ಶಿವಮೊಗ್ಗದಲ್ಲಿ ಮೂರು ದಿನ ನಾಟಕೋತ್ಸವ, ಯಾವೆಲ್ಲ ನಾಟಕ ಪ್ರದರ್ಶನವಾಗಲಿದೆ?

Kuvempu-Natakotsava-in-Shimoga-by-hongirana

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹೊಂಗಿರಣ ಸಂಸ್ಥೆ ವತಿಯಿಂದ ಕುವೆಂಪು ನಾಟಕೋತ್ಸವ (Drama Festival) ಆಯೋಜಿಸಲಾಗಿದೆ. ಡಿಸೆಂಬರ್‌ 27ರಿಂದ ಮೂರು ದಿನ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಾಟಕಗಳು ಆರಂಭವಾಗಲಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಂಗಿರಣ ಸಂಸ್ಥೆಯ ಸಾಸ್ವೆಹಳ್ಳಿ ಸತೀಶ್‌, ಹೊಂಗಿರಣೋತ್ಸವದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿದೆ. ಕುವೆಂಪು ಅವರ ಶಿಷ್ಯ, ವಿಶ್ರಾಂತ ಪ್ರಚಾರ್ಯ ಪ್ರೊ. ಪಂಚಾಕ್ಷರಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ … Read more

ಶಂಕರಘಟ್ಟದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ, ಕುವೆಂಪು ವಿವಿಯಲ್ಲಿ ತರಗತಿ ಬಹಿಷ್ಕಾರ, ಮೆರವಣಿಗೆ

Kuvempu-University-Students-Protest

SHIVAMOGGA LIVE NEWS | 11 JULY 2024 SHANKARAGHATTA : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು (Students) ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಆಡಳಿತ ಭವನದ ಮುಂಭಾಗ ಧರಣಿ ನಡೆಸಿದರು. ಆತ್ಮಹತ್ಯೆ ಯತ್ನದ ಬೆನ್ನಿಗೆ ಹೋರಾಟ ಕುವೆಂಪು ವಿವಿಯಲ್ಲಿನ ಹಗರಣಗಳಿಂದ ಮನನೊಂದು ವಿದ್ಯಾರ್ಥಿಯೊಬ್ಬ (ಕುಟುಂಬದವರ ಮನವಿ ಮೇರಗೆ ಹೆಸರು, ಊರು ಪ್ರಕಟಿಸುತ್ತಿಲ್ಲ) ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದ. ಇದರ … Read more

ಕುವೆಂಪು ವಿವಿ ಪ್ರಾಧ್ಯಾಪಕ ಭಾರತದ ಟಾಪ್‌ 3ನೇ ಉತ್ತಮ ಸಂಶೋಧಕ

Top-Scientist-Kuvempu-University-Prof-Girish

SHIVAMOGGA LIVE NEWS | 2 MAY 2024 EDUCATION NEWS : ರಿಸರ್ಚ್ ಡಾಟ್ ಕಾಂ ವೆಬ್ ತಾಣ ಬಿಡುಗಡೆ ಮಾಡಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಜೆ.ಗಿರೀಶ್ ಭಾರತದಲ್ಲಿ 3ನೇ ಸ್ಥಾನ ಹಾಗೂ ಜಾಗತಿಕವಾಗಿ 671ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಇವರು ಜಾಗತಿಕವಾಗಿ 942ನೇ ಸ್ಥಾನದಲ್ಲಿದ್ದರು. ರಿಸರ್ಚ್ ಡಾಟ್ ಕಾಂ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುತ್ತದೆ. ಗಿರೀಶ್ 240ಕ್ಕೂ … Read more

‘ಜ್ಞಾನ ದೇಗುಲ’ ಘೋಷಣೆ ಬದಲು, ಶಿವಮೊಗ್ಗದಲ್ಲಿ ಬಿಜೆಪಿ ಯುವ ಮೋರ್ಚಾ ಆಕ್ರೋಶ

200224 bjp Yuva Morcha protest in front of Social welfare department

SHIVAMOGGA LIVE NEWS | 20 FEBRUARY 2024 SHIMOGA : ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಘೋಷಣೆಯನ್ನು ಬದಲಿಸಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿʼ ಎಂಬ ಘೋಷಣೆ ಪ್ರಕಟಿಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಶಿವಮೊಗ್ಗ ನಗರ ಯುವ ಮೋರ್ಚಾದ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯವನ್ನು ತೆಗೆದು ಹಾಕಿರುವ ಸರ್ಕಾರ ಅವರಿಗೆ ಅಪಮಾನ ಮಾಡಲಾಗುತ್ತಿದೆ. ಈ ಹಿನ್ನೆಲೆ ಸಚಿವ ಮಹದೇವಪ್ಪ … Read more

