‘ಶಿವಮೊಗ್ಗಕ್ಕೆ ಇನ್ನೂ ₹100 ಕೋಟಿ ಬರಬೇಕಿತ್ತು’, ಸಂಸದ ರಾಘವೇಂದ್ರ ಆಕ್ರೋಶ, ಆಗಿದ್ದೇನು?

BY-Raghavendra-Press-meet-in-Shimoga-city

ಶಿವಮೊಗ್ಗ: ಮಳೆ ಮಾಪನ ಕೇಂದ್ರಗಳ ಅವ್ಯವಸ್ಥೆ ಹಾಗೂ ವಿಮಾ ಕಂಪನಿಯ ನಿಯಮಾವಳಿಗಳಿಂದ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗೆ ವಿಮಾ ಮೊತ್ತ ಅತ್ಯಂತ ಕಡಿಮೆ ನಿಗದಿಪಡಿಸಿದ್ದು, ರೈತರಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು. ವಿನೋಬನಗರದ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಅಡಿಕೆ, ಮಾವು, ಕಾಳುಮೆಣಸು ಹಾಗೂ ಶುಂಠಿ ಬೆಳೆಯುವವರು ಸೇರಿದಂತೆ ಶಿವಮೊಗ್ಗ ಜಿಲ್ಲೆಯ 89,611 ರೈತರಿಗೆ ₹113.23 ಕೋಟಿ ಮೊತ್ತದ ವಿಮಾ ಮೊತ್ತ ಬಿಡುಗಡೆ ಆಗಿದೆ. ಆದರೆ ನ್ಯಾಯಬದ್ಧವಾಗಿ ವಿಮೆ ನಿಗದಿಪಡಿಸಿದ್ದರೆ ಜಿಲ್ಲೆಗೆ … Read more

ಲೋಕಸಭೆ ಅಧಿವೇಶನ, ಮೊದಲ ದಿನವೇ ಬಿ.ವೈ.ರಾಘವೇಂದ್ರ ಪ್ರಮಾಣವಚನ

BY-Raghavendra-takes-oath-in-Parliament

SHIVAMOGGA LIVE NEWS | 24 JUNE 2024 NATIONAL NEWS : 18ನೇ ಲೋಕಸಭೆಯ ಮೊದಲ ಸಂಸತ್‌ ಅಧಿವೇಶನ ಇವತ್ತಿನಿಂದ ಆರಂಭವಾಗಿದೆ. ನೂತನ ಲೋಕಸಭೆ ಸದಸ್ಯರು ಇವತ್ತು ಪ್ರಮಾಣ ವಚನ (Oath) ಸ್ವೀಕರಿಸಿದರು. ಮೊದಲ ದಿನವೇ ಶಿವಮೊಗ್ಗ ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಪ್ರಮಾಣ ವಚನ ಸ್ವೀಕರಿಸಿದರು. ಸಂಸದ ಬಿ.ವೈ.ರಾಘವೇಂದ್ರ ಅವರು ಕನ್ನಡದಲ್ಲಿ ಪ್ರತಿಜ್ಞೆ ಸ್ವಿಕರಿಸಿದರು. ಶಿವಮೊಗ್ಗ ಲೋಕಸಭೆ ಕ್ಷೇತ್ರದ ‘ಮತದಾರ ದೇವರುಗಳʼ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಹಂಗಾಮಿ ಸ್ಪೀಕರ್‌ ಭತೃಹರಿ ಮೆಹ್ತಾಬ್‌ ಅವರಿಗೆ … Read more

ಇಂದಿನಿಂದ ಸಂಸತ್‌ ಅಧಿವೇಶನ, ನೂತನ ಸಂಸದರಿಗೆ ಪ್ರಮಾಣ ವಚನ, ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆ

DESHA-VIDESHA-copy.webp

SHIVAMOGGA LIVE NEWS | 24 JUNE 2024 NATIONAL NEWS : 18ನೇ ಲೋಕಸಭೆಯ ಮೊದಲ ಸಂಸತ್ ಅಧಿವೇಶನ (Session) ಇಂದಿನಿಂದ ಆರಂಭವಾಗಲಿದೆ. ಮೊದಲ 2 ದಿನ ಎಲ್ಲ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26ರಂದು ಲೋಕಸಭೆ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹಂಗಾಮಿ ಸ್ಪೀಕರ್‌ ಆಗಿ ಹಿರಿಯ ಸಂಸದ 18ನೇ ಲೋಕಸಭೆಯ ಹಂಗಾಮಿ ಸ್ಪೀಕರ್‌ ಆಗಿ ಬಿಜೆಪಿಯ … Read more

ವಿಐಎಸ್‌ಎಲ್‌ನ ಅಧಿಕಾರಿ ಶಿವಮೊಗ್ಗದ ಸಂಸದರಾಗಿದ್ದರು, ಹೇಗದು?

