ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್‌

Lion-Tiger-Safari-Tyavrekoppa-in-Shimoga.

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬದ ಸಂದರ್ಭ ಇಲ್ಲಿನ ಮೃಗಾಲಯಕ್ಕೆ ಇಂದೋರ್‌ ಮತ್ತು ಔರಂಗಾಬಾದ್‌ನಿಂದ ಪ್ರಾಣಿಗಳು (Animals) ಆಗಮಿಸಲಿವೆ. ಮೃಗಾಲಯಕ್ಕೆ ಅಧಿಕಾರಿಗಳು ಭೇಟಿ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯದ ಅಧಿಕಾರಿಗಳು ಇಂದು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳ ವಿನಿಮಯಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು, ಶಿವಮೊಗ್ಗ ಮೃಗಾಲಯದ … Read more

ಶಿವಮೊಗ್ಗ – ಸಾಗರ ಮಧ್ಯೆ 4 ಕಡೆ ರೈಲ್ವೆ ಗೇಟ್‌ ಪರಿಶೀಲನೆ, ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ಪ್ರಕಟ

070923-Railway-Track-with-Electric-lane-in-Shimoga-Sagara-Route.webp

ರೈಲ್ವೆ ಸುದ್ದಿ: ಶಿವಮೊಗ್ಗ – ಸಾಗರ ಮಧ್ಯೆ ಮಾರ್ಗದಲ್ಲಿ ನಾಲ್ಕು ಕಡೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ (Level Crossing) ಗೇಟ್‌ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತದೆ. ಆದ್ದರಿಂದ ಆ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಯಾವಾಗ ರಿಪೇರಿ? ಜೇಡಿಸರ ರಸ್ತೆ: ಸೆ.22ರ ಬೆಳಗ್ಗೆ 7 ಗಂಟೆಯಿಂದ ಸೆ.23ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಜೇಡಿಸರ ಹಾಗೂ ಸಿದ್ದೇಶ್ವರ … Read more

ಸಕ್ರೆಬೈಲು ಆನೆಗಳಿಗೆ ಶಿವಮೊಗ್ಗ ದಸರಾಕ್ಕೆ ಆಹ್ವಾನ, ಯಾವೆಲ್ಲ ಆನೆಗಳು ಭಾಗವಹಿಸಲಿವೆ? ಇಲ್ಲಿದೆ ಡಿಟೇಲ್ಸ್‌

Sakrebyle-Elephant-welcomed-for-Shimoga-Dasara

ಶಿವಮೊಗ್ಗ ದಸರಾ: ನಾಡ ದೇವಿ ಚಾಮುಂಡೇಶ್ವರಿಯ ವೈಭವದ ಅಂಬಾರಿ ಮೆರವಣಿಗೆಗೆ ಈ ಬಾರಿಯು ಸಕ್ರೆಬೈಲು ಬಿಡಾರದ ಮೂರು ಆನೆಗಳು ಆಗಮಿಸಲಿವೆ. ಇವತ್ತು ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಲಾಯಿತು. ಶಾಸಕ ಎಸ್‌.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್‌ಗಳು ಸಕ್ರೆಬೈಲು ಬಿಡಾರಕ್ಕೆ ತೆರಳಿ ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಿದರು. ಸಾಗರ ನೇತೃತ್ವದಲ್ಲಿ ಮೂರು ಆನೆಗಳು ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ಈ ಬಾರಿಯು ಮೂರು ಆನೆಗಳು ಆಗಮಿಸಲಿವೆ. ಸಾಗರ ಆನೆ ಶ್ರೀ ಚಾಮುಂಡೇಶ್ವರಿ … Read more

ಕೈಮರ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ, ಸವಾರನ ಕಾಲಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

#Bhadravati, #road accident, #car bike collision, #injury, #road safety, #local news, #police case, #Karnataka ಭದ್ರಾವತಿ: ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ (Collision) ಹೊಡೆದು ಬೈಕ್‌ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ. ಭದ್ರಾವತಿ ತಾಲೂಕು ಕೈಮರ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಅರಹತೊಳಲು ಗ್ರಾಮದ ಲೋಕೇಶಪ್ಪ ಅವರು ಬೈಕ್‌ನಲ್ಲಿ ತೆರಳುವಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಲೋಕೇಶಪ್ಪ ಅವರ ಎಡಗಾಲಿಗೆ ತೀವ್ರ ಗಾಯವಾಗಿದೆ. ಅಪಘಾತ ಪಡಿಸಿದ ಕಾರು ಚಾಲಕನೆ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ … Read more

ಶಿವಮೊಗ್ಗದ ಈ ಹೆದ್ದಾರಿಯಲ್ಲಿ ಕಣ್ಣು ಮುಚ್ಚಿಕೊಂಡೆ ಬೈಕ್‌ ಓಡಿಸಬೇಕು, ಎಲ್ಲಿ? ಏನು ಕಾರಣ?

