ಮಹಿಳೆಯರೆ ಭೀಮರಾಜ್‌ ಬಗ್ಗೆ ಹುಷಾರ್‌, ಈತನ ಮೇಲಿದೆ ಒಂದು ಡಜನ್‌ ಕೇಸ್‌, ಏನಿದು ಪ್ರಕರಣ?

matrimony-website-case-one-arrested.

SHIVAMOGGA LIVE NEWS, 10 FEBRUARY 2025 ಶಿವಮೊಗ್ಗ : ಮ್ಯಾಟ್ರಿಮೋನಿ (Matrimony) ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಮದುವೆ ಆಗುವುದಾಗಿ ನಂಬಿಸಿ, ಕೊನೆಗೆ ಹಣ, ಒಡವೆ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ವಿವಿಧೆಡೆ ಇದೇ ರೀತಿ ಈತ ಮಹಿಳೆಯರನ್ನು ವಂಚಿಸಿದ್ದ. ಈತನ ವಿರುದ್ಧ ಭದ್ರಾವತಿ, ಹೊಸನಗರ ಸೇರಿದಂತೆ ವಿವಿಧ ಠಾಣೆಯಲ್ಲಿ 12 ಪ್ರಕರಣ ದಾಖಲಾಗಿದೆ. ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಭೀಮರಾಜ್‌ ಅಲಿಯಾಸ್‌ ಜೈಭೀಮ್‌ (40) ಬಂಧಿತ. ಮದುವೆ ಆಗಿದ್ದನ್ನೆ ಮರೆಮಾಚುತ್ತಿದ್ದ ಭೀಮರಾಜ್‌ಗೆ … Read more

ಸಾಗರ ಮಾರಿ ಜಾತ್ರೆಗು ಮೊದಲು ರಸ್ತೆ ಅಗಲೀಕರಣ ಪೂರ್ಣ, ಯಾವ್ಯಾವ ರಸ್ತೆ ಕುರಿತು MLA ಹೇಳಿದ್ದೇನು?

MLA-Beluru-Gopalakrishna-inspects-road-at-sagara

SHIVAMOGGA LIVE NEWS, 10 FEBRUARY 2025 ಸಾಗರ : ಇಲ್ಲಿನ ಆರ್‌.ಪಿ.ರಸ್ತೆಯಲ್ಲಿ (road) ಚರಂಡಿ ನಿರ್ಮಾಣ ಕಾಮಗಾರಿ ಕುರಿತು ಸಾರ್ವಜನಿಕರ ದೂರಿನ ಹಿನ್ನೆಲೆ ಶಾಸಕ, ಅರಣ್ಯ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸಾರ್ವಜನಿಕರಿಗೆ ತೊಂದರೆ ಅಗದಂತೆ ಶೀಘ್ರ ಮತ್ತು ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಾರ್ಕೆಟ್‌ ರಸ್ತೆ ಮತ್ತು ಬಿ.ಹೆಚ್‌.ರಸ್ತೆಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಗುತ್ತಿಗೆದಾರನಿಗೆ ಸೂಚಿಸಿದ್ದೇನೆ. ಮುಂದಿನ ಮಾರಿ ಜಾತ್ರೆ … Read more

ಶಿವಮೊಗ್ಗ ಯುವ ಕಾಂಗ್ರೆಸ್‌ಗೆ ಹರ್ಷಿತ್‌ ಗೌಡ ನೂತನ ಅಧ್ಯಕ್ಷ, ಪಕ್ಷ ಸಂಘಟನೆ ಕುರಿತು ಹೇಳಿದ್ದೇನು?

Youth-congress-president-Harshith-Gowda-press-meet.

