ಒಳ ಉಡುಪಿನಲ್ಲಿ ಗಾಂಜಾ ತಂದ ಅಧಿಕಾರಿ, ಸಿಕ್ಕಿಬಿದ್ದಿದ್ದು ಹೇಗೆ?

Shivamogga-Central-Prison-FDA-Arrested

ಶಿವಮೊಗ್ಗ: ತಪಾಸಣೆ ವೇಳೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯ ಒಳ ಉಡುಪಿನಲ್ಲಿ ಗಾಂಜಾ ಪತ್ತೆಯಾಗಿದೆ. ಅಧಿಕಾರಿಯನ್ನು ವಶಕ್ಕೆ ಪಡೆದು ತುಂಗಾ ನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಜೈಲಿನ ಎಫ್‌.ಡಿ.ಎ ಸಾತ್ವಿಕ್‌ (25) ಬಂಧಿತ. ಗುರುವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ ಸಾತ್ವಿಕ್‌ನನ್ನು ತಪಾಸಣೆ ಮಾಡಿದಾಗ ಒಳ ಉಡುಪಿನಲ್ಲಿ ಗಪ್‌ ಟೇಪ್‌ನಿಂದ ಸುತ್ತಿರುವ ವಸ್ತು ಪತ್ತೆಯಾಗಿತ್ತು. ಪರಿಶೀಲಿಸಿದಾಗ 170 ಗ್ರಾಂ ಗಾಂಜಾ ಸಿಕ್ಕಿದೆ. ಘಟನೆ ಕುರಿತು ಕೆ.ಎಸ್‌.ಐ.ಎಸ್‌.ಎಫ್‌ ಇನ್ಸ್‌ಪೆಕ್ಟರ್‌ ಜಗದೀಶ್‌, ಪಿ.ಎಸ್‌.ಐ ಪ್ರಭು, ಸಿಬ್ಬಂದಿ ಕುಪ್ಪೇರ ಬಸವರಾಜ್‌ … Read more

ಜಾತಿ ಸಮೀಕ್ಷೆ, ಅಧಿಕಾರಿಯನ್ನು ಅಮಾನತು ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ

himoga-DC-office-and-Police-jeep-in-front-of-office

ಶಿವಮೊಗ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆ ಸಮನ್ವಯಾಧಿಕಾರಿ ರಂಗನಾಥ್‌.ಎಂ ಅರವನ್ನು ಅಮಾನತು (Suspension) ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ರಂಗನಾಥ್‌.ಎಂ ಅವರು ಹೊನಸಗರ ತಾಲೂಕು ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಪೂರ್ವಾನುಮತಿ ಪಡೆಯದೆ ರಜೆ ಹಾಕಿದ್ದು, ದೂರವಾಣಿ ಕರೆಗು ಸ್ಪಂದಿಸಲಿಲ್ಲ. ಇದರಿಂದ ಸಮೀಕ್ಷೆ ಕಾರ್ಯಕ್ಕೆ ತೊಡಕಾಗಿದೆ. ಈ ಹಿನ್ನೆಲೆ ತಕ್ಷಣದಿಂದಲೇ ರಂಗನಾಥ್‌.ಎಂ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ … Read more

ಮಹಿಳಾ ಅಧಿಕಾರಿಗೆ ಮತ್ತೊಬ್ಬ ಮಹಿಳಾ ಅಧಿಕಾರಿಯಿಂದ ಬಂತು ವಾಟ್ಸಪ್‌ ಮೆಸೇಜ್‌, ಆಮೇಲೆ ಕಾದಿತ್ತು ಶಾಕ್

SMS-Fraud-Shimoga-CEN-Police-Station.

ಶಿವಮೊಗ್ಗ: ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ಮತ್ತೊಬ್ಬ ಮಹಿಳಾ ಅಧಿಕಾರಿಗೆ ಹಣಕ್ಕೆ ಬೇಡಿಕೆ ಇಟ್ಟು ₹60,000 ವಂಚಿಸಲಾಗಿದೆ. ಹ್ಯಾಕ್‌ ವಿಚಾರ ಗೊತ್ತಾಗಿದ್ದರಿಂದ ಮಹಿಳಾ ಅಧಿಕಾರಿ ಇನ್ನಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ. ಶಿವಮೊಗ್ಗದ ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಮತ್ತೊಬ್ಬ ಮಹಿಳಾ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದರು. ತಮ್ಮ ಯುಪಿಐ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸಾಗರ್‌ ಕುಮಾರ್‌ ಎಂಬುವವರ ಮೊಬೈಲ್‌ ನಂಬರ್‌ಗೆ ತುರ್ತಾಗಿ ₹60,000 ಫೋನ್‌ ಪೇ ಮೂಲಕ ವರ್ಗಾಯಿಸುವಂತೆ ತಿಳಿಸಲಾಗಿತ್ತು. ಇದನ್ನು … Read more

