂಪು ರಂಗಮಂದಿರ ಮಕ್ಕಳ ದಸರಾ, ಕ್ರೀಡಾಕೂಟ ರಾಷ್ಟ್ರೀಯ ಸ್ಕೇಟಿಂಗ್‌ ವಿಜೇತರಾದ ಆದ್ವಿಕಾ ನಾಯರ್‌, ಹಿತ ಪ್ರವೀಣ್‌ ಅವರಿಂದ ಚಾಲನೆ ಸಂಜೆ 6ಕ್ಕೆ – ಕುವೆಂಪು ರಂಗಮಂದಿರ ಯುವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಸಚಿವ ಮಧು ಬಂಗಾರಪ್ಪ ಅವರಿಂದ … Read more

ಶಿವಮೊಗ್ಗ ದಸರಾ ಉದ್ಘಾಟನೆಗೆ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್, ಯಾವಾಗ ಉದ್ಘಾಟನೆ?

190925 Shimoga Dasara to be inaugurated by retd lieutenant general bs baggavalli somashekar raju

ಶಿವಮೊಗ್ಗ ದಸರಾ: ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಬಗ್ಗವಳ್ಳಿ ಸೋಮಶೇಖರ್‌ ರಾಜು ಈ ಬಾರಿ ಶಿವಮೊಗ್ಗ ದಸರಾ (Shimoga Dasara) ಉದ್ಘಾಟಿಸಲಿದ್ದಾರೆ. ಸೆ.22ರಂದು ಬೆಳಗ್ಗೆ 11 ಗಂಟೆಗೆ ಕೋಟೆ ‍ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ  ನಾಡಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ  ತಿಳಿಸಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಮಧು ಬಂಗಾರಪ್ಪ, ಬಿ.ಎಸ್.ಸುರೇಶ್‌, ರಹೀಂ ಖಾನ್‌, ಶಿವರಾಜ ಎಸ್‌.ತಂಗಡಗಿ ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ. ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ, ಬೈಕ್‌ಗೆ ಡಿಕ್ಕಿ ಹೊಡೆದು ಗೂಡ್ಸ್‌ ವಾಹನ ಎಸ್ಕೇಪ್‌, ಚೇಸ್‌ ಮಾಡಿ ವಶಕ್ಕೆ ಪಡೆದ ಪೊಲೀಸ್‌

Bike-and-Goods-Vehicle-incident-at-Shimoga-Thirthahalli-Road

ತೀರ್ಥಹಳ್ಳಿ: ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ (Hit and Run) ಗೂಡ್ಸ್‌ ವಾಹನವನ್ನು ಪೊಲೀಸರು ಚೇಸ್‌ ಮಾಡಿ ಹಿಡಿದಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯ 15ನೇ ಮೈಲಿಗಲ್ಲಿನ ಬಳಿ ಅಪಘಾತ ಸಂಭವಿಸಿದೆ. ಬೇಗುವಳ್ಳಿ ಸಮೀಪ ಗೂಡ್ಸ್‌ ವಾಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೇಗಾಯ್ತು ಘಟನೆ? ವಾಹನವೊಂದನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಗೂಡ್ಸ್‌ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರನಿಗೆ ಗಾಯವಾಗಿದ್ದು, ಸ್ಥಳೀಯರು ಕೂಡಲೆ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದ್ದರು. ಅಪಘಾತದ ಬಳಿಕ ಗೂಡ್ಸ್‌ … Read more

ಒಂದೇ ವಾರದಲ್ಲಿ ಎರಡು ಹಸುಗಳನ್ನು ಕೊಂದ ಚಿರತೆ, ಬೋನ್‌ ಇರಿಸಿದ ಅರಣ್ಯ ಇಲಾಖೆ, ಎಲ್ಲಿ?

forest-department-officers-visit-kaidotlu-village-leapord.

