ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ

Doddapete police station in shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಫೆಬ್ರವರಿ 2022 ಮನೆ ಜಾಗದ ವಿಚಾರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ದೂರು, ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಾಜಿ ಕಾರ್ಪೊರೇಟರ್ ಸೀತಾಲಕ್ಷ್ಮಿ ಮತ್ತು ಅವರ ಮಗ ಪರಶುರಾಮ ಹಲ್ಲೆಗೊಳಗಾಗಿದ್ದಾರೆ. ಮನೆ ಜಾಗದ ವಿಚಾರವಾಗಿ ಜಗಳವಾಗಿದೆ. ತಮ್ಮ ಜಾಗವನ್ನು ಅತಿಕ್ರಮ ಮಾಡಿ ಮನೆ ಕಟ್ಟಲಾಗುತ್ತಿದೆ ಎಂದು ಪಕ್ಕದ ಮನೆಯ ಕುಟುಂಬದವರು ಆರೋಪಿಸಿ ದಾಳಿ ಮಾಡಿ, ಹಲ್ಲೆ … Read more

ಫೆ.19ರಂದು ಶಿವಮೊಗ್ಗಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ

dk shivakumar in shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಫೆ.19ರಂದು ಮಧ್ಯಾಹ್ನ ಡಿ.ಕೆ.ಶಿವಕುಮಾರ್ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದರು. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ದ್ವಾರಕಾ ಕನ್ವೆಷನ್ ಹಾಲ್’ನಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಡಿಜಿಟಲ್ ಸದಸ್ಯತ್ವ ಅಭಿಯಾನ ನಡೆಯಲಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದರು. ಡಿ.ಕೆ.ಶಿವಕುಮಾರ್ ಅವರು ಫೆ.19ರಂದು ಮಧ್ಯಾಹ್ನ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. … Read more

ಇವತ್ತಿನ ಅಡಕೆ ಧಾರಣೆ | 17 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ಶಿವಮೊಗ್ಗ, ಸಾಗರ ಸೇರಿದಂತೆ ರಾಜ್ಯದ ವಿವಿಧೆಡೆಯ ಮಾರುಕಟ್ಟೆಯಲ್ಲಿನ ಇವತ್ತಿನ ಅಡಕೆ ಧಾರಣೆ ಹೀಗಿದೆ.   ಶಿವಮೊಗ್ಗ ಮಾರುಕಟ್ಟೆ ಗೊರಬಲು 17120 34810 ಬೆಟ್ಟೆ 47589 50699 ರಾಶಿ 43069 46036 ಸರಕು 51069 75099 ಸಾಗರ ಮಾರುಕಟ್ಟೆ ಕೆಂಪುಗೋಟು 16510 39819 ಕೋಕ 14510 32809 ಚಾಲಿ 31510 37100 ಬಿಳೆ ಗೋಟು 14310 27499 ರಾಶಿ 33300 46267 ಸಿಪ್ಪೆಗೋಟು 7869 18999 ಶಿರಸಿ … Read more

ಶಿವಮೊಗ್ಗದ ಹಲವು ಕುಟುಂಬಗಳ ಅನ್ನ ಕಸಿದ ಹಿಜಾಬ್, ಕೇಸರಿ ಶಾಲು ವಿವಾದ

Road Blocked during hijab row

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕೆಲವರಿಗೆ ಪ್ರತಿಷ್ಠೆಯಾಗಿದೆ ಮಾರ್ಪಾಡಾಗಿದೆ. ಇದರ ಪರಿಣಾಮ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹೋರಾಟ, ಗಲಭೆ ಶುರುವಾದಾಗಿನಿಂದ ಈ ಕುಟುಂಬಗಳಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೆ ಗತಿಯಾಗಿದೆ. ಶಿವಮೊಗ್ಗದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿತ್ತು. ವಿದ್ಯಾರ್ಥಿಗಳು ಪರಸ್ಪರ ಜಗಳಕ್ಕಿಳಿದು, ಕಲ್ಲು ತೂರಾಟವಾಗಿತ್ತು. ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿವಾದ ಶುರುವಾದಾಗಿನಿಂದ ಶಿವಮೊಗ್ಗದ ಕೆಲವು … Read more

ಶಿವಮೊಗ್ಗದಲ್ಲಿ ಹಿಜಾಬ್ ಹೋರಾಟ ಮತ್ತಷ್ಟು ತೀವ್ರ, ಇವತ್ತು ಎಲ್ಲೆಲ್ಲಿ ಏನೇನಾಯ್ತು?