ವಾಯುಸೇನೆ ಅಧಿಕಾರಿ ಮಂಜುನಾಥ್‌ ಪಂಚಭೂತಗಳಲ್ಲಿ ಲೀನ, ಇಲ್ಲಿದೆ ಇಡೀ ದಿನದ ಕಂಪ್ಲೀಟ್‌ ಮಾಹಿತಿ

Airforce-officer-manjunath-last-rites-a-hosanagara

SHIVAMOGGA LIVE NEWS, 9 FEBRUARY 2025 ಹೊಸನಗರ : ಉತ್ತರ ಪ್ರದೇಶದ ಆಗ್ರಾದಲ್ಲಿ ಹುತಾತ್ಮರಾದ ವಾಯುಸೇನೆ ವಾರಂಟ್‌ ಆಫೀಸರ್‌ ಸಿ.ಜಿ.ಮಂಜುನಾಥ್‌ (36) ಅವರ ಅಂತ್ಯಕ್ರಿಯೆ (Last Rites) ಹುಟ್ಟೂರು ಸಂಕೂರು ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇದಕ್ಕೂ ಮುನ್ನ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಗ್ರಾಮದಲ್ಲಿ ಸಿ.ಜಿ.ಮಂಜುನಾಥ್‌ ಅವರ ಅಂತ್ಯಕ್ರಿಯೆ ನೆರವೇರಿತು. ಸಹೋದರನಿಂದ ಅಗ್ನಿಸ್ಪರ್ಶ ಸಂಕೂರಿನಲ್ಲಿ ಮನೆಯ ಆವರಣದಲ್ಲಿಯೆ ಸಿ.ಜಿ.ಮಂಜುನಾಥ್‌ ಅವರ … Read more

BREAKING NEWS | ಶಿವಮೊಗ್ಗಕ್ಕೆ ಸಿಐಡಿ ಅಧಿಕಾರಿಗಳು, ಪೆನ್‌ ಡ್ರೈವ್‌ ವಶಕ್ಕೆ

CID-officers-visit-Chandrashekaran-House-in-Kanchappa-Layout

SHIVAMOGGA LIVE NEWS | 28 MAY 2024 SHIMOGA : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ (Officer) ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ತನಿಖೆ ಆರಂಭಿಸಿದ ಸಿಐಡಿ ಅಧಿಕಾರಿಗಳು ಶಿವಮೊಗ್ಗಕ್ಕೆ ಆಗಮಿಸಿದೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆಂಚಪ್ಪ ಲೇಔಟ್‌ನಲ್ಲಿ ನಿಗಮದ ಅಧಿಕಾರಿ ಚಂದ್ರಶೇಖರನ್ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮನೆಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್‌ಪಿ … Read more

ಶಿವಮೊಗ್ಗದಲ್ಲಿ ಸರ್ಕಾರಿ ಅಧಿಕಾರಿ ನೇಣಿಗೆ ಶರಣು, ಡೆತ್‌ ನೋಟ್‌ನಲ್ಲಿತ್ತು ಮೂವರ ಹೆಸರು

government-officer-chandrashekar-succumbed-at-home.

SHIVAMOGGA LIVE NEWS | 27 MAY 2024 SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಸರ್ಕಾರಿ ಅಧಿಕಾರಿಯೊಬ್ಬರು (Officer) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಬಡಾವಣೆಯ ಮನೆಯಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟೆಂಟ್‌ ಚಂದ್ರಶೇಖರ್‌ (50) ನೇಣು ಬಿಗಿದುಕೊಂಡವರು. ಮನೆಯಲ್ಲಿ ಯಾರೂ ಇಲ್ಲದಾಗ ನೇಣಿಗೆ ಚಂದ್ರಶೇಖರ್‌ ಪತ್ನಿ ಕವಿತಾ ಶಿವಮೊಗ್ಗದ ವಿಕಲಚೇತನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಚಂದ್ರಶೇಖರ್‌ ಶಿವಮೊಗ್ಗದಲ್ಲಿ ಮನೆ ಮಾಡಿದ್ದರು. ಮೇ 24ಕ್ಕೆ ಬೆಂಗಳೂರಿನಿಂದ … Read more

ಶಿವಮೊಗ್ಗದ ಮಹಿಳೆಯರೆ ಹುಷಾರ್‌, ನಿಮ್ಮನ್ನೂ ಅಡ್ಡಗಟ್ಟಬಹುದು ಈ ತನಿಖಾಧಿಕಾರಿಗಳು, ಏನಿದು ಕೇಸ್?