ಶಿವಮೊಗ್ಗ: ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಚಿರತೆಯೊಂದು (Leopard) ದಾಳಿ ನಡೆಸಿದೆ. ಶಿವಮೊಗ್ಗ ತಾಲೂಕು ಉಂಬ್ಳಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈದೊಟ್ಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬಿಷ್ಟೇಗೌಡ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಹಸು ಮೃತಪಟ್ಟಿದೆ. ಕಳೆದ ವಾರ ಸಂಪತ್‌ ಎಂಬುವವರಿಗೆ ಸೇರಿದ ಹಸುವಿನ ಮೇಲು ಚಿರತೆ ದಾಳಿ ಮಾಡಿ ಕೊಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಸೆರೆಗೆ ಬೋನ್‌ ಇರಿಸಿದ್ದಾರೆ. ಇದನ್ನೂ ಓದಿ … Read more

ಶಿವಮೊಗ್ಗ ಸಿಟಿ, ವಿವಿಧ ಗ್ರಾಮಗಳಲ್ಲಿ ಸೆ.22ರಂದು ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್‌

power cut mescom ELECTRICITY

ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಸೆ.22 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಕೆ.ಆರ್. ಕುಡಿಯುವ ನೀರಿನ ಸ್ಥಾವರ, ಮಂಡ್ಲಿ ಕೈಗಾರಿಕಾ ಪ್ರದೇಶ, ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಗಾಂಧಿಬಜಾರ್, ಬುದ್ಧನಗರ, ಆರ್.ಎಂ.ಎಲ್.ನಗರ, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ, ನ್ಯೂಮಂಡ್ಲಿ, ಮಂಜುನಾಥ … Read more

ಮರದ ಎಲೆ ವಿಚಾರಕ್ಕೆ ಕೈ ಕೈ ಮಿಲಾಯಿಸಿದ ಅಕ್ಕಪಕ್ಕದ ಮನೆಯವರು, ಏನಿದು ಘಟನೆ?

New-Town-Police-Station-Bhadravathi

ಭದ್ರಾವತಿ: ಮರದ ಎಲೆ ವಿಚಾರಕ್ಕೆ ನೆರಹೊರೆ (neighbour) ಮನೆಯವರು ಕೈ ಕೈ ಮಿಲಾಯಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಿಸಿದ್ದಾರೆ. ಎಲೆ ವಿಚಾರಕ್ಕೇಕೆ ಕಿತ್ತಾಟ? ಭದ್ರಾವತಿ ಬಿ.ಹೆಚ್‌.ರಸ್ತೆಯ ಮೀನುಗಾರರ ಬೀದಿಯಲ್ಲಿ ಘಟನೆ ಸಂಭವಿಸಿದೆ. ಮನೆಯೊಂದರ ಮುಂದೆ ಇದ್ದ ಮರದ ಎಲೆ ಪಕ್ಕದ ಮನೆ ಮುಂದೆ ಬಿದ್ದು ಕಸವಾಗುತ್ತಿದೆ ಎಂದು ಆರೋಪಿಸಿ ಎರಡೂ ಮನೆಯವರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ … Read more

ಅಡಿಕೆ ಧಾರಣೆ | 19 ಸೆಪ್ಟೆಂಬರ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಸಾಗರ, ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Areca Price). ಶಿವಮೊಗ್ಗ ಮಾರುಕಟ್ಟೆ ಗೊರಬಲು 21000 37669 ನ್ಯೂ ವೆರೈಟಿ 55589 57399 ಬೆಟ್ಟೆ 47599 65899 ರಾಶಿ 44669 60689 ಸರಕು 56109 84440 ಸಾಗರ ಮಾರುಕಟ್ಟೆ ಇತರೆ 27900 27900 ಶಿಕಾರಿಪುರ ಮಾರುಕಟ್ಟೆ ಚಾಲಿ 5500 5500 ‌ಇದನ್ನೂ ಓದಿ » ಶಿವಮೊಗ್ಗ ಪಾಲಿಕೆಯಿಂದ ರಂಗೋಲಿ ಅಭಿಯಾನ, ಶಹಬ್ಬಾಸ್‌ ಅಂತಿದ್ದಾರೆ ಜನ, ಏನಿದು ಅಭಿಯಾನ? Areca Price #news, #arecanut, #areca … Read more