ಮೌಡ್ಯಗಳಿಗೆ ಪರಿಹಾರ, ವಿಮರ್ಶೆಯ ಪ್ರಜ್ಞೆ ಬೆಳೆಸಲು ಕುವೆಂಪು ಸಾಹಿತ್ಯ ಪೂರಕ

Sahitya-parishad-Programme-in-Sahyadri-College-D-Manjunath

SHIVAMOGGA LIVE NEWS | 12 FEBRUARY 2024 SHIMOGA : ನಮ್ಮ ನಡುವೆ ಇರುವ ಮೌಡ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ವಿಮರ್ಶೆಯ ಪ್ರಜ್ಞೆ ಬೆಳೆಸಿಕೊಳ್ಳಲು ಕುವೆಂಪು ಸಾಹಿತ್ಯ ಪೂರಕವಾಗಿದೆ ಎಂದು ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ದೇವಂಗಿ ಡಿ.ಆರ್.ರತ್ನಾಕರ ದತ್ತಿ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಜ್ಞಾನಿಕ ದೃಷ್ಟಿಕೋನ ವಿಷಯದ ಕುರಿತು ಮಾತನಾಡಿದರು. ಕುವೆಂಪು ಮೌಡ್ಯ ವಿರೋಧದ ಪ್ರತೀಕ. ಧರ್ಮ, ದೇವರು, ಪುರೋಹಿತ, ರಾಜಕೀಯ, ಹೆಣ್ಣು, … Read more

ಎರಡೆ ದಿನಕ್ಕೆ ಕುವೆಂಪು ವಿವಿ ಕುಲಸಚಿವರು ಬದಲು, ಅಧಿಕಾರ ಸ್ವೀಕಾರಕ್ಕು ಮುನ್ನವೆ ಹೊಸಬರ ನೇಮಕ

kuvempu-University-

SHIVAMOGGA LIVE NEWS | 2 FEBRUARY 2024 SHIMOGA : ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರನ್ನು ನೇಮಿಸಿದ್ದ ಸರ್ಕಾರ ಎರಡನೇ ದಿನದಲ್ಲಿ ಆದೇಶ ಬದಲಿಸಿದೆ. ಮತ್ತೊಬ್ಬ ಅಧಿಕಾರಿಯನ್ನು ಆ ಸ್ಥಾನಕ್ಕೆ ನೇಮಿಸಿದೆ. ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಕೆಎಎಸ್‌ ಅಧಿಕಾರಿ ವಿಜಯ ಕುಮಾರ್‌.ಹೆಚ್‌.ಬಿ ಅವರನ್ನು ನೇಮಿಸಲಾಗಿದೆ. ಎರಡೆ ದಿನದಲ್ಲಿ ಆದೇಶ ಬದಲು ಜ.31ರಂದು ಕೆಎಎಸ್‌ ಅಧಿಕಾರಿ ಶಿವರಾಜು.ಪಿ ಅವರನ್ನು ಕುವೆಂಪು ವಿವಿ ಆಡಳಿತ ಕುಲಸಚಿವರಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಶಿವರಾಜು ಅವರು ಅವರು ಇನ್ನೂ ಅಧಿಕಾರ … Read more

ಕುವೆಂಪು ವಿವಿಗೆ ನೂತನ ಕುಲಸಚಿವರ ನೇಮಕ

P-Shivaraj-to-be-new-registrar-of-Kuvempu-University

SHIVAMOGGA LIVE NEWS | 1 FEBRUARY 2024 SHIMOGA : ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (ಆಡಳಿತ) ಕೆಎಎಸ್‌ ಅಧಿಕಾರಿ ಪಿ.ಶಿವರಾಜ್‌ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕುಲಸಚಿವರ ಹುದ್ದೆ ಖಾಲಿ ಇದ್ದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಈಗ ಕೆಎಎಸ್‌ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ – ನೂರು ದಿನ ಕಳೆದರು ಉಪನ್ಯಾಸಕರ ಖಾತೆಗೆ ಬಾರದ ಗೌರವಧನ, ಕುವೆಂಪು ವಿವಿ ವಿರುದ್ಧ ಅಸಮಾಧಾನ

