Shivamogga: Two Youths Stabbed Over Personal Feud

Urugaduru-circle-incident-in-shimoga

Shivamogga: Two young men were stabbed with lethal weapons over personal dispute in the Urugadur area of Shivamogga city today. The seriously injured victims, identified as Shabbir and Shahbaz, have been admitted to a private hospital for treatment. ‘Personal Grudge’ says SP District Superintendent of Police, G.K. Mithun Kumar, provided information to the media, confirming … Read more

ಶಿವಮೊಗ್ಗ ಸಿಟಿಯಲ್ಲಿ ಇಬ್ಬರಿಗೆ ಇರಿತ, ಗಂಭೀರ ಗಾಯ, ಘಟನೆಗೆ ಕಾರಣವೇನು?

Crime-News-General-Image

ಶಿವಮೊಗ್ಗ: ವೈಯಕ್ತಿಕ ವಿಚಾರಕ್ಕೆ ಶಿವಮೊಗ್ಗ ನಗರದಲ್ಲಿ ಇಬ್ಬರು ಯುವಕರಿಗೆ ಮಾರಕಾಸ್ತ್ರದಿಂದ ಇರಿಯಲಾಗಿದೆ (stabbing). ಗಂಭೀರ ಗಾಯಗೊಂಡಿರುವ ಯುವಕರನ್ನು ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಬ್ಬೀರ್‌ ಮತ್ತು ಶಹಬಾಜ್‌ ಎಂಬುವವರು ಗಾಯಗೊಂಡಿದ್ದಾರೆ. ನಗರದ ಊರುಗಡೂರು ಬಡಾವಣೆಯಲ್ಲಿ ಇಂದು ಘಟನೆ ಸಂಭವಿಸಿದೆ. ವೈಯಕ್ತಿಕ ಕಾರಣಕ್ಕೆ ಗಲಾಟೆ, ಇರಿತ ಇನ್ನು, ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ವೈಯಕ್ತಿಕ ವಿಷಯಕ್ಕೆ ಘಟನೆ ಸಂಭವಿಸಿದೆ. ಶಬ್ಬೀರ್‌ನ ಸಹೋದರಿಯ ಗಂಡ ಫಾರ್ದಿನ್‌, ಆತನ ಸಹೋದರ ಮತ್ತು … Read more

ಹಸೆಮಣೆ ಏರಬೇಕಿದ್ದ ಜೋಡಿ ಅಪಘಾತದಲ್ಲಿ ಸಾವು, ಹೇಗಾಯ್ತು ಘಟನೆ?

couple-succumbed-in-a-mishap-at-Shikaripura

ಶಿಕಾರಿಪುರ: ಬೈಕ್‌ ಮತ್ತು ಕಾರು ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಜೋಡಿ (Couple) ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ತಾಲೂಕಿನ ಮಟ್ಟಿಕೋಟೆಯ ರೇಖಾ (20), ತೊಗರ್ಸಿ ಸಮೀಪದ ಗಂಗೊಳ್ಳಿಯ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ಪಟ್ಟಣದಲ್ಲಿರುವ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರನ್ನು ಕರೆ ತರುತ್ತಿದ್ದ ಕಾರು ಡಿಕ್ಕಿ ಹೊಡೆದಾಗ ಬೈಕ್ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ.  ಕಳೆದ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥ ನಡೆದಿತ್ತು. ಮಳೆಯ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು, ಡಿಸೆಂಬರ್‌ನಲ್ಲಿ ಮದುವೆಗೆ … Read more

ಚನ್ನಪಟ್ಟಣದ ಯುವಕ, ನಾಗಮಂಗಲದಲ್ಲಿ ವಿವಾಹ, ರಿಪ್ಪನ್‌ಪೇಟೆಯಲ್ಲಿ ದಾಖಲಾಯ್ತು ಪ್ರಕರಣ, ಕಾರಣವೇನು?

Police-General-Image

ರಿಪ್ಪನ್‌ಪೇಟೆ: ಅಪ್ರಾಪ್ತಿಯೊಂದಿಗೆ ವಿವಾಹವಾದ (marriage) ಯುವಕನ ವಿರುದ್ಧ ಬಾಲ್ಯವಿವಾಹ ತಡೆ ಕಾಯಿದೆ ಹಾಗೂ ಪೋಕ್ಸ್‌ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣ ತಾಲೂಕಿನ ಯುವಕ ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಬಾಲಕಿಯೊಂದಿಗೆ ನಾಗಮಂಗಲದ ದೇವಸ್ಥಾನದಲ್ಲಿ ಆಗಸ್ಟ್ 29ರಂದು ವಿವಾಹವಾಗಿದ್ದ. ಕಳೆದ ಕೆಲವು ದಿನಗಳಿಂದ ಯುವಕ, ಬಾಲಕಿಯ ಮನೆಯಲ್ಲಿ ವಾಸವಾಗಿದ್ದನು. ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಿವಮೊಗ್ಗದ ಮಹಿಳಾ ಸಾಂತ್ವನ ಕೇಂದ್ರಕ್ಕೆ ತಿಳಿಸಿದ್ದು, ಅಧಿಕಾರಿಗಳ ಸಮಾಲೋಚನೆ ವೇಳೆ ವಿವಾಹವಾಗಿರುವುದು ದೃಢಪಟ್ಟಿದೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಪ್ರೀತಿಸಿ, ಮದುವೆ ಆಗುವುದಾಗಿ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ, ಶಿವಮೊಗ್ಗದಲ್ಲಿ ಕೇಸ್‌

