ಶಿವಮೊಗ್ಗ ಡಿ.ಸಿ. ಕಚೇರಿ ಚರಾಸ್ತಿ ಜಪ್ತಿಗೆ ಕೋರ್ಟ್‌ ಆದೇಶ, ಕಾರಣವೇನು?

himoga-DC-office-and-Police-jeep-in-front-of-office

SHIMOGA NEWS, 17 SEPTEMBER 2024 : ರಸ್ತೆ ಅಭಿವೃದ್ಧಿಗಾಗಿ ವ್ಯಕ್ತಿಯೊಬ್ಬರ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿ (Confiscate) ಮಾಡುವಂತೆ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಪರಿಹಾರ ವಿಳಂಬ, ಚರಾಸ್ತಿ ಜಪ್ತಿಗೆ ಆದೇಶ ಪರಿಹಾರ ನೀಡುವಲ್ಲಿ ವಿಳಂಬವಾದ ಹಿನ್ನೆಲೆ ಜಿಲ್ಲಾ ನ್ಯಾಯಾಲಯವು ಜಿಲ್ಲಾಧಿಕಾರಿ ಕಚೇರಿಯ ಚರಾಸ್ತಿಯಾದ ಪೀಠೋಪಕರಣ ಜಪ್ತಿ ಮಾಡಬೇಕು. ಮುಂದಿನ ಆದೇಶದವರೆಗೆ ವಶಕ್ಕೆ ಪಡೆಯುವಂತೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ದೂರುದಾರರ … Read more

ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಅಧಿಕ ಖರ್ಚು, ಪರಿಹಾರವೇನು?

DINA-BHAVISHYA

DINA BHAVISHYA, 18 SEPTEMBER 2024 » ಮೇಷ : ಅರ್ಥಿಕವಾಗಿ ಉತ್ತಮ. ಆರೋಗ್ಯದ ಕಡೆ ಗಮನ ಅಗತ್ಯ. ವ್ಯಯದ ರಾಹು ಅಧಿಕ ಖರ್ಚು ಮಾಡಿಸುತ್ತಾನೆ. ಗಣೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ » ವೃಷಭ : ನೆಮ್ಮದಿಯಿಂದ ಇದ್ದೀರ. ವಿದ್ಯಾಭ್ಯಾಸಕ್ಕೆ ತೊಡಕು. ಉದ್ಯೋಗದಲ್ಲಿ ಆಲಸ್ಯ. ಶಂ ಶನೈಶ್ಚರಾಯ ನಮಃ ನಾಮ ಮಂತ್ರ ಜಪ ಮಾಡಿ.. ಶುಭ ಸಂಖ್ಯೆ 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು » ಮಿಥುನ: ದೇಹಾರೋಗ್ಯದಲ್ಲಿ … Read more

ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ

railway-track-general-image.webp

SHIMOGA NEWS, 16 SEPTEMBER 2024 : ರೈಲ್ವೆ ಹಳಿ (Track) ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ 50 ರಿಂದ 55 ವರ್ಷದವರಾಗಿದ್ದಾರೆ ಎಂದು ರೈಲ್ವೆ ಪೊಲೀಸರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತರೀಕೆರೆ ಮತ್ತು ಮೊಸರಹಳ್ಳಿ ನಡುವೆ ಕರ್ತವ್ಯ ನಿರತ ಗ್ಯಾಂಗ್‌ಮನ್‌ ಅವರು ಮೃತದೇಹ ಕಾಣಿಸಿತ್ತು. ಕೂಡಲೆ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಮೃತನು 5.6 ಅಡಿ ಎತ್ತರವಿದ್ದಾರೆ. ಮೃತದೇಹವನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ವಾರಸುದಾರರು ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್‌ … Read more

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿತ್ತು? ಏನೆಲ್ಲ ಇತ್ತು?

Hindu-Mahasabha-Ganesh-procession-in-Bhadravathi

BHADRAVATHI NEWS, 16 SEPTEMBER 2024 : ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ಅದ್ಧೂರಿ ಮೆರವಣಿಗೆ (Procession) ನಡೆಯಿತು. ಭದ್ರಾವತಿ ನಗರದ ವಿವಿಧೆಡೆ ಮೆರವಣಿಗೆಯಲ್ಲಿ ಸಾಗಿದ ಗಣಪತಿಯನ್ನು ನಗರಸಭೆ ಮುಂಭಾಗ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು. ಎಲ್ಲೆಲ್ಲಿ ಸಾಗಿತು ಮೆರವಣಿಗೆ? ಬೆಳಗ್ಗೆ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಹೊಸಮನೆ ಶಿವಾಜಿ ವೃತ್ತದವರೆಗೂ ತೆರಳಿ ಅಲ್ಲಿಂದ ರಂಗಪ್ಪ ಸರ್ಕಲ್‌ ಮೂಲಕ ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ. ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ ನಿಲ್ದಾಣದ … Read more

