ಹಣ ದುರುಪಯೋಗ, ಪಿಡಿಓ ಸಸ್ಪೆಂಡ್, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಆದೇಶ

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಹಣ ದುರುಪಯೋಗ ಮಾಡಿರುವ ಆರೋಪದ ಹಿನ್ನೆಲೆ ಪಿಡಿಓ ಒಬ್ಬರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಓ ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ. ಕೋಣಂದೂರು ಗ್ರಾಮ ಪಂಚಾಯಿತಿಯ ಪಿಡಿಓ ಕೆ.ಎಸ್.ಕುಮಾರ್ ಅಮಾನತುಗೊಂಡವರು. ಮುಖ್ಯ ಲೆಕ್ಕಾಧಿಕಾರಿ ನೀಡಿದ ವರದಿ ಅನುಸಾರ ಕೆ.ಸಿ.ಎಸ್ (ಸಿಸಿಎ) ನಿಯಮ 10ರ ಅಡಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಪಿಡಿಓ ಅಮಾನತಿಗೆ ಕಾರಣಗಳೇನು? ಪಿಡಿಓ ಕೆ.ಎಸ್.ಕುಮಾರ್, ಹಿಂದಿನ ಪಿಡಿಓ ಸಹಿ ಫೋರ್ಜರಿ ಮಾಡಿ, … Read more

ಸಾವಿರ ಸಾವಿರ ಜನರ ಮುಂದೆ ಸನ್ಯಾಸ ದೀಕ್ಷೆ ಪಡೆದರು ಭದ್ರಾವತಿಯ ಇಂಜಿನಿಯರಿಂಗ್ ಪದವೀಧರ

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಇಂಜಿನಿಯರಿಂಗ್ ಪದವೀಧರೊಬ್ಬರು ಭದ್ರಾವತಿಯಲ್ಲಿ ಜೈನ ದೀಕ್ಷೆ ಪಡೆದು, ಸನ್ಯಾಸಿಯಾಗಿದ್ದಾರೆ. ಮೂರು ದಿನ ನಡೆದ ಕಾರ್ಯಕ್ರಮದ ಕೊನೆಯ ದಿನ, ದೀಕ್ಷೆ ಸ್ವೀಕರಿಸಿದ್ದಾರೆ. ಭದ್ರಾವತಿಯ ಭೂತನಗುಡಿಯ ದಿನೇಶ್ ಜೈನ್, ರಾಜುಲ್ ದೇವಿ ದಂಪತಿಯ ಮಗ ಜಿನೇಶ್ ಕುಮಾರ್ ಜೈನ್ ಜೈನ ಸನ್ಯಾಸಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿದ್ದ ಜಿನೇಶ್ ಕುಮಾರ್ ಅವರು, ದೀಕ್ಷೆ ಪಡೆದು ಖೀಮಾ ವಿಜಯ್ ಜೀ ಮಹಾರಾಜ್ ಸಾಹೇಬ್ ಆಗಿದ್ದಾರೆ. ಜಿನೇಶ್ ಕುಮಾರ್ ಜೈನ್ ಆವರೊಂದಿಗೆ ಆಂಧ್ರದ ಭರತ್ ಕುಮಾರ್, … Read more

ನಾಲ್ಕನೇ ದಿನವೂ ಶಿವಮೊಗ್ಗದಲ್ಲಿ ಮುಂದುವರೆದ ಆಪರೇಷನ್ ಸೆಲ್ಲರ್, ಎಲ್ಲೆಲ್ಲಿ ಕಾರ್ಯಾಚರಣೆ ನಡೆಯಿತು? ಇವತ್ತು ಏನೇನಾಯ್ತು?

ಶಿವಮೊಗ್ಗ ಲೈವ್.ಕಾಂ | 11 ಡಿಸೆಂಬರ್ 2018 ಸೆಲ್ಲರ್ ತೆರವು ಕಾರ್ಯಾಚರಣೆ ನಾಲ್ಕನೇ ದಿನಕ್ಕೂ ಮುಂದುವರೆದಿದೆ. ಶಿವಮೊಗ್ಗ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾಲಿಕೆಯ ಉಪ ಆಯುಕ್ತೆ ಡಾ.ಸಹನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇವತ್ತು ಬೆಳಗ್ಗೆಯಿಂದ, ಜ್ಯೂವೆಲ್ ರಾಕ್ ಹೊಟೇಲ್ ರಸ್ತೆಯಲ್ಲಿ ಆಪರೇಷನ್ ನಡೆಸಲಾಯಿತು. ಸೂರ್ಯ ಕಂಫರ್ಟ್, ಅನ್ಮೋಲ್ ಹೊಟೇಲ್, ಕುವೆಂಪು ರಸ್ತೆಯ ಕಾಂಪ್ಲೆಕ್ಸ್, ಗೋಪಾಳದ ನೂರು ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು. ಇನ್ನು, ಸಾಯಿ ಪ್ಯಾಲೇಸ್ ಮುಂಭಾಗ, ರಸ್ತೆಯ ಮೇಲೆ … Read more