ST-Quadri-Shimoga-MP

SHIVAMOGGA LIVE NEWS | 16 APRIL 2024 ELECTION SPECIAL : ತುರ್ತು ಪರಿಸ್ಥಿತಿ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. 1977ರಲ್ಲಿ ಕಾಂಗ್ರೆಸ್‌ ಸೋಲಿಸಿ ಗದ್ದುಗೆ ಹಿಡಿದಿದ್ದ ಜನತಾ ಪಕ್ಷಗಳು ಒಗ್ಗಟು ಕಾಯ್ದುಕೊಳ್ಳಲಾಗದೆ ಸರ್ಕಾರ ಪತನವಾಗಿತ್ತು. ಹಾಗಾಗಿ 1980ರ ಲೋಕಸಭೆ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿತ್ತು. ಎಲ್ಲೆಲ್ಲು ಇಂದಿರಾ ಗಾಂಧಿ ಅಲೆ ಇತ್ತು. ಈ ಹೊತ್ತಿಗೆ ಕಾಂಗ್ರೆಸ್‌ ಪಕ್ಷವು ಹೋಳಾಗಿತ್ತು. ವಿಐಎಸ್‌ಎಲ್‌ ಅಧಿಕಾರಿ ಸಂಸದರಾದರು 1977ರಲ್ಲಿ … Read more

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ನಿಷೇಧಾಜ್ಞೆ, ಕಾರಣವೇನು? ಯಾವಾಗ ಜಾರಿಯಾಗುತ್ತೆ?

himoga-DC-office-and-Police-jeep-in-front-of-office

SHIVAMOGGA LIVE NEWS | 6 APRIL 2024 SHIMOGA : ಲೋಕಸಭೆ ಚುನಾವಣೆಗೆ ಶಿವಮೊಗ್ಗದಲ್ಲಿ ಅಧಿಸೂಚನೆ ಹೊರಡಿಸಿದಾಗಿನಿಂದ ಏ.22ರವರೆಗೆ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶಿಸಿದ್ದಾರೆ. ಏ.12ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ.19ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಹಾಗಾಗಿ ಏ.12ರ ಬೆಳಗ್ಗೆ 6 ರಿಂದ ಏ.22 ರ ಸಂಜೆ 6 ಗಂಟೆಯವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದ 100 ಮೀ. … Read more

ಸಂಸತ್ತಿನಲ್ಲಿ ಶಿವಮೊಗ್ಗ ಸಂಸದರು ಕೇಳಿದ ಮೊದಲ ಪ್ರಶ್ನೆ ಏನು? ಸಚಿವರ ಉತ್ತರವೇನಿತ್ತು? ಇಲ್ಲಿದೆ ಡಿಟೇಲ್ಸ್‌

nimagidu-gotha-first-question-in-loksabha

SHIVAMOGGA LIVE NEWS | 2 APRIL 2024 ELECTION SPECIAL : ಇಡೀ ದೇಶದ ಸಮಸ್ಯೆಗಳ ಪರಿಹಾರಕ್ಕೆ ಪ್ರಮುಖ ವೇದಿಕೆ ಲೋಕಸಭೆ. ಇಲ್ಲಿ ಮಾತನಾಡಲು, ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆ ಕುರಿತು ಪ್ರಶ್ನಿಸಲು ಸಂಸದರಿಗೆ ಅವಕಾಶ ದೊರೆಯುವುದು ಅಷ್ಟು ಸುಲಭವಲ್ಲ. ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ ಕೆ.ಜಿ.ಒಡೆಯರ್‌ ಅವರು ಸಂಸತ್ತಿನಲ್ಲಿ ಮೊದಲ ಬಾರಿ ಪ್ರಶ್ನೆ ಕೇಳಿದ್ದು 1953ರ ಸೆಪ್ಟೆಂಬರ್‌ 9ರಂದು. ಮೊದಲ ಪ್ರಶ್ನೆ ಅಡಿಕೆ ಬಗ್ಗೆ 1950 ರಿಂದ 1953ರವರೆಗೆ ಭಾರತದಲ್ಲಿ ಉತ್ಪಾದನೆಯಾದ ಅಡಿಕೆ ಪ್ರಮಾಣವೆಷ್ಟು? … Read more

ಶಿವಮೊಗ್ಗದ ಮೊದಲ ಸಂಸದ ಯಾರು ಗೊತ್ತಾ? ಬ್ರಿಟೀಷರಿಗೆ ಅವರನ್ನು ಕಂಡರೆ ಮುಖ ಕೆಂಪಾಗುತ್ತಿದ್ದದ್ದು ಯಾಕೆ?

KG-Wodeyar-Shimoga-loksabha-MP-mysore-state.

