ಅಡಿಕೆಗೆ ಕೆಂಪು ಮೂತಿ ಹುಳು ಬಾಧೆ, ನಿರ್ವಹಣೆ ಮಾಡೋದು ಹೇಗೆ? ಸಂಶೋಧನಾ ಕೇಂದ್ರದಿಂದ ಮಾಹಿತಿ

kempu-muthi-hula-in-adike

ಶಿವಮೊಗ್ಗ: ಅಡಿಕೆಗೆ (Adike) ಕೆಂಪು ಮೂತಿ ಹುಳು ಬಾಧೆ ಶುರುವಾಗಿದೆ. ಸೊರಬ ಮತ್ತು ಸಾಗರ ಭಾಗದ ಅಡಿಕೆ ತೋಟಗಳಲ್ಲಿ ಇವು ಕಾಣಿಸುತ್ತಿವೆ. ಇದರಿಂದ ರೈತರಿಗೆ ಸಮಸ್ಯೆಯಾಗಿದೆ. ಇವುಗಳ ನಿರ್ವಹಣಾ ಕುರಿತು ಶಿವಮೊಗ್ಗದ ನವುಲೆಯಲ್ಲಿರುವ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವಪ್ಪರ್ ಮಾಹಿತಿ ನೀಡಿದ್ದಾರೆ. 4 ರಿಂದ 5 ವರ್ಷದ ತೋಟದಲ್ಲಿ ಇದರ ಬಾಧೆ ಹೆಚ್ಚಾಗಿದೆ. ಗರಿಗಳು ಹಳದಿಯಾಗಿ ಬಾಡಿದಂತೆ ಕಾಣಿಸುತ್ತದೆ. ಕಾಂಡದ ಭಾಗದಲ್ಲಿ ರಂಧ್ರಗಳಾಗಿ ಕಂದು ಬಣ್ಣದ ರಸ ಸೋರುತ್ತದೆ. ತೀವ್ರ ಹಾನಿಗೊಳಗಾದ ಮರಗಳಲ್ಲಿ ಕಾಂಡದ … Read more

ಅರಸಾಳು ಬಳಿ ಅಪಘಾತ, ಮೆಡಿಕಲ್‌ ರೆಪ್‌ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

Anoop-succumbed-in-mishap-near-ripponpete

ರಿಪ್ಪನ್‌ಪೇಟೆ: ಕೆರೆ ಏರಿ ಮೇಲಿನ ತಡೆಗೋಡೆಗೆ ಬೈಕ್‌ ಡಿಕ್ಕಿಯಾಗಿ (Mishap) ಓರ್ವ ಯುವಕ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಸವಾರನಿಗೆ ಗಂಭೀರ ಗಾಯವಾಗಿದೆ. ಅರಸಾಳು ಕೆರೆ ಏರಿ ಮೇಲೆ ಘಟನೆ ಸಂಭವಿಸಿದೆ. ಅರಸಾಳು ಗ್ರಾಮದ ಅನೂಪ್‌ (22) ಮೃತ ದುರ್ದೈವಿ. ಮೆಡಿಕಲ್‌ ರೆಪ್‌ ಅನೂಪ್‌ ಸೇರಿ ಇಬ್ಬರು ಒಂದೇ ಬೈಕಿನಲ್ಲಿ ರಿಪ್ಪನ್‌ಪೇಟೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಅನೂಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಮೃತದೇಹವನ್ನು ರಿಪ್ಪನ್‌ಪೇಟೆಯ ಆಸ್ಪತ್ರೆಗೆ ರವಾನಿಸಲಾಗಿದೆ. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ರಿಪ್ಪನ್‌ಪೇಟೆ … Read more

ಸೋಮಿನಕೊಪ್ಪದಲ್ಲಿ ವಿದ್ಯುತ್‌ ಶಾಕ್‌ಗೆ ಕಾರ್ಮಿಕ ಸಾವು, ಹೇಗಾಯ್ತು ಘಟನೆ?

crime name image

ಶಿವಮೊಗ್ಗ: ಕಟ್ಟಡಕ್ಕೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಪಕ್ಕದಲ್ಲಿ ಹಾದು ಹೊಗಿದ್ದ ವಯರ್‌ ತಗುಲಿ ವಿದ್ಯುತ್‌ ಶಾಕ್‌ಗೆ (electrocution) ಕಾರ್ಮಿಕ ಸಾವನ್ನಪ್ಪಿದ್ದಾನೆ. ಸೋಮಿನಕೊಪ್ಪದ ನಿವಾಸಿ ನಿಜಾಮುಲ್‌ ಹಕ್‌ (32) ಮೃತ ವ್ಯಕ್ತಿ. ಜೆ.ಹೆಚ್‌.ಪಟೇಲ್‌ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ನಿಜಾಮುಲ್‌ ಹಕ್‌ ತೆರಳಿದ್ದರು. ನೆಲದಿಂದ ಎರಡನೇ ಮಹಡಿಗೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿಗೆ ಕಬ್ಬಿಣದ ರಾಡ್‌ ತಗುಲಿದೆ. ವಿದ್ಯುತ್ ಪ್ರವಹಿಸಿ ನಿಜಾಮುಲ್‌ ಹಕ್‌ ಅವರಿಗೆ ಶಾಕ್‌ ತಗುಲಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ … Read more