SHIVAMOGGA LIVE NEWS, 10 FEBRUARY 2025 ಶಿವಮೊಗ್ಗ : ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಮಾಡಿ ಜಿಲ್ಲಾಧ್ಯಕ್ಷ (President) ಸ್ಥಾನದ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಯುವ ಕಾಂಗ್ರೆಸ್‌ ನೂತನ ಜಿಲ್ಲಾಧ್ಯಕ್ಷ ಹರ್ಷಿತ್‌ ಗೌಡ ತಿಳಿಸಿದರು. ಯುವ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಾಧಿಕಾರಿಗಳು ಇವತ್ತು ಪತ್ರಿಕಾಗೋಷ್ಠಿ ನಡೆಸಿದರು. ಚುನಾವಣೆ ಕುರಿತು ಮಾಹಿತಿ ನೀಡಿದರು. ಯಾರೆಲ್ಲ ಏನೆಲ್ಲ ಹೇಳಿದರು? ಚುನಾವಣೆ ಸಂದರ್ಭ ಸಂಘಟನೆ ಮಾಡುವಾಗ ಇದ್ದ ಉತ್ಸಾಹವೆ ಮುಂದೆಯು ಇರಬೇಕು. ವಿವಿಧ ಸ್ಥಾನಗಳಿಗೆ ಆಯ್ಕೆಯಾದವರು, ಸೋತವರು ಒಟ್ಟಿಗೆ … Read more

ಶಿವಮೊಗ್ಗ ಸಿಟಿಯ ವಿವಿಧೆಡೆ ಬೈಕ್‌ಗಳು ಕಳ್ಳತನ, ಎಲ್ಲೆಲ್ಲಿ? ಹೇಗಾಯ್ತು ಘಟನೆ?

bike theft reference image

SHIVAMOGGA LIVE NEWS, 10 FEBRUARY 2025 ಶಿವಮೊಗ್ಗ : ನಗರದ ವಿವಿಧೆಡೆ ಬೈಕುಗಳ (Bike) ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಒಂದು ವಾರದಿಂದ ಈಚೆಗೆ ವಿವಿಧ ಠಾಣೆಗಳಲ್ಲಿ ಕೇಸ್‌ ದಾಖಲಾಗಿವೆ. ಎಲ್ಲೆಲ್ಲಿ ಬೈಕ್‌ ಕಳ್ಳತನವಾಗಿದೆ? ಶರಾವತಿ ನಗರದ 7ನೇ ಅಡ್ಡರಸ್ತೆಯಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿ ಪ್ರಶಿಕುಮಾರ್‌ ಎಂಬುವವರ ಟಿವಿಎಸ್‌ ವಿಕ್ಟರ್‌ ಬೈಕ್‌ ಕಳ್ಳತನವಾಗಿದೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಬೆಳಗ್ಗೆ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋಬನಗರದ ಇಂದಿರಾ ಕ್ಯಾಂಟೀನ್‌ … Read more

ನಕ್ಸಲ್‌ ಮುಂಡಗಾರು ಲತಾ, ವನಜಾಕ್ಷಿ ಶಿವಮೊಗ್ಗ ಪೊಲೀಸ್‌ ವಶಕ್ಕೆ

Naxal-Vanajakshi-and-Mundagaru-Latha

SHIVAMOGGA LIVE NEWS, 10 FEBRUARY 2025 ಶಿವಮೊಗ್ಗ : ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾಗಿದ್ದ ಆರು ನಕ್ಸಲರ (Naxal) ಪೈಕಿ ಇಬ್ಬರು ನಕ್ಸಲರನ್ನ ಶಿವಮೊಗ್ಗ ಪೊಲೀಸರು ಇವತ್ತು ವಶಕ್ಕೆ ಪಡೆದಿದ್ದಾರೆ. ಇವತ್ತು ಮಧ್ಯಾಹ್ನ ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ನಕ್ಸಲರಾದ ಮುಂಡಗಾರು ಲತಾ ಮತ್ತು ವನಜಾಕ್ಷಿ ಬಾಳೆಹೊಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಡಗಾರು ಲತಾ ಮತ್ತು ವನಜಾಕ್ಷಿ ವಿರುದ್ಧ ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣ, ಹೊಸನಗರ ಠಾಣೆ ವ್ಯಾಪ್ತಿಯಲ್ಲಿ ಒಂದು … Read more

