ಶಿವಮೊಗ್ಗದಲ್ಲಿ ಕೊರೊನಾಗೆ 4 ಸಾವು, ಎರಡು ತಾಲೂಕಿನಲ್ಲಿ 100ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್

Corona PPE Kit and swab box

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022 ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಇವತ್ತು ನಾಲ್ವರು ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಇವತ್ತು ನಾಲ್ಕು ಮಂದಿ ಸಾವನ್ನಪ್ಪಿರುವುದರಿಂದ ಈವರೆಗೂ ಕೊರೊನಾಗೆ ಬಲಿಯಾದವರ ಸಂಖ್ಯೆ 1094ಗೆ ಏರಿಕೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ. 500ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್ ಮತ್ತೊಂದೆಡೆ ಜಿಲ್ಲೆಯಲ್ಲಿ ಕೊರೊನಾಗೆ ತುತ್ತಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜಿಲ್ಲೆಯಲ್ಲಿ ಇವತ್ತು 548 ಮಂದಿಗೆ ಪಾಸಿಟಿವ್ … Read more

ರಸ್ತೆ ಮಧ್ಯೆ ಅಸ್ವಸ್ಥರಾಗಿ ಕೂತಿದ್ದ ದಂಪತಿಗೆ ನೆರವಾದ ಭದ್ರಾವತಿ ಶಾಸಕರು, ಸಾಮಾಜಿಕ ಜಾಲತಾಣದಲ್ಲಿ ಫೋಟೊ ವೈರಲ್

020222 BK Sangameshwara Helps Aged Couple in Bhadravathi

ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 2 ಫೆಬ್ರವರಿ 2022 ರಸ್ತೆ ಮಧ್ಯೆ ಅಸ್ವಸ್ಥರಾಗಿ ಕುಸಿದು ಕೂತಿದ್ದ ದಂಪತಿಯನ್ನು ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ತಮ್ಮ ಕಾರಿನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಸಕರ ಈ ಕಾರ್ಯದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿ, ಶಾಸಕ ಸಂಗಮೇಶ್ವರ್ ಅವರು ಭದ್ರಾವತಿಗೆ ಹಿಂತಿರುಗುತ್ತಿದ್ದರು. ರಸ್ತೆ ಮಧ್ಯೆ ವೃದ್ಧ ದಂಪತಿ ಅಸ್ವಸ್ಥರಾಗಿ ಕೂತಿದ್ದರು. ಇದನ್ನು ಗಮನಿಸಿದ … Read more

ಮನೆ ಮೇಲೆ ಹೊಳೆಹೊನ್ನೂರು ಪೊಲೀಸರಿಂದ ದಾಳಿ

020222 Holehonnur Police Raid on a house in taraganahlli

ಶಿವಮೊಗ್ಗದ ಲೈವ್.ಕಾಂ | HOLEHONNURU NEWS | 2 ಫೆಬ್ರವರಿ 2022 ಕ್ವಿಂಟಾಲ್’ಗಟ್ಟಲೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಲಾಗಿತ್ತು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತರಗನಹಳ್ಳಿ ಗ್ರಾಮದ ಮಲ್ಲಿಕಮ್ಮ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪೊಲೀಸರು ಇವತ್ತು ದಾಳಿ ನಡೆಸಿದ್ದಾರೆ. ಮನೆ ಮಾಲೀಕರು ಅಲ್ಲಿಲ್ಲ ಮಲ್ಲಿಕಮ್ಮ ಅವರು … Read more

