BREAKING NEWS – ಶಿವಮೊಗ್ಗದಲ್ಲಿ ಆಪ್ತ ಸಹಾಯಕನ ಮನೆ ಮೇಲೆ ಲೋಕಾಯುಕ್ತ ದಾಳಿ

BREAKING-NEWS-ENGLISH

ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ನಗರದಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್‌) ಡೀನ್‌ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಎಂಬುವವರಿಗೆ ಸಂಬಂಧಿಸಿದ ನಾಲ್ಕು ಕಡೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಿಮ್ಸ್‌ ಕಾಲೇಜಿನ ಡೀನ್‌ ಡಾ. ವಿರುಪಾಕ್ಷಪ್ಪ ಅವರ ಆಪ್ತ ಸಹಾಯಕ ಲಕ್ಷ್ಮೀಪತಿ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿಯಾಗಿದೆ. ಮೆಡಿಕಲ್‌ ಕಾಲೇಜು ಕ್ವಾರ್ಟರ್ಸ್‌, ಜೆ.ಹೆಚ್.ಪಟೇಲ್‌ ಬಡಾವಣೆಯಲ್ಲಿರುವ ಮನೆ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿರುವ ಮನೆ ಸೇರಿ ಒಟ್ಟು ನಾಲ್ಕುಕಡೆ ದಾಳಿಯಾಗಿದೆ … Read more

ನವೆಂಬರ್‌ 11 ರಿಂದ 15ರವರೆಗೆ ಕಾರ್ಯಾಗಾರ

Shimoga-News-update

ಶಿವಮೊಗ್ಗ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ, ಅಕಾಡೆಮಿಯ ಕಚೇರಿಯಲ್ಲಿ ನ.11 ರಿಂದ 15 ರವರೆಗೆ ‘ಸಂಶೋಧನೆ, ಪ್ರಕಟಣೆ ನೀತಿಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆ’ ಕುರಿತು ಐದು ದಿನಗಳ ಕಾರ್ಯಾಗಾರ (Workshop) ಆಯೋಜಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಜ್ಞರು ಉಪನ್ಯಾಸ ನೀಡಲಿದ್ದು, ಆಸಕ್ತ ವಿಜ್ಞಾನ ಪದವಿ, ಸ್ನಾತಕೋತ್ತರ ವಿಜ್ಞಾನ ಪದವೀಧರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು/ಪ್ರಾಧ್ಯಾಪಕರು ಹಾಗೂ ವಿಜ್ಞಾನಾಸಕ್ತರು ಭಾಗವಹಿಸಬಹುದಾಗಿದೆ. ಆಸಕ್ತರು ನ.5ರೊಳಗೆ https://forms.gle/ UNrBg9wiBzgQBMVD6 ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ … Read more

ಆನಂದಪುರ ಬಳಿ ಕೆರೆಗೆ ಹಾರಿ ವೃದ್ಧ ಆತ್ಮಹತ್ಯೆ

281123-Anandapura-Police-Station-Board.webp

ಆನಂದಪುರಂ: ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗಳವಾಡಿ ಗ್ರಾಮದ ನಾರಾಯಣಪ್ಪ (73) ಗಿಳಾಲ ಗುಂಡಿ ಗ್ರಾಮದ ಅಮ್ಮನ ಕೆರೆಗೆ (Lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 2 ವರ್ಷದ ಹಿಂದೆ ಪತ್ನಿ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರಿಗೆ ಪುತ್ರ, ಪುತ್ರಿ ಇದ್ದಾರೆ. ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಅಂಗನವಾಡಿಯಲ್ಲಿ ಎರಡು ಟ್ರೇ ಮೊಟ್ಟೆ ಬೆಯಿಸಿಕೊಂಡು ಪಾನಗೋಷ್ಠಿ ಮಾಡಿದ ಕುಡುಕರು

ಪಿಳ್ಳಂಗೆರೆಯಲ್ಲಿ ಅಪಘಾತ,‌ ಸ್ಲೀಪರ್‌ ಬಸ್‌ ಮೇಲೆ ಬಿದ್ದಿತ್ತು ಕರೆಂಟ್‌ ವಯರ್‌, ತಪ್ಪಿತು ದೊಡ್ಡ ದುರಂತ

bus-incident-at-pillangere-in-Shimoga-taluk.

