‘ಮಧು ಬಂಗಾರಪ್ಪ ಸೋಲಿಗೆ ಆರ್.ಎಂ.ಮಂಜುನಾಥಗೌಡ ಕಾರಣ, ಅನುಮಾನ ಹುಟ್ಟಿಸುತ್ತಿದೆ ಆರಗ ನಡೆ’

ಶಿವಮೊಗ್ಗ ಲೈವ್.ಕಾಂ | 16 ಡಿಸೆಂಬರ್2018 ಲೋಕಸಭೆ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೋಲಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕಾರಣ ಅಂತಾ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಜನಸಾಮಾನ್ಯರಿಗೆ ಸಿಗುವುದಿಲ್ಲ. ಇನ್ನು, ತಾಲೂಕು ಜೆಡಿಎಸ್ ಅಧ್ಯಕ್ಷ ಮದನ್ ಮತ್ತು ಮೂಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದರು. ಮೂಲ ಮತ್ತು ವಲಸಿಗ ಕಾರ್ಯಕರ್ತರ ನಡುವಿನ ಬಿರುಕು ಕಡಿಮೆ ಮತ ಗಳಿಸಲು ಕಾರಣವಾಗಿದೆ ಎಂದರು. ಮತ್ತೆ ಶಂಕುಸ್ಥಾಪನೆ ಮಾಡುತ್ತಿರುವ ಆರಗ ತಾವು … Read more

‘ಹದಿನೈದು ದಿನದಲ್ಲಿ ರೆಡಿಯಾಗಲಿವೆ ಬಗರ್ ಹುಕುಂ ಸಮಿತಿಗಳು’

Kumar Bangarappa Photo 1

ಶಿವಮೊಗ್ಗ ಲೈವ್.ಕಾಂ | 16 ಡಿಸೆಂಬರ್2018 ತಾಳಗುಪ್ಪ | ಹದಿನೈದು ದಿನದೊಳಗೆ ಬಗರ್’ಹುಕುಂ ಸಮಿತಿಗಳನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ ಅಂತಾ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ. ತಾಳಗುಪ್ಪದಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಶಾಸಕರು ಈ ವಿಚಾರ ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಸಮಿತಿಗಳ ರಚನೆ ಕುರಿತು ಸರ್ಕಾರ ಭರವಸೆ ನೀಡಿದೆ ಎಂದರು. ಮಲೆನಾಡಿನ ಸೊಪ್ಪಿನಬೆಟ್ಟ, ಕಾನು ಕುರಿತ ಸಮಸ್ಯೆ, ನೀರಾವರಿ ಮತ್ತು ರಸ್ತೆಗಳ ಕುರಿತು ಸದನದ ಗಮನ ಸೆಳೆಯಲಾಗಿದೆ. ಈ ಕುರಿತು … Read more

ಹೊಳಲೂರು ನಾಡ ಕಚೇರಿಗೆ ರಾಜ್ಯದಲ್ಲೇ ಮೂರನೇ ಸ್ಥಾನ, ಉಪ ತಹಶೀಲ್ದಾರ್’ಗೆ ಬಂತು ಅಭಿನಂದನಾ ಪತ್ರ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ನಿಗದಿಗಿಂತಲೂ ವೇಗವಾಗಿ ಅರ್ಜಿಗಳ ವಿಲೇವಾರಿ ಮಾಡಿದ ಹೊಳಲೂರು ನಾಡಕಚೇರಿಗೆ ಭೂಮಾಪನ ಇಲಾಖೆ ಆಯುಕ್ತ ಮುನಿಶ್ ಮೌದ್ಗಿಲ್ ಅಭಿನಂದನೆ ಸಲ್ಲಿಸಿದ್ದಾರೆ. ಸಾವಿರಕ್ಕಿಂತಲೂ ಕಡಿಮೆ ಅರ್ಜಿ ಪಡೆಯುವ ನಾಡ ಕಚೇರಿಗಳ ಪೈಕಿ, ವೇಗವಾಗಿ ವಿಲೇವಾರಿ ಮಾಡಿದ ರಾಜ್ಯದ ಮೂರನೇ ನಾಡ ಕಚೇರಿ ಎಂದು ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉಪತಹಶೀಲ್ದಾರ್ ತಿಲಕ್ ಅವರಿಗೆ ಅಭಿನಂದನಾ ಪತ್ರ ಕಳುಹಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಹೊಳಲೂರು ನಾಡಕಚೇರಿಗೆ 509 ಅರ್ಜಿಗಳು ಬಂದಿದ್ದವು. ಅವಧಿಗೂ ಮೊದಲೇ … Read more