Pot-holes-filled-with-cement-and-jelly-stones-at-vidyanagara-in-shimoga

ಶಿವಮೊಗ್ಗ: ಸಿಮೆಂಟ್‌ ಮತ್ತು ಜೆಲ್ಲಿ ಮಿಕ್ಸ್‌ ಮಾಡಿ ರಸ್ತೆ ಗುಂಡಿ (Pot Holes) ಮುಚ್ಚಿದ್ದು ಶಿವಮೊಗ್ಗದಲ್ಲಿ ವಾಹನ ಸವಾರರಿಗೆ ತಲೆನೋವು ತಂದಿದೆ. ಗುಂಡಿ ಇದ್ದಾಗಲೇ ರಸ್ತೆಯಲ್ಲಿ ಸಂಚಾರ ಚೆನ್ನಾಗಿತ್ತು ಎಂಬಂತಾಗಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಎದುರು ಬಿ.ಹೆಚ್‌.ರಸ್ತೆಯಲ್ಲಿನ ದುಸ್ಥಿತಿ. ಈ ರಸ್ತೆಯ ಉದ್ದಕ್ಕು ನಾನಾ ಗಾತ್ರದ ಆಳವಾದ ಗುಂಡಿಗಳಾಗಿದ್ದವು. ಇವುಗಳನ್ನು ಶಾಶ್ವತವಾಗಿ ಬಂದ್‌ ಮಾಡುವ ಬದಲು ಸಿಮೆಂಟ್‌ ಮತ್ತು ಜೆಲ್ಲಿ ಮಿಕ್ಸ್‌ ಮಾಡಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದು ವಾಹನ ಸವಾರರ ಪಾಲಿಗೆ ಸಮಸ್ಯೆ ಹೆಚ್ಚಳ ಮಾಡಿದೆ. ಕಣ್‌ … Read more

ಆಗುಂಬೆ ಘಾಟಿ, ಕಾರ್ಯಾಚರಣೆ ಪೂರ್ಣ, ಈಗ ವಾಹನಗಳು ಓಡಾಡಬಹುದಾ?

Agumbe-ghat-general-image

ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ (Agumbe Ghat) ವಾಹನ ಸಂಚಾರ ಪುನಾರಂಭವಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಮತ್ತು ಧರೆ ಕುಸಿತದಿಂದ ಬಿದ್ದಿದ್ದ ಮಣ್ಣನ್ನು ತೆರವು ಮಾಡಲಾಗಿದೆ. ಶುಕ್ರವಾರ ಸಂಜೆ ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ಧರೆ ಕುಸಿತ ಮತ್ತು ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಇದರಿಂದಾಗಿ ವಾಹನ ಸಂಚಾರ ಸಂಪೂರ್‌ ಬಂದ್‌ ಆಗಿತ್ತು. ಕತ್ತಲಾದ್ದರಿಂದ ತೆರವು ಕಾರ್ಯಾಚರಣೆಗೆ ಅಡಚಣೆಯಾಗತ್ತು. ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ ಮರ ಮತ್ತು ಮಣ್ಣು ತೆರವು ಮಾಡಲಾಗಿದೆ. ಮತ್ತೊಂದು ಮರ ಜಾರಿ ಬಂದಿತ್ತು … Read more

ಶಿವಮೊಗ್ಗದಲ್ಲಿ ATNCC ವಿದ್ಯಾರ್ಥಿಗಳಿಂದ ಪಥ ಸಂಚಲನ, ಯಾರೆಲ್ಲ ಇದ್ದರು? ಏನೆಲ್ಲ ಮಾತನಾಡಿದರು?

ATNCC-Students-rally-in-Shimoga-city.

ಶಿವಮೊಗ್ಗ: ಏಡ್ಸ್‌ ವಿರುದ್ಧ ಜಾಗೃತಿಗೆ ನಗರದ ATNCC ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ, ಬೀದಿ ನಾಟಕ ಮಾಡಿದರು. ಎಟಿಎನ್‌ಸಿ ಕಾಲೇಜು ಆವರಣದಿಂದ ಬಸವೇಶ್ವರ ವೃತ್ತದವರೆಗೆ ಪಥ ಸಂಚಲನ ಮಾಡಿದರು. ಗಾಂಧಿ ಪಾರ್ಕ್‌ ಮುಂಭಾಗ ಬಸವೇಶ್ವರ ಪ್ರತಿಮೆ ಎದುರು ಹೆಚ್‌ಐವಿ, ಏಡ್ಸ್‌ ಪೀಡಿತರ ವಿರುದ್ಧದ ತಾರತಮ್ಯ ತೊಡೆದು ಹೋಗುವುದಾಗಿ ಪ್ರಮಾಣವಚನ ಬೋಧಿಸಲಾಯಿತು. ಯಾರೆಲ್ಲ ಏನೆಲ್ಲ ಹೇಳಿದರು? ಹೆಚ್‌ಐವಿ, ಏಡ್ಸ್‌ಗೆ ಯುವಜನರು ಬಲಿ ಆಗುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿಯಾಗಿದೆ. ಜಾಗೃತಿಯಿಂದ ಮಾತ್ರ ಇದನ್ನು ತಡೆಯಲು ಸಾಧ್ಯ. ಸೊಳ್ಳೆ ಕಚ್ಚುವುದು, ಗಾಳಿ, … Read more