SHIVAMOGGA LIVE NEWS | 9 JULY 2024 SHIMOGA : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ (bus) ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಬದಿಗೆ ಉರುಳಿದೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆಯಲ್ಲಿ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಪಿಳ್ಳಂಗೆರೆ ಬಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ವಿದ್ಯುತ್‌ ಕಂಬ ಮತ್ತು ಓಮ್ನಿ ಕಾರಿಗೆ ಡಿಕ್ಕಿಯಾಗಿದೆ. ಬಸ್‌ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದೆ … Read more

ಎಲೆಚುಕ್ಕೆ ರೋಗ, ಕೆಎಫ್‌ಡಿ ಭೀತಿ, ಜಿಲ್ಲೆಯ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆ, ಗ್ಯಾರಂಟಿಗಳನ್ನು ತಲುಪಿಸುವಂತೆ ಸೂಚನೆ

District-Incharge-Secretary-IAS-Kaveri-meeting-in-Shimoga

SHIVAMOGGA LIVE NEWS | 25 JANUARY 2024 SHIMOGA : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭ ನಡೆಸಲಾಯಿತು. ಹಲವು ಪ್ರಮುಖ ವಿಚಾರಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಏನೇನೆಲ್ಲ ಚರ್ಚೆ ನಡೆಸಲಾಯಿತು? ಕುಡಿಯುವ ನೀರು : ಮಲೆನಾಡು ಪ್ರದೇಶ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಪ್ರಸಕ್ತ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗಬಹುದಾದ ಸಂಭಾವ್ಯ ಕುಡಿಯುವ ನೀರಿನ … Read more

ಕಾರ್ಮಿಕನ ಮೊಬೈಲ್‌ಗೆ ಕರೆ ಮಾಡಿದ ಚಿನ್ನದಂಗಡಿ ಮಾಲೀಕನಿಗೆ ಕಾದಿತ್ತು ಆಘಾತ, ಠಾಣೆಗೆ ದೌಡು

Crime-News-General-Image

SHIVAMOGGA LIVE NEWS | 5 JANUARY 2024 SHIMOGA : ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಲಕ್ಷಾಂತರ ಮೌಲ್ಯದ ಗಟ್ಟಿ ಬಂಗಾರದ ಜೊತೆಗೆ ಕಣ್ಮರೆಯಾಗಿದ್ದಾನೆ. ಬಂಗಾರ ಪಾಲಿಶ್‌ ಮಾಡಿಸಿಕೊಂಡು ಬರುವುದಾಗಿ ತಿಳಿಸಿ ಹೋದವನು ಮತ್ತೆ ಹಿಂತಿರುಗಿಲ್ಲ ಎಂದು ಆರೋಪಿಸಿ ಮಾಲೀಕ ದೂರು ನೀಡಿದ್ದಾರೆ. ಏನಿದು ಪ್ರಕರಣ? ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದಲ್ಲಿರುವ ಜ್ಯುವೆಲ್ಲರಿ ಶಾಪ್‌ನಲ್ಲಿ ಘಟನೆ ನಡೆದಿದೆ. 130 ಗ್ರಾಂ 680 ಮಿಲಿ ತೂಗದ ಬಂಗಾರದ ಗಟ್ಟಿಯನ್ನು ಡಿ.28ರಂದು ತಮ್ಮ ಅಂಗಡಿಯ ಕೆಲಸಗಾರ ಅದಿತ್ತೋ ಮಾಜಿ … Read more

ಶಿವಮೊಗ್ಗದಲ್ಲಿ ವೈವಭದ ತೆಪ್ಪೋತ್ಸವ, ಕಣ್ತುಂಬಿಕೊಂಡ ಜನಸಾಗರ, ಇಲ್ಲಿದೆ 12 ಫೋಟೊಗಳು

Shimoga-Tunga-River-Teppotsava-Kote-Temple

SHIVAMOGGA LIVE NEWS | 28 DECEMBER 2023 SHIMOGA : ಸೀತಾ ಕಲ್ಯಾಣೋತ್ಸವದ ಅಂಗವಾಗಿ ಶಿವಮೊಗ್ಗ ತುಂಗಾ ನದಿಯಲ್ಲಿ ಶ್ರೀ ಸೀತಾರಾಮಾಂಜನೇಯ ಸ್ವಾಮಿಯ ವೈಭವದ ತೆಪ್ಪೋತ್ಸವ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ನದಿಯಲ್ಲಿ ಇವತ್ತು ತೆಪ್ಪೋತ್ಸವ ನೆರವೇರಿತು. ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಮೂರ್ತಿಗಳನ್ನು ತೆಪ್ಪದಲ್ಲಿ ಇರಿಸಿ, ತುಂಗಾ ನದಿಯಲ್ಲಿ ಉತ್ಸವ ನೆರವೇರಿಸಲಾಯಿತು. ಇದನ್ನೂ ಓದಿ – ಕುಪ್ಪಳಿಯಲ್ಲಿ ರಾಷ್ಟ್ರಕವಿಯ ಜನ್ಮದಿನೋತ್ಸವ, ಬಂಗಾಳಿ ಸಾಹಿತಿಗೆ ಪ್ರಶಸ್ತಿ ಪ್ರದಾನ, … Read more