ಎರಡನೇ ದಿನವೂ ಬೆಳಂಬೆಳಗ್ಗೆ ಘರ್ಜಿಸಿದ ಶಿವಮೊಗ್ಗ ಪಾಲಿಕೆ ಜೆಸಿಬಿ, ಇವತ್ತು ಎಲ್ಲೆಲ್ಲಿ ಸೆಲ್ಲರ್ ಆಪರೇಷನ್ ನಡೀತಿದೆ?

ನಗರದಲ್ಲಿ ಪಾರ್ಕಿಂಗ್ ಸುಗಮಗೊಳಿಸಲು ಮಹಾನಗರ ಪಾಲಿಕೆ ಕೈಗೊಂಡಿರುವ ಸೆಲ್ಲರ್ ತೆರವು ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಇವತ್ತು ನಗರದ ಸವಳಂಗ ರಸ್ತೆಯಲ್ಲಿ ಆಪರೇಷನ್ ಶುರುವಾಗಿದೆ. ನಿಯಮ ಉಲ್ಲಂಘಿಸಿದ ಕಟ್ಟಡಗಳ ಮುಂದೆ ಬೆಳಂಬೆಳಗ್ಗೆಯೇ ಪಾಲಿಕೆಯ ಜೆಸಿಬಿಗಳು ಬಂದು ನಿಂತಿವೆ. ಕಟ್ಟಡ ಮಾಲೀಕರು ತಾವೇ ಸೆಲ್ಲರ್ ತೆರವು ಮಾಡುವುದಾದರೆ, ಡೆಡ್’ಲೈನ್ ನೀಡಿಲಾಗುತ್ತದೆ. ಇಲ್ಲವಾದಲ್ಲಿ ಪಾಲಿಕೆಯ ಜೆಸಿಬಿಗಳೇ ಒಳಗೆ ನುಗ್ಗುತ್ತಿವೆ. ‘ಚುನಾಯಿತ ಪ್ರತಿನಿಧಿಗಳಿಗೇಕೆ ಮಾಹಿತಿ ಕೊಟ್ಟಿಲ್ಲ?’ ಸೆಲ್ಲರ್ ತೆರವು ಕಾರ್ಯಾಚರಣೆ ಪಾಲಿಕೆಯಲ್ಲಿಅಧಿಕಾರಿಗಳು ವರ್ಸಸ್ ಚುನಾಯಿತ ಪ್ರತಿನಿಧಿಗಳು ಎಂಬಂತಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿಯನ್ನೇಕೊಡದ, … Read more

‘ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲ, ಸರ್ಕಾರದ ಬದಲು ಅವರ ಕೆಲಸಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಳ್ಳಲಿ’

ಶಿವಮೊಗ್ಗ ಲೈವ್.ಕಾಂ | 7 ಡಿಸೆಂಬರ್ 2018 ಮುಖ್ಯಮಂತ್ರಿಯಾಗಿದ್ದರು, ಸಂಸದರಾಗಿದ್ದರು, ಆಗ ಯಡಿಯೂರಪ್ಪ ಅವರು ಏತನೀರಾವರಿ ಯೋಜನೆಗಳನ್ನು ಮಾಡಲಿಲ್ಲ. ಈಗ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಬಾಗಿಲಿಗೆ ಹೋಗಿದ್ದು ನಾಚಿಕೆಗೇಡು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಯಡಿಯೂರಪ್ಪ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಹೋಗಿ ಸ್ಟಂಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ. ಈಗ ಸರ್ಕಾರ ನಮ್ಮದಿದೆ. ಜಿಲ್ಲೆಯ ನೀರಾವರಿ ಯೋಜನೆಗಳನ್ನು ನಾವು … Read more