Crime-News-General-Image

ಶಿವಮೊಗ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಬೇರೊಬ್ಬಳ ಜೊತೆಗೆ ವಿವಾಹಕ್ಕೆ (Marriage) ಸಿದ್ಧವಾಗಿದ್ದ ಯುವಕನ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ತಾಲೂಕು ಒಂದರ ಯುವತಿಗೆ (ಹೆಸರು ಗೌಪ್ಯ) ಆಕೆಯ ದೂರದ ಸಂಬಂಧಿಯೊಬ್ಬನ ಪರಿಚಯವಾಗಿ, ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಶಿವಮೊಗ್ಗದಲ್ಲಿಯೇ ಕೆಲಸ ಮಾಡುವಂತೆ ಮನವೊಲಿಸಿದ್ದ ಯುವಕ ಇಲ್ಲಿಗೆ ಕರೆಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಬೆಂಗಳೂರಿನಿಂದ ಬಂದ ರಾತ್ರಿ ಎನ್‌.ಟಿ.ರಸ್ತೆಯ ಲಾಡ್ಜ್‌ ಒಂದರಲ್ಲಿ ರೂಂ ಮಾಡಿಕೊಟ್ಟಿದ್ದ … Read more

ಮದುವೆ ಸಮಾರಂಭದಿಂದ ಮನೆಗೆ ಹಿಂತಿರುಗಿದ ಕುಟುಂಬಕ್ಕೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕುಟುಂಬದವರೆಲ್ಲ ಮದುವೆ ಸಮಾರಂಭಕ್ಕೆ (Marriage) ತೆರಳಿದ್ದಾಗ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಅಣ್ಣಾನಗರದ ನಾಜೀಮಾ ಬಾನು ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ನಾಜೀಮಾ ಬಾನು ಅವರು ಸಂಬಂಧಿಯ ಮದುವೆ ಸಮಾರಂಭಕ್ಕೆ ತೆರಳಿದ್ದರು. ಮರುದಿನ ಮನೆಗೆ ಮರಳಿದಾಗ ಬಾಗಿಲಿನ ಬೀಗ ಮುರಿಯಲಾಗಿತ್ತು. ಒಳಗೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಶೀಲಿಸಿದಾಗ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗ – … Read more

ಕಲ್ಯಾಣ ಮಂಟಪದಲ್ಲಿ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣ ಕಳವು, ಹೇಗಾಯ್ತು ಘಟನೆ?

Crime-News-General-Image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಕಲ್ಯಾಣ ಮಂಟಪವೊಂದರಲ್ಲಿ ಮಹಿಳೆಯರ ಕೊಠಡಿಗೆ ನುಗ್ಗಿದ ಕಳ್ಳರು ಸೂಟ್‌ಕೇಸ್‌ನ ಜಿಪ್‌ ಹರಿದು 4.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Jewels) ಕಳ್ಳತನ ಮಾಡಿದ್ದಾರೆ. ಎನ್‌.ಟಿ.ರಸ್ತೆಯ ಫಲಕ್‌ ಪ್ಯಾಲೇಸ್‌ನಲ್ಲಿ ಘಟನೆ ಸಂಭವಿಸಿದೆ. ಉದ್ಯಮಿ ನವೀದ್‌ ನವಾಜ್‌ ಎಂಬುವವರು ಪತ್ನಿ ಮತ್ತು ಸಹೋದರಿಯೊಂದಿಗೆ ಸಂಬಂಧಿಯ ಮದುವೆಯಲ್ಲಿ ಭಾಗವಹಿಸಿದ್ದರು. ಮಹಿಳೆಯ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಸೂಟ್‌ ಕೇಸ್‌ ಇರಿಸಿದ್ದರು. ಜಿಪ್‌ಗಳಿಗೆ ಲಾಕ್‌ ಮಾಡಲಾಗಿತ್ತು. ದುಲ್ವಾ ಕಾರ್ಯಕ್ರಮ ಇದ್ದಿದ್ದರಿಂದ ಕುಟುಂಬದವರು ಅದರಲ್ಲಿ ಪಾಲ್ಗೊಂಡಿದ್ದರು. … Read more