Students Wearing Burka in DVS Campus

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ಶಿವಮೊಗ್ಗದಲ್ಲಿ ಹಿಜಾಬ್ ವಿವಾದ ಹೊಸ ಸ್ವರೂಪ ಪಡೆದುಕೊಂಡಿದೆ. ಹಿಜಾಬ್ ಹೋರಾಟ ಶಿಕ್ಷಣ ಸಂಸ್ಥೆಗಳ ಬದಲು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದೆ. ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ನಗರದ ವಿವಿಧ ಪದವಿ ಕಾಲೇಜುಗಳಲ್ಲಿ ಇವತ್ತು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಪರ ಹೋರಾಟ ನಡೆಸಿದರು. ಕೆಲವು ಹೊತ್ತು ಕಾಲೇಜುಗಳ ಪ್ರವೇಶ ದ್ವಾರದಲ್ಲಿ ನಿಂತು ತಮ್ಮ ಹಕ್ಕುಗಳ ಪರವಾಗಿ ವಿದ್ಯಾರ್ಥಿನಿಯರು ಧ್ವನಿ ಏರಿಸಿದರು. … Read more

ತಾಳಗುಪ್ಪ – ಬೆಂಗಳೂರು ರೈಲು ಕೆಲ ದಿನ ಅರಸೀಕೆರೆ ವರೆಗೆ ಮಾತ್ರ ಸಂಚಾರ

Train engine and boggies

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ತಾಳಗುಪ್ಪ – ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಅರಸೀಕೆರೆವರೆಗೆ ಸೀಮಿತಗೊಳಿಸಿ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಫೆ.16 ರಿಂದ ಫೆ.25ರವರೆಗೆ ತಾಳಗುಪ್ಪದಿಂದ ಹೊರಡುವ ರೈಲು ಅರಸೀಕೆರೆವರೆಗೆ ಮಾತ್ರ ಸಂಚಾರ ಮಾಡಲಿದೆ. ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 5.15ಕ್ಕೆ ಹೊರಡಲಿದೆ. ರೈಲು ಸಾಗರಕ್ಕೆ ರೈಲ್ವೆ ನಿಲ್ದಾಣಕ್ಕೆ 5.30ಕ್ಕೆ ತಲುಪುತ್ತದೆ. ಬೆಳಗ್ಗೆ 7 ಗಂಟೆಗೆ ಶಿವಮೊಗ್ಗಕ್ಕೆ ಬರಲಿದೆ. ಭದ್ರಾವತಿಗೆ 7.25ಕ್ಕೆ ತಲುಪುತ್ತದೆ. ಬೆಳಗ್ಗೆ 8.55ಕ್ಕೆ ಅರಸೀಕೆರೆ … Read more

ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸಿಗರ ಬಂಧನ

Youth Congress Workers arrested at Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದು ಮತ್ತು ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಾಲಗೆ ಹರಿಬಿಟ್ಟಿದ್ದಾರೆ ಎಂದು ಆಪಾದಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಯುವ ಕಾಂಗ್ರೆಸಿಗರ ಬಂಧನ ಮುತ್ತಿಗೆ ಹಿನ್ನೆಲೆ ಬಿಜೆಪಿ ಕಚೇರಿ … Read more