WhatsApp : ಇನ್ಮುಂದೆ ನಿಮ್ಮಿಷ್ಟದ ಸೆಲಬ್ರಿಟಿ ಧ್ವನಿಯಲ್ಲಿ ಕಳುಹಿಸಬಹುದು Voice Note

whatsapp-general-image

JUST MAHITI : ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ತಂತ್ರಜ್ಞಾನ ಅಳವಡಿಸಿ ಅನೇಕ ಪ್ರಯೋಗ ನಡೆಸುತ್ತಿರುವ ವಾಟ್ಸಪ್‌ ಸಂಸ್ಥೆ, ಈಗ ಇನ್ನೊಂದು ಫೀಚರ್‌ ಪರಿಚಯಿಸುತ್ತಿದೆ. ಇನ್ಮುಂದೆ ನಿಮ್ಮ ನೆಚ್ಚಿನ ಸೆಲಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ ಕಳುಹಿಸಬಹುದಾಗಿದೆ. ನೆಚ್ಚಿನ ಸೆಲೆಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ಗಳನ್ನು ರವಾನಿಸಬಹುದಾಗಿದೆ. AI ತಂತ್ರಜ್ಞಾನದ ಮೂಲಕ ಹೊಸ ಫೀಚರ್‌ ಪರಿಚಯಿಸಲಾಗುತ್ತಿದೆ. ಸದ್ಯ ಈ ಫೀಚರ್‌ ಪ್ರಯೋಗದ ಹಂತದಲ್ಲಿದೆ ಎಂದು ವಾಟ್ಸಪ್‌ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಹೊಸ ವಾಯ್ಸ್‌ ನೋಟ್‌ ಮಾದರಿ ಎಲ್ಲ … Read more

25 ಸಾವಿರ ರೂ.ಗಾಗಿ ಚಾಕು ಇರಿದವನಿಗೆ ಜೈಲು, ಎಷ್ಟು ವರ್ಷ?

Shivamogga-Court-Balaraja-Urs-Road

SHIMOGA NEWS, 15 SEPTEMBER 2024 : ಮಾವಿನ ತೋಟದ ಗುತ್ತಿಗೆ ಹಣದ (MONEY) ವಿಚಾರದಲ್ಲಿ ಚಾಕುವಿನಿಂದ ಇರಿದು ಯುವಕನ ಹತ್ಯೆಗೆ ಯತ್ನಿಸಿದ್ದವನಿಗೆ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದೂವರೆ ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿ ಆದೇಶಿಸಿದೆ. ಶಿರಾಳಕೊಪ್ಪ ದಾಸರ ಕಾಲನಿಯ ಹಯಾತ್ ಸಾಬ್‌ (31) ಶಿಕ್ಷೆಗೆ ಒಳಗಾದವ. ಏನಿದು ಪ್ರಕರಣ? ಹಯಾತ್‌ … Read more

ಇವು ಸಾಮಾನ್ಯ ಗುಂಡಿಗಳಲ್ಲ, ಬಂದ್‌ ಆಗಲು PM, CMಗಳೆ ಬರಬೇಕು

Pot-Holes-in-Shimoga-BH-Road-near-Sahyadri-College.

SHIMOGA NEWS, 15 SEPTEMBER 2024 : ಈ ರಸ್ತೆಯಲ್ಲಿ ಓಡಾಡುವ ಬಹುತೇಕರು ಶಿವಮೊಗ್ಗಕ್ಕೆ ಮತ್ತೆ ಪ್ರಧಾನ ಮಂತ್ರಿ ಬರಲಿ, ಮುಖ್ಯಮಂತ್ರಿ ಭೇಟಿ ನೀಡಲಿ ಎಂದು ಹಂಬಲಿಸುತ್ತಿದ್ದಾರೆ. ಈ ರಸ್ತೆಯಲ್ಲಿರುವ ಗುಂಡಿಗಳೇ (Pot Hole) ಇಂತಹ ತವಕಕ್ಕೆ ಕಾರಣ. ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವವರನ್ನು ಶಿವಮೊಗ್ಗ ನಗರದೊಳಗೆ ಕರೆತಂದು ಬಿಡುವುದೇ ಬಿ.ಹೆಚ್‌.ರಸ್ತೆ. ಆದರೆ ಈ ರಸ್ತೆಯಲ್ಲಿ ಭಾರಿ ಗುಂಡಿಗಳು ಪ್ರತ್ಯಕ್ಷವಾಗಿವೆ. ಒಂದಕ್ಕಿಂತಲು ಒಂದು ಅಪಾಯಕಾರಿಯಾಗಿವೆ. ಎಲ್ಲೆಲ್ಲಿ ಹೇಗಿವೆ ಗುಂಡಿಗಳು? » ಎಂ.ಆರ್‌.ಎಸ್‌ ವೃತ್ತದಲ್ಲಿ ಭಾರಿ ಗಾತ್ರದ ಗುಂಡಿಗಳು … Read more