ಮಾಜಿ ಶಾಸಕ ಕರಿಯಣ್ಣ ನಿಧನ, ಇಲ್ಲಿವೆ ಅವರ ಕುರಿತ ಹತ್ತು ಪ್ರಮುಖ ವಿಚಾರಗಳು

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಆರು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಶಾಸಕ ಕರಿಯಣ್ಣ (74), ಇವತ್ತು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕರಿಯಣ್ಣ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ನಡುವೆಯೂ ಬಿರುಸಿನ ಪ್ರಚಾರ ಆರೋಗ್ಯದಲ್ಲಿ ಸಮಸ್ಯೆಯಿದ್ದರೂ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ, ಕರಿಯಣ್ಣ, ಬಿರುಸಿನ ಪ್ರಚಾರ ನಡೆಸಿದ್ದರು. ತಮ್ಮ ಮಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ತಿ ಡಾ.ಶ್ರೀನಿವಾಸ್ ಪರವಾಗಿ ಹಗಲು ರಾತ್ರಿಯನ್ನದೆ ಪ್ರಚಾರ ನಡೆಸಿದ್ದರು. ಆ ಬಳಿಕ ಕರಿಯಣ್ಣ ಹೊರಗೆ ಕಾಣಿಸಿಕೊಂಡಿದ್ದು ವಿರಳ. ಮಾಜಿ … Read more

BRP ಪೊಲೀಸ್ ಉಪಠಾಣೆ ಎದುರಿಗೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ ಧರಣಿ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಪೊಲೀಸರ ದೌರ್ಜನ್ಯ ಖಂಡಿಸಿ, BRP ಉಪಠಾಣೆ ಎದುರು, ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡ, ಬೆಂಬಲಿಗರೊಂದಿಗೆ ಧರಣಿ ನಡೆಸಿದರು. ಹಾಗಾಗಿ ಪೊಲೀಸರು ಠಾಣೆಗೆ ಬೀಗ ಹಾಕಿ ಹೊರಗೆ ನಿಲ್ಲುವಂತಾಯಿತು. BRPಯ ಪ್ರವಾಸಿ ಖಾಸಗಿ ಬಸ್ ಮಾಲೀಕರೊಬ್ಬರು, ತಮ್ಮ ಟಾಟಾ ಏಸ್ ವಾಹನದಲ್ಲಿ ಭದ್ರಾವತಿಯಿಂದ ಕ್ಯಾನ್’ಗಳಲ್ಲಿ ಡೀಸೆಲ್ ತರುತ್ತಿದ್ದರು. BRPಯಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರು, ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. BRPಯ ಪೆಟ್ರೋಲ್ ಬಂಕ್’ನಲ್ಲಿ ಮೋಸವಾಗುತ್ತಿದೆ ಎಂದು ಬೇರೆಡೆಯಿಂದ … Read more

ಹಣ ದುರುಪಯೋಗ, ಪಿಡಿಓ ಸಸ್ಪೆಂಡ್, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಆದೇಶ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಹಣ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆ ಪಿಡಿಓ ಒಬ್ಬರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಓ ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ. ಕೋಣಂದೂರು ಗ್ರಾಮ ಪಂಚಾಯಿತಿಯ ಪಿಡಿಓ ಕೆ.ಎಸ್.ಕುಮಾರ್ ಅಮಾನತುಗೊಂಡವರು. ಮುಖ್ಯ ಲೆಕ್ಕಾಧಿಕಾರಿ ನೀಡಿದ ವರದಿ ಅನುಸಾರ ಕೆ.ಸಿ.ಎಸ್ (ಸಿಸಿಎ) ನಿಯಮ 10ರ ಅಡಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಪಿಡಿಓ ಅಮಾನತಿಗೆ ಕಾರಣಗಳೇನು? ಪಿಡಿಓ ಕೆ.ಎಸ್.ಕುಮಾರ್, ಹಿಂದಿನ ಪಿಡಿಓ ಸಹಿ ಫೋರ್ಜರಿ ಮಾಡಿ, … Read more

ಸಾವಿರ ಸಾವಿರ ಜನರ ಮುಂದೆ ಸನ್ಯಾಸ ದೀಕ್ಷೆ ಪಡೆದರು ಭದ್ರಾವತಿಯ ಇಂಜಿನಿಯರಿಂಗ್ ಪದವೀಧರ

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಇಂಜಿನಿಯರಿಂಗ್ ಪದವೀಧರೊಬ್ಬರು ಭದ್ರಾವತಿಯಲ್ಲಿ ಜೈನ ದೀಕ್ಷೆ ಪಡೆದು, ಸನ್ಯಾಸಿಯಾಗಿದ್ದಾರೆ. ಮೂರು ದಿನ ನಡೆದ ಕಾರ್ಯಕ್ರಮದ ಕೊನೆಯ ದಿನ, ದೀಕ್ಷೆ ಸ್ವೀಕರಿಸಿದ್ದಾರೆ. ಭದ್ರಾವತಿಯ ಭೂತನಗುಡಿಯ ದಿನೇಶ್ ಜೈನ್, ರಾಜುಲ್ ದೇವಿ ದಂಪತಿಯ ಮಗ ಜಿನೇಶ್ ಕುಮಾರ್ ಜೈನ್ ಜೈನ ಸನ್ಯಾಸಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದ ಜಿನೇಶ್ ಕುಮಾರ್ ಅವರು, ದೀಕ್ಷೆ ಪಡೆದು ಖೀಮಾ ವಿಜಯ್ ಜೀ ಮಹಾರಾಜ್ ಸಾಹೇಬ್ ಆಗಿದ್ದಾರೆ. ಜಿನೇಶ್ ಕುಮಾರ್ ಜೈನ್ ಆವರೊಂದಿಗೆ ಆಂಧ್ರದ ಭರತ್ ಕುಮಾರ್, … Read more