ರಾತ್ರೋರಾತ್ರಿ ಕೊಳವೆ ಬಾವಿ ಮೊಟರ್ ಕೇಬಲ್, ಬ್ಯಾಟರಿ ಕಳವು

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022 ಜಮೀನಿನಲ್ಲಿದ್ದ ಕೊಳವೆ ಬಾವಿಯ ಮೋಟರ್’ಗೆ ಅಳವಡಿಸಿದ್ದ ಕೇಬಲ್ ವೈರ್ ಮತ್ತು ಬ್ಯಾಟರಿಯನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಣಿದಾಳು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗಾಣಿದಾಳು ಗ್ರಾಮದ ನಾಗರಾಜು ಎಂಬುವವರ ಜಾಮೀನನಲ್ಲಿ ಕೊಳೆವೆ ಬಾವಿ ತೆಗೆಸಿದ್ದರು. ಜಮೀನಿಗೆ ನೀರು ಹಾಯಿಸಲು ಆಟೋ ಸ್ಟಾರ್ಟರ್ ಮೋಟರ್ ಅಳವಡಿಸಲಾಗಿದೆ. ರಾತ್ರಿ ನಾಗರಾಜ್ ಅವರು ಮೋಟರ್ ಸ್ವಿಚ್ ಆನ್ ಮಾಡಿ ಬಂದಿದ್ದರು. ಬೆಳಗ್ಗೆ … Read more

ಎಗ್ ರೈಸ್ ತಿನ್ನಲು ಮನೆಯಿಂದ ಹೊರ ಬಂದ ಯುವಕ ಮೆಗ್ಗಾನ್ ಆಸ್ಪತ್ರೆಗೆ ದಾಖಲು

Mc Gann Hospital Building

ಶಿವಮೊಗ್ಗದ ಲೈವ್.ಕಾಂ | THIRTAHALLI NEWS | 17 ಫೆಬ್ರವರಿ 2022 ಎಗ್ ರೈಸ್ ತಿನ್ನಲು ಬಂದ ಯುವಕನೊಬ್ಬನಿಗೆ ಬೈಕ್ ಡಿಕ್ಕಿಯಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಂಡಗದ್ದೆ ಸಮೀಪದ 17ನೇ ಮೈಲಿ ಕಲ್ಲು ಬಳಿ ಘಟನೆ ಸಂಭವಿಸಿದೆ. ರಾಜೇಶ್ ಎಂಬುವವರಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದರು. ರಾಜೇಶ್ ಅವರ ಸಂಬಂಧಿಯೊಬ್ಬರು ಎಗ್ ರೈಸ್ ತಿನ್ನಲು ಬರುವಂತೆ ತಿಳಿಸಿದ್ದರು. ಮನೆಯಿಂದ ಹೊರ ಬಂದ ರಾಜೇಶ್ ಅವರು ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ … Read more

ಹಣಗೆರೆಯಲ್ಲಿ ಪೂಜೆ ಮುಗಿಸಿ ಹೊರ ಬಂದ ಹಾವೇರಿಯ ಭಕ್ತರಿಗೆ ಶಾಕ್

Hanagere temple board

ಶಿವಮೊಗ್ಗದ ಲೈವ್.ಕಾಂ | THIRTAHALLI NEWS | 17 ಫೆಬ್ರವರಿ 2022 ಹಾವೇರಿಯ ಹಿರೇಕೆರೂರು ತಾಲೂಕಿನಿಂದ ತೀರ್ಥಹಳ್ಳಿಯ ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಬಂದಿದ್ದವರ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನುಮಗೌಡ ಪಾಟೀಲ್ ಎಂಬುವವರು ತಮ್ಮ ಊರಿನ ಒಬ್ಬರೊಂದಿಗೆ ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಆಗಮಿಸಿದ್ದರು. ತಮ್ಮ ಮಾವನ ಪ್ಯಾಷನ್ ಪ್ರೋ ಬೈಕ್ ಪಡೆದುಕೊಂಡು ಬಂದಿದ್ದ ಹನುಮಗೌಡ ಪಾಟೀಲ್ ಅವರು, ದೇವಸ್ಥಾನದ ಆವರಣದಲ್ಲಿ ನಿಲ್ಲಿಸಿದ್ದರು. ಬೆಳಗ್ಗೆ ದೇಗುಲದ ಒಳಗೆ ಹೋಗಿ ಪೂಜೆ ಮುಗಿಸಿ ಬರುವಷ್ಟರಲ್ಲಿ … Read more