ಗಾಂಧಿ ಬಜಾರ್ ರೀತಿಯಲ್ಲೇ ತಳ್ಳುಗಾಡಿ ವ್ಯಾಪಾರಿಗಳ ವಿರುದ್ಧ ಗರಂ, ಅಂಗಡಿಗಳ ಬಾಗಿಲು ತೆಗೆಯದೆ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | 7 ಡಿಸೆಂಬರ್ 2018 ಗಾಂಧಿ ಬಜಾರ್ ಆಯ್ತು. ಈಗ ಅದರ ಪಕ್ಕದ ಕಸ್ತೂರ ಬಾ ರಸ್ತೆಯಲ್ಲಿ ತಳ್ಳುಗಾಡಿ ತೆರವಿಗೆ ಒತ್ತಾಯಿಸಿ ಪ್ರತಿಭಟನೆ ಶುರುವಾಗಿದೆ. ಬೆಳಗ್ಗೆಯಿಂದ ಸ್ಥಳೀಯರು ಮತ್ತು ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡರು, ಬಜರಂಗದಳದ ಕಾರ್ಯಕರ್ತರು, ಮೇಯರ್ ಮತ್ತು ಉಪಮೇಯರ್ ಅವರು ಸ್ಥಳೀಯರೊಂದಿಗೆ ಪ್ರತಿಭಟಿಸಿದರು. ಇದನ್ನೂ ಓದಿ | ಜೆಸಿಬಿ ಜೊತೆ ಫೀಲ್ಡಿಗಿಳಿದ ಪಾಲಿಕೆ ಅಧಿಕಾರಿಗಳು, ಶಿವಮೊಗ್ಗದ ಕಟ್ಟಡ ಮಾಲೀಕರಿಗೆ ಢವಢವ ತಳ್ಳುಗಾಡಿ ವ್ಯಾಪಾರಿಗಳನ್ನು ಇಲ್ಲಿಂದ ತೆರವು ಮಾಡಬೇಕು ಎಂದು ಒತ್ತಾಯಿಸಿ ಬೆಳಗ್ಗೆಯಿಂದಲೇ … Read more

ಶಿವಮೊಗ್ಗದಲ್ಲಿ ಶುರುವಾಗಲಿದೆ ನೂರು ಹಾಸಿಗೆಯ ಇಎಸ್ಐ ಆಸ್ಪತ್ರೆ

b y raghavendra about press meet

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ನೂರು ಹಾಸಿಗೆಯುಳ್ಳ ಎಎಸ್ಐ ಆಸ್ಪತ್ರೆಯನ್ನು ಶಿವಮೊಗ್ಗದಲ್ಲಿ ಆರಂಭಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿ ಅವರು ಎರಡು ಜಾಗ ಗುರುತಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕರು ಮತ್ತು ಅವರ ಕುಟುಂಬ ಸೇರಿ ಲಕ್ಷಾಂತರ ಜನರಿಗೆ ಇಎಸ್ಐ ಆಸ್ಪತ್ರೆಯಿಂದ ಅನುಕೂಲ ಆಗಲಿದೆ. ಈ ಹಿನ್ನಲೆಯಲ್ಲಿ ಆಸ್ಪತ್ರೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮೊದಲು, ಜಿಲ್ಲಾ ಖಾಸಗಿ ಕಾರ್ಖಾನೆ ಹಾಗೂ ಇತರೆ ಸಂಸ್ಥೆಗಳ ನೌಕರರ ಕ್ಷೇಮಾಭಿವೃದ್ಧಿ … Read more

ಸಾಗರದಲ್ಲಿ ಎರಡು ದಿನ ಬೆಳಗಿಂದ ಸಂಜೆವರೆಗೂ ಕರೆಂಟ್ ಇರಲ್ಲ, ಎಲ್ಲೆಲ್ಲಿ ಪವರ್ ಕಟ್ ಆಗುತ್ತೆ?

power cut graphics

ಶಿವಮೊಗ್ಗ ಲೈವ್.ಕಾಂ | 4 ಡಿಸೆಂಬರ್ 2018 ಸಾಗರ ನಗರ ವ್ಯಾಪ್ತಿಯಲ್ಲಿ ಡಿ.5 ಮತ್ತು 7ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಕರೆಂಟ್ ಇರೋದಿಲ್ಲ. ಘಟಕ – 1 ಮತ್ತು ಘಟಕ – 2 ರಲ್ಲಿ ಎಚ್.ಟಿ.ಎ.ಬಿ ಕೇಬಲ್ ಅಳವಡಿಸುವ ಕಾಮಗಾರಿ ಇರುವುದರಿಂದ ಈ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್ ಇರಲ್ಲ? ಎಲ್.ಬಿ.ಕಾಲೇಜು, ಪ್ರಗತಿನಗರ, ಲೋಹಿಯಾ ನಗರ, ಮಂಕಳಲೆ, ಅಂಬಾಪುರ, ಕುಗ್ವೆ, ವಿನೋಬನಗರ, ನೆಹರು ನಗರ, ಹಾನಂಬಿ ರಸ್ತೆ, ಎಸ್.ಎನ್.ನಗರ, ಚಿಪ್ಪಳಿ, ವರದಾ ಕಾಲನಿ, ಆದಿಶಕ್ತಿನಗರ, ವಿಜಯನಗರ, … Read more