crime name image

SHIVAMOGGA LIVE NEWS | 27 APRIL 2024 SHIMOGA : ಪೊಲೀಸ್‌ ಅಧಿಕಾರಿಗಳಂತೆ ನಟಿಸಿ ಮಹಿಳೆಯೊಬ್ಬರ ಚಿನ್ನಾಭರಣ ಕಳವು ಮಾಡಲಾಗಿದೆ. ಶಿವಮೊಗ್ಗದ ಜೈಲ್‌ ವೃತ್ತದಲ್ಲಿ ಘಟನೆ ಸಂಭವಿಸಿದೆ. ಹೊಸಮನೆ ಬಡಾವಣೆ ನಿವಾಸಿ ಶಂಕರಮ್ಮ ಎಂಬುವವರು ಪೋಸ್ಟ್‌ ಆಫೀಸ್‌ಗೆ ತೆರಳುತ್ತಿದ್ದಾಗ ಪೊಲೀಸ್‌ ಅಧಿಕಾರಿ ಎಂದು ನಂಬಿಸಿ ಚಿನ್ನಾಭರಣ ಕದ್ದು ವಂಚಿಸಲಾಗಿದೆ. ‘ರವಿ ಸರ್‌ ಕರೆಯುತ್ತಿದ್ದಾರೆʼ ಜೈಲ್‌ ವೃತ್ತದ ಬಳಿ ಗೌರಮ್ಮ ಅವರನ್ನು ತಡೆದ ವ್ಯಕ್ತಿಯೊಬ್ಬ ‘ರವಿ ಸರ್‌ ಕರೆಯುತ್ತಿದ್ದಾರೆ’ ಎಂದು ತಿಳಿಸಿದ. ಆತನ ಬಳಿ ಹೋದಾಗ, ‘ಯುವತಿ … Read more

ಶಿವಮೊಗ್ಗದ ಮೇಘನಾಗೆ UPSC ಪರೀಕ್ಷೆಯಲ್ಲಿ ಮತ್ತೊಮ್ಮೆ ರ‍್ಯಾಂಕ್, ಐಎಎಸ್‌ ಹುದ್ದೆ ದೊರೆಯುವ ನಿರೀಕ್ಷೆ

Shimoga-Meghana-gets-UPSC-Rank

SHIVAMOGGA LIVE NEWS | 17 APRIL 2024 SHIMOGA : ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶಿವಮೊಗ್ಗದ ಐ.ಎನ್.ಮೇಘನಾ 589ನೇ ರ‍್ಯಾಂಕ್ ಪಡೆದಿದ್ದಾರೆ. ಈ ಬಾರಿ ಅವರಿಗೆ ಐಎಎಸ್‌ ಹುದ್ದೆ ಲಭಿಸುವ ಸಾಧ್ಯತೆ ಇದೆ. ಮೇಘನಾ ಅವರು ಕಳೆದ ವರ್ಷ ಯುಪಿಎಸ್‌ಸಿ ಪರೀಕ್ಷೆಯಲ್ಲಿ 617ನೇ ರ‍್ಯಾಂಕ್ ಪಡೆದಿದ್ದರು. ಹಾಗಾಗಿ ಅವರಿಗೆ ಐಪಿಎಸ್‌ ಹುದ್ದೆ ಲಭಿಸಿತ್ತು. ಮಹಾರಾಷ್ಟ್ರ ಕೇಡರ್‌ನ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದು ಐಎಎಸ್‌ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಯಾರು ಈ ಮೇಘನಾ? … Read more

ಮಹಿಳಾ ಆಫೀಸರ್‌ಗೆ ವಾಟ್ಸಪ್‌ ಕಾಲ್‌, ರಿಸೀವ್‌ ಮಾಡ್ತಿದ್ದಂತೆ ಕಾದಿತ್ತು ಶಾಕ್‌, ಫೋನ್‌ ಮಾಡಿದ್ರಾ ಲೋಕಾಯುಕ್ತ?

himoga-DC-office-and-Police-jeep-in-front-of-office

SHIVAMOGGA LIVE NEWS | 16 FEBRUARY 2024 SHIMOGA : ಲೋಕಾಯುಕ್ತ ಅಧಿಕಾರಿಗಳೆಂದು ಕರೆ ಮಾಡಿ, ಸದ್ಯದಲ್ಲೇ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾಗಲಿದೆ ಎಂದು ಮಹಿಳಾ ಅಧಿಕಾರಿಗೆ ಬೆದರಿಕೆಯೊಡ್ಡಲಾಗಿದೆ. ಅವರಿಂದ 1 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ವೇಳೆ ಮಹಿಳೆಗೆ ಕರೆ ಮಾಡಿ ಬೆದರಿಸಲಾಗಿದೆ. ಆಹಾರ ಇಲಾಖೆಯಲ್ಲಿ ಶಿರಸ್ತೇದಾರ್‌ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಆಗಮಿಸಿದ್ದರು. ಈ ಸಂದರ್ಭ ವಾಟ್ಸಪ್‌ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಲೋಕಾಯುಕ್ತ … Read more

ವೇಶ್ಯಾವಾಟಿಕೆ ಆರೋಪ, ಶಿವಮೊಗ್ಗದ ವಿನೋಬನಗರದಲ್ಲಿ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ದಾಳಿ

Police-Van-Jeep-at-Shimoga-Nehru-Road

SHIVAMOGGA LIVE | 25 JUNE 2023 SHIMOGA : ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಹಿನ್ನೆಲೆ ವಿನೋಬನಗರ ಸ್ಪಾ (Spa) ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸಂತ್ರಸ್ತ ಯುವತಿಯರ ರಕ್ಷಣೆ ಮಾಡಲಾಗಿದೆ. ವಿನೋಬನಗರದಲ್ಲಿರುವ ದಿ ಅರ್ಬನ್‌ ಸ್ಪಾ (Spa) ಮೇಲೆ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಬಿಂದು ಮಣಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಲ್ಲಿದ್ದ ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ … Read more