ನವೆಂಬರ್‌ 11 ರಿಂದ 15ರವರೆಗೆ ಕಾರ್ಯಾಗಾರ

Shimoga-News-update

ಶಿವಮೊಗ್ಗ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ, ಅಕಾಡೆಮಿಯ ಕಚೇರಿಯಲ್ಲಿ ನ.11 ರಿಂದ 15 ರವರೆಗೆ ‘ಸಂಶೋಧನೆ, ಪ್ರಕಟಣೆ ನೀತಿಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ’ ಕುರಿತು ಐದು ದಿನಗಳ ಕಾರ್ಯಾಗಾರ (Workshop) ಆಯೋಜಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಜ್ಞರು ಉಪನ್ಯಾಸ ನೀಡಲಿದ್ದು, ಆಸಕ್ತ ವಿಜ್ಞಾನ ಪದವಿ, ಸ್ನಾತಕೋತ್ತರ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು ಹಾಗೂ ವಿಜ್ಞಾನಾಸಕ್ತರು ಭಾಗವಹಿಸಬಹುದಾಗಿದೆ. ಆಸಕ್ತರು ನ.5ರೊಳಗೆ https://forms.gle/ UNrBg9wiBzgQBMVD6 ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ … Read more

ಆನಂದಪುರ ಬಳಿ ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

281123-Anandapura-Police-Station-Board.webp

ಆನಂದಪುರಂ: ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗಳವಾಡಿ ಗ್ರಾಮದ ನಾರಾಯಣಪ್ಪ (73) ಗಿಳಾಲ ಗುಂಡಿ ಗ್ರಾಮದ ಅಮ್ಮನ ಕೆರೆಗೆ (Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ವರ್ಷದ ಹಿಂದೆ ಪತ್ನಿ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

ರಿಪ್ಪನ್‌ಪೇಟೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ, ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

Rambapuri-Swamiji-at-Ripponpete-Malali-mutt

ರಿಪ್ಪನ್‌ಪೇಟೆ: ರಂಭಾಪುರಿ (rambhapuri) ಶಾಖಾ ಮಠ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ನಡೆಯಿತು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಾಮೀಜಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌ ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲು ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ, ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಅರಿವಿನ ಕಣ್ಣು ತೆರೆಯಿಸಲು ಧರ್ಮ ಮತ್ತು ಗುರು ಬೇಕು ಎಂಬುದನ್ನು ಅರಿತಾಗ ಬಾಳು … Read more

ಶಿವಮೊಗ್ಗದಲ್ಲಿ ಮತ್ತೆ ಮಳೆ, ಇವತ್ತು ಏನಿದೆ ಅಲರ್ಟ್‌? – ಹವಾಮಾನ ವರದಿ

WEATHER-REPORT-SHIMOGA-

ಹವಾಮಾನ ವರದಿ: ಕರ್ನಾಟದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇವತ್ತು ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಇವತ್ತು ಯಲ್ಲೋ ಅಲರ್ಟ್‌ ಪ್ರಕಟಿಸಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಲರ್ಟ್‌ನಲ್ಲಿ ತಿಳಿಸಲಾಗಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇದನ್ನೂ ಓದಿ » ಶಿವಮೊಗ್ಗದಲ್ಲಿ ಅಣ್ಣಾಮಲೈಗು ತಟ್ಟಿತು ವಿಮಾನ ಕ್ಯಾನ್ಸಲ್‌ ಬಿಸಿ, ತರಾತರಿಯಲ್ಲಿ ಮರಳಿದ ಮಾಜಿ ಐಪಿಎಸ್‌ ಅಧಿಕಾರಿ

ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

Kumsi-Police-Station-Shimoga

ಆಯನೂರು: ಅಂಗನವಾಡಿ (Anganavadi) ಹಾಗೂ ಮಹಿಳಾ ಒಕ್ಕೂಟದ ಕೊಠಡಿಗಳ ಹೆಂಚನ್ನು ತೆಗೆದು ಒಳನುಗ್ಗಿರುವ ಕುಡುಕರು ಪಾನಗೋಷ್ಠಿ ಮಾಡಿದ್ದಾರೆ. ಆಹಾರ ಸಾಮಗ್ರಿ ಹಾಳು ಮಾಡಿದ್ದಾರೆ. ಕುಂಸಿಯ ಅಂಗನವಾಡಿ ಕೊಠಡಿಯ ಒಳಗೆ ಇಳಿದಿರುವ ದುಷ್ಕರ್ಮಿಗಳು ಸರ್ಕಾರದಿಂದ ಅಂಗನವಾಡಿಗೆ ಕೊಟ್ಟಿದ್ದ ಆಹಾರ ಧಾನ್ಯಗಳನ್ನು ಹಾಳು ಮಾಡಿದ್ದಾರೆ. ಅಲ್ಲದೇ, ಟೇಬಲ್ ಸುತ್ತಲೂ ಚೇರ್ ಹಾಕಿಕೊಂಡು ಕುಳಿತು ಮದ್ಯಪಾನ ಮಾಡಿದ್ದಾರೆ. ಚೇರಿನ ಮೇಲೆ ಟವೆಲ್, ಮದ್ಯದ ಕವರ್ ಸಿಕ್ಕಿದೆ. ಎರಡು ಟ್ರೇ ಮೊಟ್ಟೆ ಬೇಯಿಸಿ ತಿಂದಿರುವ ದುಷ್ಕರ್ಮಿಗಳು, ಆಹಾರ ಪದಾರ್ಥಗಳನ್ನು ತಿಂದು ಹಾಳು ಮಾಡಿದ್ದಾರೆ. … Read more