ಕುವೆಂಪು ವಿವಿ ಅಕಾಡೆಮಿಕ್‌ ಕ್ಯಾಲೆಂಡರ್‌ ಅವಧಿ ಮುಂದೂಡಲು ವಿದ್ಯಾರ್ಥಿ ಸಂಘಟನೆ ಆಗ್ರಹ, ಕಾರಣವೇನು?

nsui-memorandum-to-kuvempu-univesity-registrar-snehal-sudhakar-lokande.

SHIVAMOGGA LIVE NEWS | 25 JANUARY 2024 SHIMOGA : ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆದಿಲ್ಲ. ಅದ್ದರಿಂದ ಶೈಕ್ಷಣಿಕ ಅವಧಿಯನ್ನು ಮುಂದೂಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆ ವತಿಯಿಂದ ಶಿವಮೊಗ್ಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆದಿಲ್ಲ. ಪಾಠಗಳನ್ನು ಮುಗಿಸಲು ಇನ್ನಷ್ಟು ಕಾಲವಕಾಶ ಬೇಕಿದೆ. ಆದ್ದರಿಂದ ಅಕಾಡೆಮಿಕ್ ಕ್ಯಾಲೆಂಡರ್‌ ಅವಧಿಯನ್ನ ಫೆಬ್ರವರಿ … Read more

ಕುವೆಂಪು ವಿವಿ ಅಕಾಡೆಮಿಕ್‌ ಕೌನ್ಸಿಲ್‌ಗೆ ಅರುಣ್‌, ಸೂರಜ್‌ ರೇವಣ್ಣ, ಏನಿದು ಕೌನ್ಸಿಲ್‌?

DS-Arun-MLC-Shimoga

SHIVAMOGGA LIVE NEWS | 24 JANUARY 2024 EDUCATION NEWS : ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿಧಾನ ಪರಿಷತ್ತಿನ ಇಬ್ಬರು ಶಾಸಕರನ್ನು ನೇಮಿಸಲಾಗಿದೆ. ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್‌ ಮತ್ತು ಸೂರಜ್‌ ರೇವಣ್ಣ ಅವರನ್ನು ನೇಮಿಸಿ ಸಭಾಪತಿ ಅವರು ನಾಮ ನಿರ್ದೇಶನ ಮಾಡಿದ್ದಾರೆ. ಈ ಸಂಬಂಧ ವಿಧಾನ ಪರಿಷತ್ತಿನ ಕಾರ್ಯದರ್ಶಿ ಅವರು ಕುವೆಂಪು ವಿವಿ ಕುಲ ಸಚಿವರಿಗೆ ಆದೇಶ ಪ್ರತಿ ರವಾನಿಸಿದ್ದಾರೆ. ಏನಿದು ವಿದ್ಯಾವಿಷಯಕ ಪರಿಷತ್ತು? ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚುಟುವಟಿಕೆ ಕುರಿತು ಶಾಸನಗಳು, ಆದೇಶಗಳು, … Read more

ಕುವೆಂಪು ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆ ಫಲಿತಾಂಶ ಪ್ರಕಟ, ರಿಸಲ್ಟ್‌ ನೋಡುವುದು ಹೇಗೆ?

kuvempu-University-

SHIVAMOGGA LIVE NEWS | 11 JANUARY 2024 SHANKARAGHATTA : ತಾಂತ್ರಿಕ ಕಾರಣದಿಂದ ತಡವಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಿಸಲಾಗಿದೆ. ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ( UUCMS) ಪೋರ್ಟಲ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಅಕೌಂಟ್‌ಗಳಲ್ಲಿ ಲಾಗಿನ್ ಆಗಿ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.‌ಎಸ್.‌ಎಂ. ಗೋಫಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ‌ ಕಳೆದ ತಿಂಗಳೇ ಮುಗಿದಿತ್ತು. ಆದರೆ ವಿವಿಯ … Read more