ಶಿವಮೊಗ್ಗದಲ್ಲಿ ಮೀಸಲಾತಿಯ ಶವಯಾತ್ರೆ, ಶಿವಮೂರ್ತಿ ಸರ್ಕಲ್‌ನಲ್ಲಿ ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ರಸ್ತೆ ತಡೆ

Banjara-Sangha-Protest-in-Shivamurthy-Circle-against-Internal-Reservation

ಶಿವಮೊಗ್ಗ: ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರ (Banjara) ಸಮುದಾಯ ನಡೆಸುತ್ತಿರುವ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತು ಮೀಸಲಾತಿಯ ಶವಯಾತ್ರೆ ನಡೆಸಿ ಬಂಜಾರ ಸಮುದಾಯದವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸವಳಂಗ ರಸ್ತೆಯಲ್ಲಿ ಮೀಸಲಾತಿಯ ಶವಯಾತ್ರೆ ನಡೆಸಲಾಯಿತು. ಶಿವಮೂರ್ತಿ ಸರ್ಕಲ್‌ನಲ್ಲಿ ಅಣಕು ಶವವನ್ನು ಇರಿಸಿ ಘೋಷಣೆ ಕೂಗಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶವಯಾತ್ರೆ ಮುಂದುವರೆಸಿದರು. ಟ್ರ್ಯಾಕ್ಟರ್‌ ಅಡ್ಡ ನಿಲ್ಲಿಸಿ ರಸ್ತೆ ತಡೆ ಇನ್ನು, ಶಿವಮೂರ್ತಿ ವೃತ್ತದಲ್ಲಿ ಎಲ್ಲ ಕಡೆ ಟ್ರ್ಯಾಕ್ಟರ್‌ಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ … Read more

ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ ಮುಕ್ತಾಯ, ನಾಳೆ ಫಲಿತಾಂಶ, ಎಷ್ಟಾಗಿದೆ ಮತದಾನ?

vokkaligara-sanga-election-in-Shimoga

SHIMOGA, 11 AUGUST 2024 : ಜಿಲ್ಲಾ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ಇವತ್ತು ಚುನಾವಣೆ (Election) ನಡೆಯಿತು. ಶೇ.65ರಷ್ಟು ಮತದಾನವಾಗಿದೆ. ಸೋಮವಾರ ಮತ ಎಣಿಕೆ ಕಾರ್ಯ ನಡೆಯಲಿದೆ. ಬಾಲರಾಜ ಅರಸ್‌ ರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಆವರಣದಲ್ಲಿ ಇಂದು ಮತದಾನ ನಡೆಯಿತು. 2599 ಮತದಾರರು ಹಕ್ಕು ಚಲಾಯಿಸಿದ್ದಾರೆ. 29 ಅಭ್ಯರ್ಥಿಗಳು ಕಣದಲ್ಲಿದ್ದು, 21 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಮತದಾನ ಮಾಡಿದರು. ಇದನ್ನೂ ಓದಿ ⇒ ಶಿವಮೊಗ್ಗದಲ್ಲಿಯು ನಡೆಯಲಿದೆ ಕರಾವಳಿಯ ಕಂಬಳ ಸ್ಪರ್ಧೆ, … Read more

ಪ್ರಣವಾನಂದ ಸ್ವಾಮೀಜಿ ವಿರುದ್ಧ ಈಡಿಗರು ಗರಂ, ಮಿನಿಸ್ಟರ್‌ ಕುರಿತ ಹೇಳಿಕೆ ಹಿಂಪಡೆಯಲು ವಾರ್ನಿಂಗ್‌

Hulthikoppa-Shridhar-press-meet-in-Shimoga-Ediga-Sanga

SHIVAMOGGA LIVE NEWS | 21 SEPTEMBER 2023 SHIMOGA : ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಪ್ರಣವಾನಂದ ಸ್ವಾಮೀಜಿ (Pranavananda Swamiji) ಅವಹೇಳನಕಾರಿ ಹೇಳಿಕೆ (Statement) ನೀಡಿದ್ದು ಖಂಡನೀಯ. ಸ್ವಾಮೀಜಿ ತಕ್ಷಣ ತಮ್ಮ ಹೇಳಿಕೆ ಹಿಂಪಡೆಯುಬೇಕು ಎಂದು ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್‌ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಣವಾನಂದ ಸ್ವಾಮೀಜಿ ಈಡಿಗ ಸಮುದಾಯದ ಸ್ವಯಂ ಘೋಷಿತ ಸ್ವಾಮೀಜಿ. ಅವರು ಸಮುದಾಯದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರ ಕುರಿತು … Read more

ಮಠಗಳಿಗೆ ಸರ್ಕಾರ ಅನುದಾನ ನೀಡಿದ್ದಕ್ಕೆ ಅಪಸ್ವರ, ಆದಿಚುಂಚನಗಿರಿ ಶ್ರೀಗಳು ಹೇಳಿದ್ದೇನು?