ಮತ್ತೊಂದು ಸುತ್ತಿನ ಪಾದಯಾತ್ರೆಗೆ ಕಿಮ್ಮನೆ ರತ್ನಾಕರ್ ಸಜ್ಜು, ಎಲ್ಲಿಂದೆಲ್ಲಿಗೆ ಪಾದಯಾತ್ರೆ? ಕಾರಣವೇನು?

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ಎರಡು ಪಾದಯಾತ್ರೆಗಳನ್ನು ನಡೆಸುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಏನೆಲ್ಲ ಹಗರಣಗಳಾಗಿವೆ? ಪಟ್ಟಿ ಬಿಡುಗಡೆ ಯಾವಾಗ? ಆರಗ ಜ್ಞಾನೇಂದ್ರ ಕ್ಷೇತ್ರದ ಶಾಸಕರಾಗುವ ಬದಲು ಬಿಜೆಪಿ ಶಾಸಕರಾಗಿದ್ದಾರೆ. ಅವರು ಶಾಸಕರಾದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಾಸಕರ ಬೆಂಬಲಿಗರೇ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಬಿಜೆಪಿ ತಾ.ಪಂ ಸದಸ್ಯರೊಬ್ಬರು ಪ್ರತೀ … Read more

ನಾಲ್ಕನೇ ದಿನವೂ ಶಿವಮೊಗ್ಗದಲ್ಲಿ ಮುಂದುವರೆದ ಆಪರೇಷನ್ ಸೆಲ್ಲರ್, ಎಲ್ಲೆಲ್ಲಿ ಕಾರ್ಯಾಚರಣೆ ನಡೆಯಿತು? ಇವತ್ತು ಏನೇನಾಯ್ತು?

ಶಿವಮೊಗ್ಗ ಲೈವ್.ಕಾಂ | 11 ಡಿಸೆಂಬರ್ 2018 ಸೆಲ್ಲರ್ ತೆರವು ಕಾರ್ಯಾಚರಣೆ ನಾಲ್ಕನೇ ದಿನಕ್ಕೂ ಮುಂದುವರೆದಿದೆ. ಶಿವಮೊಗ್ಗ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾಲಿಕೆಯ ಉಪ ಆಯುಕ್ತೆ ಡಾ.ಸಹನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇವತ್ತು ಬೆಳಗ್ಗೆಯಿಂದ, ಜ್ಯೂವೆಲ್ ರಾಕ್ ಹೊಟೇಲ್ ರಸ್ತೆಯಲ್ಲಿ ಆಪರೇಷನ್ ನಡೆಸಲಾಯಿತು. ಸೂರ್ಯ ಕಂಫರ್ಟ್, ಅನ್ಮೋಲ್ ಹೊಟೇಲ್, ಕುವೆಂಪು ರಸ್ತೆಯ ಕಾಂಪ್ಲೆಕ್ಸ್, ಗೋಪಾಳದ ನೂರು ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು. ಇನ್ನು, ಸಾಯಿ ಪ್ಯಾಲೇಸ್ ಮುಂಭಾಗ, ರಸ್ತೆಯ ಮೇಲೆ … Read more

ಶಿವಮೊಗ್ಗ ಕಾಂಗ್ರೆಸ್’ನಲ್ಲಿ ಸಂಭ್ರಮವೋ ಸಂಭ್ರಮ, ಪಟಾಕಿ ಹೊಡೆದು, ಸಿಹಿ ಹಂಚಿ ಖುಷಿ

ಶಿವಮೊಗ್ಗ ಲೈವ್.ಕಾಂ | 11 ಡಿಸೆಂಬರ್ 2018 ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿ ಕಾಯ್ದುಕೊಳ್ಳುತ್ತಿದ್ದಂತೆ, ಶಿವಮೊಗ್ಗದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಖಾಸಗಿ ಬಸ್ ನಿಲ್ದಾಣದ ಮುಂದೆ, ಅಶೋಕ ಸರ್ಕಲ್’ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಪರವಾಗಿ ಘೋಷಣೆಗಳನ್ನು ವಿಜಯೋತ್ಸವ ಆಚರಿಸಿದರು. ಇನ್ನು, ಕಾಂಗ್ರೆಸ್ ಕಚೇರಿ ಬಳಿಯೂ ಮುಖಂಡರು ಸಂಭ್ರಮಾಚರಣೆ ಮಾಡಿದರು. ಇಲ್ಲಿಯೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಪಕ್ಷದ ಪರವಾಗಿ ಘೋಷಣೆ ಕೂಗಿದರು.   … Read more