ನಿರ್ಮಾಣ ಹಂತದ ಸರ್ಕಾರಿ ನೌಕರರ ಭವನಕ್ಕೆ ಮಧ್ಯಾಹ್ನ ಬಂದ ಸೂಪರ್‌ವೈಸರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

ಶಿವಮೊಗ್ಗ: ಕೆ.ಇ.ಬಿ ಸರ್ಕಲ್‌ ಸಮೀಪ ನಿರ್ಮಾಣ ಹಂತದ ಸರ್ಕಾರಿ ನೌಕರರ ಭವನದ ಕೊಠಡಿಯಲ್ಲಿದ್ದ 1.35 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್‌ ವಯರ್‌ (Wire) ಕಳ್ಳತನ ಮಾಡಲಾಗಿದೆ. ಪ್ಲೇವುಡ್‌, ಮರಳು ಜಾಡಿಸುವ ಜಾಲರಿಯಿಂದ ಮುಚ್ಚಿದ್ದ ಮೇಲ್ಛಾವಣಿ ತೆಗೆದು 27 ಬಾಕ್ಸ್‌ ವಯರ್‌ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಏ.30ರ ರಾತ್ರಿ 29 ಬಂಡಲ್‌ ವಯರ್‌ಗಳನ್ನು ತಂದು ಇರಿಸಲಾಗಿತ್ತು. ಮರುದಿನ ಮಧ್ಯಾಹ್ನ ಸೂಪರ್‌ ವೈಸರ್‌ ಸ್ಥಳಕ್ಕೆ ಬಂದಾಗ ವಯರ್‌ ಕಳುವಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ … Read more

ಶಿವಮೊಗ್ಗದಲ್ಲಿ ಏಳು ದಿನದ ಗಡುವು, ತಪ್ಪಿದರೆ ನೀರಿನ ಸಂಪರ್ಕ ಕಡಿತದ ಎಚ್ಚರಿಕೆ

Drinking-Water-Tap

ಶಿವಮೊಗ್ಗ: ಒಂದು ವರ್ಷಕ್ಕಿಂತಲು ಮೇಲ್ಪಟ್ಟು ನೀರಿನ ಕಂದಾಯ (tax) ಬಾಕಿ ಉಳಿಸಿಕೊಂಡವರು ಇನ್ನು 7 ದಿನದೊಳಗೆ ಕಂದಾಯ ಪಾವತಿಸಬೇಕು. ತಪ್ಪಿದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ನೀರಿನ ಬಳಕೆದಾರರು ಅಥವಾ ಮಾಲಿಕರು ಕಂದಾಯ ಪಾವತಿಸದೆ ಇದ್ದಲ್ಲ, ಏಳು ದಿನದೊಳಗೆ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ … Read more

ಅಡಿಕೆ ಧಾರಣೆ | 5 ಮೇ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (adike rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 18509 30669 ಬೆಟ್ಟೆ 51009 60119 ರಾಶಿ 40009 57599 ಸರಕು 59109 96540 ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದ ತೋಟಕ್ಕೆ ಹಾರಿ ಉಲ್ಟಾ ಬಿದ್ದ ಆಟೋ, ಐವರಿಗೆ ಗಾಯ

ಮಾಚೇನಹಳ್ಳಿಯ ಜಿ.ಟಿ.ಟಿ.ಸಿಯಲ್ಲಿ ಮೂರು ಕೋರ್ಸುಗಳಿಗೆ ಅರ್ಜಿ ಆಹ್ವಾನ, ‘ಇಲ್ಲಿ ಕಲಿತರೆ ಉದ್ಯೋಗ ಖಚಿತʼ