SHIVAMOGGA LIVE NEWS | 1 APRIL 2024 ELECTION SPECIAL : ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು, ಅರಣ್ಯ ಸತ್ಯಾಗ್ರಹ ನಡೆಸಿದ್ದ ಕೆ.ಜಿ.ಒಡೆಯರ್‌ ಶಿವಮೊಗ್ಗ ಕ್ಷೇತ್ರದ ಮೊದಲ ಸಂಸದ. ಮಹಾತ್ಮ ಗಾಂಧೀಜಿ ಅನುಯಾಯಿಯಾಗಿದ್ದ ಕೆ.ಜಿ.ಒಡೆಯರ್‌ ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಧ್ಯ ಕರ್ನಾಟಕ ಭಾಗದಲ್ಲಿನ ಹಲವು ಚಳವಳಿಗಳಲ್ಲಿ ಭಾಗವಹಿಸಿದ್ದರು. ಅರಣ್ಯ ಸತ್ಯಾಗ್ರಹದಲ್ಲಿ ಮುಂಚೂಣಿ ಸ್ವಾತಂತ್ರ್ಯ ಚಳವಳಿ ವೇಳೆ ಅರಣ್ಯ ಸತ್ಯಾಗ್ರಹವು ಪ್ರಮುಖ ಹೋರಾಟವಾಗಿತ್ತು. ಸರ್ಕಾರಿ ಜಮೀನಿನಲ್ಲಿರುವ ಬೈನೆ ಮರಗಳನ್ನು ಕಡಿದು ಹೆಂಡ ಸರಬರಾಜು ಅಗದಂತೆ ತಡೆಯುವುದು ಇದರ ಪ್ರಮುಖ … Read more

ರಾಜ್ಯಮಟ್ಟಕ್ಕೆ ಶಿವಮೊಗ್ಗದ ಇಬ್ಬರು ವಿದ್ಯಾರ್ಥಿನಿಯರು

Shalini-Sinchana-selected-for-State-Level

SHIVAMOGGA LIVE NEWS | 2 FEBRUARY 2023 SHIMOGA | ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಯ ಇಬ್ಬರು ಯುವತಿಯರು ಬಹುಮಾನ ಗಳಿಸಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ವತಿಯಿಂದ ರಾಷ್ಟ್ರೀಯ ಯುವ ಸಂಸತ್ತು (Yuva Samsat) ಪ್ರಯುಕ್ತ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉಡುಪಿಯಲ್ಲಿ ನಡೆದ ವರ್ಚುವಲ್ ವೇದಿಕೆ ಮೂಲಕ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶಿವಮೊಗ್ಗದ ಶಾಲಿನಿ ಅವರು ಪ್ರಥಮ ಮತ್ತು ಸಿಂಚನಾ ಅವರು ದ್ವಿತೀಯ … Read more

ನೆಟ್ ವರ್ಕ್ ಸಮಸ್ಯೆ, ಕೇಂದ್ರ ಸಚಿವರಿಗೆ ಹಳ್ಳಿಗಳ ಹೆಸರಿನ ಪಟ್ಟಿ ಸಹಿತ ಮನವಿ, ಯಾವೆಲ್ಲ ಊರಿನ ಹೆಸರಿದೆ?

BY-Raghavendra-Submits-Memorandum-to-telecom-ministry.

ಶಿವಮೊಗ್ಗ | ಜಿಲ್ಲೆಯಲ್ಲಿ ನೆಟ್ ವರ್ಕ್ (NETWORK) ಸಮಸ್ಯೆ ಉಂಟಾಗಿರುವ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು. ದೆಹಲಿಯಲ್ಲಿ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದರು. ಜಿಲ್ಲೆಯ 80 ಗ್ರಾಮಗಳು ಸೇರಿದಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 96 ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಇಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ … Read more

ದೇಶದಲ್ಲಿ ಶಿವಮೊಗ್ಗ ಸಂಸದ ರಾಘವೇಂದ್ರಾಗೆ ನಂಬರ್ 2 ಸ್ಥಾನ

BY Raghavendra 1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ನವೆಂಬರ್ 2021 ಸಂಸದರ ನಿಧಿಯಡಿ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು ಸಂಸದರ ನಿಧಿ ಬಳಕೆಯಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ. 2019-20ರ ಸಾಲಿಗೆ ಸಂಬಂಧಿಸಿದಂತೆ 5 ಕೋಟಿ ರೂ. ಅನುದಾನ ಹಾಗೂ 10 ರಿಂದ 15ನೇ ಲೋಕಸಭೆವರೆಗೆ ಬಳಕೆಯಾಗದೆ ಇದ್ದ 4.40 ಕೋಟಿ ರೂ. ಅನುದಾನವೂ ಸೇರಿದಂತೆ 9.40 ಕೋಟಿ ರೂ.ದಲ್ಲಿ ಈಗಾಗಲೇ 9 ಕೋಟಿ ರೂ. ಬಳಕೆ ಮಾಡಿದ್ದಾರೆ. … Read more