ಶಿವಮೊಗ್ಗದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ, ಮೇಲ್ಛಾವಣಿ, ವಸ್ತುಗಳು ಆಹುತಿ, ಪರಿಹಾರದ ಭರವಸೆ

Lashkar-Mohalla-Incident-Congress-President-visit-the-spot

SHIVAMOGGA LIVE NEWS | 19 AUGUST 2023 SHIMOGA : ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಮನೆಯೊಂದರಲ್ಲಿ (House) ಅಗ್ನಿ ಅವಘಡ ಸಂಭವಿಸಿದೆ. ವಸ್ತುಗಳು ಸುಟ್ಟು ಕರಕಲಾಗಿವೆ. ವಿಚಾರ ತಿಳಿದು ಜಿಲ್ಲಾ ಕಾಂಗ್ರೆಸ್‌ (Congress Party) ಅಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ನೇತೃತ್ವದ ನಿಯೋಗ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಲಷ್ಕರ್‌ ಮೊಹಲ್ಲಾದ ಏಲಕಪ್ಪನ ಕೇರಿಯ 3ನೇ ತಿರುವಿನ ಜಾವೀದ್‌ ಎಂಬುವವರ ಶುಕ್ರವಾರ ಸಂಜೆ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿತ್ತು. ಮನೆಯ ಮೇಲ್ಛಾವಣಿ, ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಅದೃಷ್ಟವಶಾತ್‌ ಪ್ರಾಣ ಯಾವುದೆ … Read more

ಶಿವಮೊಗ್ಗದಲ್ಲಿ ಮಳೆ ಕುಸಿತ, ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?

Water-Level-Decreases-in-Tunga-River-in-Shimoga

SHIVAMOGGA LIVE | 15 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 6.34 ಮಿಮಿ ಮಳೆ (Rain Report) ದಾಖಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 2.20 ಮಿಮಿ., ಭದ್ರಾವತಿಯಲ್ಲಿ  2.30 ಮಿಮಿ., ತೀರ್ಥಹಳ್ಳಿ 13.40 ಮಿಮಿ., ಸಾಗರ 11.60 ಮಿಮಿ., ಶಿಕಾರಿಪುರ 2.60 ಮಿಮಿ., ಸೊರಬ 2.90 ಮಿಮಿ. ಹಾಗೂ ಹೊಸನಗರ 9.40 ಮಿಮಿ. ಮಳೆಯಾಗಿದೆ (Rain Report). ಜಲಾಶಯಗಳ ನೀರಿನ ಮಟ್ಟ ಲಿಂಗನಮಕ್ಕಿ … Read more

ಈ ರಾಶಿಯವರು ಇವತ್ತು ಹಣಕಾಸು ಸಮಸ್ಯೆಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ | ದಿನ ಭವಿಷ್ಯ | 17 ಮೇ 2023

DINA-BHAVISHYA

ಮೇಷ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಆರೈಕೆಯ ಅಗತ್ಯವಿದೆ. ಹಣದ ಚಲನೆ ಹೆಚ್ಚಾಗಿರುತ್ತದೆ ವೃಷಭ ಸಮಸ್ಯೆಯಿಂದ ಹೊರಬರಬೇಕಿದ್ದರೆ ಹೊಂದಾಣಿಕೆ ಬೇಕು. ನಿಜ ತನದಿಂದ ಇರಿ. ಹಿತ ಶತೃಗಳು ಹೆಚ್ಚಾಗುವ ಸಾಧ್ಯತೆ. ಮಿಥುನ ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಕರ್ಕಾಟಕ ಸ್ನೇಹಿತರ ಶೀತಲ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ. ಆದರೆ ಶಾಂತವಾಗಿರಲು ಪ್ರಯತ್ನಿಸಿ. ಸಿಂಹ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲು ಒಳ್ಳೆಯ ದಿನ. ಗಡಿಬಿಡಿ ಪ್ರಯಾಣ. ಕನ್ಯಾ … Read more