GTTC-College-press-meet. course

ಶಿವಮೊಗ್ಗ: ಮಾಚೇನಹಳ್ಳಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮೂರು ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಈ ಕೋರ್ಸುಗಳಿಗೆ (Course) ಸೇರಬಹುದಾಗಿದೆ. ಈ ಕೋರ್ಸುಗಳನ್ನು ಪೂರ್ಣಗಳಿಸಿದರೆ ಶೇ.100ರಷ್ಟು ಉದ್ಯೋಗವಕಾಶವಿದೆ. ಇದನ್ನೂ ಓದಿ » ಹೊಸನಗರದಲ್ಲಿ ದೇವರ ಕಾರ್ಯದ ವೇಳೆ ಕಲಹ, ವ್ಯಕ್ತಿಯ ಕೊಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತರಬೇತಿ ಕೇಂದ್ರದ ಪ್ರಾಂಶುಪಾಲ ದೀಪಕ್‌ ಕುಮಾರ್‌, ಎಐಸಿಟಿಇ 2010ರಲ್ಲಿ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಕೌಶಲಾಭವೃದ್ಧಿ, ಉದ್ಯಮಶೀಲತಾ, ಜೀವನೋಪಾಯ ಇಲಾಖೆ ಅಡಿ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು. 2025-26ರ ಸಾಲಿನ ಪ್ರವೇಶ … Read more

ಹೊಸನಗರದಲ್ಲಿ ದೇವರ ಕಾರ್ಯದ ವೇಳೆ ಕಲಹ, ವ್ಯಕ್ತಿಯ ಕೊಲೆ

Hosanagara-News-Update

ಹೊಸನಗರ: ದೇವರ ಕಾರ್ಯದ ಸಂದರ್ಭ ಕಲಹವಾಗಿ ವ್ಯಕ್ತಿಯೊಬ್ಬನ (Person) ಹತ್ಯೆ ಮಾಡಲಾಗಿದೆ. ಹೊಸನಗರ ತಾಲೂಕು ನಿಟ್ಟೂರು ಕರ್ಕಮುಡಿಯಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದ ತೋಟಕ್ಕೆ ಹಾರಿ ಉಲ್ಟಾ ಬಿದ್ದ ಆಟೋ, ಐವರಿಗೆ ಗಾಯ ದೇವಿಚಂದ್ರ (52) ಮೃತ ವ್ಯಕ್ತಿ. ದೇವಿಚಂದ್ರನ ಪತ್ನಿಯ ಸಹೋದರ ಮತ್ತು ಪತ್ನಿಯ ಮೊದಲ ಪತಿಯ ಪುತ್ರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಓಂಕಾರ್‌ ಮನೆ ಸಮೀಪ ನಾಗಚೌಡಿ ದೇವಸ್ಥಾನದಲ್ಲಿ ಪೂಜೆ ಕಾರ್ಯವಿತ್ತು. ದೇವಿಚಂದ್ರ ಕೂಡ … Read more

ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದ ತೋಟಕ್ಕೆ ಹಾರಿ ಉಲ್ಟಾ ಬಿದ್ದ ಆಟೋ, ಐವರಿಗೆ ಗಾಯ

auto-upside-down-at-nidige-in-shimoga.

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಆಟೋ (Auto) ಹಳ್ಳಕ್ಕೆ ಉರುಳಿದೆ. ಶಿವಮೊಗ್ಗ – ಭದ್ರಾವತಿ ಹೆದ್ದಾರಿಯ ನಿದಿಗೆ ಸಮೀಪ ಘಟನೆ ಸಂಭವಿಸಿದೆ. ಆಟೋದಲ್ಲಿದ್ದ ಐವರಿಗೆ ಗಾಯವಾಗಿದ್ದು. ಇವರೆಲ್ಲ ಶಿವಮೊಗ್ಗದಿಂದ ಭದ್ರಾವತಿಗೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದರು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ಮತ್ತು ದಾರಿಯಲ್ಲಿ ಸಾಗುತ್ತಿದ್ದವರು ಗಾಯಾಳುಗಳನ್ನು ರಕ್ಷಿಸಿ, ಆರೈಕೆ ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದರು.  ಇದನ್ನೂ ಓದಿ » ಸಕ್ರೆಬೈಲು ಸಮೀಪ ಬೆಳ್ಳಂಬೆಳಗ್ಗೆ ಅಪಘಾತ, ವ್ಯಕ್ತಿ ಸಾವು

ಸಕ್ರೆಬೈಲು ಸಮೀಪ ಬೆಳ್ಳಂಬೆಳಗ್ಗೆ ಅಪಘಾತ, ವ್ಯಕ್ತಿ ಸಾವು

Car-mishap-at-Sakrebyle-in-Shimoga

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಸಕ್ರೆಬೈಲು ಸಮೀಪ ಘಟನೆ (Mishap) ಸಂಭವಿಸಿದೆ. ಶ್ರೀಧರ್‌ (55) ಮೃತರು. ಇವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಅಲ್ಲದೆ ರಸ್ತೆ ಬದಿಗೆ ಇಳಿದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶ್ರೀಧರ್‌ ಅವರನ್ನು ಕೂಡಲೆ ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷಿಸಿದ ವೈದ್ಯರು ‍ಶ್ರೀಧರ್‌ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ತುಂಗಾ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ … Read more