ಮಲವಗೊಪ್ಪದಲ್ಲಿ ಪೊಲೀಸರ ದಾಳಿ, ಒಬ್ಬ ಅರೆಸ್ಟ್, ನಗದು ವಶಕ್ಕೆ

Tunga Nagara Police station

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022 ಮಲವಗೊಪ್ಪದಲ್ಲಿ ಪಿಎಸ್ಐ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಓ.ಸಿ. ಬರೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಆತನಿಂದ ನಗದು ವಶಕ್ಕೆ ಪಡೆಯಲಾಗಿದೆ. ಮಲವಗೊಪ್ಪದ ರಾಮಮಂದಿರ ಹಿಂಭಾಗ ಓ.ಸಿ. ಬರೆಸುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತುಂಗಾ ನಗರ ಠಾಣೆ ಪಿಎಸ್ಐ ಶಿವಪ್ರಸಾದ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರನ್ನು ಕಂಡು ಓ.ಸಿ. ಬರೆಸುತ್ತಿದ್ದವರು ಪರಾರಿಯಾಗಿದ್ದಾರೆ. ಓ.ಸಿ. ಬರೆಯುತ್ತಿದ್ದ ಸಂಪತ್ ಕುಮಾರ್ (51) … Read more

ವಿನೋಬನಗರ 100 ಅಡಿ ರಸ್ತೆಯ ಓಣಿ ಮೇಲೆ ಡಿವೈಎಸ್’ಪಿ ನೇತೃತ್ವದಲ್ಲಿ ದಾಳಿ, ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರು ಅರೆಸ್ಟ್

police jeep

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022 ಓಣಿಯೊಂದರಲ್ಲಿ ಓ.ಸಿ. ಮಟ್ಕಾ ಜೂಜಾಟ ಆಡಿಸುತ್ತಿದ್ದವರ ಮೇಲೆ ಶಿವಮೊಗ್ಗ ಡಿವೈಎಸ್’ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆ ಸಂಬಂಧ ಇಬ್ಬರು ವಿದ್ಯಾರ್ಥಿಗಳು ಸೇರಿದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ವಿನೋಬನಗರ ನೂರು ಅಡಿ ರಸ್ತೆಯ ಮಟನ್ ಸ್ಟಾಲ್ ಒಂದರ ಪಕ್ಕದ ಓಣಿಯಲ್ಲಿ ಓ.ಸಿ. ಮಟ್ಕಾ ಜೂಜಾಟ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಡಿವೈಎಸ್’ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದ ತಂಡ ದಾಳಿ ನಡೆಸಿದೆ. ನಾಲ್ವರ ಪೈಕಿ … Read more

ಸೋಮಿನಕೊಪ್ಪದಲ್ಲಿ ಕಲ್ಲು ತೂರಿದ ಕುಡುಕರು, ಬಾರ್ ಸಿಬ್ಬಂದಿ ಮೇಲೂ ದಾಳಿ

vinobanagara polic station and police jeep

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022 ಬಾರ್ ಒಂದರಲ್ಲಿ ಮದ್ಯ ಸೇವಿಸಿದ ಯುವಕರು ಇತರೆ ಗ್ರಾಹಕರ ಜೊತೆಗೆ ಜಗಳವಾಡಿದ್ದಾರೆ. ಬಾರ್ ಮುಂದೆ ನಿಂತು ಕಲ್ಲು ತೂರಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಬಾರ್ ಸಿಬ್ಬಂದಿಯತ್ತಲೂ ಕಲ್ಲು ತೂರಿ, ಹೊಡೆದಿದ್ದಾರೆ. ಸೋಮಿನಕೊಪ್ಪದ ಬ್ಲೂ ಸ್ಟಾರ್ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಬಾರ್ ಮಾಲೀಕರು ಯುವಕರ ವಿರುದ್ಧ ದೂರು ನೀಡಿದ್ದಾರೆ. ಏನಿದು ಬಾರ್ ಗಲಾಟೆ ಕೇಸ್? ಜನವರಿ 26ರಂದು ಅನಿಲ್ … Read more

