ಸಚಿವ ಈಶ್ವರಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ಕೇಸ್ ದಾಖಲು

SN-Channabasappa-KS-Eshwarappa

SHIVAMOGGA LIVE NEWS | POLITICS NEWS | 8 ಏಪ್ರಿಲ್ 2022 ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಳಿಕ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಪೀಸ್ ಆರ್ಗನೈಸೇಷನ್ ಸಂಸ್ಥೆ ಮುಖ್ಯಸ್ಥ ರಿಯಾಜ್ ಅಹಮದ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನಿದೆ? ಫೆಬ್ರವರಿ 20ರಂದು … Read more

ಶಾರದಾ ಪೂರ್ಯಾನಾಯ್ಕ್, ಶ್ರೀಕಾಂತ್, ಬಳಿಗಾರ್ ಕಾಂಗ್ರೆಸ್ ಸೇರ್ಪಡೆ ನಿರೀಕ್ಷೆ

Madhu-Bangarappa-about-Sharada-Poorayanaik-Srikanth.

SHIVAMOGGA LIVE NEWS | POLITICS | 8 ಏಪ್ರಿಲ್ 2022 ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಎಂ.ಶ್ರೀಕಾಂತ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಶಿಕಾರಿಪುರದ ವಿ.ಪಿ.ಬಳಿಗಾರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು. ಸೊರಬದಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಇವರೆಲ್ಲ ಕಾಂಗ್ರೆಸ್ ಸೇರ್ಪಡೆಯಾದರೆ ಜಿಲ್ಲೆಯಲ್ಲಿ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದರು. ಹಿಂದುತ್ವದ ಹೆಸರಿನಲ್ಲಿ ಕಂದಕ ಹಿಂದುತ್ವದ ಹೆಸರಿನಲ್ಲಿ ಬಿಜೆಪಿ … Read more

ಮಲ್ಲಾಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ, ಅವಿರೋಧ ಆಯ್ಕೆ

Ayanur Graphics

SHIVAMOGGA LIVE NEWS | GRAMA PANCHAYAT PRESIDENT | 8 ಏಪ್ರಿಲ್ 2022 ಆಯನೂರು ಸಮೀಪದ ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೀನಾಕ್ಷಮ್ಮ ಮಲ್ಲೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಘುನಾಥ ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದರು. ಮೀನಾಕ್ಷಮ್ಮ ಮಲ್ಲೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ದೀಪಾ ಮುರುಳಿ, ಮಾಜಿ ಅಧ್ಯಕ್ಷ ಕುಮಾರನಾಯ್ಕ, ತಿಮ್ಮಪ್ಪ, ಮಹಮ್ಮದ್ ಬಷೀರ್, ಸದಸ್ಯರಾದ ರೇಣುಕಮ್ಮ, … Read more

ಶಿವಮೊಗ್ಗ ನಗರದಲ್ಲಿ ಎರಡು ದಿನ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

Shimoga-City-MRS-Drone-Shot

SHIVAMOGGA LIVE NEWS | Non Vegetarian | 8 ಏಪ್ರಿಲ್ 2022 ಶಿವಮೊಗ್ಗ ನಗರದಲ್ಲಿ ಎರಡು ದಿನ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ 10 ರಂದು ಶ್ರೀರಾಮ ನವಮಿ ಮತ್ತು ಏಪ್ರಿಲ್ 14 ರಂದು ಮಹಾವೀರ ಜಯಂತಿ ಹಾಗೂ ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. ಮಾಂಸ ಮಾರಾಟ ಉದ್ದಿಮೆದಾರರು ಆಯಾ … Read more

ಶಿವಮೊಗ್ಗದ ಪ್ರಮುಖ ಏರಿಯಾಗಳಲ್ಲಿ ಏ.9ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

POWER-CUT-UPDATE-NEWs ELECTRICITY

SHIVAMOGGA LIVE NEWS | ELECTRICITY | 8 ಏಪ್ರಿಲ್ 2022 ಮೆಸ್ಕಾಂನ ಮಂಡ್ಲಿ ಉಪ ವಿಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಏಪ್ರಿಲ್ 9ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಸಾದ್ಯತೆ? ಪಿಯರ್ ಲೈಟ್, ಇಲಿಯಾಸ್ ನಗರ 1 ರಿಂದ 14ನೇ ತಿರುವು, ಎನ್.ಟಿ.ರಸ್ತೆ, ಬಿ.ಹೆಚ್.ರಸ್ತೆ, ಓ.ಟಿ.ರಸ್ತೆ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಊರುಗಡೂರು, … Read more