ವಾಯುಸೇನೆ ಅಧಿಕಾರಿ ಮಂಜುನಾಥ್‌ ಪಂಚಭೂತಗಳಲ್ಲಿ ಲೀನ, ಇಲ್ಲಿದೆ ಇಡೀ ದಿನದ ಕಂಪ್ಲೀಟ್‌ ಮಾಹಿತಿ

Airforce-officer-manjunath-last-rites-a-hosanagara

SHIVAMOGGA LIVE NEWS, 9 FEBRUARY 2025 ಹೊಸನಗರ : ಉತ್ತರ ಪ್ರದೇಶದ ಆಗ್ರಾದಲ್ಲಿ ಹುತಾತ್ಮರಾದ ವಾಯುಸೇನೆ ವಾರಂಟ್‌ ಆಫೀಸರ್‌ ಸಿ.ಜಿ.ಮಂಜುನಾಥ್‌ (36) ಅವರ ಅಂತ್ಯಕ್ರಿಯೆ (Last Rites) ಹುಟ್ಟೂರು ಸಂಕೂರು ಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಇದಕ್ಕೂ ಮುನ್ನ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಗ್ರಾಮದಲ್ಲಿ ಸಿ.ಜಿ.ಮಂಜುನಾಥ್‌ ಅವರ ಅಂತ್ಯಕ್ರಿಯೆ ನೆರವೇರಿತು. ಸಹೋದರನಿಂದ ಅಗ್ನಿಸ್ಪರ್ಶ ಸಂಕೂರಿನಲ್ಲಿ ಮನೆಯ ಆವರಣದಲ್ಲಿಯೆ ಸಿ.ಜಿ.ಮಂಜುನಾಥ್‌ ಅವರ … Read more

ಶಿವಮೊಗ್ಗದಲ್ಲಿ ವಾಯುಸೇನೆ ಅಧಿಕಾರಿ ಮಂಜುನಾಥ್‌ ಪಾರ್ಥೀವ ಶರೀರ, ಕಣ್ಣೀರಾದ ಪತ್ನಿ

Airforce-officer-Manjunath-body-brought-to-shimoga

SHIVAMOGGA LIVE NEWS, 9 FEBRUARY 2025 ಶಿವಮೊಗ್ಗ : ತರಬೇತಿ ವೇಳೆ ಪ್ಯಾರಾಚೂಟ್‌ ತೆರೆಯದೆ ಆಗಸದಿಂದ ಕೆಳಗೆ ಬಿದ್ದು ಹುತಾತ್ಮರಾದ ವಾಯುಪಡೆ (airforce) ವಾರಂಟ್‌ ಆಫೀಸರ್‌ ಜಿ.ಎಸ್‌.ಮಂಜುನಾಥ್‌ ಅವರ ಪಾರ್ಥೀವ ಶರೀರ ಶಿವಮೊಗ್ಗ ತಲುಪಿದೆ. ಹೊಳೆ ಬಸ್‌ ನಿಲ್ದಾಣದ ಬಳಿ ಬೆಕ್ಕಿನ ಕಲ್ಮಠದ ಬಳಿ ಜನಪ್ರತಿನಿಧಿಗಳು, ಶಿವಮೊಗ್ಗದ ನಾಗರಿಕರು ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ ಸೇರಿದಂತೆ ಹಲವರು ಅಗಲಿದ ಯೋಧನಿಗೆ ನಮನ ಸಲ್ಲಿಸಿದರು. ಹೊಸನಗರದತ್ತ ಪಾರ್ಥೀವ … Read more

ವಾಯುಪಡೆ ಅಧಿಕಾರಿ ಮಂಜುನಾಥ್‌ ಸಾವು, ಹೊಸನಗರದಲ್ಲಿ ನಾಳೆ ಮೆರವಣಿಗೆ, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