Niramalanandanatha-Swamiji-Yedyurappa-Balakrishna-prasannanatha-swamiji

SHIVAMOGGA LIVE NEWS | 3 NOVEMBER 2022 SHIMOGA | ಯಡಿಯೂರಪ್ಪ ಅವರು ಮಠಗಳಿಗೆ ಅನುದಾನ (funds for mutts) ಬಿಡುಗಡೆ ಮಾಡಿದ್ದನ್ನು ಹಲವರು ಪ್ರಶ್ನಿಸಿದರು. ಆದರೆ ಮಠಗಳನ್ನು  ಚೈತನ್ಯಶೀಲವಾಗಿ ಇರಿಸುವುದಕ್ಕಾಗಿ ಯಡಿಯೂರಪ್ಪ ಅವರು ಅನುದಾನ ನೀಡಿದರು ಎಂದು ಗುರುಗಳು ಹೇಳಿದ್ದರು ಎಂದು ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಕುವೆಂಪು ರಂಗ ಮಂದಿರದಲ್ಲಿ ಒಕ್ಕಲಿಗರ ಸಂಘದ ಸಮುದಾಯ ಭವನದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ನಿರ್ಮಲಾನಂದನಾಥ … Read more

ಶಿವಮೊಗ್ಗ ಒಕ್ಕಲಿಗರ ಸಂಘದ ಸಮುದಾಯ ಭವನದ ಭೂಮಿ ಪೂಜೆ, ಹೇಗಿರುತ್ತೆ ಭವನ? ಏನೇನಿರುತ್ತೆ?

Vokkaliga-Sanga-President-Srikanth-at-Shimoga

SHIVAMOGGA LIVE NEWS | 1 NOVEMBER 2022 SHIMOGA |ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜಿಲ್ಲಾ ಒಕ್ಕಲಿಗರ (VOKKALIGA SANGA) ಸಮುದಾಯ ಭವನದ ಮುಂದುವರೆದ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎನ್.ಹೆಚ್.ಶ್ರೀಕಾಂತ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಕಾಂತ್ ಅವರು, ನ.3ರಂದು ಬೆಳಗ್ಗೆ 10.30ಕ್ಕೆ ಒಕ್ಕಲಿಗರ (VOKKALIGA SANGA) ಸಂಘದ ಆವರಣದಲ್ಲಿ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಬೆಳಗ್ಗೆ 11.30ಕ್ಕೆ ಕುವೆಂಪು … Read more

ಶಿವಮೊಗ್ಗ ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಬಹುಮಾನ ಪ್ರಕಟ, ಯಾವೆಲ್ಲ ಪುಸ್ತಕಕ್ಕೆ ಪ್ರಶಸ್ತಿ ಲಭಿಸಿದೆ?

karnataka-sanga-award-in-Shimoga

ಶಿವಮೊಗ್ಗ | ಕರ್ನಾಟಕ ಸಂಘದ (KARNATAKA SANGA) ವಾರ್ಷಿಕ ಪುಸ್ತಕ ಪ್ರಶಸ್ತಿ (BOOK AWARD) ಪ್ರಕಟಿಸಲಾಗಿದೆ. ಪ್ರಶಸ್ತಿ ವಿಜೇತರಿಗೆ ಹತ್ತು ಸಾವಿರ ರೂ. ನಗದು, ಫಲಕ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅವರು ತಿಳಿಸಿದ್ದಾರೆ. ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ ಕಾದಂಬರಿ ವಿಭಾಗದಲ್ಲಿ ಕುವೆಂಪು ಪ್ರಶಸ್ತಿ – ವೈಷ್ಣವ ಜನತೋ ಕಾದಂಬರಿಗೆ ಚಿತ್ರದುರ್ಗದ ಲೋಕೇಶ್ ಅಗಸನಕಟ್ಟೆ ಅನುವಾದ ವಿಭಾಗದಲ್ಲಿ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ – ಪ್ರೇಮಪತ್ರ ಪುಸ್ತಕಕ್ಕೆ ಹಂಪಿಯ ವಿದ್ಯಾರಣ್ಯದ ಡಾ. ಎ.ಮೋಹನ ಕುಂಟಾರ್. … Read more