ಶಿವಮೊಗ್ಗ – ತಿರುಪತಿ ರೈಲು ಸಂಚಾರ ಪುನಾರಂಭಕ್ಕೆ ದಿನಾಂಕ ನಿಗದಿ, ಸಮಯ, ರೂಟ್ ಬದಲಾವಣೆ

shimoga railway station

SHIVAMOGGA LIVE NEWS |Tirupati Chennai Train | 8 ಏಪ್ರಿಲ್ 2022 ಕರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಶಿವಮೊಗ್ಗ – ರೇಣಿಗುಂಟಾ(ತಿರುಪತಿ) ಮಾರ್ಗದ ರೈಲು ಸಂಚಾರ ಪುನಾರಂಭವಾಗಲಿದೆ. ಆದರೆ ಈ ಭಾರಿ ರೈಲು ಮಾರ್ಗ ಮತ್ತು ಸಮಯ ಬದಲಾವಣೆ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗ – ರೇಣಿಗುಂಟಾ (ತಿರುಪತಿ) ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಈ ರೈಲು ಶಿವಮೊಗ್ಗ – ತಿರುಪತಿ – ಚೆನ್ನೈ ಮಾರ್ಗದಲ್ಲಿ ಸಂಚರಿಸಲಿದೆ. ಏಪ್ರಿಲ್ 17ರಿಂದ  ಈ ರೈಲು … Read more

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ದೂರು

Youth-Congress-Complaint-Against-Home-Minister-Crime-Alert

SHIVAMOGGA LIVE NEWS |CRIME ALERT | 8 ಏಪ್ರಿಲ್ 2022 ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ದೂರು ನೀಡಲು ಕಾರಣವೇನು? ಬೆಂಗಳೂರಿನಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣ … Read more

ನ್ಯೂ ಮಂಡ್ಲಿಯಲ್ಲಿ ಯುವಕನ ಮೇಲೆ ದಾಳಿ, ಹಿಂದೂ ಮುಖಂಡರು ಆಸ್ಪತ್ರೆಗೆ ದೌಡು

Attack-on-Hindu-Madhu-at-Shimoga-Crime-Alert

SHIVAMOGGA LIVE NEWS | CRIME ALERT | 7 ಏಪ್ರಿಲ್ 2022 ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತಪ್ಪಿಸಿಕೊಂಡು ಬಂದ ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಚಾರ ತಿಳಿಯುತ್ತಿದ್ದ ಹಾಗೆ ಹಿಂದೂ ಸಂಘಟನೆ ಮುಖಂಡರು ಆಸ್ಪತ್ರೆಗೆ ದೌಡಾಯಿಸಿದರು. ಘಟನೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಎನ್.ಟಿ.ರಸ್ತೆ ನಿವಾಸಿ ಮಧು (22) ಎಂಬಾತನ ಮೇಲೆ ಹಲ್ಲೆಯಾಗಿದೆ. ನ್ಯೂ ಮಂಡ್ಲಿ 1ನೇ ಕ್ರಾಸ್’ನಲ್ಲಿ ಮಧು ಮೇಲೆ ಆರು ಯುವಕರು ದಾಳಿ ಮಾಡಿದ್ದಾರೆ. ಆತನ ಮೇಲೆ ಹಲ್ಲೆ … Read more

ಶಿವಮೊಗ್ಗ ನಗರದ ಡಿವೈಎಸ್‌ಪಿ ವರ್ಗಾವಣೆ, ಯಾರು ಗೊತ್ತಾ ನೂತನ ಡಿವೈಎಸ್‌ಪಿ?

DYSP-police-Car-in-Shimoga

SHIVAMOGGA LIVE NEWS | 7 ಏಪ್ರಿಲ್ 2022 ಶಿವಮೊಗ್ಗ ನಗರ ಸೇರಿದಂತೆ ರಾಜ್ಯದ ಏಳು ಡಿವೈಎಸ್’ಪಿಗಳ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ನಗರ ಡಿವೈಎಸ್’ಪಿಯಾಗಿದ್ದ ಪ್ರಶಾಂತ್ ಜಿ. ಮುನ್ನೋಳ್ಳಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರನ್ನು ಚಿತ್ರದುರ್ಗ ಜಿಲ್ಲೆಯ ಡಿಸಿಆರ್’ಬಿ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇನ್ನು, ಸಿಐಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಬಾಲರಾಜು ಅವರನ್ನು ಶಿವಮೊಗ್ಗದ ಡಿವೈಎಸ್’ಪಿಯಾಗಿ ನಿಯೋಜಿಸಲಾಗಿದೆ. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ಈ ಮೇಲ್ – … Read more