IAF-OFFICER-MANJUNATH-house-at-hosanagara

SHIVAMOGGA LIVE NEWS, 8 FEBRUARY 2025 ಶಿವಮೊಗ್ಗ : ವಾಯುಪಡೆ ಅಧಿಕಾರಿ (Airforce) ಜಿ.ಎಸ್‌.ಮಂಜುನಾಥ್‌ ಅವರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಗ್ರಾಮದಲ್ಲಿ ಅವರ ಮನೆ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಹೊಸನಗರದಿಂದ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸ್ಥಳೀಯ ಮುಖಂಡ ಮಂಜುನಾಥ ಸಣ್ಣಕ್ಕಿ, ವಾಯುಪಡೆ ಅಧಿಕಾರಿ ಜಿ.ಎಸ್.ಮಂಜುನಾಥ್‌ ಅವರ ಅಂತ್ಯಕ್ರಿಯೆ ಕುರಿತು ಮಾಹಿತಿ ನೀಡಿದರು. … Read more

ಕಾರ್ಗಲ್‌, ಶಿರಾಳಕೊಪ್ಪದಲ್ಲಿ ATMನಿಂದ ಹಣ ಬಿಡಿಸಿ ಮನೆಗೆ ಮರಳಿದ ಇಬ್ಬರಿಗೆ ಆಮೇಲೆ ಕಾದಿತ್ತು ಶಾಕ್‌

crime name image

SHIVAMOGGA LIVE NEWS, 8 FEBRUARY 2025 ಸಾಗರ / ಶಿರಾಳಕೊಪ್ಪ : ATM ಕೇಂದ್ರದಲ್ಲಿ ಸಹಾಯ ಹಸ್ತ ಚಾಚಿ, ವಂಚಿಸುತ್ತಿದ್ದ ಖದೀಮರು ತಮ್ಮ ಕಾರ್ಯಾಚರಣೆಯನ್ನು ಶಿವಮೊಗ್ಗ ಸಿಟಿಗಷ್ಟೆ ಸೀಮಿತಗೊಳಿಸಿಲ್ಲ. ಈಗ ಕಾರ್ಗಲ್‌ ಮತ್ತು ಶಿರಾಳಕೊಪ್ಪ ಠಾಣೆಗಳಲ್ಲು ಪ್ರಕರಣ ದಾಖಲಾಗಿದೆ. ಎಟಿಎಂನಿಂದ ಹಣ ಬಿಡಿಸಲು ಬರುವವರಿಗೆ ಅಪರಿಚಿತರು ಸಹಾಯ ಮಾಡುವವರಂತೆ ನಟಿಸುತ್ತಾರೆ. ಅವರ ಎಟಿಎಂ ಕಾರ್ಡ್‌ ಪಡೆದು, ಪಾಸ್‌ ವರ್ಡ್‌ ತಿಳಿದು, ಬಳಿಕ ಎಟಿಎಂ ಕಾರ್ಡ್‌ ಅದಲು ಬದಲು ಮಾಡಿಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದವು. … Read more

ಯುವ ಕಾಂಗ್ರೆಸ್‌ ಚುನಾವಣೆ ಫಲಿತಾಂಶ ಪ್ರಕಟ, ಯಾವ್ಯಾವ ತಾಲೂಕಿಗೆ ಯಾರೆಲ್ಲ ಆಯ್ಕೆಯಾಗಿದ್ದಾರೆ?

Youth-Congress-new-president-Harshith-Gowda.

SHIVAMOGGA LIVE NEWS, 8 FEBRUARY 2025 ಶಿವಮೊಗ್ಗ : ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಹುದ್ದೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹರ್ಷಿತ್‌ ಗೌಡ ಶಿವಮೊಗ್ಗದ ನೂತನ ಜಿಲ್ಲಾಧ್ಯಕ್ಷರಾಗಿ (President) ಆಯ್ಕೆಯಾಗಿದ್ದಾರೆ. 33 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಿಧಾನಸಭೆ ಕ್ಷೇತ್ರವಾರು, ಬ್ಲಾಕ್‌ ಮಟ್ಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಹುದ್ದೆಗಳ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಕಳೆದ ರಾತ್ರಿ ಪ್ರಕಟವಾಗಿದೆ. ವಿಧಾನಸಭೆ ಕ್ಷೇತ್ರವಾರು ಅಧ್ಯಕ್ಷರ ಆಯ್ಕೆ ವಿಧಾನಸಭೆ ಕ್ಷೇತ್ರವಾರು ಯುವ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ … Read more