ಶಿವಮೊಗ್ಗದಲ್ಲಿ ರೈತ ಸಂಘದ ತುರ್ತು ಸಭೆ, ರಾಜ್ಯಾಧ್ಯಕ್ಷರ ವಜಾ, ಹೊಸ ಅಧ್ಯಕ್ಷರ ನೇಮಕ

Raitha-Sanga-HR-Basavarajappa-new-president

SHIVAMOGGA LIVE NEWS | FARMER | 31 ಮೇ 2022 ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಚಾಟಿಸಲಾಗಿದೆ. ಶಿವಮೊಗ್ಗದ ರೈತ ಸಂಘ ಕಾರ್ಯಾಲಯದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈವರೆಗೂ ಸಂಘದ ಗೌರವಾಧ್ಯಕ್ಷರಾಗಿದ್ದ ಹೆಚ್.ಆರ್.ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆ … Read more

ಕರ್ನಾಟಕ ಸಂಘ ಬಳಿ ಬ್ರಾಂಚ್ ಮ್ಯಾನೇಜರ್ ಬ್ಯಾಗ್ ಲಪಟಾಯಿಸಿದ ಕಳ್ಳರು

crime name image

SHIVAMOGGA LIVE NEWS | 1 ಮಾರ್ಚ್ 2022 ಫೈನಾನ್ಸ್ ಸಂಸ್ಥೆಯೊಂದರ ಬ್ರಾಂಚ್ ಮ್ಯಾನೇಜರ್ ಒಬ್ಬರ ಲ್ಯಾಪ್ ಟಾಪ್ ಬ್ಯಾಗ್ ಮತ್ತು ದಾಖಲೆಗಳ ಕಳ್ಳತನವಾಗಿದೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಘಟನೆ ಸಂಭವಿಸಿದೆ. ವಿಶ್ವನಾಥ್ ಎಂಬುವವರು ತಮ್ಮ ಲ್ಯಾಪ್ ಟಾಪ್, ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಹೇಗಾಯ್ತು ಘಟನೆ? ವಿಶ್ವನಾಥ್ ಅವರು ಡೆಪ್ಯುಟೇಷನ್ ಮೇಲೆ ಫೈನಾನ್ಸ್ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಬರುತ್ತಿದ್ದರು. ದಾವಣಗೆರೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ತಾವು ಕುಳಿತಿದ್ದ ಸೀಟಿನ … Read more

ಒಕ್ಕಲಿಗರ ಸಂಘದ ಚುನಾವಣೆ, ಶಿವಮೊಗ್ಗದಲ್ಲಿ ಮತ ಎಣಿಕೆ ಆರಂಭ

151221 Vokkaliga Sanga Election Counting

ಶಿವಮೊಗ್ಗ ಲೈವ್.ಕಾಂ | SHIVAMOGGA LIVE NEWS | 15 ಡಿಸೆಂಬರ್ 2021 ತೀವ್ರ ಕುತೂಹಲ ಮೂಡಿಸಿರುವ ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕ ಸ್ಥಾನದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮತ ಎಣಿಕೆ ಕೇಂದ್ರದ ಬಳಿ ಸ್ಪರ್ಧಿಗಳ ಅಭಿಮಾನಿಗಳು ಜಮಾಯಿಸಿದ್ದು ಫಲಿತಾಂಶದತ್ತ ಕುತೂಹಲದ ಕಣ್ಣಿಟ್ಟಿದ್ದಾರೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಆರ್ಯವೈಶ್ಯ ಸಹಕಾರ ಸಂಘದ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮೊದಲ ಸುತ್ತಿನ ಎಣಿಕೆ ಶಿವಮೊಗ್ಗ – ಉತ್ತರ ಕನ್ನಡ ಜಿಲ್ಲೆಗಳ ಒಂದು ನಿರ್ದೇಶಕ ಸ್ಥಾನಕ್ಕೆ … Read more

ಬಗೆಬಗೆ ತಿಂಡಿ, ತಿನಿಸು, ಪಾನೀಯ, ವಸ್ತು ಪ್ರದರ್ಶನ, ಶಿವಮೊಗ್ಗದಲ್ಲಿ ಖಾದ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್, PHOTO ALBUM

061221 Chunchadri Mahila Vedike Khadya Mela

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021 ಶಿವಮೊಗ್ಗದ ಒಕ್ಕಲಿಗ ಸಮುದಾಯ ಭಾವನದಲ್ಲಿ ನಡೆದ ಖಾದ್ಯ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚುಂಚಾದ್ರಿ ಮಹಿಳಾ ವೇದಿಕೆ, ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಖಾದ್ಯ ಮೇಳ ಆಯೋಜಿಸಲಾಗಿತ್ತು. ವಿವಿಧ ತಿಂಡಿ, ತನಿಸು, ಪಾನಿಯಗಳನ್ನು ಖಾದ್ಯ ಮೇಳದಲ್ಲಿ ಇಡಲಾಗಿತ್ತು. ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, … Read more