ಇವತ್ತಿನಿಂದ ಎರಡು ದಿನ ಮಿನಿಸ್ಟರ್‌ ಶಿವಮೊಗ್ಗ ಜಿಲ್ಲಾ ಪ್ರವಾಸ

Madhu-Bangarapap-Speaks-to-media-at-shimoga-airport

SHIMOGA NEWS, 15 SEPTEMBER 2024 : ಜಿಲ್ಲಾ ಉಸ್ತುವಾರಿ ಸಚಿವ (Minister) ಮಧು ಬಂಗಾರಪ್ಪ ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸೆ.15 ಮತ್ತು 16ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ? ಸೆ.15ರಂದು ಬೆಳಗ್ಗೆ 8.50ಕ್ಕೆ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 9.15ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಸೊರಬದ ರಂಗಮಂದಿರದಲ್ಲಿ ತಾಲೂಕಿನ … Read more

ಬೈಕ್‌ ಓಡಿಸಿದ್ದು ಮಗ, ಭಾರಿ ದಂಡ ಕಟ್ಟಬೇಕಾಯ್ತು ಅಪ್ಪ, ಏನಿದು ಕೇಸ್‌?

Traffic-police-in-Shimoga-city.

SHIMOGA NEWS, 15 SEPTEMBER 2024 : ಅಪ್ರಾಪ್ತ (Minor) ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಕೊಟ್ಟಿದ್ದ ತಂದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಬೈಕ್‌ ಚಲಾಯಿಸುತ್ತಿದ್ದ ಅಪ್ರಾಪ್ತ ನಗರದ ಎಸ್‌.ಎನ್‌.ಸರ್ಕಲ್‌ನಲ್ಲಿ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌, ಸಿಬ್ಬಂದಿ ಸುರೇಶ್‌ ಮತ್ತು ದಿನೇಶ್‌ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಬೈಕ್‌ ತಡೆದು ತಪಾಸಣೆ ನಡೆಸಿದಾಗ ಚಾಲನೆ ಮಾಡುತ್ತಿದ್ದವನು ಅಪ್ರಾಪ್ತ ಎಂಬುದು ಗೊತ್ತಾಗಿತ್ತು. ಈ ಹಿನ್ನೆಲೆ ದ್ವಿಚಕ್ರ ವಾಹನದ ಮಾಲೀಕನ ವಿರುದ್ಧ ಪ್ರಕರಣ … Read more

ಶಿವಮೊಗ್ಗ ಸಿಟಿಯಲ್ಲಿ ಎರಡು ದಿನ ಕುಡಿಯುವ ನೀರು ಬರಲ್ಲ

Drinking-Water-Tap

SHIMOGA NEWS, 14 SEPTEMBER 2024 : ನಗರದಲ್ಲಿ ಎರಡು ದಿನ ನೀರು (Drinking Water) ಪೂರೈಕೆ ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಮಹಾನಗರ ಪಾಲಿಕೆ ವತಿಯಿಂದ ಭೂಗತ ಕೇಬಲ್‌ ಅಳವಡಿಕೆ ಮಾಡಲಾಗಿದೆ. ಇದನ್ನು ಚಾಲನೆಗೊಳಿಸಲಾಗುತ್ತಿದೆ. ಆದ್ದರಿಂದ ಸೆ.18ರಂದು ಘಟಕಕ್ಕೆ ವಿದ್ಯುತ್‌ ವ್ಯತ್ಯಯವಾಗಲಿದೆ. ಹಾಗಾಗಿ ಸೆ.18 ಮತ್ತು 19ರಂದು ಶಿವಮೊಗ್ಗ ನಗರದಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ … Read more