ಜಾತಿ ಸಮೀಕ್ಷೆ, ಹಿಂದೂ ಧರ್ಮಿಯರಿಗೆ ಶಾಸಕ ಚನ್ನಬಸಪ್ಪ ಸಲಹೆ, ಏನದು? ಇಲ್ಲಿದೆ ಸುದ್ದಿಗೋಷ್ಠಿಯ ಹೈಲೈಟ್ಸ್‌

SN-Channabasappa-Press-meet-in-Shimoga

ಶಿವಮೊಗ್ಗ: ಜಾತಿ ಸಮೀಕ್ಷೆಯಲ್ಲಿ (Caste Survey) ಹಿಂದೂ ಧರ್ಮಿಯರು ಪ್ರತ್ಯಕ್ಷವಾಗಿ ಪಾಲ್ಗೊಳ್ಳಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ. ಜಾತಿ ಕಾಲಂನಲ್ಲಿ ಆಯಾಯ ಜಾತಿಯ, ಉಪ ಜಾತಿ ಕಾಲಂನಲ್ಲಿ ಉಪ ಜಾತಿಯ ಹೆಸರನ್ನು ಬರೆಯಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ವೀರಶೈವ, ಲಿಂಗಾಯತ ಸೇರಿ ಎಲ್ಲ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಯಿಸಬೇಕು. ಇದರಲ್ಲಿ ನಿಜವಾದ ಭಾರತೀಯತೆ ಇದೆ. ಇದು ನಂಬಿಕೆಯ ಪ್ರಶ್ನೆಯಾಗಿದೆ ಎಂದರು. ಎಂಎಲ್‌ಎ ಸುದ್ದಿಗೋಷ್ಠಿಯ … Read more

ಶಿವಮೊಗ್ಗ ದಸರಾಗೆ ಸಾಲು ಸಾಲು ಸಿನಿಮಾ ಸ್ಟಾರ್‌ಗಳು , ಈ ಬಾರಿ ಯಾರೆಲ್ಲ ಬರ್ತಿದ್ದಾರೆ? ಯಾವೆಲ್ಲ ಸಿನಿಮಾ ಇರಲಿದೆ?

Actors-For-Shimoga-Dasara-2025.

ಶಿವಮೊಗ್ಗ: ಚಲನಚಿತ್ರ ದಸರಾದಲ್ಲಿ ಈ ಬಾರಿ ಮೂರು ಸಿನಿಮಾಗಳು (Cinema) ಪ್ರದರ್ಶನವಾಗಲಿವೆ. ನಗರದ ಎರಡು ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಸೆ.25ರಂದು ಬೆಳಗ್ಗೆ 9.30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತಲೆದಂಡ ಸಿನಿಮಾ ಪ್ರದರ್ಶನವಾಗಲಿದೆ. ಸೆ.26ರಂದು ಬೆಳಗ್ಗೆ 9.30ಕ್ಕೆ ಜೀನಿಯಸ್‌ ಮುತ್ತ, ಸೆ.27ರಂದು ಬೆಳಗ್ಗೆ 9.30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾಗಳು ಪ್ರದರ್ಶನವಾಗಲಿದೆ. ಸಾಲು ಸಾಲು ಸಿನಿಮಾ ಸ್ಟರ್‌ಗಳು ಇನ್ನು, ಶಿವಮೊಗ್ಗ ದಸರಾದಲ್ಲಿ ಈ ಬಾರಿ ಚಿತ್ರರಂಗದ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಸೆ.24ರಂದು ಚಲನಚಿತ್ರ ದಸರಾ ಉದ್ಘಾಟನೆ … Read more

BREAKING NEWS – ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಧರೆ ಕುಸಿತ, ರಾತ್ರಿ ವಾಹನ ಸಂಚಾರ ಇದ್ಯಾ?

Tree-falls-at-agumbe-ghat-in-Thirthahalli

ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ (Agumbe Ghat) ರಸ್ತೆಗೆ ಅಡ್ಡಲಾಗಿ ಮರ ಉರುಳಿದ್ದು, ಧರೆ ಕುಸಿತ ಉಂಟಾಗಿದೆ. ಇದರಿಂದ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಆಗುಂಬೆ ಘಾಟಿಯ 6ನೇ ತಿರುವಿನಲ್ಲಿ ಸಂಜೆ ವೇಳೆಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿದೆ. ಮರ ಮತ್ತು ಮಣ್ಣು ತೆರವಿಗೆ ಸಮಯ ಹಿಡಿಯಲಿದೆ. ಆದ್ದರಿಂದ ಇವತ್ತು ರಾತ್ರಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಗೂಡ್ಸ್‌ ವಾಹನದ ಮೇಲೆ ಮರ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಗಾಯಾಳುವನ್ನು … Read more