ಇಂದಿನ ಭವಿಷ್ಯ, ಪಂಚಾಂಗ – ಹೇಗಿದೆ ಈ ದಿನ?

Dina-Bhavishya-and-Panchanga-Thumbnail.webp

ದಿನ ಭವಿಷ್ಯ, ಪಂಚಾಂಗ: 12 ರಾಶಿಗಳ ಇಂದಿನ ಭವಿಷ್ಯ, ಇವತ್ತಿನ ಪಂಚಾಂಗ ಮತ್ತು ಸುಭಾಷಿತ ಇಲ್ಲಿದೆ.(Horoscope) ಇವತ್ತು ಬುಧವಾರ, 5 ನವೆಂಬರ್‌ 2025. ಗುರುನಾನಕ್‌ ಜಯಂತಿ. ಗೌರಿ ಹುಣ್ಣಿಮೆ. ಶಿವಮೊಗ್ಗದಲ್ಲಿ ಬೆಳಗ್ಗೆ 6.23ಕ್ಕೆ ಸೂರ್ಯೋದಯ. ಸಂಜೆ 5.59ಕ್ಕೆ ಸೂರ್ಯಾಸ್ತ. ಇಂದು ಅಶ್ವಿನಿ ನಕ್ಷತ್ರದ ದಿನ.  ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.44 ರಿಂದ 5.34ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.09 ರಿಂದ 6.24ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.07 ರಿಂದ 2.53ರವರಗೆ ಗೋಧೂಳಿ … Read more

ಅಡಿಕೆ ಧಾರಣೆ | 3 ನವೆಂಬರ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿಕಾರಿಪುರ, ತೀರ್ಥಹಳ್ಳಿ, ಸಾಗರ ಮತ್ತು ಶಿವಮೊಗ್ಗ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿಕಾರಿಪುರ ಮಾರುಕಟ್ಟೆ ರಾಶಿ 61289 61289 ತೀರ್ಥಹಳ್ಳಿ ಮಾರುಕಟ್ಟೆ ಇತರೆ 28000 28000 ಸಿಪ್ಪೆಗೋಟು 14000 14000 ಶಿವಮೊಗ್ಗ ಮಾರುಕಟ್ಟೆ ಗೊರಬಲು 19000 39100 ನ್ಯೂ ವೆರೈಟಿ 46869 61389 ಬೆಟ್ಟೆ 56369 56369 ರಾಶಿ 46099 61505 ಸರಕು 54699 90896 ಸಾಗರ ಮಾರುಕಟ್ಟೆ ಕೆಂಪುಗೋಟು 28999 36299 ಕೋಕ 10199 34470 ಚಾಲಿ 31899 43699 … Read more

ಅಬಕಾರಿ ಇಲಾಖೆ ಚಾಲಕ ಅಮಾನತು, ಕಚೇರಿಗೆ ಹಾಜರಾಗಿ ವಿವರಣೆಗೆ ಸೂಚನೆ, ಕಾರಣವೇನು?

Shimoga-News-update

ಶಿವಮೊಗ್ಗ: ಅಬಕಾರಿ ಇಲಾಖೆಯ ಶಿಕಾರಿಪುರ ವಲಯದ ಉಪ ಆಯುಕ್ತರ ಕಚೇರಿ ಚಾಲಕ ಸೋಮೇಶ್ವರ್‌.ಕೆ.ಎ ಅವರನ್ನು ಅಮಾನತು (Suspend) ಮಾಡಿ ಉಪ ಆಯುಕ್ತರು ಆದೇಶಿಸಿದ್ದಾರೆ. 2024ರ ಆ.26ರಿಂದ ಅನಧಿಕೃತವಾಗಿ ಗೈರಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೋಮೇಶ್ವರ್ ಕೆ.ಎ ಅವರಿಗೆ ಗೈರು ಹಾಜರಾದ ಕುರಿತು ಕಾರಣ ಕೇಳಿ ಕಚೇರಿಯಿಂದ ಅಂತಿಮ ನೋಟಿಸ್ ನೀಡಲಾಗಿತ್ತು. ಶಿವಮೊಗ್ಗದಲ್ಲಿ ಮನೆ ಬಳಿ ವಿಚಾರಣೆ ನಡೆಸಿದಾಗ ಅವರು ಅಲ್ಲಿ ವಾಸವಾಗಿಲ್ಲ ಎಂದು ತಿಳಿದು ಬಂದಿತ್ತು. ಸ್ಥಳ ಮಹಜರ್‌ ಮಾಡಿ ಶಿಕಾರಿಪುರ ವಲಯದ … Read more