ತೀರ್ಥಹಳ್ಳಿಯ ಅಳಿಯ ಎಸ್‌.ಎಂ.ಕೃಷ್ಣ ಇನ್ನಿಲ್ಲ, ಕುಡುಮಲ್ಲಿಗೆಯಲ್ಲಿ ನೀರವ ಮೌನ

SM-Krishna-and-Prema-Krishna-Thirthahalli-Kudumallige-village

SHIVAMOGGA LIVE NEWS, 10 ಡಿಸೆಂಬರ್‌ 2024 ತೀರ್ಥಹಳ್ಳಿ : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಇನ್ನಿಲ್ಲ. ಅವರ ನಿಧನಕ್ಕೆ ಇಡೀ ರಾಜ್ಯ ಕಂಬನಿ ಮಿಡಿಯುತ್ತಿದೆ. ಇತ್ತ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮದಲ್ಲಿ  ನೀರವ ಮೌನ ಆವರಿಸಿದೆ. ಈ ಗ್ರಾಮದಿಂದಲೇ ಎಸ್.ಎಂ.ಕೃಷ್ಣ ಅವರ ವೈಯಕ್ತಿಕ ಜೀವನ ಹೊಸ ತಿರುವು ಪಡೆದಿದ್ದು. ಇದೇ ಕಾರಣಕ್ಕೆ ತೀರ್ಥಹಳ್ಳಿ ಮತ್ತು ಕುಡುಮಲ್ಲಗೆ ಅಂದರೆ ಎಸ್‌.ಎಂ.ಕೃಷ್ಣ ಅವರಿಗೆ ಅಚ್ಚುಮೆಚ್ಚು. ಕುಡುಮಲ್ಲಿಗೆಯ ಅಳಿಯ ಕೃಷ್ಣ ಎಸ್‌.ಎಂ.ಕೃಷ್ಣ ಪತ್ನಿ ಪ್ರೇಮಾ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ … Read more

ಶಿವಮೊಗ್ಗದಲ್ಲಿ ಮದುವೆ ಮಂಟಪದಿಂದ ನೇರ ಪದವಿ ಪರೀಕ್ಷೆಗೆ ಹಾಜರಾದ ವಧು

Bride-writes-exam-at-Kamala-Nehru-College-soon-after-the-marriage-in-Shimoga.webp

SHIVAMOGGA LIVE NEWS | 11 SEPTEMBER 2023 SHIMOGA : ಮದುವೆ ಮುಗಿದ ಮರು ಕ್ಷಣವೆ ವಧು (Bride) ವರನ ಜೊತೆಗೆ ಪರೀಕ್ಷಾ ಕೇಂದ್ರಕ್ಕೆ (Examination) ತೆರಳಿ ಪದವಿ ಪರೀಕ್ಷೆ ಬರೆದು ಗಮನ ಸೆಳೆದಿದ್ದಾಳೆ. ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಪರೀಕ್ಷೆ ಬರೆದ ನವ ವಧು. ಚೆನ್ನೈ ಮೂಲಕ ಫ್ರಾನ್ಸಿಸ್‌ ಅವರ ಜೊತೆಗೆ ಸತ್ಯವತಿ ಭಾನುವಾರ ಶಿವಮೊಗ್ಗದಲ್ಲಿ ವಿವಾಹವಾದರು (Marriage). ಮದುವೆ ಶಾಸ್ತ್ರ ಮುಗಿಯುತ್ತಿದ್ದಂತೆ ಮರುಕ್ಷಣವೆ ವರನ ಜೊತೆಗೆ ಕಮಲಾ ನೆಹರು ಕಾಲೇಜಿನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ … Read more

ಶಿವಮೊಗ್ಗ KSRTC ಬಸ್‌ ನಿಲ್ದಾಣದ ಬಳಿ ಬೆಳಗ್ಗೆ ಯುವತಿ ‘ಕಿಡ್ನಾಪ್‌’, ಸಂಜೆ ವೇಳೆಗೆ ಪ್ರಕರಣಕ್ಕೆ ಟ್ವಿಸ್ಟ್‌, ಏನದು?

KSRTC-Bus-Stand-in-Shimoga

SHIVAMOGGA LIVE | 18 JULY 2023 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕಪ್ಪು ಇನ್ನೋವಾ (Innova) ಕಾರಿನಲ್ಲಿ ಯುವತಿಯ ಕಿಡ್ನಾಪ್‌ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರೀತಿಸಿ ಮದುವೆಯಾಗಿರುವ ಹುಡುಗನ ಜೊತೆ ತೆರಳಿದ್ದಾಗಿ ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಆದ್ದರಿಂದ ಇಬ್ಬರನ್ನು ಬಿಟ್ಟು ಕಳುಹಿಸಲಾಗಿದೆ. ಏನಿದು ಕಿಡ್ನಾಪ್‌ ಕೇಸ್‌? ಶಿವಮೊಗ್ಗದ ಬಡಾವಣೆಯೊಂದರ ಯುವತಿ ತನ್ನ ತಾಯಿಯೊಂದಿಗೆ ಸಾಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇನ್ನೋವಾ ಕಾರಿನಲ್ಲಿ ಬಂದವರು ಯುವತಿಯನ್ನು … Read more