ಶಿವಮೊಗ್ಗ ಬಿ.ಹೆಚ್.ರಸ್ತೆಯ ಲಾಡ್ಜ್ ಬಳಿ ಬೈಕ್ ಕಳ್ಳತನ

BH Road Shivappa Nayaka Statue

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022 ಲಾಡ್ಜ್ ಒಳಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಬೈಕ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿ ಸಂಭವಿಸಿದೆ. ಮಂಜುನಾಥ ಎಂಬುವವರಿಗೆ ಸೇರಿದ ಸುಜುಕಿ ಮ್ಯಾಕ್ಸ್ ಬೈಕ್ ಕಳ್ಳತನವಾಗಿದೆ. ಜನವರಿ 26ರಂದು ಮಂಜುನಾಥ ಅವರು ಬಿ.ಹೆಚ್.ರಸ್ತೆಯ ದುರ್ಗಾ ಲಾಡ್ಜ್ ಬಳಿ ಬೈಕ್ ನಿಲ್ಲಿಸಿ, ತೆರಳಿದ್ದರು. ಲಾಡ್ಜ್ ಮಾಲೀಕರನ್ನು ಮಾತನಾಡಿಸಿ ಹೊರಗೆ ಬರುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಮಂಜುನಾಥ ಅವರು ಬಳಿಕ ದೊಡ್ಡಪೇಟೆ ಠಾಣೆಗೆ ದೂರು … Read more

ಸ್ನಾನ ಮುಗಿಸಿ ದೇವರ ಮನೆಗೆ ಬಂದ ಮಹಿಳೆಗೆ ಕಾದಿತ್ತು ಶಾಕ್, ಮನೆ ಕೆಲಸದಾಕೆ ಮಗನ ವಿರುದ್ಧ ಕೇಸ್

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಫೆಬ್ರವರಿ 2022 ಮಾಂಗಲ್ಯ ಸರ ಮತ್ತು ಚಿನ್ನದ ಚೈನ್ ತೆಗೆದು ದೇವರ ಮನೆಯಲ್ಲಿಟ್ಟು, ಸ್ನಾನ ಮುಗಿಸಿ ಬರುವಷ್ಟರಲ್ಲಿ ಕಳ್ಳತನವಾಗಿದೆ. ಮನೆ ಕೆಲಸಕ್ಕೆ ಬರುವ ಮಹಿಳೆಯ ಮಗನ ಮೇಲೆಯೆ ಅನುಮಾನ ಮೂಡಿದ್ದು, ಪ್ರಕರಣ ದಾಖಲಾಗಿದೆ. ಗೋಪಾಳದಲ್ಲಿ ಘಟನೆ ಸಂಭವಿಸಿದೆ. ರಾಧಾ ಎಂಬುವವರು ಮಾಂಗಲ್ಯ ಸರ ಮತ್ತು ಚಿನ್ನ ಚೈನ್ ಕಳೆದುಕೊಂಡಿದ್ದಾರೆ. ಹೇಗಾಯ್ತು ಚೈನ್ ಕಳ್ಳತನ? ಸ್ನಾನಕ್ಕೆ ತೆರಳುವ ಮೊದಲು ರಾಧಾ ಅವರು ತಮ್ಮ ಮನೆಯ ದೇವರ ಮನೆಯಲ್ಲಿ ಮಾಂಗಲ್ಯ … Read more

ಕಣ್ಣು ಕಾಣದ ಯುವಕ ಬಿದ್ದ ಗುಂಡಿಗೂ, ಸ್ಮಾರ್ಟ್ ಸಿಟಿಗೂ ಸಂಬಂಧವಿಲ್ಲವಂತೆ

smart city pot hole near dc office

ಶಿವಮೊಗ್ಗ ಲೈವ್.ಕಾಂ | SHIMOGA NEWS | 02 ಫೆಬ್ರವರಿ 2022 ರಸ್ತೆ ಪಕ್ಕದ ಗುಂಡಿಗೆ ಬಿದ್ದು ಅಂಧರೊಬ್ಬರು ಗಾಯಗೊಂಡು ಒಂದು ವಾರ ಕಳೆದ ನಂತರ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆ ಗುಂಡಿಗು ಸ್ಮಾರ್ಟ್ ಸಿಟಿಗೂ ಸಂಬಂಧವಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಅವರು ಇವತ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಎಂ.ಡಿ ಸ್ಪಷ್ಟನೆ ಏನು? ‘ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ದಿನಾಂಕ: … Read more