ಜಯನಗರದಲ್ಲಿ ಆಸ್ಪತ್ರೆಗಾಗಿ ಪಾಯ ತೆಗೆದರು, ಅಕ್ಕಪಕ್ಕದ ಕಟ್ಟಡಗಳೆಲ್ಲ ಗಢಗಢ ನಡುಗೋಕೆ ಶುರುವಾದವು

031218 Jayanagara Building Collapse Problem 1

ಶಿವಮೊಗ್ಗ ಲೈವ್.ಕಾಂ | 3 ಡಿಸೆಂಬರ್ 2018 ಬೆಂಗಳೂರಿನಲ್ಲಿ ವರದಿಯಾಗುತ್ತಿದ್ದ ಆತಂಕಕಾರಿ ಘಟನೆ ಈಗ ಶಿವಮೊಗ್ಗ ನಗರದಲ್ಲಿ ಸುದ್ದಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ತೆಗೆದ ಪಾಯದ ಗುಂಡಿಯಿಂದಾಗಿ, ಅಕ್ಕಪಕ್ಕದ ಮನೆಗಳು ಕುಸಿಯುವ ಆತಂಕಕಾರಿ ಬೆಳವಣಿಗೆ ಜಯನಗರದಲ್ಲಿ ವರದಿಯಾಗಿದೆ. ಇದರಿಂದ ಮನೆಯವರು ಭಯದಲ್ಲಿಯೇ ಸಮಯ ತಳ್ಳುವಂತಾಗಿದೆ. ಜಯನಗರದ ಎರಡನೇ ತಿರುವಿನಲ್ಲಿ ಖಾಸಗಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪಾಯ ತೆಗೆಯಲಾಗಿದೆ. ಆದರೆ ಪಾಲಿಕೆ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದ ಪರಿಣಾಮ ಸುತ್ತಮುತ್ತಲ ಮನೆ ಕಟ್ಟಡಗಳ ಕುಸಿಯುವ ಆತಂಕ ನಿರ್ಮಾಣವಾಗಿದೆ. ಏನೆಲ್ಲ ಉಲ್ಲಂಘನೆ … Read more

ಮನುಷ್ಯರನ್ನು ಕಂಡರೆ ಅಟ್ಟಾಡಿಸುತ್ತೆ, ಸಕ್ರೆಬೈಲು ಬಿಡಾರಕ್ಕೆ ಬಂತು ಮರಿ ಆನೆ, ಹೇಗಿದೆ ನೋಡಿ ನೂತನ ಸದಸ್ಯ

021218 Elephant from Sakaleshpura to Sakrebyle 1

ಶಿವಮೊಗ್ಗ ಲೈವ್.ಕಾಂ | 2 ಡಿಸೆಂಬರ್ 2018 ತಾಯಿಯ ಅಗಲಿಕೆಯಿಂದ ಅನಾಥವಾಗಿದ್ದ ಒಂದೂವರೆ ವರ್ಷದ ಆನೆ ಮರಿಯನ್ನು ಇಲ್ಲಿನ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿದೆ. ಸಕಲೇಶಪುರ ತಾಲ್ಲೂಕಿನ ಕಡಗರವಳ್ಳಿ ಬಳಿ ಕೆಸರಿನಲ್ಲಿ ಸಿಕ್ಕು ಮೃತಪಟ್ಟ ಕಾರಣ, ಮರಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಅರಣ್ಯಾಕಾರಿಗಳು ಶಿವಮೊಗ್ಗದಿಂದ ಗಂಗಾ ಆನೆಯನ್ನು ಕರೆತಂದು ಮರಿಯನ್ನು ಸಕ್ರೆಬೈಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗಾ ಆನೆಯನ್ನೇ ತನ್ನ ತಾಯಿಯೆಂದು ತಿಳಿದು ಮರಿ ಆನೆ, ಸಕ್ರೆಬೈಲಿನತ್ತ ಹೆಜ್ಜೆ ಹಾಕಿದೆ. ಈವರೆಗೂ ಕಾಡಿನಲ್ಲಿದ್ದ ಕಾರಣ, ಮರಿ ಆನೆ … Read more