ಶಿವಮೊಗ್ಗದಲ್ಲಿ ಅಣ್ಣಾಮಲೈಗು ತಟ್ಟಿತು ವಿಮಾನ ಕ್ಯಾನ್ಸಲ್‌ ಬಿಸಿ, ತರಾತರಿಯಲ್ಲಿ ಮರಳಿದ ಮಾಜಿ ಐಪಿಎಸ್‌ ಅಧಿಕಾರಿ

Annamali-in-Shimoga-Mallesh-Convetion-Hall

ಶಿವಮೊಗ್ಗ: ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರಿಗೆ ವಿಮಾನ ಕ್ಯಾನ್ಸಲ್‌ (Cancel) ಬಿಸಿ ತಟ್ಟಿದೆ. ಹಾಗಾಗಿ ತರಾತುರಿಯಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿ ಮರಳಿದರು. ಶಿವಮೊಗ್ಗದ ಒಡ್ಡಿನಕೊಪ್ಪ ಸಮೀಪದ ಮಲ್ಲೇಶ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯುತ್ತಿದ್ದ ಪರಿಚಿತರೊಬ್ಬರ ಮದುವೆ ಸಮಾರಂಭದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ, ಬಿಜೆಪಿ ಮುಖಂಡ ಅಣ್ಣಾಮಲೈ ಭಾಗವಹಿಸಿದ್ದರು. ವಿಮಾನ ಕ್ಯಾನ್ಸಲ್‌ ಬಿಸಿ ಅಣ್ಣಾಮಲೈ ಅವರು ಚೆನ್ನೈನಿಂದ ಶಿವಮೊಗ್ಗಕ್ಕೆ ನೇರವಾಗಿ ವಿಮಾನದಲ್ಲಿ ಆಗಮಿಸಬೇಕಿತ್ತು. ಆದರೆ ಸ್ಪೈಸ್‌ ಜೆಟ್‌ ವಿಮಾನ ರದ್ದಾಗಿದ್ದರಿಂದ … Read more

ಒಂದೇ ಒಂದು ಮೆಸೇಜ್‌ ಮಾಡಿ ₹3.96 ಲಕ್ಷ ಕಳೆದುಕೊಂಡ ಭದ್ರಾವತಿ ವ್ಯಕ್ತಿ

Bhadravathi-Old-Town-Police-Station

ಭದ್ರಾವತಿ: ಹಣ ಡಬಲ್‌ (Money) ಆಗಲಿದೆ ಎಂದು ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಬಂದ ಮೆಸೇಜ್‌ ನಂಬಿ ಭದ್ರಾವತಿಯ ವ್ಯಕ್ತಿಯೊಬ್ಬರು ₹3.96 ಲಕ್ಷ ಕಳೆದಕೊಂಡಿದ್ದಾರೆ. ಹೇಗಾಯ್ತು ವಂಚನೆ? ಭದ್ರಾವತಿ ವ್ಯಕ್ತಿಯೊಬ್ಬರು ಮಗ ಮತ್ತು ಅಳಿಯನ ಜೊತೆಗೆ ಮಾತನಾಡುತ್ತಿದ್ದಾಗ ಜೈದೀಪ್‌ ಭಾರತಿ ಎಂಬ ಹೆಸರಿನಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ಗೆ ಮೆಸೇಜ್‌ ಬಂದಿತ್ತು. ಹಣ ಹೂಡಿಕೆ ಮಾಡಿದರೆ ಡಬಲ್‌ ಆಗಲಿದೆ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಭದ್ರಾವತಿ ವ್ಯಕ್ತಿ ಆ ಮೆಸೇಜ್‌ಗೆ ರಿಪ್ಲೆ ಮಾಡಿದ್ದರು. ಮೂರು ವಿವಿಧ ಅಕೌಂಟ್‌ ಕೊಟ್ಟಿದ್ದರು ಭದ್ರಾವತಿಯ ವ್ಯಕ್ತಿಗೆ ಜೈದೀಪ್‌ … Read more